ಕಾಂಗ್ರೆಸ್ ಸೋತಿರುವುದಕ್ಕೆ ಅವರ ನಾಯಕತ್ವ ಕಾರಣ, ಎಸ್ಐಆರ್ ಅಲ್ಲ: ಸ್ಮೃತಿ ಇರಾನಿ
ಕೋಲ್ಕತ್ತ: 2014ರಿಂದ 2025ರವರೆಗೆ 56 ಚುನಾವಣೆಗಳಲ್ಲಿ ಕಾಂಗ್ರೆಸ್ ಸೋಲನುಭವಿಸಿದೆ. ಇದಕ್ಕೆ ಅವರ ನಾಯಕತ್ವ ವಿಫಲತೆ ಕಾರಣವೇ ಹೊರತು, ಎಸ್ಐಆರ್ ಅಲ್ಲ ಎಂದು ಬಿಜೆಪಿ ಹಿರಿಯ ನಾಯಕಿ ಸ್ಮೃತಿ ಇರಾನಿ ಹೇಳಿದ್ದಾರೆ. ಎಸ್ಐಆರ್ ಕುರಿತು ಚುನಾವಣಾ ಆಯೋಗದ ನಿಲುವುಗಳನ್ನು ಪ್ರಶ್ನಿಸುವ ಮೂಲಕ ಕಾಂಗ್ರೆಸ್, ಸಾಂವಿಧಾನಿಕ ಸಂಸ್ಥೆಗಳನ್ನು ದುರ್ಬಲಗೊಳಿಸುವ ಪ್ರಯತ್ನ ಮಾಡುತ್ತಿದೆ

ಕೋಲ್ಕತ್ತ: 2014ರಿಂದ 2025ರವರೆಗೆ 56 ಚುನಾವಣೆಗಳಲ್ಲಿ ಕಾಂಗ್ರೆಸ್ ಸೋಲನುಭವಿಸಿದೆ. ಇದಕ್ಕೆ ಅವರ ನಾಯಕತ್ವ ವಿಫಲತೆ ಕಾರಣವೇ ಹೊರತು, ಎಸ್ಐಆರ್ ಅಲ್ಲ ಎಂದು ಬಿಜೆಪಿ ಹಿರಿಯ ನಾಯಕಿ ಸ್ಮೃತಿ ಇರಾನಿ ಹೇಳಿದ್ದಾರೆ. ಎಸ್ಐಆರ್ ಕುರಿತು ಚುನಾವಣಾ ಆಯೋಗದ ನಿಲುವುಗಳನ್ನು ಪ್ರಶ್ನಿಸುವ ಮೂಲಕ ಕಾಂಗ್ರೆಸ್, ಸಾಂವಿಧಾನಿಕ ಸಂಸ್ಥೆಗಳನ್ನು ದುರ್ಬಲಗೊಳಿಸುವ ಪ್ರಯತ್ನ ಮಾಡುತ್ತಿದೆ. ನರೇಂದ್ರ ಮೋದಿ ಸರ್ಕಾರವನ್ನು ಬೀಳಿಸಲು ಮತ್ತು ಭಾರತದಲ್ಲಿ ಅಶಾಂತಿಯ ವಾತಾವರಣ ಉಂಟುಮಾಡಲು ವಿರೋಧ ಪಕ್ಷವು ವಿದೇಶಿ ನೆರವನ್ನು ಪಡೆಯುತ್ತಿದೆ ಎಂದು ಆರೋಪಿಸಿದ್ದಾರೆ. ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ಅವರು ಪಾಕಿಸ್ತಾನಕ್ಕೆ ತೆರಳಿ, ದೇಶ ವಿರೋಧಿ ಹೇಳಿಕೆಗಳನ್ನು ನೀಡುತ್ತಾರೆ. ರಾಹುಲ್ ಗಾಂಧಿ ಅವರು ಲಂಡನ್ಗೆ ತೆರಳಿ, ಅಲ್ಲಿ ಮೋದಿಯನ್ನು ಸೋಲಿಸಲು ಬಯಸುತ್ತೇನೆ ಎನ್ನುತ್ತಾರೆ. ವಿರೋಧ ಪಕ್ಷದ ನಾಯಕರು ವಿದೇಶಿ ನೆಲದಲ್ಲಿ ಈ ರೀತಿಯ ಹೇಳಿಕೆಗಳನ್ನು ನೀಡುವುದು ಸರಿಯೇ ಎಂದು ಸ್ಮೃತಿ ಇರಾನಿ ಪ್ರಶ್ನಿಸಿದ್ದಾರೆ. ಮತದಾರರ ಪಟ್ಟಿಯಲ್ಲಿ ನಕಲಿ ಹೆಸರು ಮತ್ತು ಮೃತಪಟ್ಟವರ ಹೆಸರನ್ನು ಎಸ್ಐಆರ್ನಿಂದ ತೆಗೆದುಹಾಕಲಾಗುತ್ತಿದೆ. ಆದರೆ, ಕಾಂಗ್ರೆಸ್ ಇದಕ್ಕೆ ಏಕೆ ವಿರೋಧ ವ್ಯಕ್ತಪಡಿಸುತ್ತಿದೆ? ಅವರ ಹೆಸರುಗಳನ್ನು ಮತದಾರರ ಪಟ್ಟಿಯಲ್ಲಿರುವಂತೆ ಮಾಡಲು ಕಾಂಗ್ರೆಸ್ ಏಕೆ ಬಯಸುತ್ತಿದೆ ಎಂದು ಪ್ರಶ್ನಿಸಿದ್ದಾರೆ. ಕಾಂಗ್ರೆಸ್ ಅವಧಿಯಲ್ಲಿ ಕೂಡ 10 ಬಾರಿ ಎಸ್ಐಆರ್ ನಡೆಸಲಾಗಿತ್ತು. ಅದಲ್ಲದೆ, ಕಾಂಗ್ರೆಸ್ 2014ರಿಂದ ಸೋಲುತ್ತಲೇ ಇದೆ. ಆಗ, ಜ್ಞಾನೇಶ್ ಕುಮಾರ್ ಅವರು ಸಿಇಸಿ ಕೂಡ ಆಗಿರಲಿಲ್ಲ ಎಂದು ಹೇಳಿದ್ದಾರೆ. ಎಸ್ಐಆರ್ನಲ್ಲಿ ಆಕ್ರಮದ ಆರೋಪ ಮತ್ತು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ‘ಇಂಡಿಯಾ’, ದೆಹಲಿ ಚಲೋ ರ್ಯಾಲಿಯನ್ನು ಕೈಗೊಂಡಿತ್ತು. ಅದನ್ನು ಬಿಜೆಪಿ ನಾಯಕರು ವಿರೋಧಿಸುತ್ತಿದ್ದಾರೆ.