ಮಹದೇವ್ ಬೆಟ್ಟಿಂಗ್ ಆ್ಯಪ್ ಹಗರಣ: ಸಿಬಿಐ ಕಸ್ಟಡಿಗೆ ಸೌರಭ್ ಚಂದ್ರಕರ್
ನವದೆಹಲಿ: ಸುಮಾರು ₹6 ಸಾವಿರ ಕೋಟಿ ಮೊತ್ತದ ಮಹದೇವ್ ಆನ್ಲೈನ್ ಬೆಟ್ಟಿಂಗ್ ಆ್ಯಪ್ ಹಗರಣದ ಮುಖ್ಯ ಸೂತ್ರಧಾರ ಎನ್ನಲಾದ ಸೌರಭ್ ಚಂದ್ರಕರ್ ಎಂಬವರನ್ನು ಎರಡು ದಿನಗಳವರೆಗೆ ಕೇಂದ್ರೀಯ ತನಿಖಾ ಸಂಸ್ಥೆಯ (ಸಿಬಿಐ) ಕಸ್ಟಡಿಗೆ ಒಪ್ಪಿಸಿ ದೆಹಲಿ ನ್ಯಾಯಾಲಯವು ಸೋಮವಾರ ಆದೇಶಿಸಿದೆ.ಸೌರಭ್ ಅವರನ್ನು ಛತ್ತೀಸಗಢದ ರಾಯಪುರದ ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಲು ಟ್ರಾನ್

ನವದೆಹಲಿ: ಸುಮಾರು ₹6 ಸಾವಿರ ಕೋಟಿ ಮೊತ್ತದ ಮಹದೇವ್ ಆನ್ಲೈನ್ ಬೆಟ್ಟಿಂಗ್ ಆ್ಯಪ್ ಹಗರಣದ ಮುಖ್ಯ ಸೂತ್ರಧಾರ ಎನ್ನಲಾದ ಸೌರಭ್ ಚಂದ್ರಕರ್ ಎಂಬವರನ್ನು ಎರಡು ದಿನಗಳವರೆಗೆ ಕೇಂದ್ರೀಯ ತನಿಖಾ ಸಂಸ್ಥೆಯ (ಸಿಬಿಐ) ಕಸ್ಟಡಿಗೆ ಒಪ್ಪಿಸಿ ದೆಹಲಿ ನ್ಯಾಯಾಲಯವು ಸೋಮವಾರ ಆದೇಶಿಸಿದೆ.ಸೌರಭ್ ಅವರನ್ನು ಛತ್ತೀಸಗಢದ ರಾಯಪುರದ ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಲು ಟ್ರಾನ್ಸಿಟ್ ರಿಮಾಂಡ್ (ಪ್ರಯಾಣದ ಅವಧಿಗಾಗಿ ನ್ಯಾಯಾಲಯ ನೀಡುವ ಬಂಧನದ ಅನುಮತಿ) ಕೋರಿ ಸಿಬಿಐ ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ನಿಖಿಲ್ ಚೋಪ್ರಾ ಅವರು ಪುರಸ್ಕರಿಸಿದ್ದಾರೆ.‘ನಮ್ಮ ಕಕ್ಷಿದಾರನನ್ನು ಒಮಾನ್ನಿಂದ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ ಪ್ರಕರಣದಲ್ಲಿ ಹಸ್ತಾಂತರಿಸಲಾಗಿದೆಯೇ ಹೊರತು, ಸಿಬಿಐ ಪ್ರಕರಣದಲ್ಲಲ್ಲ’ ಎಂದು ಸೌರಭ್ ಅವರ ಪರ ವಕೀಲರು ವಾದಿಸಿದ್ದಾರೆ.‘ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಸೌರಭ್ ವಿರುದ್ಧ ಜಾಮೀನುರಹಿತ ವಾರಂಟ್ ಕೂಡ ಜಾರಿಯಾಗಿದೆ’ ಎಂದು ಜಾರಿ ನಿರ್ದೇಶನಾಲಯ (ಇ.ಡಿ) ತಿಳಿಸಿದೆ. ಆದ್ದರಿಂದ ಸೌರಭ್ ಅವರನ್ನು ಬಂಧಿಸಲು ಇ.ಡಿ ಸಹ ಬಯಸಿದೆ.ಸಿಬಿಐನ ಎರಡು ಪ್ರಕರಣಗಳು ಮತ್ತು ಇ.ಡಿಯ ಒಂದು ಪ್ರಕರಣದಲ್ಲಿ ಸೌರಭ್ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿದೆ.