ಕರ್ನಾಟಕದಲ್ಲಿ ಜನಸ್ನೇಹಿ ಇ-ಆಡಳಿತ ಜಾರಿ: 2 ದಶಕದ ಹಾದಿ ದೇಶಕ್ಕೆ ಮಾದರಿ
ಕರ್ನಾಟಕವು ಇ-ಆಡಳಿತದಲ್ಲಿ ಮುಂಚೂಣಿಯಲ್ಲಿರುವ ರಾಜ್ಯ. ಎರಡು ದಶಕದ ಹಾದಿಯಲ್ಲಿ ಕೈಗೆತ್ತಿಕೊಂಡ ಕಾರ್ಯಚಟುವಟಿಕೆಗಳು, ಅದನ್ನು ಜಾರಿಗೊಳಿಸಿದ ಕ್ರಮ, ಜನ ಬಳಕೆಯಿಂದ ಜೀವನ ಸುಧಾರಣೆಯಾಗಿರುವ ವಿಚಾರದಲ್ಲಿ ದೇಶದ ಹಲವು ರಾಜ್ಯಗಳಿಗೆ ಕರ್ನಾಟಕವೇ ಮಾದರಿ.ಸಿಬ್ಬಂದಿ ಆಡಳಿತ ಹಾಗೂ ಸುಧಾರಣೆ ಇ-ಆಡಳಿತವು ನಾಗರಿಕರಿಗೆ ವಿವಿಧ ಇ-ಸೇವೆಗಳನ್ನು ತಲುಪಿಸುತ್ತಿದ್ದು, ಮಾಹಿತಿ ತಂತ್ರಜ

ಕರ್ನಾಟಕವು ಇ-ಆಡಳಿತದಲ್ಲಿ ಮುಂಚೂಣಿಯಲ್ಲಿರುವ ರಾಜ್ಯ. ಎರಡು ದಶಕದ ಹಾದಿಯಲ್ಲಿ ಕೈಗೆತ್ತಿಕೊಂಡ ಕಾರ್ಯಚಟುವಟಿಕೆಗಳು, ಅದನ್ನು ಜಾರಿಗೊಳಿಸಿದ ಕ್ರಮ, ಜನ ಬಳಕೆಯಿಂದ ಜೀವನ ಸುಧಾರಣೆಯಾಗಿರುವ ವಿಚಾರದಲ್ಲಿ ದೇಶದ ಹಲವು ರಾಜ್ಯಗಳಿಗೆ ಕರ್ನಾಟಕವೇ ಮಾದರಿ.ಸಿಬ್ಬಂದಿ ಆಡಳಿತ ಹಾಗೂ ಸುಧಾರಣೆ ಇ-ಆಡಳಿತವು ನಾಗರಿಕರಿಗೆ ವಿವಿಧ ಇ-ಸೇವೆಗಳನ್ನು ತಲುಪಿಸುತ್ತಿದ್ದು, ಮಾಹಿತಿ ತಂತ್ರಜ್ಞಾನವನ್ನು ಬಳಸಿಕೊಂಡು ಆಡಳಿತದಲ್ಲಿ ಪಾರದರ್ಶಕತೆ ಮತ್ತು ದಕ್ಷತೆಯನ್ನು ಹೆಚ್ಚಿಸುವಲ್ಲಿ ಕಾರ್ಯನಿರ್ವಹಿಸುತ್ತಿದೆ.2005ರಲ್ಲಿ ಕರ್ನಾಟಕವು ಮೊದಲು ಇ-ಆಡಳಿತ ಇಲಾಖೆಯು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಅಡಿಯಲ್ಲಿ ಸ್ಥಾಪನೆಗೊಂಡಿತು. ಕರ್ನಾಟಕದಲ್ಲಿ ವಿವಿಧ ಇ-ಆಡಳಿತ ಉಪಕ್ರಮಗಳ ಪರಿಕಲ್ಪನೆ, ಅನುಷ್ಠಾನ ಮತ್ತು ಮೇಲ್ವಿಚಾರಣೆಗಾಗಿ ಸ್ವತಂತ್ರ ಸಂಸ್ಥೆಯಾಗಿ ರೂಪಿಸುವ ಉದ್ದೇಶ ಇದರ ಹಿಂದೆ ಇತ್ತು.. ಇ-ಆಡಳಿತ ಕೇಂದ್ರವನ್ನು ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ, 1960 ರ ಅಡಿಯಲ್ಲಿ ಸ್ಥಾಪಿಸಲಾಯಿತು.ಬ್ಲಾಗಿಂಗ್ ತಳಹದಿಯಲ್ಲಿ ಅರಳಿದ ಕನ್ನಡ ಡಿಜಿಟಲ್ ಪತ್ರಿಕೋದ್ಯಮAI ಯುಗದಲ್ಲಿ ಕನ್ನಡ ಭಾಷೆಯ ಮುಂದಿರುವ ಸವಾಲುಗಳುಕೇಂದ್ರ ಸರ್ಕಾರದ ಒತ್ತಾಸೆಗೆ ಗಟ್ಟಿ ವೇದಿಕೆಭಾರತದಲ್ಲಿ ಆಗಲೇ ಎಲೆಕ್ಟ್ರಾನಿಕ್ ಆಡಳಿತಕ್ಕೆ ಒತ್ತು ಕೊಡುವ ಚರ್ಚೆಗಳು ನಡೆದಿದ್ದವು. 2005ರಲ್ಲಿ ಕೇಂದ್ರ ಸರ್ಕಾರ ಇ-ಆಡಳಿತಕ್ಕೆ ಪೂರಕವಾಗಿ ಇ-ಆಡಳಿತ ಯೋಜನೆ ರೂಪಿಸಿ ಅದಕ್ಕೆ ವಿಶೇಷ ಅನುದಾನವನ್ನೂ ನೀಡಲು ಆರಂಭಿಸಿತು. ಎಲ್ಲಾ ರಾಜ್ಯಗಳಲ್ಲಿ ಇ ಆಡಳಿತ ವ್ಯವಸ್ಥೆ ಬಲಪಡಿಸುವಂತೆ ನಿರ್ದೇಶನಗಳನ್ನು ನೀಡಿತು. ಪ್ರತ್ಯೇಕ ವ್ಯವಸ್ಥೆ ರೂಪಿಸಿ ಅಗತ್ಯ ತರಬೇತಿಗಳನ್ನು ಸಿಬ್ಬಂದಿಗೆ ನೀಡಬೇಕು ಎನ್ನುವುದು ಕೇಂದ್ರದ ಸೂಚನೆಯಾಗಿತ್ತು.ಇದೇ ಯೋಚನೆಯಲ್ಲಿದ್ದ ಕರ್ನಾಟಕವು ಇದಕ್ಕೆ ಪೂರಕವಾಗಿ ಸ್ಪಂದಿಸಿ ಇ-ಆಡಳಿತ ಇಲಾಖೆಯನ್ನೂ ಸೃಷ್ಟಿಸಿತು. ತಂತ್ರಜ್ಞಾನ ಪೂರಕ ಆಡಳಿತಕ್ಕೆ ಹೆಸರಾಗಿದ್ದ ರಾಜೀವ್ ಚಾವ್ಲಾ ಅವರನ್ನು ಇಲಾಖೆ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಯಿತು. ನಿಜಕ್ಕೂ ಇ-ಆಡಳಿತಕ್ಕೆ ವೇಗ ಸಿಕ್ಕ ಕಾಲವದು. ದೊಡ್ಡ ಸವಾಲು ಮುಂದೆ ಇತ್ತು. ಇಂತಹ ವೇಳೆ ಇ-ಆಡಳಿತದಲ್ಲಿ ಆಸಕ್ತಿಯಿದ್ದ ಅಧಿಕಾರಿಗಳನ್ನು ನಿಯೋಜಿಸಲಾಯಿತು. ಐಎಫ್ಎಸ್ ಅಧಿಕಾರಿಯಾಗಿದ್ದ ನನಗೂ ಹಾಗೂ ಮತ್ತೊಬ್ಬ ಐಎಫ್ಎಸ್ ಅಧಿಕಾರಿ ವಿಪಿನ್ ಸಿಂಗ್ ಅವರೂ ಈ ತಂಡದಲ್ಲಿ ತೊಡಗಿಸಿಕೊಳ್ಳುವ ಅವಕಾಶ ಸಿಕ್ಕಿತು.ಜನರಿಗೆ ಹತ್ತಿರದ ಇ-ಆಡಳಿತಇ-ಆಡಳಿತ ಎಂದರೆ ಬೆರಳ ತುದಿಯಲ್ಲಿ ಜನರಿಗೆ ಸೇವೆ ಒದಗಿಸುವುದು, ಕಾಯುತ್ತಲೇ ದಿನದೂಡುವುದನ್ನು ತಪ್ಪಿಸುವುದು, ಇದಕ್ಕಾಗಿ ಸಂಪೂರ್ಣ ಪಾರದರ್ಶಕ ಹಾಗೂ ಸುಸ್ಥಿರ ಎಲೆಕ್ಟ್ರಾನಿಕ್ಸ್ ವ್ಯವಸ್ಥೆ ಬಲಪಡಿಸುವ ಹೊಣೆ ಇತ್ತು.ಮುಂದಿನ ಹಂತವಾಗಿ ವಿದ್ಯುನ್ಮಾನ ನಾಗರಿಕ ಸೇವಾ ವಿತರಣಾ ನಿರ್ದೇಶನಾಲಯ( EDCS)ವನ್ನು 2006ರಲ್ಲಿ ಆರಂಭಿಸಿ ಹೋಬಳಿ ಮಟ್ಟಕ್ಕೂ ಇ-ಆಡಳಿತವನ್ನು ವಿಸ್ತರಣೆ ಮಾಡಲಾಯಿತು. ನೆಮ್ಮದಿ ಕೇಂದ್ರಗಳು ಬಂದವು.ಇದಾದ ನಂತರ ವೇತನವನ್ನು ಸಂಪೂರ್ಣ ಬ್ಯಾಂಕ್ ಮೂಲಕವೇ ನಗದೀಕರಣ ಮಾಡುವ ವ್ಯವಸ್ಥೆ, ಇ ಖರೀದಿ, ಇ ಟೆಂಡರ್ ಕೂಡ ಜಾರಿಯಾಗಿ ಆಡಳಿತ ವ್ಯವಸ್ಥೆ ಸಂಪೂರ್ಣ ಪಾರದರ್ಶಕ ಹಾಗೂ ಸುರಕ್ಷಿತದೆಡೆ ಮುನ್ನಡೆಯಿತು. ಹಿರಿಯ ಅಧಿಕಾರಿಗಳ ಸಹಿಯನ್ನು ಡಿಜಿಟಲ್ ರೂಪಕ್ಕೂ ನೀಡಲಾಯಿತು, ಆಧಾರ್ ಕಾರ್ಡ್ ನೀಡುವ ಜೊತೆಗೆ ಅದರಲ್ಲಿನ ವಿಳಾಸ ಬದಲಾವಣೆ ಸೇರಿದಂತೆ ಹಲವು ವ್ಯವಸ್ಥೆಗಳು ಸುಧಾರಣೆಯಾದವು. ಏಳಂಶದ ಕಾರ್ಯಕ್ರಮಇದಕ್ಕೆ ಮಾನವ ಸಂಪನ್ಮೂಲ ನಿರ್ವಹಣಾ ವ್ಯವಸ್ಥೆ(HRMS)ರೂಪಿಸಿ ಜಿಲ್ಲಾ ಹಾಗೂ ತಾಲ್ಲೂಕು ಹಂತದಲ್ಲಿ ಅಧಿಕಾರಿಗಳು, ಸಿಬ್ಬಂದಿಗಳನ್ನು ಅಣಿಗೊಳಿಸುವುದು, ಪ್ರತ್ಯೇಕ ಡೇಟಾ ಕೇಂದ್ರವನ್ನು ಸ್ಥಾಪಿಸುವ ಪ್ರಕ್ರಿಯೆ ಮೊದಲ ಹಂತದಲ್ಲಿ ಶುರುವಾಯಿತು. ಡೇಟಾ ಸೆಂಟರ್ ಜತೆಗೆ ಸಂಪರ್ಕ ಜಾಲ(Network)ಬಲಪಡಿಸುವುದೂ ಆಯಿತು. ಕಾರ್ಯಚಟುವಟಿಕೆಯ ಕ್ರಿಯಾ ಯೋಜನೆಗಳು ರೂಪುಗೊಂಡವು. ಈ ಹಂತದಲ್ಲಿ 7 ಅಂಶದ ಕಾರ್ಯಚಟುವಟಿಕೆ ಇಡೀ ಯೋಜನೆಗೆ ಬಲ ತುಂಬಿತು1. ಇಲಾಖೆಗಳನ್ನು ಇ ಸೇವೆಗೆ ಸಿದ್ದಪಡಿಸುವುದು2. ಸಾಮಾನ್ಯ ಸೇವಾ ಕೇಂದ್ರಗಳಿಗೆ ಸೌಲಭ್ಯ ನೀಡುವುದು3. ಸಾಮಾನ್ಯ ಸೇವಾ ಚಟುವಟಿಕೆಗಳಿಗೆ ಸಿಬ್ಬಂದಿ ಸಜ್ಜುಗೊಳಿಸುವಿಕೆ4. ಸುರಕ್ಷಿತ ಸಂಪರ್ಕ ಜಾಲವನ್ನು ಬಲಪಡಿಸುವುದು5. ಡೇಟಾ ಸೆಂಟರ್ಗಳ ಮೂಲಕ ವ್ಯವಸ್ಥೆ ಗಟ್ಟಿಗೊಳಿಸುವುದು6. ಮಾನವ ಸಂಪನ್ಮೂಲ ನಿರ್ವಹಣಾ ವ್ಯವಸ್ಥೆ(HRMS)7. ಇ ಖರೀದಿ ವ್ಯವಸ್ಥೆ ಜಾರಿಪ್ರಜಾವಾಣಿ ಕರುನಾಡೋತ್ಸವ | ಸಾಹಿತಿಗಳ ಊರು–ಮನೆಯ ಈಗಿನ ಸ್ಥಿತಿಗತಿ: ಶಿವರಾಮ ಕಾರಂತಕರುನಾಡೋತ್ಸವ | ಮೊಮ್ಮಕ್ಕಳ ಮೂಲಕ ಕನ್ನಡಾಭಿಮಾನ ಮೆರೆದ ಛಾಯಾಗ್ರಾಹಕ! ಒಂದೇ ಬಾರಿಗೆ 10 ಸಾವಿರ ಕಚೇರಿ ಇ ಜಾಲಮೂರು ವರ್ಷದಲ್ಲಿಯೇ ಈ ವ್ಯವಸ್ಥೆ ಕರ್ನಾಟಕದಲ್ಲಿ ರೂಪುಗೊಂಡಿದೆ. ರಾಜೀವ್ ಚಾವ್ಲಾ ಅವರ ನಂತರ ಇಲಾಖೆ ಪ್ರಧಾನ ಕಾರ್ಯದರ್ಶಿಯಾಗಿದ್ದ ಎಂ.ಎನ್.ವಿದ್ಯಾಶಂಕರ್ ಅವರ ಅಪರಿಮಿತ ಬೆಂಬಲವೂ ಇತ್ತು. ಕರ್ನಾಟಕದ ಸುಮಾರು 10 ಸಾವಿರ ಕಚೇರಿಗಳನ್ನು ಇ-ಆಡಳಿತದ ಸಂಪರ್ಕ ಜಾಲದೊಳಗೆ ತರಲಾಯಿತು. ಇಂತಹ ವ್ಯವಸ್ಥೆ ಕರ್ನಾಟಕದಲ್ಲಿ ಮೊದಲು ಆಗಿದ್ದು ದೇಶದ ಗಮನ ಸೆಳೆದಿತ್ತು. ಮುಖ್ಯಮಂತ್ರಿ ಆಗಿದ್ದ ಬಿ.ಎಸ್.ಯಡಿಯೂರಪ್ಪ ಅವರು 2009ರ ಡಿಸೆಂಬರ್ 7ರಂದು ಇ ಆಡಳಿತ ಜಾರಿಗೊಂಡಿರುವುದಕ್ಕೆ ಚಾಲನೆ ಕೊಟ್ಟರು. ರಾಜ್ಯಪಾಲರು, ಜಿಲ್ಲಾಧಿಕಾರಿಗಳು, ತಹಸಿಲ್ದಾರರು, ವಿಡಿಯೋ ಕಾನ್ಫರೆನ್ಸ್ನಲ್ಲಿ ಭಾಗಿಯಾಗಿದ್ದು ಮೊದಲಾಗಿತ್ತು. ಆಡಿಯೋ, ವಿಡಿಯೋ ಹಾಗೂ ಡೇಟಾ ಸೆಂಟರ್ನ ಮೂರು ವ್ಯವಸ್ಥೆ ನಿಜ ರೂಪ ಪಡೆದಿದ್ದವು. ಬೆಂಗಳೂರು ಒನ್ ಎನ್ನುವ ಪರಿಕಲ್ಪನೆಯೂ ಇ-ಆಡಳಿತದ ಅಡಿಯೇ ಬಂದಿತ್ತು. ಬೆಂಗಳೂರಿನ 30 ಕಡೆ ಒನ್ ಕೇಂದ್ರ ಶುರುವಾಗಿ ನಂತರ ಅದನ್ನು 100ಕ್ಕೆ ಹೆಚ್ಚಿಸಲಾಯಿತು. 