ಕಠ್ಮಂಡು: ಹೆಲಿಕಾಪ್ಟರ್ಗಳ ಮುಖಾಮುಖಿ ಡಿಕ್ಕಿ; ಒಬ್ಬ ಭಾರತೀಯ ಸಾವು
ಕಠ್ಮಂಡು: ನೇಪಾಳದ ಸೋಲುಖುಂಬು ಜಿಲ್ಲೆಯಲ್ಲಿ ಎರಡು ಹೆಲಿಕಾಪ್ಟರ್ಗಳು ಕೆಳಗೆ ಇಳಿಯುವ ವೇಳೆ ಡಿಕ್ಕಿಯಾಗಿ 47 ವರ್ಷದ ಭಾರತೀಯರೊಬ್ಬರು ಮೃತಪಟ್ಟಿದ್ದು, ಮತ್ತಿಬ್ಬರು ಗಾಯಗೊಂಡಿದ್ದಾರೆ.ಲುಕ್ಲಾ ವಿಮಾನ ನಿಲ್ದಾಣದಿಂದ ಹೊರಟ ಹೆಲಿಕಾಪ್ಟರ್ಗಳು ಮೌಂಟ್ ಎವರೆಸ್ಟ್ನ ಬೇಸ್ ಕ್ಯಾಂಪ್ ಮಾರ್ಗದಲ್ಲಿರುವ ಖುಂಬು ಪಸಾಂಗ್ ಲಹುಮು ಗ್ರಾಮೀಣ ಪಾಲಿಕೆಗೆ ಸೇರಿದ ಫೆರಿಚೆ ಹೆಲಿಪ್

ಕಠ್ಮಂಡು: ನೇಪಾಳದ ಸೋಲುಖುಂಬು ಜಿಲ್ಲೆಯಲ್ಲಿ ಎರಡು ಹೆಲಿಕಾಪ್ಟರ್ಗಳು ಕೆಳಗೆ ಇಳಿಯುವ ವೇಳೆ ಡಿಕ್ಕಿಯಾಗಿ 47 ವರ್ಷದ ಭಾರತೀಯರೊಬ್ಬರು ಮೃತಪಟ್ಟಿದ್ದು, ಮತ್ತಿಬ್ಬರು ಗಾಯಗೊಂಡಿದ್ದಾರೆ.ಲುಕ್ಲಾ ವಿಮಾನ ನಿಲ್ದಾಣದಿಂದ ಹೊರಟ ಹೆಲಿಕಾಪ್ಟರ್ಗಳು ಮೌಂಟ್ ಎವರೆಸ್ಟ್ನ ಬೇಸ್ ಕ್ಯಾಂಪ್ ಮಾರ್ಗದಲ್ಲಿರುವ ಖುಂಬು ಪಸಾಂಗ್ ಲಹುಮು ಗ್ರಾಮೀಣ ಪಾಲಿಕೆಗೆ ಸೇರಿದ ಫೆರಿಚೆ ಹೆಲಿಪ್ಯಾಡ್ನಲ್ಲಿ ಇಳಿಯುವ ವೇಳೆ ಪರಸ್ಪರ ಡಿಕ್ಕಿಯಾಗಿವೆ. ಕಾಪ್ಟರ್ಗಳು ‘ಫಿಶ್ಟೈಲ್’ ಹಾಗೂ ‘ಏರ್ ಡೈನಸ್ಟಿ’ಗೆ ಸೇರಿದ್ದು, ಬೆಳಿಗ್ಗೆ 8.11ರ ಸುಮಾರಿಗೆ ಈ ದುರಂತ ಸಂಭವಿಸಿವೆ. ‘ಮೃತರನ್ನು ವಸಂತ್ ಕುಮಾರ್ ಬಲರಾಮರಾಮುಡು ಎಂದು ಗುರುತಿಸಲಾಗಿದೆ. ಫಿಶ್ಟೈಲ್ ಹೆಲಿಕಾಪ್ಟರ್ನಲ್ಲಿ ಅವರು ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದೆ’ ಎಂದು ಪೊಲೀಸ್ ಇನ್ಸ್ಪೆಕ್ಟರ್ ಮೌಸಮ್ ತಮಾಂಗ್ ತಿಳಿಸಿದ್ದಾರೆ.ಫೆರಿಚೆ ಹೆಲಿಪ್ಯಾಡ್ ರಾಜಧಾನಿ ಕಠ್ಮಂಡುವಿನಿಂದ 150 ಕಿ.ಮೀ ದೂರದಲ್ಲಿದ್ದು, ಮೌಂಟ್ ಎವರೆಸ್ಟ್ ಬೇಸ್ ಕ್ಯಾಂಪ್ಗೆ ಹೋಗುವ ಮಾರ್ಗದಲ್ಲಿದೆ.ಇದೇ ಹೆಲಿಕಾಪ್ಟರ್ನಲ್ಲಿ ಪ್ರಯಾಣಿಸುತ್ತಿದ್ದ ಭಾರತ ಮೂಲದ ನ್ಯೂಜಿಲೆಂಡ್ನ ನಿವಾಸಿ 49 ವರ್ಷದ ಶೈಲೇಶ್ ಕೃಷ್ಣ ಪಟೇಲ್ ಕೂಡ ಗಾಯಗೊಂಡಿದ್ದಾರೆ. ತಕ್ಷಣವೇ ಅವರನ್ನು ಕಠ್ಮಂಡುವಿನಲ್ಲಿರುವ ಮೆಡಿಸಿಟಿ ಆಸ್ಪತ್ರೆಗೆ ಹೆಲಿಕಾಪ್ಟರ್ ಮೂಲಕ ರವಾನಿಸಲಾಗಿದೆ ಎಂದು ವಿವರಿಸಿದ್ದಾರೆ.ಅಪಘಾತದಲ್ಲಿ ಫಿಶ್ಟೈಲ್ ಹೆಲಿಕಾಪ್ಟರ್ನ ಪೈಲಟ್ ರಬೀಂದ್ರ ಪ್ರಜಾಪತಿ ಹಾಗೂ ಏರ್ ಡೈನಸ್ಟಿ ಪೈಲಟ್ ಪ್ರಜ್ವಲ್ ಕೆ.ಸಿ ಕೂಡ ಗಾಯಗೊಂಡಿದ್ದಾರೆ.