2029ರ ವೇಳೆಗೆ ಭಾರತದಲ್ಲಿ ₹3 ಲಕ್ಷ ಕೋಟಿ ರಕ್ಷಣಾ ಉತ್ಪಾದನೆ: ರಾಜನಾಥ ಸಿಂಗ್
ನವದೆಹಲಿ: ಭದ್ರತಾ ಸವಾಲುಗಳನ್ನು ಪರಿಣಾಮಕಾರಿಯಾಗಿ ಎದುರಿಸಲು ರಕ್ಷಣಾ ಸ್ವಾಯತ್ತತೆ ಮತ್ತು ಸ್ವದೇಶಿ ಮಿಲಿಟರಿ ಸಾಮರ್ಥ್ಯಗಳು ಅತ್ಯಗತ್ಯವಾಗಿರುವುದರಿಂದ ಭಾರತವು ಅದರ ಅಭಿವೃದ್ಧಿಯ ಕಡೆಗೆ ಗಮನಹರಿಸುತ್ತಿದೆ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ಹೇಳಿದ್ದಾರೆ.ಜೈಸಲ್ಮೇರ್ನಲ್ಲಿ ನಡೆದ ರಕ್ಷಣಾ ಸಚಿವಾಲಯದ ಸಲಹಾ ಸಮಿತಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ರಾಜನಾಥ ಸಿಂಗ್,

ನವದೆಹಲಿ: ಭದ್ರತಾ ಸವಾಲುಗಳನ್ನು ಪರಿಣಾಮಕಾರಿಯಾಗಿ ಎದುರಿಸಲು ರಕ್ಷಣಾ ಸ್ವಾಯತ್ತತೆ ಮತ್ತು ಸ್ವದೇಶಿ ಮಿಲಿಟರಿ ಸಾಮರ್ಥ್ಯಗಳು ಅತ್ಯಗತ್ಯವಾಗಿರುವುದರಿಂದ ಭಾರತವು ಅದರ ಅಭಿವೃದ್ಧಿಯ ಕಡೆಗೆ ಗಮನಹರಿಸುತ್ತಿದೆ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ಹೇಳಿದ್ದಾರೆ.ಜೈಸಲ್ಮೇರ್ನಲ್ಲಿ ನಡೆದ ರಕ್ಷಣಾ ಸಚಿವಾಲಯದ ಸಲಹಾ ಸಮಿತಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ರಾಜನಾಥ ಸಿಂಗ್, ‘ರಕ್ಷಣಾ ವಲಯದಲ್ಲಿ ವಿದೇಶಿ ಅವಲಂಬನೆಯನ್ನು ಕಡಿಮೆ ಮಾಡುವ ಪ್ರಯತ್ನಗಳ ಭಾಗವಾಗಿ ಸರ್ಕಾರವು ದೇಶೀಯ ರಕ್ಷಣಾ ಉದ್ಯಮವನ್ನು ಉತ್ತೇಜಿಸುತ್ತಿದೆ. ರಾಷ್ಟ್ರೀಯ ಭದ್ರತೆಗೆ ಸ್ವದೇಶಿ ತಾಂತ್ರಿಕ ಸಾಮರ್ಥ್ಯಗಳು ಅತ್ಯಗತ್ಯವಾಗಿದೆ’ ಎಂದು ಹೇಳಿದ್ದಾರೆ. ರಕ್ಷಣಾ ಉತ್ಪಾದನೆಯು 2014-15ರಲ್ಲಿ ₹46,429 ಕೋಟಿಯಿಂದ, 2025-26ರಲ್ಲಿ ದಾಖಲೆಯ ₹1.78 ಲಕ್ಷ ಕೋಟಿಗಳಿಗೆ ಏರಿಕೆಯಾಗಿದೆ. 2014ರಲ್ಲಿ ₹2,000 ಕೋಟಿಗಿಂತ ಕಡಿಮೆಯಿದ್ದ ರಕ್ಷಣಾ ರಫ್ತು, ಈಗ ಸರಿಸುಮಾರು ₹40,000 ಕೋಟಿಗಳಿಗೆ ತಲುಪಿದೆ. ನಾವು 2029ರ ವೇಳೆಗೆ ₹3 ಲಕ್ಷ ಕೋಟಿ ಮೌಲ್ಯದ ರಕ್ಷಣಾ ಉತ್ಪಾದನೆ ಮತ್ತು ₹50,000 ಕೋಟಿ ಮೌಲ್ಯದ ರಕ್ಷಣಾ ರಫ್ತು ಸಾಧಿಸುವ ಗುರಿಯನ್ನು ಹೊಂದಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.2026-27ರ ಹಣಕಾಸು ವರ್ಷದ ರಕ್ಷಣಾ ಬಜೆಟ್ ಅನ್ನು ದಾಖಲೆಯ ₹7.85 ಲಕ್ಷ ಕೋಟಿಗೆ ಹೆಚ್ಚಿಸಲಾಗಿದ್ದು, ಇದರಲ್ಲಿ ₹2.19 ಲಕ್ಷ ಕೋಟಿ ಬಂಡವಾಳ ವೆಚ್ಚ ಸೇರಿದೆ ಎಂದು ಹೇಳಿದ್ದಾರೆ.ತಂತ್ರಜ್ಞಾನ ಆಧಾರಿತ ಆಧುನಿಕ ಯುದ್ಧದ ಬೇಡಿಕೆಗಳನ್ನು ಪೂರೈಸಲು ಸೇನೆಯನ್ನು ಸಜ್ಜುಗೊಳಿಸಲಾಗುತ್ತಿದೆ. ಅದಕ್ಕಾಗಿ ತಂತ್ರಜ್ಞಾನ ಮತ್ತು ಮಾನವ ಸಂಪನ್ಮೂಲದಂತಹ ಪ್ರಮುಖ ಕ್ಷೇತ್ರಗಳಲ್ಲಿ ಸರ್ಕಾರವು ಹೂಡಿಕೆ ಮಾಡುತ್ತಿದೆ ಎಂದು ಹೇಳಿದ್ದಾರೆ. ಈ ಸಭೆಯಲ್ಲಿ ಭದ್ರತಾ ಸವಾಲು, ಯುದ್ಧದ ಮಾದರಿ, ರಕ್ಷಣಾ ವಲಯದಲ್ಲಿನ ತಾಂತ್ರಿಕ ಪ್ರಗತಿ ಮತ್ತು ಕಾರ್ಯಾಚರಣೆಯ ಸಾಮರ್ಥ್ಯವಿರುವ ಸೇನೆಯನ್ನು ನಿರ್ಮಿಸುವ ಕುರಿತು ಸಮಗ್ರ ಚರ್ಚೆಗಳು ನಡೆದವು.