ಹೂವಿನಹಡಗಲಿ | ಭಾಷೆ ಉಳಿವಿಗೆ ಸತತ ಹೋರಾಟ ಅಗತ್ಯ: ನಾಗರಾಜಸ್ವಾಮಿ
ಹೂವಿನಹಡಗಲಿ: ಇಲ್ಲಿನ ಮಹಿಳಾ ಸಾಂಸ್ಕೃತಿಕ ಸಂಘದ (ಲೇಡೀಸ್ ಕಲ್ಚರಲ್ ಕ್ಲಬ್) ಮಹಿಳೆಯರು ತಾಲ್ಲೂಕು ಕ್ರೀಡಾಂಗಣದಲ್ಲಿ ಕನ್ನಡ ಗೀತೆಗಳ ಸಮೂಹ ಗಾಯನದ ಮೂಲಕ ರಾಜ್ಯೋತ್ಸವವನ್ನು ವಿಶಿಷ್ಟವಾಗಿ ಆಚರಿಸಿದರು.ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಹಿಳೆಯರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಸಂಚಾಲಕಿ ಪೂಜಾ ರಾಘವೇಂದ್ರ ಮಾತನಾಡಿ, ಕನ್ನಡ ರಾಜ್ಯೋತ್ಸವದಂದು ಮಲ್ಲಿ

ಹೂವಿನಹಡಗಲಿ: ಇಲ್ಲಿನ ಮಹಿಳಾ ಸಾಂಸ್ಕೃತಿಕ ಸಂಘದ (ಲೇಡೀಸ್ ಕಲ್ಚರಲ್ ಕ್ಲಬ್) ಮಹಿಳೆಯರು ತಾಲ್ಲೂಕು ಕ್ರೀಡಾಂಗಣದಲ್ಲಿ ಕನ್ನಡ ಗೀತೆಗಳ ಸಮೂಹ ಗಾಯನದ ಮೂಲಕ ರಾಜ್ಯೋತ್ಸವವನ್ನು ವಿಶಿಷ್ಟವಾಗಿ ಆಚರಿಸಿದರು.ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಹಿಳೆಯರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಸಂಚಾಲಕಿ ಪೂಜಾ ರಾಘವೇಂದ್ರ ಮಾತನಾಡಿ, ಕನ್ನಡ ರಾಜ್ಯೋತ್ಸವದಂದು ಮಲ್ಲಿಗೆ ನಗರಿಯಲ್ಲಿ ಕನ್ನಡದ ಕಂಪು ಪಸರಿಸಲು ಮಹಿಳಾ ಸಂಘದಿಂದ ಸಮೂಹ ಗಾಯನ ಹಮ್ಮಿಕೊಂಡು, ಕನ್ನಡದ ಸಾಹಿತಿ, ಕವಿಗಳು ಹಾಗೂ ಕನ್ನಡತನ ಬಿಂಬಿಸುವ ಗೀತೆಗಳನ್ನು ಪ್ರಸುತಿಪಡಿಸಲಾಗುತ್ತಿದೆ ಎಂದು ಹೇಳಿದರು.ಡಾ. ಸುಷ್ಮಾ, ಲಕ್ಷ್ಮಿ ಬೀರಬ್ಬಿ, ವಿ.ಬಿ.ಸಹನಾ, ಡಾ.ರಮ್ಯಾ, ಡಾ ಅನಿತಾ, ಸವಿತಾ ಅಂಗಡಿ, ರಫೀನಾ ಬೇಗಂ, ಎಂ.ಪಿ.ಎಂ. ಪ್ರೇಮಾ, ಸವಿತಾ ಕುಂಬಾರಿ, ಡಾ.ರೇಖಾ, ಸೇರಿದಂತೆ ಲೇಡಿಸ್ ಕಲ್ಚರಲ್ ಕ್ಲಬ್ ನ 50ಕ್ಕೂ ಹೆಚ್ಚು ಮಹಿಳೆಯರು ಪಾಲ್ಗೊಂಡಿದ್ದರು. ಮುಖಂಡ ಬೀರಬ್ಬಿ ಬಸವರಾಜ, ಚಂದನಾ ಕಲಾ ಬಳಗದ ಎ.