ಭಾರತದಲ್ಲಿ ಚಿನ್ನದ ಬೇಡಿಕೆ ಕುಸಿತ: ವಿಶ್ವ ಚಿನ್ನ ಸಮಿತಿ ವರದಿಯಲ್ಲೇನಿದೆ?
ಮುಂಬೈ: ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಭಾರತದ ಚಿನ್ನದ ಬೇಡಿಕೆ ಭಾರಿ ಕುಸಿತ ಕಂಡಿದೆ ಎಂದು ವಿಶ್ವ ಚಿನ್ನ ಸಮಿತಿ (ಡಬ್ಲ್ಯುಜಿಸಿ) ವರದಿ ತಿಳಿಸಿದೆ.ಏರುತ್ತಿರುವ ಆಮದು ಸುಂಕ, ಗಗನಕ್ಕೇರುತ್ತಿರುವ ಬೆಲೆ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ಚಿನ್ನದ ಖರೀದಿಯನ್ನು ಒಂದು ವರ್ಷ ಮುಂದೂಡುವಂತೆ ಮನವಿ ಮಾಡಿರುವುದರ ಪರಿಣಾಮವಾಗಿ ಬೇಡಿಕೆಯಲ್ಲಿ ಶೇ 29ರಷ್ಟು ಇಳಿಕೆಯಾಗ

ಮುಂಬೈ: ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಭಾರತದ ಚಿನ್ನದ ಬೇಡಿಕೆ ಭಾರಿ ಕುಸಿತ ಕಂಡಿದೆ ಎಂದು ವಿಶ್ವ ಚಿನ್ನ ಸಮಿತಿ (ಡಬ್ಲ್ಯುಜಿಸಿ) ವರದಿ ತಿಳಿಸಿದೆ.ಏರುತ್ತಿರುವ ಆಮದು ಸುಂಕ, ಗಗನಕ್ಕೇರುತ್ತಿರುವ ಬೆಲೆ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ಚಿನ್ನದ ಖರೀದಿಯನ್ನು ಒಂದು ವರ್ಷ ಮುಂದೂಡುವಂತೆ ಮನವಿ ಮಾಡಿರುವುದರ ಪರಿಣಾಮವಾಗಿ ಬೇಡಿಕೆಯಲ್ಲಿ ಶೇ 29ರಷ್ಟು ಇಳಿಕೆಯಾಗಿ 162.5 ಟನ್ಗಳಿಗೆ ತಲುಪಿದೆ ವರದಿ ಹೇಳಿದೆ. ಈ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.ಬೇಡಿಕೆ ಕುಸಿತ, ಆದರೆ ಮೌಲ್ಯದಲ್ಲಿ ಏರಿಕೆ:2025ರ ಇದೇ ತ್ರೈಮಾಸಿಕದಲ್ಲಿ 229.8 ಟನ್ಗಳಷ್ಟಿದ್ದ ಚಿನ್ನದ ಬೇಡಿಕೆ, 2026ರ ಜುಲೈ-ಸೆಪ್ಟೆಂಬರ್ ಅವಧಿಯಲ್ಲಿ 162.5 ಟನ್ಗಳಿಗೆ (ಶೇ. 