24*7 ಅಹರ್ನಿಶಿ ನಿಮ್ಮ ಸೇವೆ ಒಂದೇ ಸೂರಿನಡಿ ಎನ್ನುವ ಟ್ಯಾಗ್ ಲೈನ್ ನೊಂದಿಗೆ ಚಟುವಟಿಕೆ ಜನಮುಖಿಯಾಯಿತು. ಮೊಬೈಲ್ ಒನ್ ಬಂದಿತು. ಆನಂತರ ಕರ್ನಾಟಕ ಒನ್ ಗೂ ವಿಸ್ತರಣೆಗೊಂಡು ಪ್ರತೀ ಮಹಾನಗರ ಪಾಲಿಕೆಗಳಲ್ಲೂ ಈ ಸೇವೆ ಶುರುವಾದವು.ಮಾದರಿಗಳೊಂದಿಗೆ ಪ್ರಶಸ್ತಿ ಗರಿ2010ರಲ್ಲಿ 'ಯಾವುದೇ ಕ್ಷಣದಲ್ಲಿ ಯಾವುದೇ ಸ್ಥಳದಿಂದ'( Any Time Any Where) ಎನ್ನುವ ಘೋಷಣೆ ಹಂತ ಹಂತವಾಗಿ ಜಾರಿಗೊಂಡಿದ್ದು ನಿಜಕ್ಕೂ ಕರ್ನಾಟಕದ ಜನಪ್ರತಿನಿಧಿಗಳ ಬೆಂಬಲ, ಅಧಿಕಾರಿಗಳು ಹಾಗೂ ಸಿಬ್ಬಂದಿ, ಇಲಾಖೆಗಳ ಸಂಯೋಜಿತ ಕೆಲಸದಿಂದ ಸಾಧ್ಯವಾಗಿ ಇ-ಆಡಳಿತದ ಮಾದರಿ ಕರ್ನಾಟಕದ ಹಲವು ರಾಜ್ಯಗಳಿಗೆ ವಿಸ್ತರಣೆಗೊಂಡಿತು. ಹಲವು ರಾಜ್ಯಗಳು ಕರ್ನಾಟಕದ ಮಾದರಿ ಅಳವಡಿಸಿಕೊಂಡಿವೆ. ಇದಕ್ಕೆ ಅಂತರರಾಷ್ಟ್ರೀಯ ಹಾಗೂ ರಾಷ್ಟ್ರೀಯ ಪ್ರಶಸ್ತಿಗಳು ಲಭಿಸಿವೆ. ಇದರೊಟ್ಟಿಗೆ ಐ.ಎಸ್. ಎನ್. ಪ್ರಸಾದ್, ಅಜಯ್ ಸೇಠ್ ಅವರ ಪರಿಕಲ್ಪನೆಯೊಂದಿಗೆ ಖಜಾನೆ-2 ಎನ್ನುವ ತಂತ್ರಜ್ಞಾನವೂ ಹಣಕಾಸು ನಿರ್ವಹಣೆ, ವೇತನ ಬಟವಾಡೆ, ಹಣ ವರ್ಗಾವಣೆಯ ಪಾರದರ್ಶಕ ವ್ಯವಸ್ಥೆಯಾಗಿ ಬಲಗೊಂಡಿದೆ. ಸರ್ಕಾರದ ಯೋಜನೆ ಆರ್ಥಿಕ ನೆರವು ಫಲಾನುಭವಿ ಖಾತೆಗೆ ಕ್ಷಣಮಾತ್ರದಲ್ಲಿ ತಲುಪುವ ಹಂತಕ್ಕೂ ಬೆಳೆದಿದೆ. ಖಜಾನೆ ಯೋಜನೆ ಆರಂಭಿಸಿದಾಗ ಆಕ್ಷೇಪ ವ್ಯಕ್ತಪಡಿಸಿದ್ದ ಗುತ್ತಿಗೆದಾರರು ಇದರ ವಿಶೇಷತೆ ಅರಿವಿಗೆ ಬಂದಾಗ ನಂತರ ಇದರಡಿಯೇ ವಹಿವಾಟಿಗೆ ಬೇಡಿಕೆ ಇಟ್ಟಿದ್ದು ಇಡೀ ವ್ಯವಸ್ಥೆ ಮಹತ್ವವನ್ನು ಸಾರಿದ್ದನ್ನೂ ಕಂಡಿದ್ದೇವೆ. ಕಾವೇರಿ ಎನ್ನುವ ತಂತ್ರಜ್ಞಾನದಿಂದ ಭೂಮಿಗಳ ಸಂಯೋಜನೆ ಆಗಿದೆ. ಇತರೆ ಇಲಾಖೆಗಳೂ ಇ-ಆಡಳಿತಕ್ಕೆ ಇನ್ನಿಲ್ಲದ ಒತ್ತು ನೀಡಿ ಸುಧಾರಣೆಯತ್ತ ಮುಖ ಮಾಡಿವೆ.