ರೀಲ್ಸ್ ತಾರೆಯ ಪ್ರೇಮ ನಿವೇದನೆ: ಬಿಗ್ ಬಾಸ್ ಮನೆಯಿಂದ ಹೊರ ಬರುವಂತೆ ಪೋಷಕರ ಒತ್ತಾಯ
ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಮಲಯಾಳಂ ಸೀಸನ್ 8ನೇ ಸಂಚಿಕೆಯೊಂದರಲ್ಲಿ ಊಹಿಸದ ಬೆಳವಣಿಗೆಯೊಂದು ನಡೆದಿದ್ದು, ಸಾರ್ವಜನಿಕ ಚರ್ಚೆಗೆ ಗ್ರಾಸವಾಗಿದೆ.ಮಲಯಾಳಂ ಬಿಗ್ ಬಾಸ್ ಸೀಸನ್ 8ರಲ್ಲಿ ಸ್ಪರ್ಧಿಯಾಗಿರುವ ಮುಸ್ಲಿಂ ಸಮುದಾಯದ ಡಿಜಿಟಲ್ ಕಂಟೆಂಟ್ ಕ್ರಿಯೇಟರ್ ನೇಹಾ ಫಾತಿಮಾ, ತಮ್ಮ ಸಹ ಸ್ಪರ್ಧಿ ತಾಸಿ ರಾಜ್ ಅವರಿಗೆ ಇತ್ತೀಚೆಗೆ ಪ್ರೇಮ ನಿವೇದನೆ ಮಾಡಿದ್ದರು. ಈ ಬೆಳವಣಿ

ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಮಲಯಾಳಂ ಸೀಸನ್ 8ನೇ ಸಂಚಿಕೆಯೊಂದರಲ್ಲಿ ಊಹಿಸದ ಬೆಳವಣಿಗೆಯೊಂದು ನಡೆದಿದ್ದು, ಸಾರ್ವಜನಿಕ ಚರ್ಚೆಗೆ ಗ್ರಾಸವಾಗಿದೆ.ಮಲಯಾಳಂ ಬಿಗ್ ಬಾಸ್ ಸೀಸನ್ 8ರಲ್ಲಿ ಸ್ಪರ್ಧಿಯಾಗಿರುವ ಮುಸ್ಲಿಂ ಸಮುದಾಯದ ಡಿಜಿಟಲ್ ಕಂಟೆಂಟ್ ಕ್ರಿಯೇಟರ್ ನೇಹಾ ಫಾತಿಮಾ, ತಮ್ಮ ಸಹ ಸ್ಪರ್ಧಿ ತಾಸಿ ರಾಜ್ ಅವರಿಗೆ ಇತ್ತೀಚೆಗೆ ಪ್ರೇಮ ನಿವೇದನೆ ಮಾಡಿದ್ದರು. ಈ ಬೆಳವಣಿಗೆಯ ಬೆನ್ನಲ್ಲೇ, ನೇಹಾ ಅವರ ಪೋಷಕರು ಬಿಗ್ ಬಾಸ್ ವೇದಿಕೆಗೆ ಆಗಮಿಸಿ ಶೋ ತೊರೆಯುವಂತೆ ಮಗಳ ಮೇಲೆ ತೀವ್ರ ಒತ್ತಡ ಹೇರಿದ್ದಾರೆ.Comment Your Opinion on This ‼️‼️‼️‼️ pic.twitter.com/tiqwpYNTni— Kerala Box Office (@KeralaBxOffce) November 1, 2026 ವೇದಿಕೆ ಮೇಲೆಯೇ ಕಣ್ಣೀರಿಟ್ಟ ಹೆತ್ತವರು...ವಾರಾಂತ್ಯದ ಸಂಚಿಕೆಯಲ್ಲಿ ನೇಹಾ ಅವರ ತಂದೆ ಹಾಗೂ ತಾಯಿ ವೇದಿಕೆಯ ಮೇಲೆಯೇ ಭಾವುಕರಾಗಿ ಕಣ್ಣೀರಿಡುತ್ತಾ ಮಗಳನ್ನು ಪ್ರಶ್ನಿಸಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿದೆ.‘ನೇಹಾ, ನಿನಗೆ ನಾವು ನೆನಪಿದ್ದೇವೆಯೇ? ನಿನಗೆ ನಮ್ಮ ನೆನಪಿದೆ ಎಂದು ನಮಗೆ ಅನಿಸುತ್ತಿಲ್ಲ’ ಎಂದು ತಂದೆ ಪ್ರಶ್ನಿಸಿದರೆ, ತಾಯಿ ಕಣ್ಣೀರಿಡುತ್ತಾ, ‘ಮನೆಯಲ್ಲಿರುವ ಪ್ರತಿಯೊಬ್ಬರೂ ತಮ್ಮ ಆಟವನ್ನು ಸರಿಯಾಗಿ ಆಡುತ್ತಿದ್ದಾರೆ. ಆದರೆ ನೀನು ಮಾತ್ರ ಭಾವನೆಗಳಿಗೆ ಒಳಗಾಗಿ ಆಟವಾಡುತ್ತಿದ್ದೀಯ. ಇತರರು ತಮ್ಮ ಸ್ವಾರ್ಥಕ್ಕಾಗಿ ನಿನ್ನನ್ನು ಬಳಸಿಕೊಳ್ಳುತ್ತಿದ್ದಾರೆ. ನಾವು ಮಾಡಬಾರದು ಎಂದು ಹೇಳಿದ್ದನ್ನೇ ನೀನು ಮಾಡುತ್ತಿದ್ದೀಯ. ನಮಗೆ ಇಲ್ಲಿ ಅಪಾರ ನೋವಾಗಿದೆ. ಈ ಕೂಡಲೇ ನೀನು ಆಟದಿಂದ ಹೊರಗೆ ಬಾ’ ಎಂದಿದ್ದಾರೆ.ಆಗ ನೇಹಾ, ‘ನಾನು ಬೇಕೆಂತಲೇ ಯಾವುದನ್ನೂ ಮಾಡಿಲ್ಲ, ಎಲ್ಲವೂ ಹಾಗೇಯೆ ಸಂಭವಿಸಿತು. ಆದರೂ ನಿಮ್ಮಿಬ್ಬರ ಬಗ್ಗೆ ಯೋಚಿಸಿಯೇ ನಾನು ಇಲ್ಲಿ ಅಂತರವನ್ನು ಕಾಯ್ದುಕೊಂಡಿದ್ದೆ. ಇದರಿಂದ ಎದುರಾಗಬಹುದಾದ ಸಮಸ್ಯೆಗಳು, ಭಿನ್ನಾಭಿಪ್ರಾಯಗಳು ಹಾಗೂ ನಕಾರಾತ್ಮಕ ಪರಿಣಾಮಗಳ ಅರಿವು ನನಗಿತ್ತು. ನಿಮ್ಮಿಬ್ಬರಿಗೆ ತೊಂದರೆಯಾಗುವಂತಹ ಯಾವುದೇ ತಪ್ಪನ್ನೂ ನಾವು ಮಾಡಿಲ್ಲ’ ಎಂದು ಕಣ್ಣೀರಿಡುತ್ತಾ ಹೇಳಿದ್ದಾರೆ. View this post on Instagram ಅಸಲಿಗೆ ನೇಹಾ– ತಾಸಿ ರಾಜ್ ಮಧ್ಯೆ ಆಗಿದ್ದೇನು? ಇತ್ತೀಚಿನ ಸಂಚಿಕೆಯೊಂದರಲ್ಲಿ ನೇಹಾ ಫಾತಿಮಾ ಅವರು ಸಹ ಸ್ಪರ್ಧಿ ತಾಸಿ ರಾಜ್ ಅವರ ಬಳಿ, ‘ನನಗೆ ನಿಮ್ಮ ಮೇಲೆ ಪ್ರೀತಿಯಾಗಿದೆ. ಬಿಗ್ ಬಾಸ್ ಮುಗಿದ ಬಳಿಕ ಹೆತ್ತವರ ಒಪ್ಪಿಗೆ ಪಡೆದು ಈ ಸಂಬಂಧವನ್ನು ಮುಂದುವರಿಸುವ ಇಚ್ಛೆಯಿದೆ’ ಎಂದು ಹೇಳಿಕೊಂಡಿದ್ದರು.ಆದರೆ, ನೇಹಾ ಅವರ ಈ ಮಾತುಗಳ ಬೆನ್ನಲ್ಲೇ ಹೆತ್ತವರು ದಿಢೀರನೆ ವೇದಿಕೆಗೆ ಆಗಮಿಸಿ ಆಕೆಗೆ ಆಟದಿಂದ ಹಿಂದೆ ಸರಿಯುವಂತೆ ಒತ್ತಾಯಿಸಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಯಾರು ಈ ನೇಹಾ ಫಾತಿಮಾ? ನೇಹಾ ಫಾತಿಮಾ ಕೇರಳದ ಮಲಪ್ಪುರಂ ಮೂಲದ ಡಿಜಿಟಲ್ ಕಂಟೆಂಟ್ ಕ್ರಿಯೇಟರ್ ಆಗಿದ್ದಾರೆ. ಸಾಮಾಜಿಕ ಜಾಲತಾಣಗಳ ಮೂಲಕ ಭಾರಿ ಜನಪ್ರಿಯತೆ ಗಳಿಸಿ ಬಿಗ್ ಬಾಸ್ ಮನೆ ಪ್ರವೇಶಿಸಿದ್ದ ಇವರು, ಇನ್ಸ್ಟಾಗ್ರಾಂನಲ್ಲಿ 3 ಲಕ್ಷಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾರೆ.