ಕರುನಾಡೋತ್ಸವ ಇಂದಿನ ವಿಶೇಷ ಲೇಖನಗಳು: ಮಂಗಳವಾರ, 03 ನವೆಂಬರ್ 2026
ಪ್ರಜಾವಾಣಿ ಬಳಗದ ಡಿಜಿಟಲ್ ವಿಭಾಗವು ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ಈ ಬಾರಿ ನವೆಂಬರ್ ತಿಂಗಳನ್ನು ಕನ್ನಡ, ಕರ್ನಾಟಕದ ವಿಚಾರದಲ್ಲಿನ ಮಹತ್ವದ ಹಾದಿ ದಾಖಲಿಸುವ ಪ್ರಯತ್ನ ಮಾಡುತ್ತಿದೆ. ಇದರ ಭಾಗವಾಗಿಯೇ ವಿವಿಧ ವಿಷಯಗಳ ಮೇಲೆ, ತಜ್ಞರು, ಸಾಧಕರು, ಪ್ರಮುಖರ ಲೇಖನಗಳನ್ನು ಪ್ರಕಟಿಸುತ್ತಿದೆ... ಕರುನಾಡೋತ್ಸವದಲ್ಲಿ ಇಂದಿನ ವಿಶೇಷ ಲೇಖನಗಳ ಪಟ್ಟಿ ಇಲ್ಲಿದೆ. ಸಂಪೂರ್ಣ

ಪ್ರಜಾವಾಣಿ ಬಳಗದ ಡಿಜಿಟಲ್ ವಿಭಾಗವು ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ಈ ಬಾರಿ ನವೆಂಬರ್ ತಿಂಗಳನ್ನು ಕನ್ನಡ, ಕರ್ನಾಟಕದ ವಿಚಾರದಲ್ಲಿನ ಮಹತ್ವದ ಹಾದಿ ದಾಖಲಿಸುವ ಪ್ರಯತ್ನ ಮಾಡುತ್ತಿದೆ. ಇದರ ಭಾಗವಾಗಿಯೇ ವಿವಿಧ ವಿಷಯಗಳ ಮೇಲೆ, ತಜ್ಞರು, ಸಾಧಕರು, ಪ್ರಮುಖರ ಲೇಖನಗಳನ್ನು ಪ್ರಕಟಿಸುತ್ತಿದೆ... ಕರುನಾಡೋತ್ಸವದಲ್ಲಿ ಇಂದಿನ ವಿಶೇಷ ಲೇಖನಗಳ ಪಟ್ಟಿ ಇಲ್ಲಿದೆ. ಸಂಪೂರ್ಣ ಮಾಹಿತಿಗಾಗಿ https://www.prajavani.net/karunadotsava ಭೇಟಿ ಕೊಡಿಕರುನಾಡೋತ್ಸವ: ವಚನ ಸಾಹಿತ್ಯದ ಬೇರು, ಶರಣ ಪರಂಪರೆಯ ದಾರಿದೀಪ ದೇವರದಾಸಿಮಯ್ಯಹುಣಸಗಿ (ಯಾದಗಿರಿ ಜಿಲ್ಲೆ): ಹನ್ನೊಂದನೆಯ ಶತಮಾನದಲ್ಲಿ ಬೀಜರೂಪದಲ್ಲಿ ಮೊಳಕೆಹೊಡೆದ ವಚನ ಸಾಹಿತ್ಯವು 12ನೇ ಶತಮಾನದಲ್ಲಿ ಬಸವಣ್ಣನ ನೇತೃತ್ವದಲ್ಲಿ ಹೆಮ್ಮರವಾಗಿ ಬೆಳೆದು ಕನ್ನಡ ಸಾಹಿತ್ಯದ ಕ್ರಾಂತಿಯ ಯುಗವಾಯಿತು. ಈ ಮಹಾಪರಂಪರೆಗೆ ದೀಪವಿಟ್ಟು, ವಚನ ಸಾಹಿತ್ಯದ ಮೂಲಸೆಲೆಯಾಗಿದ್ದವರು ದೇವರ ದಾಸಿಮಯ್ಯನವರು.ಕರುನಾಡೋತ್ಸವ: ವಚನ ಸಾಹಿತ್ಯದ ಬೇರು, ಶರಣ ಪರಂಪರೆಯ ದಾರಿದೀಪ ದೇವರದಾಸಿಮಯ್ಯ‘ಜಾತ್ರೆಯಲ್ಲಿ ಶಿವ’; ಭ್ರಮೆಯಿಂದ ಜೀವಂತ ಕಾವ್ಯದವರೆಗೆ...ಹೆಣ್ಣಿನ ಅಂತರಂಗದ ಭಾವನೆಗಳು, ಸಾಮಾಜಿಕ ವಾಸ್ತವತೆ, ಸಂಬಂಧಗಳು ಹಾಗೂ ಸಮಾಜದಲ್ಲಿ ಮಹಿಳೆಯ ಸ್ಥಾನಮಾನಗಳ ಕುರಿತು ಭಾವನಾತ್ಮಕವಾಗಿ ಬರೆಯುವ ಲೇಖಕಿ ಸವಿತಾ ನಾಗಭೂಷಣ. ಇವರು ಬರೆದ ಪ್ರಸಿದ್ಧ ಕವನಸಂಕಲನ ‘ಜಾತ್ರೆಯಲ್ಲಿ ಶಿವ’ ಹುಟ್ಟಿದ್ದು ಹೇಗೆ ಎನ್ನುವ ಬಗ್ಗೆ ವಿವರಿಸಿದ್ದು ಹೀಗೆ...‘ಜಾತ್ರೆಯಲ್ಲಿ ಶಿವ’; ಭ್ರಮೆಯಿಂದ ಜೀವಂತ ಕಾವ್ಯದವರೆಗೆ...ಕರುನಾಡೋತ್ಸವ: ತಮಿಳುನಾಡಿಗೆ ಸೇರಿದ್ದರೂ ಕನ್ನಡ ಅಸ್ಮಿತೆ ಉಳಿಸಿಕೊಂಡ ‘ತಾಳವಾಡಿ’ನಾಡು–ನುಡಿ, ನೆಲ–ಜಲ ಸಂಬಂಧ ಚಾಮರಾಜನಗರ ಜಿಲ್ಲೆಯ ನೆಲದಲ್ಲಿ ದಾಖಲಾಗಿರುವ ಹೋರಾಟಗಳ ಪೈಕಿ ‘ತಾಳವಾಡಿ’ ಹೋರಾಟವೂ ಪ್ರಮುಖವಾದುದು. 1956ರಲ್ಲಿ ರಾಜ್ಯ ಪುನರ್ವಿಂಗಡೆಣೆಯಾದ ಬಳಿಕ ಹಿಂದೆ ಕರ್ನಾಟಕಕ್ಕೆ ಸೇರಿದ್ದ ತಾಳವಾಡಿ ಗ್ರಾಮವೂ ಸೇರಿದಂತೆ ಸುತ್ತಮುತ್ತಲಿನ 48ಕ್ಕೂ ಹೆಚ್ಚು ಹಳ್ಳಿಗಳನ್ನು ನೆರೆಯ ತಮಿಳುನಾಡಿಗೆ ಸೇರಿಸಲಾಯಿತು.ಕರುನಾಡೋತ್ಸವ: ತಮಿಳುನಾಡಿಗೆ ಸೇರಿದ್ದರೂ ಕನ್ನಡ ಅಸ್ಮಿತೆ ಉಳಿಸಿಕೊಂಡ ‘ತಾಳವಾಡಿ’ಉತ್ತರ ಕರ್ನಾಟಕ, ಕರಾವಳಿ, ಮೈಸೂರು ಕನ್ನಡ: ಭಾಷಾ ಸೊಗಡಿನ ಉಗಮದ ಕಥೆ...‘ಭಾಷೆ’ಎನ್ನುವುದು ಕೇವಲ ಸಂವಹನದ ಸಾಧನವಲ್ಲ; ಅದು ಒಂದು ಸಮುದಾಯದ ಇತಿಹಾಸ, ಸಂಸ್ಕೃತಿ, ಜೀವನಾನುಭವ, ಸಾಮಾಜಿಕ ಸಂಬಂಧ, ವೃತ್ತಿ, ಭಾವನೆ ಮತ್ತು ಅಸ್ಮಿತೆಯನ್ನು ಅಭಿವ್ಯಕ್ತಿಸುವ ಜೀವಂತ ಮಾಧ್ಯಮ. ಭಾಷೆಯು ಜನರ ಬದುಕಿನೊಂದಿಗೆ ಬೆರೆತು ಬೆಳೆಯುವಾಗ ಅನೇಕ ಪ್ರಾದೇಶಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ರೂಪಗಳನ್ನು ಪಡೆದುಕೊಳ್ಳುತ್ತದೆ. ಇವುಗಳನ್ನೇ ಸಾಮಾನ್ಯವಾಗಿ ‘ಉಪಭಾಷೆಗಳು’ ಎಂದು ಕರೆಯುತ್ತೇವೆ. ಕನ್ನಡ ಭಾಷೆಯೂ ಇದಕ್ಕೆ ಹೊರತಲ್ಲ. ಕರ್ನಾಟಕದ ಭೌಗೋಳಿಕ ವಿಸ್ತಾರ, ಐತಿಹಾಸಿಕ ಬೆಳವಣಿಗೆ, ಜನಸಮುದಾಯಗಳ ವೈವಿಧ್ಯ, ವೃತ್ತಿಪರ ಪರಿಸರ, ಧಾರ್ಮಿಕ ನಂಬಿಕೆಗಳು ಹಾಗೂ ಸಾಂಸ್ಕೃತಿಕ ಪರಂಪರೆಗಳು ಕನ್ನಡದ ವಿವಿಧ ಉಪಭಾಷೆಗಳ ರೂಪುಗೊಳ್ಳುವಿಕೆಗೆ ಕಾರಣವಾಗಿವೆ.ಉತ್ತರ ಕರ್ನಾಟಕ, ಕರಾವಳಿ, ಮೈಸೂರು ಕನ್ನಡ: ಭಾಷಾ ಸೊಗಡಿನ ಉಗಮದ ಕಥೆ...ಕರುನಾಡ ಕುತೂಹಲ: ಹಳೆಗನ್ನಡದಿಂದ ಹೊಸಗನ್ನಡದವರೆಗೆ; ಬದಲಾಗುತ್ತಲೇ ಬಂದ ಭಾಷೆನಾವು ಇಂದು ಮಾತನಾಡುವ ಕನ್ನಡ ಮತ್ತು ಸಾವಿರ ವರ್ಷಗಳ ಹಿಂದೆ ಬಳಸುತ್ತಿದ್ದ ಕನ್ನಡದ ನಡುವೆ ಸಾಕಷ್ಟು ವ್ಯತ್ಯಾಸಗಳಿವೆ. ಭಾಷೆಯ ಈ ಬೆಳವಣಿಗೆಯನ್ನು ಅಧ್ಯಯನ ಮಾಡಲು ವಿದ್ವಾಂಸರು ಸಾಮಾನ್ಯವಾಗಿ ಹಳೆಗನ್ನಡ, ನಡುಗನ್ನಡ ಮತ್ತು ಹೊಸಗನ್ನಡ ಎಂಬ ಕಾಲಘಟ್ಟಗಳನ್ನು ಗುರುತಿಸುತ್ತಾರೆ. ಈ ವಿಭಾಗಗಳು ಭಾಷೆಯ ಇತಿಹಾಸವನ್ನು ಅರ್ಥಮಾಡಿಕೊಳ್ಳಲು ನೆರವಾಗುತ್ತವೆ.ಕರುನಾಡ ಕುತೂಹಲ: ಹಳೆಗನ್ನಡದಿಂದ ಹೊಸಗನ್ನಡದವರೆಗೆ; ಬದಲಾಗುತ್ತಲೇ ಬಂದ ಭಾಷೆಬಿದಿರಿನಿಂದ ಬದುಕು ಕಟ್ಟಿಕೊಂಡ ಫಕ್ಕೀರಪ್ಪ:ಹಲವು ಕುಟುಂಬಗಳಿಗೆ ಸ್ವಾವಲಂಬನೆಯ ದಾರಿಬಡತನದ ಕಾರಣಕ್ಕೆ ಶಿಕ್ಷಣ ಮುಂದುವರಿಸಲಾಗದ ಹುಡುಗನೊಬ್ಬ, ಬದುಕಿನ ಅನಿವಾರ್ಯತೆಯಿಂದಲೇ ಹೊಸ ಕೌಶಲ ಕಲಿತು, ಅದನ್ನೇ ಉದ್ಯಮವಾಗಿಸಿಕೊಂಡು ಹತ್ತಾರು ಕುಟುಂಬಗಳಿಗೆ ಉದ್ಯೋಗದ ದಾರಿ ತೋರಿಸಿದ ಕಥೆಯಿದು.ಬದುಕು, ನಾವು ಅಂದುಕೊಂಡ ದಾರಿಯಲ್ಲೇ ಸಾಗುವುದಿಲ್ಲ. ಕೆಲವೊಮ್ಮೆ ಅನಿವಾರ್ಯತೆಗಳು ನಮ್ಮ ಆಯ್ಕೆಗಳನ್ನು ಕಸಿದುಕೊಳ್ಳುತ್ತವೆ. ಆದರೆ ಅದೇ ಅನಿವಾರ್ಯತೆ ಹೊಸ ದಾರಿಯೊಂದನ್ನು ಪರಿಚಯಿಸಬಹುದು ಎನ್ನುವ ಸ್ಫೂರ್ತಿದಾಯಕ ಪಯಣದ ಬರಹವಿದು.ಬಿದಿರಿನಿಂದ ಬದುಕು ಕಟ್ಟಿಕೊಂಡ ಫಕ್ಕೀರಪ್ಪ:ಹಲವು ಕುಟುಂಬಗಳಿಗೆ ಸ್ವಾವಲಂಬನೆಯ ದಾರಿಕರುನಾಡೋತ್ಸವ ’ಪದ ಕಟ್ಟು‘ ಭಾಗ–3: ಇಂದಿನ ಸವಾಲುಕನ್ನಡದಲ್ಲಿ ನಾವು ದಿನನಿತ್ಯ ಬಳಸುವ ಹಲವು ಭಾಷೆಗಳ ಪದಗಳು ಕನ್ನಡದ್ದೇ ಪದಗಳೇನೋ ಎಂಬಷ್ಟು ವಾಡಿಕೆಗೆ ಬಂದುಬಿಟ್ಟಿವೆ. ತಪ್ಪಲ್ಲ. ಭಾಷೆಯೊಂದರ ಬೆಳವಣಿಗೆ ದೃಷ್ಟಿಯಿಂದ ಖಂಡಿತವಾಗಿಯೂ ಇದನ್ನು ಆಕ್ಷೇಪಿಸುವಂತಿಲ್ಲ. ಇದೊಂದು ಸಾಂಸ್ಕೃತಿಕ ವಿನಿಮಯವೂ ಹೌದು. ಬೇರೆಬೇರೆ ಪ್ರದೇಶದ ಜನ ಕನ್ನಡದ ನೆಲದಲ್ಲಿ ಬಂದು ಬದುಕನ್ನು ಕಟ್ಟಿಕೊಳ್ಳುವಾಗ, ಒಂದೇ ಪ್ರದೇಶದಲ್ಲಿ ಬೇರೆ ಭಾಷಿಕರ ಸಂಖ್ಯೆ ಹೆಚ್ಚಾದಾಗ, ಇಂಗ್ಲಿಷರು, ಪ್ರೆಂಚರು, ಅರಬರು... ಹೀಗೆ ಬೇರೆಬೇರೆ ಆಡಳಿತಗಳ ಪ್ರಭಾವ, ಗಡಿಯಲ್ಲಿನ ಪ್ರದೇಶಗಳಲ್ಲಿ ವ್ಯವಹರಿಸುವಾಗ... ಹೀಗೆ ವಿಭಿನ್ನ ಕಾರಣಗಳಿಂದಾಗಿ ಪದಗಳ ಎರವಲು ನಡೆಯುತ್ತಲೇ ಬಂದಿದೆ. ಇದೇನೂ ಹೊಸತಲ್ಲ.ಕರುನಾಡೋತ್ಸವ ’ಪದ ಕಟ್ಟು‘ ಭಾಗ–3: ಇಂದಿನ ಸವಾಲು‘ತುಂಬಾ ಇಷ್ಟಪಟ್ಟು ಕನ್ನಡ ಕಲಿತೆ‘:ನಿವೃತ್ತ ಡಿಜಿಪಿ ಅಜಯ್ ಕುಮಾರ್ ಸಿಂಗ್ ಸಂದರ್ಶನರಾಜ್ಯಕ್ಕೆ ಉದ್ಯೋಗ ಅರಸಿ ಬರುವವರು ಮತ್ತು ಪೋಸ್ಟಿಂಗ್ ಆಗುವ ಪರಭಾಷಿಕ ಅಧಿಕಾರಿಗಳಲ್ಲಿ ಹಲವರು, ಕನ್ನಡ ಕಲಿಯಲು ಹಿಂಜರಿಯುತ್ತಿದ್ದಾರೆ. ಆದರೆ, ಅಂತಹವರ ನಡುವೆ ಭಿನ್ನವಾಗಿ ನಿಂತವರೇ ಕರ್ನಾಟಕದ ನಿವೃತ್ತ ಡಿಜಿಪಿ ಅಜಯ್ ಕುಮಾರ್ ಸಿಂಗ್. ಬೆಂಗಳೂರು ಪೊಲೀಸ್ ಕಮಿಷನರ್ ಆಗಿಯೂ ಸೇವೆ ಸಲ್ಲಿಸಿರುವ ಇವರು, ತಮ್ಮ ಅಧಿಕಾರಾವಧಿಯಲ್ಲಿ ಪೊಲೀಸ್ ಇಲಾಖೆಯಲ್ಲಿ ಹಲವು ಸುಧಾರಣೆ ತಂದಿದ್ದಾರೆ. ಸಾರ್ವಜನಿಕರ ಜತೆ ವ್ಯವಹರಿಸಲು ನಿರರ್ಗಳವಾಗಿ ಕನ್ನಡ ಮಾತನಾಡುವುದನ್ನು ಕಲಿತಿದ್ದರು. ತಮ್ಮ ಬಳಿ ಬರುವ ಜನರ ದುಃಖ ದುಮ್ಮಾನಗಳನ್ನು ಅರ್ಥ ಮಾಡಿಕೊಳ್ಳಲು ಸ್ಥಳೀಯ ಭಾಷೆ ಗೊತ್ತಿರಬೇಕೆಂದು ಅರಿತಿದ್ದರು.‘ತುಂಬಾ ಇಷ್ಟಪಟ್ಟು ಕನ್ನಡ ಕಲಿತೆ‘:ನಿವೃತ್ತ ಡಿಜಿಪಿ ಅಜಯ್ ಕುಮಾರ್ ಸಿಂಗ್ ಸಂದರ್ಶನದಾವಣಗೆರೆಯ ಬೇರು, ಜಾಗತಿಕ ಚಿಂತನೆಯ ಹರವು: ವಿವೇಕ್ ತೋಂಟದಾರ್ಯ ಸಾಧನೆಯ ಹಾದಿದಾವಣಗೆರೆಯಲ್ಲಿ ಕಂಪ್ಯೂಟರ್ ಮತ್ತು ಎಲೆಕ್ಟ್ರಾನಿಕ್ಸ್ ಕಲಿಯಲು ಹೆಚ್ಚಿನ ಅವಕಾಶಗಳಿರದ ಕಾಲವದು. ಹೈಸ್ಕೂಲ್ ಓದುತ್ತಿದ್ದ ವಿವೇಕ್, 1984ರಿಂದ 1987ರವರೆಗೆ ಶಾಲೆಯ ರಜೆಯಲ್ಲಿ ಬೆಂಗಳೂರಿಗೆ ಬಂದು ಕಂಪ್ಯೂಟರ್ ಪ್ರೋಗ್ರಾಮಿಂಗ್ ಮತ್ತು ಎಲೆಕ್ಟ್ರಾನಿಕ್ಸ್ ಕಲಿಯುತ್ತಿದ್ದರು. ಮಾವ ಉದಯ್ ಮೆಂಡಿಗೇರಿ ಅವರಿಂದ ಭೌತಶಾಸ್ತ್ರ ಮತ್ತು ತಂತ್ರಜ್ಞಾನದ ಪಾಠ; ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತುಸಂಗ್ರಹಾಲಯದ ಭೇಟಿಗಳು ಈ ಆಸಕ್ತಿಗೆ ಮತ್ತಷ್ಟು ಇಂಬು ನೀಡುತ್ತಿದ್ದವು. ದಾವಣಗೆರೆಯಲ್ಲಿ ಮೊಳಕೆಯೊಡೆದ ಈ ಕುತೂಹಲ ಮುಂದೆ ಎಂಜಿನಿಯರಿಂಗ್, ಜಾಗತಿಕ ತಂತ್ರಜ್ಞಾನ ಸಂಸ್ಥೆಗಳು, ಸಾರ್ವಜನಿಕ ನೀತಿ ಮತ್ತು ಕೃತಕ ಬುದ್ಧಿಮತ್ತೆಯ ಸಂಶೋಧನೆಯವರೆಗೆ ವಿಸ್ತರಿಸಿತು. ಬ್ರಿಟನ್ನಲ್ಲಿ ಮೂರು ದಶಕಗಳಿಗೂ ಹೆಚ್ಚು ಕಳೆದಿರುವ ವಿವೇಕ್ ಅವರ ವೃತ್ತಿಜೀವನದಷ್ಟೇ, ಕನ್ನಡ ಮತ್ತು ಕರ್ನಾಟಕದೊಂದಿಗಿನ ನಂಟೂ ಗಮನ ಸೆಳೆಯುತ್ತದೆ.ದಾವಣಗೆರೆಯ ಬೇರು, ಜಾಗತಿಕ ಚಿಂತನೆಯ ಹರವು: ವಿವೇಕ್ ತೋಂಟದಾರ್ಯ ಸಾಧನೆಯ ಹಾದಿಮುಂದಿನ ಪೀಳಿಗೆಯ ಹೊಸ ಹವಾ: ಜೆನ್ ಝೀಗಳಿಗೆ ಸೆಡ್ಡು ಹೊಡೆಯುತ್ತಿರುವ ‘ಆಲ್ಫಾ‘ತಂತ್ರಜ್ಞಾನ ಹಾಗೂ ಸಾಮಾಜಿಕ ಮಾಧ್ಯಮಗಳ ಅಂಗಳದಲ್ಲಿ ‘ಮಿಲೇನಿಯಲ್ಸ್’ ಹಾಗೂ ‘ಜೆನ್ ಝೀ’ ಹವಾ ತಗ್ಗುತ್ತಿದ್ದು, ಇದೀಗ ‘ಜನರೇಷನ್ ಆಲ್ಫಾ’ ಜಗತ್ತನ್ನು ಆಳಲು ಸಜ್ಜಾಗಿದೆ. 2010ರಿಂದ 2024ರ ನಡುವೆ ಜನಿಸಿದ ಈ ಪೀಳಿಗೆಯ ಮಕ್ಕಳು, ತಂತ್ರಜ್ಞಾನ ಮತ್ತು ಡಿಜಿಟಲ್ ಜಗತ್ತನ್ನು ಗ್ರಹಿಸುವಲ್ಲಿ ತಮ್ಮ ಹಿಂದಿನ ಪೀಳಿಗೆಯವರನ್ನೇ ಹಿಂದಿಕ್ಕುತ್ತಿದ್ದಾರೆ.ಮುಂದಿನ ಪೀಳಿಗೆಯ ಹೊಸ ಹವಾ: ಜೆನ್ ಝೀಗಳಿಗೆ ಸೆಡ್ಡು ಹೊಡೆಯುತ್ತಿರುವ ‘ಆಲ್ಫಾ‘ಕನ್ನಡಕ್ಕಾಗಿಯೇ ಪ್ರಾಣ ತೆತ್ತ ವೀರ ಪೈಲ್ವಾನ: ಬಳ್ಳಾರಿಯ ರಂಜಾನ್ ಸಾಬ್ ಸಾಹಸಗಾಥೆಕನ್ನಡ ಪರ ಹೋರಾಟ ಎಂದಾಕ್ಷಣ ಅನೇಕರ ಹೆಸರುಗಳು ಮುನ್ನಲೆಗೆ ಬರುತ್ತವೆ. ಅಂತಹವರ ಸಾಲಿನಲ್ಲಿ ಮುಂಚೂಣಿಯಲ್ಲಿರುವುದು ಪೈಲ್ವಾನ್ ರಂಜಾನ್ ಸಾಬ್ ಪಿಂಜಾರ. ದೈಹಿಕ ಬಲದ ಹೊರತಾಗಿಯೂ ಕನ್ನಡದ ಮೇಲಿನ ಅಚಲ ಪ್ರೀತಿ, ಪ್ರಾಮಾಣಿಕತೆ ಮತ್ತು ದಿಟ್ಟ ಹೋರಾಟದಿಂದಾಗಿ ನಾಡಿನ ಜನರ ಮನದಲ್ಲಿ ಅಚ್ಚಳಿಯದೆ ಸ್ಥಾನ ಪಡೆದಿದ್ದಾರೆ.ಕನ್ನಡಕ್ಕಾಗಿಯೇ ಪ್ರಾಣ ತೆತ್ತ ವೀರ ಪೈಲ್ವಾನ: ಬಳ್ಳಾರಿಯ ರಂಜಾನ್ ಸಾಬ್ ಸಾಹಸಗಾಥೆಪರಿಷತ್ತು ನಾವೇ; ಅದು ಕೆಲಸ ಮಾಡದಿದ್ದರೆ ತಪ್ಪು ನಮ್ಮದೇ; ಸಮ್ಮೇಳನಾಧ್ಯಕ್ಷ ಮಾಸ್ತಿಒಂದು ಸಂಸ್ಥೆ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ದೂರುವುದು ಬಹಳ ಸುಲಭ. ಅದರ ಕಾರ್ಯವೈಖರಿಯನ್ನು ಟೀಕಿಸುವುದೂ ಸುಲಭ. ಆದರೆ ಆ ಸಂಸ್ಥೆ ನಮ್ಮದೇ ಆಗಿದ್ದರೆ, ಅದರ ಬೆಳವಣಿಗೆಗೆ ನಾವು ಏನು ಕೊಡುಗೆ ನೀಡಿದ್ದೇವೆ ಎಂಬ ಪ್ರಶ್ನೆಯನ್ನು ಮೊದಲು ನಮಗೆ ನಾವೇ ಕೇಳಿಕೊಳ್ಳಬೇಕಲ್ಲವೇ? ಸಂಸ್ಥೆಯ ಕೆಲಸದಲ್ಲಿ ಲೋಪವಿದ್ದರೆ ಅದನ್ನು ಸರಿಪಡಿಸುವ ಹೊಣೆಗಾರಿಕೆಯೂ ನಮ್ಮದೇ ಆಗಬೇಕು.ಪರಿಷತ್ತು ನಾವೇ; ಅದು ಕೆಲಸ ಮಾಡದಿದ್ದರೆ ತಪ್ಪು ನಮ್ಮದೇ; ಸಮ್ಮೇಳನಾಧ್ಯಕ್ಷ ಮಾಸ್ತಿಕನ್ನಡ ನೌಕೆಯಲ್ಲಿ ವಿಶ್ವ ಕನ್ನಡಿಗರನ್ನು ಬೆಸೆಯುತ್ತಿರುವ ‘ನಾವಿಕ’ಲಾಸ್ ಏಂಜಲೀಸ್, ಬೋಸ್ಟನ್, ಡಲ್ಲಾಸ್, ಬೆಂಗಳೂರು, ನೈರೋಬಿ, ಫ್ರಾಂಕ್ಫರ್ಟ್, ಟೋಕಿಯೊ—ಈ ನಗರಗಳ ನಡುವೆ ಸಾವಿರಾರು ಕಿಲೋಮೀಟರ್ಗಳ ಅಂತರವಿದೆ. ಆದರೆ ಇವೆಲ್ಲವನ್ನೂ ಒಂದು ಭಾಷೆ ಮತ್ತು ಸಾಂಸ್ಕೃತಿಕ ನಂಟು ಬೆಸೆಯುತ್ತಿದೆ. ಜಗತ್ತಿನ ವಿವಿಧ ಭಾಗಗಳಲ್ಲಿ ನೆಲೆಸಿರುವ ಕನ್ನಡಿಗರನ್ನು ಒಂದೇ ವೇದಿಕೆಗೆ ಕರೆತರುವ ಉದ್ದೇಶದಿಂದ ಉತ್ತರ ಅಮೆರಿಕದಲ್ಲಿ ಆರಂಭವಾದ ‘ನಾವು ವಿಶ್ವ ಕನ್ನಡಿಗರು’ (ನಾವಿಕ) ಸಂಸ್ಥೆ, ಕಳೆದ 17 ವರ್ಷಗಳಲ್ಲಿ ತನ್ನ ಚಟುವಟಿಕೆಗಳನ್ನು ಹಲವು ಖಂಡಗಳಿಗೆ ವಿಸ್ತರಿಸಿದೆ. ವಿಶ್ವ ಕನ್ನಡ ಸಮ್ಮೇಳನಗಳು ಮತ್ತು ನಾವಿಕೋತ್ಸವಗಳ ಮೂಲಕ ಕನ್ನಡಿಗರ ನಡುವಿನ ಸಂಪರ್ಕವನ್ನು ಗಟ್ಟಿಗೊಳಿಸುತ್ತಿರುವ ಸಂಸ್ಥೆ, ಈಗ ಜಪಾನ್ನಲ್ಲಿ ಎಂಟನೇ ‘ನಾವಿಕೋತ್ಸವ’ಕ್ಕೆ ಸಜ್ಜಾಗಿದೆ.ಕನ್ನಡ ನೌಕೆಯಲ್ಲಿ ವಿಶ್ವ ಕನ್ನಡಿಗರನ್ನು ಬೆಸೆಯುತ್ತಿರುವ ‘ನಾವಿಕ’ಕರುನಾಡೋತ್ಸವ: ಕರ್ನಾಟಕದ ಸಮುದ್ರ ತಟದ ಬೆವರುಪ್ಪು ಮತ್ತು ಸಾಮರಸ್ಯದ ಸಂಸ್ಕೃತಿಜೂನ್ ತಿಂಗಳು ಬಂತೆಂದರೆ ಧೋ...ಎಂದು ಸುರಿಯುವ ಧಾರಾಕಾರ ಮಳೆ. ಗುಡುಗು–ಸಿಡಿಲು, ಬಿರುಸು ಗಾಳಿಯ ಸಾಥ್. ಕೆಲವೊಮ್ಮೆ ಈ ಅಬ್ಬ ಮೇ ತಿಂಗಳಲ್ಲೇ ಆರಂಭವಾಗುವುದಿದೆ. ನಾಲ್ಕು ತಿಂಗಳು ಮಳೆ ಎಂದು ಅಧಿಕೃತವಾಗಿ ಹೇಳುತ್ತಿದ್ದರೂ ಬೇಗ ಆರಂಭವಾಗಿ ತಡವಾಗಿ ಮುಗಿದರೆ ಕರಾವಳಿಯ ಮಳೆಗಾಲದ ಅವಧಿ ಕೆಲವು ವರ್ಷಗಳಲ್ಲಿ ಆರರಿಂದ ಏಳು ತಿಂಗಳ ವರೆಗೆ ಇರುತ್ತದೆ. ದಿನವಿಡೀ ಸುರಿಯುವ ಮಳೆಯಿಂದ ಒಮ್ಮೊಮ್ಮೆ ಮನೆಯಿಂದ ಹೊರಗೆ ಇಳಿಯಲು ಆಗದ ಪರಿಸ್ಥಿತಿ. ಈ ಸ್ಥಿತಿ ಅನೇಕ ಬಾರಿ ದಿನಗಟ್ಟಲೆ ಮುಂದುವರಿಯುವುದೂ ಇದೆ. ನಿರಂತರ ಮಳೆಯ ಸದ್ದು, ಇಳೆ ನೆನೆದು ದೇಹ ತಂಪಾಗಿ ಮನಸ್ಸೂ ಮುದುಡಿದ ಅನುಭವ.ಕರುನಾಡೋತ್ಸವ: ಕರ್ನಾಟಕದ ಸಮುದ್ರ ತಟದ ಬೆವರುಪ್ಪು ಮತ್ತು ಸಾಮರಸ್ಯದ ಸಂಸ್ಕೃತಿಕರ್ನಾಟಕದಲ್ಲಿ ಜನಸ್ನೇಹಿ ಇ-ಆಡಳಿತ ಜಾರಿ: 2 ದಶಕದ ಹಾದಿ ದೇಶಕ್ಕೆ ಮಾದರಿಕರ್ನಾಟಕವು ಇ-ಆಡಳಿತದಲ್ಲಿ ಮುಂಚೂಣಿಯಲ್ಲಿರುವ ರಾಜ್ಯ. ಎರಡು ದಶಕದ ಹಾದಿಯಲ್ಲಿ ಕೈಗೆತ್ತಿಕೊಂಡ ಕಾರ್ಯಚಟುವಟಿಕೆಗಳು, ಅದನ್ನು ಜಾರಿಗೊಳಿಸಿದ ಕ್ರಮ, ಜನ ಬಳಕೆಯಿಂದ ಜೀವನ ಸುಧಾರಣೆಯಾಗಿರುವ ವಿಚಾರದಲ್ಲಿ ದೇಶದ ಹಲವು ರಾಜ್ಯಗಳಿಗೆ ಕರ್ನಾಟಕವೇ ಮಾದರಿ.ಕರ್ನಾಟಕದಲ್ಲಿ ಜನಸ್ನೇಹಿ ಇ-ಆಡಳಿತ ಜಾರಿ: 2 ದಶಕದ ಹಾದಿ ದೇಶಕ್ಕೆ ಮಾದರಿಪ್ರಜಾವಾಣಿ ಕರುನಾಡೋತ್ಸವ| ಸಂಚಿ ಹೊನ್ನಮ್ಮ: ಸ್ತ್ರೀಪರ ಚಿಂತನೆಯ ಕಾವ್ಯ ಕೋಗಿಲೆಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಮಹಿಳಾ ಅಭಿವ್ಯಕ್ತಿಗೆ ವಿಶಿಷ್ಟ ಸ್ಥಾನ ಇದೆ. 12ನೇ ಶತಮಾನದ ಅಕ್ಕಮಹಾದೇವಿಯ ವಚನಗಳಂತೆ, ಹದಿನೇಳನೆ ಶತಮಾನದಲ್ಲಿ ಸಂಚಿ ಹೊನ್ನಮ್ಮ ರಚಿಸಿದ ಕಾವ್ಯವೂ ಮಹಿಳೆಯ ಬದುಕು, ದಾಂಪತ್ಯದ ಮೌಲ್ಯಗಳು ಹಾಗೂ ಸಾಮಾಜಿಕ ನಡವಳಿಕೆಗಳ ಕುರಿತು ಚಿಂತನೆಗೆ ಹಚ್ಚುತ್ತವೆ.ಪ್ರಜಾವಾಣಿ ಕರುನಾಡೋತ್ಸವ| ಸಂಚಿ ಹೊನ್ನಮ್ಮ: ಸ್ತ್ರೀಪರ ಚಿಂತನೆಯ ಕಾವ್ಯ ಕೋಗಿಲೆ