ಐಶ್ವರ್ಯಾ ರೈ ಸೌಂದರ್ಯದ ಹಿಂದಿದೆ ಸಿಂಪಲ್ ಸೂತ್ರ: ಆಹಾರ ಪದ್ಧತಿ ಇಲ್ಲಿದೆ
ತಮ್ಮ ಸೌಂದರ್ಯ ಹಾಗೂ ಫಿಟ್ನೆಸ್ನಿಂದ ಜಾಗತಿಕ ಮಟ್ಟದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿರುವ ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ ಅವರು ಅನುಸರಿಸುವ ಸರಳ ದಿನಚರಿ ಹಾಗೂ ಆಹಾರ ಶೈಲಿ ಸಾರ್ವಜನಿಕರ ಗಮನ ಸೆಳೆದಿದೆ.ಅನೇಕರು, ಐಶ್ವರ್ಯಾ ಅವರ ಸೌಂದರ್ಯ ಹಾಗೂ ದೈಹಿಕ ಫಿಟ್ನೆಸ್ಗೆ ಕಠಿಣ ಡಯೆಟ್ ಕಾರಣವಿರಬಹುದು ಎಂದು ಭಾವಿಸುತ್ತಾರೆ. ಆದರೆ, ಅವರು ಯಾವುದೇ ಕಠಿಣ ನಿಯಮಗಳ

ತಮ್ಮ ಸೌಂದರ್ಯ ಹಾಗೂ ಫಿಟ್ನೆಸ್ನಿಂದ ಜಾಗತಿಕ ಮಟ್ಟದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿರುವ ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್ ಅವರು ಅನುಸರಿಸುವ ಸರಳ ದಿನಚರಿ ಹಾಗೂ ಆಹಾರ ಶೈಲಿ ಸಾರ್ವಜನಿಕರ ಗಮನ ಸೆಳೆದಿದೆ.ಅನೇಕರು, ಐಶ್ವರ್ಯಾ ಅವರ ಸೌಂದರ್ಯ ಹಾಗೂ ದೈಹಿಕ ಫಿಟ್ನೆಸ್ಗೆ ಕಠಿಣ ಡಯೆಟ್ ಕಾರಣವಿರಬಹುದು ಎಂದು ಭಾವಿಸುತ್ತಾರೆ. ಆದರೆ, ಅವರು ಯಾವುದೇ ಕಠಿಣ ನಿಯಮಗಳನ್ನು ಪಾಲಿಸದೆ ಅತ್ಯಂತ ಸರಳವಾದ ಮನೆಯ ಊಟವನ್ನಷ್ಟೇ ನೆಚ್ಚಿಕೊಂಡಿರುವುದು ವಿಶೇಷ.ನಟಿ ಶಿಲ್ಪಾ ಶೆಟ್ಟಿ ಫಿಟ್ನೆಸ್ ಗುಟ್ಟು: ಮಿದುಳಿನ ಆರೋಗ್ಯಕ್ಕೆ ಈ ಟಿಪ್ಸ್ ಪಾಲಿಸಿಜೀರ್ಣಕ್ರಿಯೆ, ಕಾಂತಿಯುತ ಚರ್ಮಕ್ಕೆ ತುಪ್ಪದ ಜಾದೂ: ತಾರೆಯರ ಫಿಟ್ನೆಸ್ ರಹಸ್ಯ!ಐಶ್ವರ್ಯ ರೈ ಐಶ್ವರ್ಯ ರೈ ಅವರ ನಿತ್ಯದ ಆಹಾರ ಕ್ರಮ:ಪ್ರತಿದಿನ ಬೆಳಿಗ್ಗೆ ಉಗುರುಬೆಚ್ಚಗಿನ ನೀರಿಗೆ ಜೇನುತುಪ್ಪ ಹಾಗೂ ನಿಂಬೆರಸ ಬೆರೆಸಿ ಕುಡಿಯುವ ಮೂಲಕ ದಿನಚರಿ ಆರಂಭಿಸುತ್ತಾರೆ.ಬೆಳಗಿನ ಉಪಾಹಾರದಲ್ಲಿ ಬ್ರೌನ್ ಬ್ರೆಡ್ ಟೋಸ್ಟ್ ಹಾಗೂ ಓಟ್ಸ್ನಂತಹ ಪ್ರೋಟೀನ್ ಮತ್ತು ನಾರಿನಂಶ (ಫೈಬರ್) ಸಮೃದ್ಧವಾಗಿರುವ ಆಹಾರ ಸೇವಿಸುತ್ತಾರೆ.ಮಧ್ಯಾಹ್ನ ಸಂಪೂರ್ಣವಾಗಿ ಸಾಂಪ್ರದಾಯಿಕ ಮನೆಯೂಟವನ್ನೇ ಬಯಸುವ ಇವರ ತಟ್ಟೆಯಲ್ಲಿ ಬೇಳೆ ಸಾರು, ಚಪಾತಿ ಹಾಗೂ ಬೇಯಿಸಿದ ತರಕಾರಿಗಳು ಇರುತ್ತವೆ.ರಾತ್ರಿ ಕಡಿಮೆ ಊಟ ಮಾಡುವ ಅವರು, ಮೀನಿನ ಖಾದ್ಯ ಮತ್ತು ಬ್ರೌನ್ ರೈಸ್ ಸೇವಿಸುತ್ತಾರೆ.ದಿನದ ಮಧ್ಯದಲ್ಲಿ ಹಸಿವೆಯಾದಾಗ ಕರಿದ ತಿಂಡಿಗಳನ್ನು ತಿನ್ನುವ ಬದಲು ತಾಜಾ ಹಣ್ಣು, ಒಣಹಣ್ಣು ಹಾಗೂ ಹಣ್ಣಿನ ರಸ ಸೇವಿಸುತ್ತಾರೆ. ಜೊತೆಗೆ ದೇಹದಲ್ಲಿ ನೀರಿನಂಶವನ್ನು ಕಾಯ್ದುಕೊಳ್ಳಲು ದಿನವಿಡೀ ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿಯುತ್ತಾರೆ. ಜಿಮ್ಗಿಂತ ಯೋಗಕ್ಕೇ ಮೊದಲ ಆದ್ಯತೆ...ಐಶ್ವರ್ಯಾ ರೈ ಅವರು ಜಿಮ್ನಲ್ಲಿ ಮಾಡುವ ಕಠಿಣ ವ್ಯಾಯಾಮಗಳಿಗಿಂತ ಯೋಗಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ಮುಂಜಾನೆಯ ನಡಿಗೆ, ಜಾಗಿಂಗ್ ಹಾಗೂ ದಿನಕ್ಕೆ ಸುಮಾರು 45 ನಿಮಿಷಗಳ ಯೋಗಾಭ್ಯಾಸ ಇವರ ನಿತ್ಯದ ದೈಹಿಕ ಚಟುವಟಿಕೆಯ ಭಾಗವಾಗಿದೆ. ಇದರೊಂದಿಗೆ ಅಗತ್ಯಕ್ಕೆ ತಕ್ಕಷ್ಟು ಕಾರ್ಡಿಯೋ ವ್ಯಾಯಾಮವನ್ನೂ ಮಾಡುತ್ತಾರೆ.ಎಣ್ಣೆಯುಕ್ತ ಹಾಗೂ ಜಂಕ್ಫುಡ್ಗಳಿಂದ ದೂರವಿದ್ದು, ಪೋಷಕಾಂಶಯುಕ್ತ ಆಹಾರ ಸೇವನೆ ಮತ್ತು ನಿಯಮಿತ ಯೋಗಾಭ್ಯಾಸವೇ ನಟಿ ಐಶ್ವರ್ಯ ರೈ ಬಚ್ಚನ್ ಅವರ ಸದಾಕಾಲದ ಐಶ್ವರ್ಯಾ ಹಾಗೂ ಆರೋಗ್ಯದ ರಹಸ್ಯವಾಗಿದೆ.