ನನಗೆ ಬಂಧುಗಳಿಲ್ಲ ಎಂದು ವಿಡಿಯೊ ಹಂಚಿಕೊಂಡ ಯುವಕನ ಮದುವೆಗೆ ಬಂದ 10 ಸಾವಿರ ಜನ!
ಕೆಲವೊಮ್ಮೆ ಅಪರಿಚಿತರೇ ಬಂಧು–ಬಳಗವಾಗಿ ಜತೆಯಾಗುತ್ತಾರೆ ಎನ್ನುವುದಕ್ಕೆ ಚೀನಾದ ಈ ಯುವಕನ ಮದುವೆ ಸಾಕ್ಷಿಯಾಗಿದೆ.ತಂದೆ ತಾಯಿಯನ್ನು ಚಿಕ್ಕವಯಸ್ಸಿನಲ್ಲಿಯೇ ಕಳೆದುಕೊಂಡಿದ್ದ ಚೀನಾದ 24 ವರ್ಷದ ಶು ಚೆಂಗ್ಹಾಂಗ್ ಎನ್ನುವ ಯುವಕ ಅನಾಥನಾಗಿದ್ದ. ಈತ, ತಾನು ಪ್ರೀತಿಸಿದ ಹುಡುಗಿಯನ್ನು ಮದುವೆಯಾಗಬೇಕು ಎಂದುಕೊಂಡಾಗ ತನ್ನವರು ಯಾರೂ ಇಲ್ಲ ಎನ್ನುವ ಬೇಸರ ಕಾಡಿತ್ತು. ಇದ್ದ ಆಪ್ತ

ಕೆಲವೊಮ್ಮೆ ಅಪರಿಚಿತರೇ ಬಂಧು–ಬಳಗವಾಗಿ ಜತೆಯಾಗುತ್ತಾರೆ ಎನ್ನುವುದಕ್ಕೆ ಚೀನಾದ ಈ ಯುವಕನ ಮದುವೆ ಸಾಕ್ಷಿಯಾಗಿದೆ.ತಂದೆ ತಾಯಿಯನ್ನು ಚಿಕ್ಕವಯಸ್ಸಿನಲ್ಲಿಯೇ ಕಳೆದುಕೊಂಡಿದ್ದ ಚೀನಾದ 24 ವರ್ಷದ ಶು ಚೆಂಗ್ಹಾಂಗ್ ಎನ್ನುವ ಯುವಕ ಅನಾಥನಾಗಿದ್ದ. ಈತ, ತಾನು ಪ್ರೀತಿಸಿದ ಹುಡುಗಿಯನ್ನು ಮದುವೆಯಾಗಬೇಕು ಎಂದುಕೊಂಡಾಗ ತನ್ನವರು ಯಾರೂ ಇಲ್ಲ ಎನ್ನುವ ಬೇಸರ ಕಾಡಿತ್ತು. ಇದ್ದ ಆಪ್ತರೂ ಮದುವೆಗೆ ಬಂದು ನೆರವಾಗುತ್ತಾರೆ ಎನ್ನುವ ಭರವಸೆ ಅವನಿಗಿರಲಿಲ್ಲ. ‘ನನ್ನ ಮದುವೆಗೆ ಬರಲು ಬಂಧುಗಳೇ ಇಲ್ಲ, ಮಂಟಪ ಖಾಲಿಯಾಗಿರುತ್ತದೆ’ ಎನ್ನುವ ಆತನನ್ನು ಕೊರಗು ಕಾಡುತ್ತಿತ್ತು.ಇದಕ್ಕಾಗಿ ಆತ, ಅ.25ರಂದು ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ ಒಂದು ಪೋಸ್ಟ್ ಹಾಕಿದ. ಅದರಲ್ಲಿ ‘ನಾನು ಪ್ರೀತಿಸಿದ ಹುಡುಗಿಯೊಂದಿಗೆ ಮದುವೆಯಾಗುತ್ತಿದ್ದೇನೆ. ಆದರೆ ಮದುವೆಗೆ ಬಂಧುಗಳಿಲ್ಲ, ಅಪರಿಚಿತರಾದರೂ ತೊಂದರೆಯಿಲ್ಲ, ದಯವಿಟ್ಟು ಬಂದು ನಮ್ಮನ್ನು ಹಾರೈಸಿ, ಊಟ ಮಾಡಿಕೊಂಡು ಹೋಗಿ. ಕಾರ್ಯಕ್ರಮವನ್ನು ಸಂಭ್ರಮವನ್ನಾಗಿಸಿ’ ಎಂದು ಬರೆದುಕೊಂಡು ತನ್ನ ಕಥೆಯನ್ನು ವಿವರಿಸಿ ಮನದ ಇಂಗಿತವನ್ನು ವ್ಯಕ್ತಪಡಿಸಿದ್ದ. ನಂತರ ನಡೆದಿದ್ದು ಪವಾಡ.ಮದುವೆಯ ದಿನ ಜನಸಾಗರಪೋಸ್ಟ್ ಹಾಕಿದ ಬಳಿಕ ಮದುವೆಯ ಕೆಲಸಗಳಲ್ಲಿ ಶು ನಿರತನಾಗಿದ್ದ. ಇತ್ತ ಆತನ ಪೋಸ್ಟ್ ಭಾರಿ ಸದ್ದು ಮಾಡಿತ್ತು. ಯುವಕನ ಕಥೆ ಕೇಳಿ ಕರಗಿದ ಚೀನಾದ ಮೂಲೆ ಮೂಲೆಯ ಜನರು ಆತನ ಮದುವೆಗೆ ಬರಲು ನಿರ್ಧರಿಸಿದ್ದರು.ಅ.31ರಂದು ಮದುವೆಯ ದಿನ ಶು ಗೆ ಅಚ್ಚರಿಯೇ ಕಾದಿತ್ತು. ಸಾವಿರಾರು ಜನ ಮದುವೆಗೆ ಆಗಮಿಸಿದ್ದರು. ವರದಿಗಳ ಪ್ರಕಾರ ಶು ಮದುವೆಗೆ ಸುಮಾರು 10 ಸಾವಿರಕ್ಕೂ ಹೆಚ್ಚು ಜನ ಭಾಗಿಯಾಗಿದ್ದರು.