ಮುಖ್ಯಮಂತ್ರಿಗಳ ಸಹಕಾರ ನೆನೆಯುತಈ ಅವಧಿಯಲ್ಲಿ ಮುಖ್ಯಮಂತ್ರಿಗಳಾಗಿದ್ದ ಸಿದ್ದರಾಮಯ್ಯ, ಎಚ್.ಡಿ.ಕುಮಾರಸ್ವಾಮಿ, ಹಾಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕೂಡ ಇಂತಹ ವ್ಯವಸ್ಥೆ ಬಲಗೊಳ್ಳಲು ಸಂಪೂರ್ಣ ಸಹಕಾರವನ್ನೂ ನೀಡಿರುವುದನ್ನು ಮರೆಯಲಾಗದು. ರಾಜಕೀಯ ಮುಕ್ತ ಇ-ಆಡಳಿತವೂ ಜಾರಿ ಹಿಂದೆ ಎಲ್ಲರ ಬೆಂಬಲವೂ ಇದೆ.ಕರ್ನಾಟಕದಲ್ಲಿ ಈಗ ಇ-ಆಡಳಿತ ಸುಸ್ಥಿರವಾಗಿ ಬೆಳೆದಿದೆ. ಸಿಬ್ಬಂದಿಯೂ ಜನಸ್ನೇಹಿ ಆಡಳಿತ ಜಾರಿಗೆ ಸಜ್ಜುಗೊಂಡಿದ್ದಾರೆ. ಸಕಾಲ ಸಹಿತ ಇನ್ನಷ್ಟು ಚಟುವಟಿಕೆಗಳೂ ಗಟ್ಟಿಗೊಳ್ಳಲು ಇ-ಆಡಳಿತದ ಬಲವೂ ಸಿಗುತ್ತಿದೆ. ಎರಡು ದಶಕದ ಹಾದಿ ವ್ಯವಸ್ಥೆಗೆ ಶಕ್ತಿ ತುಂಬಿದ್ದರೆ, ಕಾಲಕ್ಕೆ ಅನುಗುಣವಾಗಿ ಸುಧಾರಣೆಯೊಂದಿಗೆ ವ್ಯವಸ್ಥೆ ಬಲಪಡಿಸುವುದೂ ನಿರಂತರವಾಗಿ ನಡೆದಿದೆ. ಸೇವೆಯಲ್ಲಿದ್ದಾಗ ನಿರಂತರ 13 ವರ್ಷ, ನಿವೃತ್ತಿ ನಂತರವೂ ಹಣಕಾಸು ಇಲಾಖೆಯ ಖಜಾನೆ ವಿಭಾಗದ ಭಾಗವಾಗಿರುವುದು ನನಗೆ ಖುಷಿಯಿದೆ.(ಲೇಖಕರು: ಡಿ.ಎಸ್.ರವೀಂದ್ರನ್, ಸಲಹೆಗಾರರು, ಆರ್ಥಿಕ ಇಲಾಖೆ, ಬೆಂಗಳೂರು)ಡಿ.ಎಸ್.ರವೀಂದ್ರನ್ಕರುನಾಡೋತ್ಸವ | ರಾಜ್ಯದ ಆನೆಗಳಿಗೆ ಹೆಚ್ಚು ಬೇಡಿಕೆ: ಸೆರೆ, ಪಳಗಿಸುವ ಕಲೆಯ ಹಿರಿಮೆಕನ್ನಡ ಸಾಹಿತ್ಯ ಪರಿಷತ್ತು ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯೇ?