ಬಾಂಗ್ಲಾದೇಶದಲ್ಲಿ ಗಾರ್ಮೆಂಟ್ ನೌಕರರ ಪ್ರತಿಭಟನೆ: ಭುಗಿಲೆದ್ದ ಹಿಂಸಾಚಾರ
ಢಾಕಾ: ಬಾಂಗ್ಲಾದೇಶದಲ್ಲಿ ಗಾರ್ಮೆಂಟ್ ನೌಕರರು ನಡೆಸುತ್ತಿರುವ ಪ್ರತಿಭಟನೆ ಎರಡನೇ ದಿನವಾದ ಸೋಮವಾರವೂ ಮುಂದುವರಿದಿದ್ದು, ಹಲವು ಪೊಲೀಸ್ ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ.ಹಲವೆಡೆ ಭದ್ರತಾ ಸಿಬ್ಬಂದಿ ಮತ್ತು ಪ್ರತಿಭಟನಕಾರರ ನಡುವೆ ಘರ್ಷಣೆ ನಡೆದಿದ್ದು, ಇಬ್ಬರು ಭದ್ರತಾ ಸಿಬ್ಬಂದಿ, ಪತ್ರಕರ್ತರು ಸೇರಿದಂತೆ ಹಲವರು ಗಾಯಗೊಂಡಿದ್ದಾರೆ’ ಎಂದು ಸ್ಥಳೀಯ ಮಾಧ್ಯಮಗಳು

ಢಾಕಾ: ಬಾಂಗ್ಲಾದೇಶದಲ್ಲಿ ಗಾರ್ಮೆಂಟ್ ನೌಕರರು ನಡೆಸುತ್ತಿರುವ ಪ್ರತಿಭಟನೆ ಎರಡನೇ ದಿನವಾದ ಸೋಮವಾರವೂ ಮುಂದುವರಿದಿದ್ದು, ಹಲವು ಪೊಲೀಸ್ ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ.ಹಲವೆಡೆ ಭದ್ರತಾ ಸಿಬ್ಬಂದಿ ಮತ್ತು ಪ್ರತಿಭಟನಕಾರರ ನಡುವೆ ಘರ್ಷಣೆ ನಡೆದಿದ್ದು, ಇಬ್ಬರು ಭದ್ರತಾ ಸಿಬ್ಬಂದಿ, ಪತ್ರಕರ್ತರು ಸೇರಿದಂತೆ ಹಲವರು ಗಾಯಗೊಂಡಿದ್ದಾರೆ’ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.ಪೊಲೀಸರು ಅಶ್ರುವಾಯು, ಜಲಫಿರಂಗಿ ಬಳಸಿ ಪ್ರತಿಭಟನಕಾರರನ್ನು ಚದುರಿಸಿದರು. ಹಲವೆಡೆ ಪ್ರತಿಭಟನಾಕಾರರು ಕಬ್ಬಿಣದ ರಾಡುಗಳನ್ನು ಹಿಡಿದು ರಸ್ತೆ ತಡೆ ನಡೆಸಿದರು ಎಂದು ವರದಿಯಾಗಿದೆ.‘ಪ್ರತಿಭಟನೆಯಲ್ಲಿ ಭಾಗಿಯಾದ 14 ಕಾರ್ಮಿಕರು, ನಿಷೇಧಿತ ಅವಾಮಿ ಲೀಗ್ನ ನಾಯಕರು ಮತ್ತು ಕಾರ್ಯಕರ್ತರನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.‘ಪ್ರತಿಭಟನೆಯಿಂದಾಗಿ ಢಾಕಾದಲ್ಲಿ 670 ಕಾರ್ಖಾನೆಗಳನ್ನು ಮುಚ್ಚಲಾಗಿದೆ’ ಎಂದು ಬಾಂಗ್ಲಾದೇಶ ಗಾರ್ಮೆಂಟ್ ತಯಾರಿಕಾ ಮತ್ತು ರಫ್ತುದಾರರ ಅಸೋಷಿಯೇಷನ್(ಬಿಜೆಎಂಇಎ) ತಿಳಿಸಿದೆ.ಗಾಜಿಪುರದಲ್ಲಿಯೂ 150 ಕಾರ್ಖಾನೆಗಳನ್ನು ಮುಚ್ಚಲಾಗಿದೆ. ಬಾಂಗ್ಲಾದೇಶದಲ್ಲಿ ಗಾರ್ಮೆಂಟ್ ಉದ್ಯಮದಲ್ಲಿ ಸುಮಾರು 40 ಲಕ್ಷ ಕಾರ್ಮಿಕರು ದುಡಿಯುತ್ತಿದ್ದಾರೆ. ಗಾರ್ಮೆಂಟ್ ರಫ್ತು ಬಾಂಗ್ಲಾದೇಶದ ಆದಾಯದ ಪ್ರಮುಖ ಮೂಲವಾಗಿದೆ.ಈಗಿರುವ ಮಾಸಿಕ ಕನಿಷ್ಠ ವೇತನವನ್ನು 12,500 ಬಾಂಗ್ಲಾದೇಶಿ ಟಾಕದಿಂದ 30 ಸಾವಿರ ಟಾಕಕ್ಕೆ ಏರಿಸಬೇಕು ಎಂದು ಕಾರ್ಮಿಕರು ಆಗ್ರಹಿಸಿದ್ದಾರೆ. ಪ್ರಸ್ತುತವಿರುವ ವೇತನ ಶ್ರೇಣಿ ಪರಿಶೀಲಿಸಲು ಮತ್ತು ಪರಿಷ್ಕರಿಸಲು ವೇತನ ಆಯೋಗ ರಚಿಸಿರುವುದಾಗಿ ಸರ್ಕಾರ ಭಾನುವಾರ ಘೋಷಣೆ ಮಾಡಿದ್ದರೂ ಪ್ರತಿಭಟನೆ ಮುಂದುವರಿದಿದೆ.‘ನಿಷೇಧಿತ ಅವಾಮಿ ಲೀಗ್ ಪಕ್ಷದೊಂದಿಗೆ ನಂಟು ಹೊಂದಿರುವ ಕೆಲ ಗಾರ್ಮೆಂಟ್ ಕಾರ್ಖಾನೆ ಮಾಲೀಕರು ಅಶಾಂತಿ ಸೃಷ್ಟಿಸುತ್ತಿದ್ದಾರೆ’ ಎಂದು ಗೃಹ ಸಚಿವ ಸಲಾಹುದ್ದೀನ್ ಅಹಮದ್ ಸೋಮವಾರ ಆರೋಪಿಸಿದ್ದಾರೆ. Police personnel stand guard as garment workers gather to protest demanding higher minimum wages in Dhaka on November 2 2026. Thousands of Bangladeshi garment workers blocked a major highway and clashed with police on November 2 demanding a monthly minimum wage more than double current pay as protests spread across industrial hubs. (Photo by Salahuddin Ahmed / AFP)ಮುಖ್ಯಾಂಶ* ಭದ್ರತಾ ಸಿಬ್ಬಂದಿ ಸೇರಿ ಹಲವರಿಗೆ ಗಾಯ * ಪೊಲೀಸ್ ವಾಹನಗಳಿಗೆ ಬೆಂಕಿ * ಅಶ್ರುವಾಯು, ಜಲಫಿರಂಗಿ, ಬಲ ಪ್ರಯೋಗ