ಯುವಕನ ಸಣ್ಣ ಮನೆಯಲ್ಲಿ ಇಷ್ಟೊಂದು ಜನರು ಇರಲು ಸಾಧ್ಯವಿಲ್ಲವೆಂದು ಸ್ಥಳೀಯ ಅಧಿಕಾರಿಗಳು ಮತ್ತು ಸ್ಥಳೀಯ ಜನರ ಸಹಾಯದಿಂದ ಸಾರ್ವಜನಿಕ ಮೈದಾನಕ್ಕೆ ಮದುವೆ ಕಾರ್ಯಕ್ರಮವನ್ನು ಸ್ಥಳಾಂತರಿಸಿದ್ದರು. View this post on Instagram ಉಡುಗೊರೆಗಳ ಮಹಾಪೂರಬಂದ ಜನರು ಬರಿಗೈಯಲ್ಲಿ ಬರಲಿಲ್ಲ. ತಮ್ಮೊಂದಿಗೆ ಉಡುಗೊರೆಗಳು, ಗೃಹೋಪಯೋಗಿ ವಸ್ತುಗಳು, ಆಹಾರ ಸಾಮಗ್ರಿಗಳು ಮತ್ತು ಹೂವುಗಳನ್ನು ತಂದಿದ್ದರು. ಬಂದವರಲ್ಲಿದ್ದ ಬಾಣಸಿಗರು ಉಚಿತವಾಗಿ ಅಡುಗೆ ಮಾಡಿ ಬಂದಿದ್ದ ಸಾವಿರಾರು ಜನರಿಗೆ ಮದುವೆಯ ಅಡುಗೆಯನ್ನು ಬಡಿಸಿದ್ದರು. ‘ತನಗಾಗಿ ಯಾರೂ ಇಲ್ಲ’ ಎಂದು ನೊಂದವನ ಮದುವೆ ಸಾವಿರಾರು ಜನರ ಸಮ್ಮುಖದಲ್ಲಿ ಸಂಭ್ರಮದಿಂದ ಜರುಗಿತ್ತು.ಸದ್ಯ ಶು ಮದುವೆಯ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಜಗತ್ತಿನಾದ್ಯಂತ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. View this post on Instagram ವಿಡಿಯೊ ಹಂಚಿಕೊಂಡ ಅಮೆರಿಕದಲ್ಲಿರುವ ಚೀನಾ ರಾಯಭಾರಿಈ ಬಗ್ಗೆ ಅಮೆರಿಕದಲ್ಲಿರುವ ಚೀನಾ ರಾಯಭಾರಿ ಕ್ಸಿ ಫೆಂಗ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಹಂಚಿಕೊಂಡು ಶು ಬಗ್ಗೆ ಬರೆದುಕೊಂಡಿದ್ದಾರೆ.It all started with a simple wish: An orphan from Yunnan Province invited strangers online to attend his upcoming wedding, hoping to feel the love and support of the family he never had.But what happened next was beyond anything he could have imagined: Thousands of people from… pic.twitter.com/nSOnkzyZy5— Xie Feng 谢锋 (@AmbXieFeng) October 30, 2026 ಪೋಸ್ಟ್ನಲ್ಲಿ, ‘ಇದು ಆರಂಭವಾಗಿದ್ದು ಒಂದು ಸರಳ ಆಸೆಯಿಂದ. ಯುನ್ನಾನ್ ಪ್ರಾಂತ್ಯದ ಅನಾಥ ಯುವಕನೊಬ್ಬ, ತನಗೆ ಎಂದಿಗೂ ಸಿಗದಿದ್ದ ಕುಟುಂಬದ ಪ್ರೀತಿ ಮತ್ತು ಬೆಂಬಲವನ್ನು ಪಡೆಯುವ ಆಶಯದೊಂದಿಗೆ, ಆನ್ಲೈನ್ ಮೂಲಕ ಅಪರಿಚಿತರನ್ನು ತನ್ನ ಮದುವೆಗೆ ಆಹ್ವಾನಿಸಿದನು. ನಂತರ ನಡೆದದ್ದು ಅವನ ಕಲ್ಪನೆಗೂ ಮೀರಿದ ಸಂಗತಿಯಾಗಿತ್ತು. ದೇಶದಾದ್ಯಂತ ಸಾವಿರಾರು ಜನರು ಉಡುಗೊರೆಗಳು ಮತ್ತು ಶುಭಾಶಯಗಳೊಂದಿಗೆ ಅಲ್ಲಿಗೆ ಆಗಮಿಸಿದರು. ಈ ಮೂಲಕ, ಆ ಮದುವೆಯು ಮಾನವೀಯ ಬಾಂಧವ್ಯವನ್ನು ಸಾರುವ ಒಂದು ರಾಷ್ಟ್ರವ್ಯಾಪಿ ಸಂಭ್ರಮಾಚರಣೆಯಾಗಿ ಮಾರ್ಪಟ್ಟಿತು’ ಎಂದು ಬರೆದುಕೊಂಡಿದ್ದಾರೆ.