ಎಂ.ಪಿ.ಪ್ರಶಾಂತ, ಡಾ. ಜೆ.ಡಿ.ಉಮೇಶ, ಚುಸಾಪ ಅಧ್ಯಕ್ಷ ನಾಗರಾಜ ಮಲ್ಕಿಒಡೆಯರ್ ಇತರರು ಇದ್ದರು.ತೆಕ್ಕಲಕೋಟೆ: ಸಮೀಪದ ಸಿರಿಗೇರಿ ಗ್ರಾಮದ ಜನತಾ ಕಾಲೊನಿ ದಾರುಕ ನಗರದಲ್ಲಿ ಭಾನುವಾರ ರಾಜ್ಯೋತ್ಸವ ಕಾರ್ಯಕ್ರಮ ನಡೆಯಿತು.ಕನ್ನಡ ನೆಲ, ಜಲ, ಭಾಷೆ ಉಳಿವಿ ಗಾಗಿ ರಾಜ್ಯದ ಕನ್ನಡ ಪರ ವಿವಿಧ ಸಂಘಟನೆಗಳ ಹೋರಾಟ ದ ಪ್ರತಿಫಲವೇ ಕನ್ನಡ ಉಳಿವಿಗೆ ಕಾರಣವಾಗಿದೆ. ಕನ್ನಡಕ್ಕಾಗಿ ನಿರಂತರ ಹೋರಾಟ ಮಾಡುವವರನ್ನು ಸ್ಮರಿಸುವ ಕೆಲಸ ಆಗಬೇಕು. ಅಂತವರಿಗೆ ರಾಜ್ಯ ಸರ್ಕಾರ ಗೌರವಿಸಿ ಪ್ರಶಸ್ತಿ ಪುರಸ್ಕಾರ ನೀಡಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ತು ನಿಕಟ ಪೂರ್ವ ಅಧ್ಯಕ್ಷ ಎಸ್ಎಂ ನಾಗರಾಜಸ್ವಾಮಿ ತಿಳಿಸಿದರು.ಜೀನ್ಸ್ ಉದ್ಯಮಿ ಕುಂಬಾರ್ ಬಸವರಾಜ್ ಅವರನ್ನು ಸನ್ಮಾನಿಸ ಲಾಯಿತು. ಅಂಗನವಾಡಿ ಶಿಕ್ಷಕಿ ಸಂಗಮ್ಮ, ಶಿಕ್ಷಕಿ ಅರುಣಾ, ಪುಷ್ಪಾವತಿ, ಟಿ.ಎಚ್.ಸುಭಾನಿ, ಮಂಜುಳಾ, ಗಂಗಮ್ಮ, ನಂದಿನಿ, ನಾಗಮ್ಮ, ಹಂಪಮ್ಮ, ಶ್ರೀದೇವಿ, ಯಶೋಧ, ಲಲಿತಾ, ಮುಖಂಡರಾದ ಉಮಾಪತಿ ಗೌಡ, ಬಳೆಗಾರ ವೀರೇಶ್, ಮಹಾಲಿಂಗಯ್ಯ, ವಿ. ತಿಪ್ಪಯ್ಯ, ಮಾಭಾಷ, ನಾಗರಾಜ, ಹರ್ಷ, ಚೇತನ್, ನಂದೀಶ್ ಪಾಲ್ಗೊಂಡಿದ್ದರು.ಕೂಡ್ಲಿಗಿ: ತಾಲ್ಲೂಕು ಆಡಳಿತ ಹಾಗೂ ವಿವಿಧ ಕನ್ನಡ ಪರ ಸಂಘಟನೆಗಳಿಂದ ಪಟ್ಟಣದಲ್ಲಿ ರಾಜ್ಯೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು.ಮಹದೇವ ಮೈಲಾರ ಕ್ರೀಡಾಂಗಣದಲ್ಲಿನ ತಾಲ್ಲೂಕು ಮಟ್ಟದ ಅಧಿ ಕಾರಿಗಳು ಹಾಗೂ ಪ್ರಮುಖರು ಗಾಂಧೀ ಚಿತಾಭಸ್ಮವಿರುವ ಹುತಾತ್ಮರ ಸ್ಮಾಕರಕಕ್ಕೆ ಪುಷ್ಪಾರ್ಚನೆ ಮಾಡಿದರು. ತಹಶೀಲ್ದಾರ್ ವಿ.ಕೆ.ನೇತ್ರಾವತಿ ಧ್ವಜಾ ರೋಹಣ ನೆರವೇರಿಸಿದರು. ನಂತರ ಅಲಂಕೃತ ವಾಹನದಲ್ಲಿ ಪ್ರತಿಷ್ಟಾಪಿಸಿದ್ದ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಛದ್ಮ ವೇಷ ಧರಿಸಿದ್ದ ವಿವಿಧ ಶಾಲಾ ವಿದ್ಯಾರ್ಥಿಗಳ ಮೆರವಣಿಗೆಗೆ ಚಾಲನೆ ನೀಡಿದರು.ತಹಶೀಲ್ದಾರ್ ವಿ.ಕೆ.ನೇತ್ರಾವತಿ ಭುವನೇಶ್ವರ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ನಾಡು, ನುಡಿಗಾಗಿ ಹೋರಾಡಿದವರು, ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಹಾಗೂ ಎಸ್ಸೆಸ್ಸೆಲ್ಸಿಯಲ್ಲಿ ಕನ್ನಡ ವಿಷಯದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಲಾಯಿತು. ಛದ್ಮ ವೇಷ ಹಾಕಿದ್ದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು.ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ನರಸಪ್ಪ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಸ್. ವೆಂಕಟೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಮೈಲೇಶ್ ಬೇವೂರು, ಎಪಿಎಂಸಿ ಅಧ್ಯಕ್ಷ ಕುರಿಹಟ್ಟಿ ಬೋಸಯ್ಯ, ಕರವೇ ಅಧ್ಯಕ್ಷ ಕಾಟೇರ್ ಹಾಲೇಶ್, ಒನಕೆ ಓಬವ್ವ ಸಂಘದ ರಾಜ್ಯಾಧ್ಯಕ್ಷ ಹಿರೇಕುಂಬಳಗುಂಟೆ ಉಮೇಶ್, ಕೋಗಳಿ ಮಂಜುನಾಥ, ದೇವರಮನೆ ಮಹೇಶ್, ಕಸಾಪ ಅಧ್ಯಕ್ಷ ವೀರೇಶ್ ಆಂಗಡಿ, ಬಿಸಿಯೂಟ ಯೋಜನಾಧಿಕಾರಿ ಕೆ.ಜಿ. ಅಂಜನೇಯ, ಕಜಾಪ ಅಧ್ಯಕ್ಷ ಕೆ.ಎಂ. ವೀರೇಶ್, ರಿಯಾಜ್ ಪಾಷಾ, ನಾಟಕ ಅಕಾಡಾಮಿ ಪ್ರಶಸ್ತಿ ಪುರುಸ್ಕೃತೆ ಟಿ. ಭಾರತಿ, ಗ್ಯಾರಂಟಿ ಅನುಷ್ಠಾನ ಸಮಿತಿ ತಾಲ್ಲೂಕು ಅಧ್ಯಕ್ಷ ಮಹಮದ್ ಜಿಲಾನ್ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.