ಅ.10ರ ಪ್ರತಿಭಟನೆಯಂದು ಯಾರನ್ನೂ ವಶಕ್ಕೆ ಪಡೆದಿಲ್ಲ: ಸುಪ್ರೀಂಗೆ ದೆಹಲಿ ಪೊಲೀಸ್
ನವದೆಹಲಿ: ಅಕ್ಟೋಬರ್ 10ರಂದು ನಡೆದ ಪ್ರತಿಭಟನೆ ವೇಳೆ ಯಾರನ್ನೂ ಬಂಧಿಸಿಲ್ಲ ಅಥವಾ ವಶಕ್ಕೆ ಪಡೆದಿಲ್ಲ ಎಂದು ಸುಪ್ರೀಂ ಕೋರ್ಟ್ಗೆ ದೆಹಲಿ ಪೊಲೀಸ್ ತಿಳಿಸಿದೆ. ಹಾಗಾಗಿ ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಪ್ರತಿಭಟನಾ ಸ್ಥಳದಿಂದ ತೆರವುಗೊಳಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಟಿಎಂಸಿ ಸಂಸದೆ, ವಕೀಲೆ ಮೇನಕಾ ಗುರುಸ್ವಾಮಿ ಸಲ್ಲಿಸಿದ್ದ ಹೇಬಿಯಸ

ನವದೆಹಲಿ: ಅಕ್ಟೋಬರ್ 10ರಂದು ನಡೆದ ಪ್ರತಿಭಟನೆ ವೇಳೆ ಯಾರನ್ನೂ ಬಂಧಿಸಿಲ್ಲ ಅಥವಾ ವಶಕ್ಕೆ ಪಡೆದಿಲ್ಲ ಎಂದು ಸುಪ್ರೀಂ ಕೋರ್ಟ್ಗೆ ದೆಹಲಿ ಪೊಲೀಸ್ ತಿಳಿಸಿದೆ. ಹಾಗಾಗಿ ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಪ್ರತಿಭಟನಾ ಸ್ಥಳದಿಂದ ತೆರವುಗೊಳಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಟಿಎಂಸಿ ಸಂಸದೆ, ವಕೀಲೆ ಮೇನಕಾ ಗುರುಸ್ವಾಮಿ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯು ಅನೂರ್ಜಿತವಾಗಿದೆ ಎಂದು ಹೇಳಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ನೇತೃತ್ವದ ಪೀಠದ ಮುಂದೆ ಜಂಟಿ ಪೊಲೀಸ್ ಕಮಿಷನರ್ (ಅಪರಾಧ ವಿಭಾಗ) ಸುರೇಂದರ್ ಕುಮಾರ್ ಅವರು ಸಲ್ಲಿಸಿದ ಅಫಿಡವಿಟ್ನಲ್ಲಿ, 'ಹೇಬಿಯಸ್ ಕಾರ್ಪಸ್ ರಿಟ್ ಕೋರಿರುವ ಈ ಅರ್ಜಿಗೆ ಈಗಾಗಲೇ ಸೂಕ್ತ ಉತ್ತರ ನೀಡಲಾಗಿದ್ದು, ಇದು 'ಇನ್ನು ಮುಂದೆ ವಿಚಾರಣೆಗೆ ಅರ್ಹವಾಗಿರುವುದಿಲ್ಲ' ಎಂದು ಉಲ್ಲೇಖಿಸಿದ್ದಾರೆ. ಎಸ್ಐಆರ್ ಅಕ್ರಮ ಹಾಗೂ ಸಿಇಸಿ ರಾಜೀನಾಮೆಗೆ ಆಗ್ರಹಿಸಿ ದೆಹಲಿ ಪೊಲೀಸ್ ಅನುಮತಿ ಇಲ್ಲದಿದ್ದರೂ ಅ.10ರಂದು ಕಾಕ್ರೋಚ್ ಜನತಾ ಪಾರ್ಟಿ ಪ್ರತಿಭಟನೆಗೆ ಕರೆ ನೀಡಿತ್ತು. ಈ ಪ್ರತಿಭಟನೆಯು ಸಾರ್ವಜನಿಕ ಸುವ್ಯವಸ್ಥೆಗೆ ಗಂಭೀರ ಧಕ್ಕೆ ತರುವ ಸಾಧ್ಯತೆಯಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಅಫಿಡವಿಟ್ ಪ್ರಕಾರ, ಆ ಸಮಯದಲ್ಲಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ (ಬಿಎನ್ಎಸ್ಎಸ್) ಸೆಕ್ಷನ್ 163ರ ಅಡಿಯಲ್ಲಿ ಆದೇಶ ಜಾರಿಯಲ್ಲಿತ್ತು. ಈ ಆದೇಶವನ್ನು ಉಲ್ಲಂಘಿಸಿ ಸೇರುವ ಯಾವುದೇ ಸಭೆ ಅಥವಾ ಗುಂಪನ್ನು ಕಾನೂನುಬಾಹಿರ ಎಂದು ಪರಿಗಣಿಸಲಾಗುತ್ತದೆ ಎಂದಿದೆ. ದೆಹಲಿ-ಎನ್ಸಿಆರ್: ದೀಪಾವಳಿಯಂದು ಹಸಿರು ಪಟಾಕಿ ಸಿಡಿಸಲು ಷರತ್ತುಬದ್ಧ ಅನುಮತಿ'ಚಲೋ ದೆಹಲಿ': ರಾಮಲೀಲಾ ಮೈದಾನದಲ್ಲಿ ಒಗ್ಗೂಡಿದ ವಿಪಕ್ಷ ನಾಯಕರು