ಮಳೆಯ ಕೊರತೆ: ಹುಸೇನಪುರದಲ್ಲಿ ಕುಡಿಯುವ ನೀರಿಗೂ ಪರದಾಟ
ಕವಿತಾಳ: ‘ಸಮೀಪದ ಹುಸೇನಪುರ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದ್ದು, ನೀರಿಗಾಗಿ ಇಡೀ ದಿನ ಕಾಯ್ದು ಕುಳಿತುಕೊಳ್ಳುವಂತಾಗಿದೆ’ ಎಂದು ಗ್ರಾಮಸ್ಥರು ಆರೋಪಿಸಿದರು.‘ಮಳೆ ಕೊರತೆಯ ಹಿನ್ನೆಲೆಯಲ್ಲಿ ಗ್ರಾಮಕ್ಕೆ ನೀರು ಪೂರೈಸುವ 2 ಕೊಳವೆಬಾವಿಗಳಲ್ಲಿ ಅಂತರ್ಜಲ ಕುಸಿದು ನೀರಿನ ಸಮಸ್ಯೆ ಉಂಟಾಗಿದೆ. ಎರಡು ತಿಂಗಳಿಂದ ಗ್ರಾಮದಲ್ಲಿ ಸಮರ್ಪಕವಾಗಿ ನೀರು ಪೂರೈಕೆಯಾಗು

ಕವಿತಾಳ: ‘ಸಮೀಪದ ಹುಸೇನಪುರ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದ್ದು, ನೀರಿಗಾಗಿ ಇಡೀ ದಿನ ಕಾಯ್ದು ಕುಳಿತುಕೊಳ್ಳುವಂತಾಗಿದೆ’ ಎಂದು ಗ್ರಾಮಸ್ಥರು ಆರೋಪಿಸಿದರು.‘ಮಳೆ ಕೊರತೆಯ ಹಿನ್ನೆಲೆಯಲ್ಲಿ ಗ್ರಾಮಕ್ಕೆ ನೀರು ಪೂರೈಸುವ 2 ಕೊಳವೆಬಾವಿಗಳಲ್ಲಿ ಅಂತರ್ಜಲ ಕುಸಿದು ನೀರಿನ ಸಮಸ್ಯೆ ಉಂಟಾಗಿದೆ. ಎರಡು ತಿಂಗಳಿಂದ ಗ್ರಾಮದಲ್ಲಿ ಸಮರ್ಪಕವಾಗಿ ನೀರು ಪೂರೈಕೆಯಾಗುತ್ತಿಲ್ಲ. ಬಳಕೆಗೆ ಹಾಗೂ ಜನ, ಜಾನುವಾರಿಗೆ ಕುಡಿಯುವ ನೀರಿನ ಕೊರತೆ ಉಂಟಾಗಿದೆ. ಸಣ್ಣದಾಗಿ ಹನಿ ಹನಿ ಬೀಳುವ ನೀರು ತುಂಬಿಕೊಳ್ಳಲು ಇಡೀ ದಿನ ಕಾಯಬೇಕಿದೆʼ ಎಂದು ಮರಿಯಮ್ಮ, ಅಂಬಮ್ಮ, ರೇಣುಕಾ ಮತ್ತು ದೇವಮ್ಮ ದೂರಿದರು.‘ಸುಮಾರು 2 ಸಾವಿರ ಜನಸಂಖ್ಯೆಯಿರುವ ಗ್ರಾಮಕ್ಕೆ 2 ಕೊಳವೆಬಾವಿಗಳಿಂದ ನೀರು ಪೂರೈಸಲಾಗುತ್ತಿದೆ. ಮೇಲ್ತೊಟ್ಟಿ ನಿರ್ಮಿಸಿ, 10 ವರ್ಷ ಕಳೆದರೂ ಅದನ್ನು ಬಳಕೆ ಮಾಡಿಲ್ಲ. ಹೀಗಾಗಿ ಅದು ಶಿಥಿಲಾವಸ್ಥೆ ತಲುಪಿದೆ. ಸಮರ್ಪಕ ಕುಡಿಯುವ ನೀರು ಪೂರೈಕೆಗೆ ಸ್ಥಳೀಯ ಆಡಳಿತ ಮುನ್ನೆಚ್ಚರಿಕೆ ವಹಿಸದೇ ಇದ್ದುದರಿಂದ ಸಮಸ್ಯೆ ಉಲ್ಬಣಿಸಿದೆ’ ಎಂದು ಗ್ರಾಮದ ಸಾಬಣ್ಣ, ರಮೇಶ ನಾಯಕ, ಸೂಗರೆಡ್ಡಿ, ಕಾಸೀಂಸಾಬ್ ಮತ್ತು ಮುದಕಣ್ಣ ಆರೋಪಿಸಿದರು.