ಸಂಡೂರು: 'ಕನ್ನಡವು ನಮ್ಮ ತಾಯಿಭಾಷೆಯಾಗಿದ್ದು, ಸುದೀರ್ಘ ಇತಿಹಾಸ, ಶ್ರೀಮಂತ ಪರಂಪರೆ ಹಾಗೂ ವಿಶಿಷ್ಟ ಸಾಂಸ್ಕೃತಿಕ ಹಿನ್ನೆಲೆಯನ್ನು ಹೊಂದಿದೆ. ಇಂದಿನ ಯುವ ಪೀಳಿಗೆಯಲ್ಲಿ ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಬಗ್ಗೆ ಅಭಿಮಾನ ಹಾಗೂ ಗೌರವವನ್ನು ಬೆಳೆಸುವುದು ಅತ್ಯಗತ್ಯ' ಎಂದು ಶ್ರೀ ಶೈಲೇಶ್ವರ ವಿದ್ಯಾ ಕೇಂದ್ರದ ಅಧ್ಯಕ್ಷೆ ಲಕ್ಷ್ಮಿಬಾಯಿ ಎಸ್. ನಾನಾವಟೆ ಹೇಳಿದರು.ಪಟ್ಟಣದ ಶೈಲೇಶ್ವರ ವಿದ್ಯಾ ಕೇಂದ್ರದವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.'ಮಕ್ಕಳಲ್ಲಿ ಮಾತೃಭಾಷೆಯ ಬಗ್ಗೆ ಪ್ರೀತಿ ಮತ್ತು ಭಾಷಾಭಿಮಾನ ಮೂಡಿಸುವುದು ನಮ್ಮೆಲ್ಲರ ಕರ್ತವ್ಯ. ಇಂತಹ ಕಾರ್ಯಕ್ರಮಗಳು ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸಲು ವಿಶೇಷ ಪ್ರೇರಣೆ ನೀಡುತ್ತವೆ" ಎಂದು ತಿಳಿಸಿದರು.ಸಂಸ್ಥೆಯ ಕಾರ್ಯದರ್ಶಿ ಚಿದಂಬರ.ಎಸ್.ನಾನಾವಟೆ ಅವರು ಡೊಳ್ಳು ಬಾರಿಸುವ ಮೂಲಕ ಕಲಾ ತಂಡಗಳ ಮೆರವಣಿಗೆಗೆ ಅಧಿಕೃತ ಚಾಲನೆ ಮಾತನಾಡಿದರು.ತಾಯಿ ಭುವನೇಶ್ವರಿಯ ಭಾವಚಿತ್ರದೊಂದಿಗೆ ಆರಂಭವಾದ ಈ ವರ್ಣರಂಜಿತ ಮೆರವಣಿಗೆಯು ಸಂಡೂರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಗಮನ ಸೆಳೆಯಿತು.ಸಂಸ್ಥೆಯ ಆಡಳಿತಾಧಿಕಾರಿ ಕುಮಾರ್ ಎಸ್. ನಾನಾವಟೆ, ವಿಭಾಗದ ಪ್ರಾಚಾರ್ಯ ಸನಾವುಲ್ಲಾ ಎಂ.ಪಿ. ಶಾಲೆಯ ಬೋಧಕ–ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.ಹಗರಿಬೊಮ್ಮನಹಳ್ಳಿ: ಕನ್ನಡ ದೇಶದಲ್ಲಿಯೇ ಶ್ರೀಮಂತ ಭಾಷೆಯಾಗಿದೆ. ಎಂಟು ಜ್ಞಾನಪೀಠ ಪಡೆದಿರುವ ರಾಜ್ಯವಾಗಿರುವುದು ಪ್ರತಿಯೊಬ್ಬ ಕನ್ನಡಿಗರ ಹೆಮ್ಮೆಯಾಗಿದೆ ಎಂದು ಶಾಸಕ ಕೆ. ನೇಮರಾಜನಾಯ್ಕ ಹೇಳಿದರು.ಪಟ್ಟಣದ ನೀರಾವರಿ ಇಲಾಖೆಯ ಆವರಣದಲ್ಲಿ ತಾಲ್ಲೂಕು ಆಡಳಿತದಿಂದ ಹಮ್ಮಿಕೊಂಡಿದ್ದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ಇಲ್ಲಿನ ನಿಸರ್ಗ, ಅಪರೂಪದ ಶಿಲ್ಪ ಕಲೆಗಳು, ನಿತ್ಯಹರಿದ್ವರ್ಣ ಕಾಡು, ಖನಿಜ ಸಂಪತ್ತು, ಪಕ್ಷಿ ಧಾಮಗಳು ಸೇರಿದಂತೆ ಹಲವು ವೈವಿಧ್ಯತೆಯನ್ನು ಹೊಂದಿದ ಸಂಪದ್ಭರಿತ ನಾಡಾಗಿದೆ ಎಂದರು. ಕನ್ನಡಿಗರ ಸ್ವಾಭಿಮಾನವನ್ನು ಯಾರೇ ಆಗಲಿ ಕೆಣಕಿದರೆ ಅವರಿಗೆ ತಕ್ಕ ಪಾಠ ಕಲಿಸಲಾಗುವುದು, ಹೋರಾಟಕ್ಕೂ ಸಿದ್ಧ ಎಂದು ಎಚ್ಚರಿಸಿದರು. ತಹಶೀಲ್ದಾರ್ ಶಿವ ರಾಜ ಧ್ವಜಾರೋಹಣ ನೆರವೇರಿಸಿ ದರು.ತಾ.ಪಂ. ಇಒ ಪಾಲಯ್ಯನಕೋಟೆ ವಿಶ್ವನಾಥ, ಸಿಪಿಐ ವಿಕಾಸ್ ಲಮಾಣಿ, ಮುಖ್ಯಾಧಿಕಾರಿ ಎಂ.ಕೆ.ಮುಗಳಿ, ಶಿವಕುಮಾರಗೌಡ ಮುಖಂಡರಾದ ಬಾದಾಮಿ ಮೃತ್ಯುಂಜಯ, ಬುಡ್ಡಿ ಬಸವರಾಜ, ಈ.ಕೃಷ್ಣಮೂರ್ತಿ, ಎನ್.ಎಂ. ಗೌಸ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ಪಿ.ಎಂ.ಮಂಜುನಾಥ, ಕಲಾವಿದ ಟಿ.ಕೊಟ್ರೇಶ್, ಶಿವರಾಜ, ನರೇಗಾ ಸಹಾಯಕ ನಿರ್ದೇಶಕ ರಮೇಶ್ ಮಹಾ ಲಿಂಗಾಪುರ, ಹಾಲಸಿದ್ಧೇಶ್ವರ ಸ್ವಾಮೀಜಿ, ಕಿನ್ನಾಳ ಸುಭಾಷ್, ಟಿ.ವೆಂಕೋಬಪ್ಪ, ಹೋಟೆಲ್ ಸಿದ್ಧರಾಜು ಇದ್ದರು.ಕನ್ನಡ ಶ್ರೀಮಂತ ಭಾಷೆ:ಹಗರಿಬೊಮ್ಮನಹಳ್ಳಿ: ಕನ್ನಡ ದೇಶದಲ್ಲಿಯೇ ಶ್ರೀಮಂತ ಭಾಷೆಯಾಗಿದೆ. ಎಂಟು ಜ್ಞಾನಪೀಠ ಪಡೆದಿರುವ ರಾಜ್ಯವಾಗಿರುವುದು ಪ್ರತಿಯೊಬ್ಬ ಕನ್ನಡಿಗರ ಹೆಮ್ಮೆಯಾಗಿದೆ ಎಂದು ಶಾಸಕ ಕೆ.ನೇಮರಾಜನಾಯ್ಕ ಹೇಳಿದರು.ಪಟ್ಟಣದ ನೀರಾವರಿ ಇಲಾಖೆಯ ಆವರಣದಲ್ಲಿ ತಾಲ್ಲೂಕು ಆಡಳಿತದಿಂದ ಹಮ್ಮಿಕೊಂಡಿದ್ದ 71 ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ಇಲ್ಲಿನ ನಿಸರ್ಗ, ಅಪರೂಪದ ಶಿಲ್ಪಕಲೆಗಳು, ನಿತ್ಯಹರಿದ್ವರ್ಣ ಕಾಡು, ಖನಿಜ ಸಂಪತ್ತು, ಪಕ್ಷಿ ಧಾಮಗಳು ಸೇರಿದಂತೆ ಹಲವು ವೈವಿಧ್ಯತೆಯನ್ನು ಹೊಂದಿದ ಸಂಪದ್ಭರಿತ ನಾಡಾಗಿದೆ ಎಂದರು. ಕನ್ನಡಿಗರ ಸ್ವಾಭಿಮಾನವನ್ನು ಯಾರೇ ಆಗಲಿ ಕೆಣಕಿದರೆ ಅವರಿಗೆ ತಕ್ಕ ಪಾಠ ಕಲಿಸಲಾಗುವುದು, ಹೋರಾಟಕ್ಕೂ ಸಿದ್ಧ ಎಂದು ಎಚ್ಚರಿಸಿದರು.ಶಿಷ್ಟಾಚಾರ ತಹಶೀಲ್ದಾರ್ ಶಿವರಾಜ ಧ್ವಜಾರೋಹಣ ನೆರವೇರಿಸಿದರು.ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಪಾಲಯ್ಯನಕೋಟೆ ವಿಶ್ವನಾಥ, ಸಿಪಿಐ ವಿಕಾಸ್ ಲಮಾಣಿ, ಪುರಸಭೆ ಮುಖ್ಯಾಧಿಕಾರಿ ಎಂ.ಕೆ.ಮುಗಳಿ, ಉಪ ತಹಶೀಲ್ದಾರ್ ಶಿವಕುಮಾರಗೌಡ ಮುಖಂಡರಾದ ಬಾದಾಮಿ ಮೃತ್ಯುಂಜಯ, ಬುಡ್ಡಿ ಬಸವರಾಜ, ಈ.ಕೃಷ್ಣಮೂರ್ತಿ, ಎನ್.ಎಂ.ಗೌಸ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ಪಿ.ಎಂ.ಮಂಜುನಾಥ, ಕಲಾವಿದ ಟಿ.ಕೊಟ್ರೇಶ್, ಶಿವರಾಜ, ನರೇಗಾ ಸಹಾಯಕ ನಿರ್ದೇಶಕ ರಮೇಶ್ ಮಹಾಲಿಂಗಾಪುರ, ಹಾಲಸಿದ್ಧೇಶ್ವರ ಸ್ವಾಮೀಜಿ, ಕಿನ್ನಾಳ ಸುಭಾಷ್, ಟಿ.ವೆಂಕೋಬಪ್ಪ, ಹೋಟೆಲ್ ಸಿದ್ಧರಾಜು ಇದ್ದರು.‘ಕನ್ನಡದ ಅಸ್ಮಿತೆ ರಕ್ಷಣೆಗೆ ಬದ್ಧರಾಗೋಣ’ಹರಪನಹಳ್ಳಿ: ಕನ್ನಡ ರಾಜ್ಯೋತ್ಸವ ಒಂದು ದಿನಕ್ಕೆ ಸೀಮಿತವಾಗದೆ ಪ್ರತಿ ದಿನವೂ ಕನ್ನಡದ ಕಾಳಜಿಯಿರಬೇಕು, ಆ ಮೂಲಕ ಕನ್ನಡದ ಅಸ್ಮಿತೆ ರಕ್ಷಣೆಗಾಗಿ ಪ್ರತಿಯೊಬ್ಬರು ಬದ್ದರಾಗಿರಬೇಕು ಎಂದು ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ಅಭಿಪ್ರಾಯಪಟ್ಟರು.