‘ಗ್ರಾಮದ ಎತ್ತರದ ಪ್ರದೇಶದಲ್ಲಿರುವ ಮನೆಗಳಿಗೆ ನಲ್ಲಿ ನೀರು ಬರುತ್ತಿಲ್ಲ. ಹೀಗಾಗಿ ಬೇರೆ ಓಣಿಗಳಿಗೆ ಹೋಗಿ ನೀರು ತರುವಂತಾಗಿದೆ. ಇದೀಗ ನೀರಿನ ಸಮಸ್ಯೆಯಿಂದ ಅಲ್ಲಿಯೂ ನೀರು ಸಿಗದೆ ಪರದಾಡುವಂತಾಗಿದೆ. ಹೊಲ ಮನೆ ಕೆಲಸ ಬಿಟ್ಟು ಕುಡಿಯುವ ನೀರಿಗಾಗಿ ಕಾಯುವಂತಾಗಿದೆ. ಮಹಿಳೆಯರು, ಮಕ್ಕಳು ನೀರಿಗಾಗಿ ಅಲೆಯುವಂತಾಗಿದೆ’ ಎಂದು ಹನುಮಮ್ಮ, ರಸೂಲ್ ಬೀ, ಬಸ್ಸಮ್ಮ, ಶಾಂತಾ, ಲಕ್ಷ್ಮೀ, ಹುಸೇನಬೀ, ಶಹನಾಜ್ ಬೇಗಂ, ಇಮಾಮ್ ಬೀ, ಖಾಜಾಬೀ ಅಸಮಧಾನ ವ್ಯಕ್ತಪಡಿಸಿದರು.‘ಮೇಲ್ತೊಟ್ಟಿಯನ್ನು ದುರಸ್ತಿ ಮಾಡುವುದು ಮತ್ತು ಅಗತ್ಯ ಕಂಡು ಬಂದಲ್ಲಿ ಪೈಪ್ಲೈನ್ ಅಳವಡಿಸಿ, ಸಮಪರ್ಕ ನೀರು ಪೂರೈಸಬೇಕು’ ಎಂದು ಗ್ರಾ.ಪಂ ಉಪಾಧ್ಯಕ್ಷ ಮೆಹಬೂಬಸಾಬ್ ಹೇಳಿದರು.ಕವಿತಾಳ ಸಮೀಪದ ಹುಸೇನಪುರ ಗ್ರಾಮದಲ್ಲಿ ನೀರಿಗಾಗಿ ನಲ್ಲಿ ಹತ್ತಿರ ಜನರು ನಿಂತಿರುವುದು.ಕವಿತಾಳ ಸಮೀಪದ ಹುಸೇನಪುರ ಗ್ರಾಮದಲ್ಲಿ ಕುಡಿಯುವ ನೀರಿನ ಮೇಲ್ತೊಟ್ಟಿ ಶಿಥಿಲಗೊಂಡಿದೆ.ಮಲ್ಲಪ್ಪ ಪೂಜಾರಿ, ಹುಸೇನಪುರ ಗ್ರಾಮಸ್ಥಖಾಸಗಿ ಕೊಳವೆಬಾವಿಗಳನ್ನು ಬಾಡಿಗೆ ಪಡೆದು ತಕ್ಷಣ ನೀರು ಪೂರೈಕೆಗೆ ತಾತ್ಕಾಲಿಕ ವ್ಯವಸ್ಥೆ ಮಾಡಬೇಕು ರೂಪ್ ಸಿಂಗ್, ಪಿಡಿಒ ಹಿರೇಹಣಿಗಿ ಗ್ರಾ.ಪಂಒಂದು ಕೊಳವೆಬಾವಿಯನ್ನು ಈಗಾಗಲೇ ದುರಸ್ತಿ ಮಾಡಲಾಗಿದೆ. ಗ್ರಾಮಕ್ಕೆ ಭೇಟಿ ನೀಡಿ ನೀರಿನ ಸಮಸ್ಯೆ ಸರಿಪಡಿಸಲಾಗುವುದು