ನಗರದ ಸರ್ಕಾರಿ ಪದವಿಪೂರ್ವ ಕಾಲೇಜು (ಮಹಾತ್ಮ ಗಾಂಧಿ ಸ್ಮಾರಕ) ಆವರಣದಲ್ಲಿ ಆಯೋಜಿಸಿದ್ದ ರಾಜ್ಯೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಎಲ್ಲ ಹಂತದಲ್ಲೂ ಕನ್ನಡ ರಕ್ಷಣೆ ಆಗಬೇಕು. ಕನ್ನಡ ಸಾಹಿತ್ಯ, ಭಾಷೆ ಪ್ರಪಂಚದ ಗಮನ ಸೆಳೆಯುತ್ತಿದೆ. ಸಾಹಿತ್ಯ, ಕವಿಪುಂಗವರು ಅದರ ಮಹತ್ವವನ್ನು ಸಾರಿದ್ದಾರೆ. ಕನ್ನಡ ಏಕೀಕರಣಕ್ಕಾಗಿ ಶ್ರಮಿಸಿದ ಪ್ರತಿಯೊಬ್ಬರನ್ನು ಸ್ಮರಿಸೋಣ ಎಂದು ಹೇಳಿದರು.ಧ್ವಜಾರೋಹಣ ಮಾಡಿದ ಉಪವಿಬಾಗಾಧಿಕಾರಿ ಟಿ.ಸುರೇಶ ಕುಮಾರ ಮಾತನಾಡಿ, ಕನ್ನಡ ನಾಡು ನುಡಿ ರಕ್ಷಣೆಗೆ, ಕರ್ನಾಟಕದ ಏಳ್ಗೆಗೆ ಪ್ರತಿಯೊಬ್ಬರು ಕಂಕಣ ಬದ್ದರಾಗಬೇಕು. ಸರ್ಕಾರ ಜಾರಿಗೆ ಯೋಜನೆಗಳು ಮಹತ್ವದ್ದಾಗಿದ್ದು, ಅವುಗಳನ್ನು ಸದ್ಬಳಕೆ ಮಾಡಿಕೊಳ್ಳಲು ಕರೆ ನೀಡಿದರು. ಉಪನ್ಯಾಸ ನೀಡಿದ ಶಿಂಗ್ರಿಹಳ್ಳಿ ಸರ್ಕಾರಿ ಪಿಯು ಕಾಲೇಜು ಉಪನ್ಯಾಸಕ ಕೆ.ಪರಶುರಾಮ್ ಮಾತನಾಡಿ, ದ್ರಾವಿಡ ಭಾಷಾ ಕುಟುಂಬಕ್ಕೆ ಸೇರಿದ ಕನ್ನಡ ಭಾಷೆಯ ಸಾಹಿತ್ಯ, ಇಲ್ಲಿಯ ಸಂಸ್ಕೃತಿ, ಇತಿಹಾಸ ಜನಮನ್ನಣೆ ಪಡೆದಿದೆ ಎಂದರು.ನಗರದ ಪ್ರವಾಸಿ ಮಂದಿರದಿಂದ ಆರಂಭವಾದ ಭುವನೇಶ್ವರಿ ಭಾವಚಿತ್ರದ ಮೆರವಣಿಗೆಯಲ್ಲಿ ಕರ್ನಾಟಕ ಏಕೀಕರಣ ಚಳವಳಿ ಹೋರಾಟಗಾರರ ವೇಷ ಧರಿಸಿದ್ದ ಮಕ್ಕಳು, ಯಕ್ಷಗಾನ ಕಲೆ ವೇಷಧಾರಿ ವಿದ್ಯಾರ್ಥಿಗಳು, ಕೋಲಾಟ, ಡೊಳ್ಳು, ಸಮ್ಮಾಳ ಕಲಾವಿದರು ಗಮನಸೆಳೆದರು. ತಹಶೀಲ್ದಾರ ಬಿ.ವಿ.ಗಿರೀಶ್ ಬಾಬು, ಗ್ಯಾರಂಟಿ ಯೋಜನೆ ಸಮಿತಿ ಅಧ್ಯಕ್ಷ ಎಂ.ಉದಯಶಂಕರ, ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಉಚ್ಚೆಂಗೆಪ್ಪ, ಡಿವೈಎಸ್ಪಿ ಸಂತೋಷ ಚೌವ್ಹಾಣ್, ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ ವೈ.ಎಚ್., ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಲೇಪಾಕ್ಷಪ್ಪ, ನಗರಸಭೆ ಆಯುಕ್ತೆ ರೇಣುಕ ಎಸ್.ದೇಸಾಯಿ ಇತರರಿದ್ದರು.261103-25-1189106019