29ರಷ್ಟು) ಇಳಿಕೆಯಾಗಿದೆ. ಈ ವರ್ಷದ ಪೂರ್ಣ ಬೇಡಿಕೆ 625-675 ಟನ್ಗಳಷ್ಟಿದೆ ಎಂದು ಅಂದಾಜಿಸಲಾಗಿದೆ. ಆದಾಗ್ಯೂ, ಚಿನ್ನದ ಬೇಡಿಕೆ ಮೌಲ್ಯವು ಶೇ 3 ರಷ್ಟು ಹೆಚ್ಚಾಗಿ ₹2,41,900 ಕೋಟಿಗೆ ತಲುಪಿದೆ. ಕಳೆದ ವರ್ಷದ ಇದು ₹2,35,090 ಕೋಟಿಯಷ್ಟಿತ್ತು. ಕರ್ನಾಟಕದಲ್ಲಿ ಜನಸ್ನೇಹಿ ಇ-ಆಡಳಿತ ಜಾರಿ: 2 ದಶಕದ ಹಾದಿ ದೇಶಕ್ಕೆ ಮಾದರಿವಿಶ್ಲೇಷಣೆ: ಕೌಶಲ ಅಭಿವೃದ್ಧಿಗೆ ಸಮಾವೇಶ ಅಲ್ಲ, ಶಾಸನಬದ್ಧ ಸುಧಾರಣೆ ಬೇಕುಗಗನಕ್ಕೇರಿದ ಚಿನ್ನದ ಬೆಲೆ:ಈ ತ್ರೈಮಾಸಿಕದಲ್ಲಿ ಚಿನ್ನದ ಸರಾಸರಿ ಬೆಲೆ ಔನ್ಸ್ಗೆ 4,262 ಡಾಲರ್ (10 ಗ್ರಾಂಗೆ ₹1,48,891) ಇತ್ತು. ಕಳೆದ ವರ್ಷ ಇದೇ ಅವಧಿಯಲ್ಲಿ ಇದರ ಬೆಲೆ 3,457 ಡಾಲರ್ (10 ಗ್ರಾಂಗೆ ₹1,02,287) ಇತ್ತು. ಆಭರಣ ಮತ್ತು ಹೂಡಿಕೆ ವಲಯದ ಸ್ಥಿತಿಗತಿ:*ಆಭರಣಗಳ ಬೇಡಿಕೆ: ದೇಶದಲ್ಲಿ ಒಟ್ಟು ಆಭರಣಗಳ ಬೇಡಿಕೆಯು 2025 ರ ಇದೇ ತ್ರೈಮಾಸಿಕದಲ್ಲಿ 125 ಟನ್ಗಳಿಗೆ ಹೋಲಿಸಿದರೆ ಶೇ 20 ರಷ್ಟು ಕುಸಿದು 99.9 ಟನ್ಗಳಿಗೆ ತಲುಪಿದೆ. ಆದರೆ ಮೌಲ್ಯದ ದೃಷ್ಟಿಯಿಂದ ಶೇ 16 ರಷ್ಟು ಹೆಚ್ಚಾಗಿ ₹1,48,700 ಕೋಟಿಗೆ ತಲುಪಿದೆ. * ನಾಣ್ಯ ಮತ್ತು ಗಟ್ಟಿ: ಬೇಡಿಕೆ ಶೇ 40ರಷ್ಟು ಕುಸಿದಿದ್ದು, 91.6 ಟನ್ನಿಂದ 55 ಟನ್ಗೆ ಇಳಿಕೆಯಾಗಿದೆ.* ಗೋಲ್ಡ್ ಇಟಿಎಫ್ (ಎಕ್ಸ್ಚೇಂಜ್-ಟ್ರೇಡೆಡ್ ಫಂಡ್ಗಳು): ಬೇಡಿಕೆಯಲ್ಲಿ ಶೇ 50ರಷ್ಟು ಭಾರಿ ಇಳಿಕೆ ಕಂಡುಬಂದಿದ್ದು, 5.3 ಟನ್ಗಳಿಗೆ ತಲುಪಿದೆ. ಕಳೆದ ವರ್ಷ ಇದು 10.7 ಟನ್ಗಳಷ್ಟಿತ್ತು .ಆಮದು, ಮರುಬಳಕೆ ಮತ್ತು ಆರ್ಬಿಐ ನಡೆ:ದೇಶದಲ್ಲಿ ನಿವ್ವಳ ಚಿನ್ನದ ಆಮದು ಶೇ. 46ರಷ್ಟು ಕುಸಿದು 114.1 ಟನ್ಗೆ ಇಳಿದಿದೆ. ಹಳೆಯ ಚಿನ್ನದ ಮರುಬಳಕೆ ಕೂಡ ಶೇ 12ರಷ್ಟು ಕಡಿಮೆಯಾಗಿ 19.2 ಟನ್ ದಾಖಲಾಗಿದೆ. 2025 ರ ತ್ರೈಮಾಸಿಕದಲ್ಲಿ 0.2 ಟನ್ಗಳಿಗೆ ಹೋಲಿಸಿದರೆ ಭಾರತೀಯ ರಿಸರ್ವ್ ಬ್ಯಾಂಕ್ 2026ರ ಮೂರನೇ ತ್ರೈಮಾಸಿಕದಲ್ಲಿ ಚಿನ್ನವನ್ನು ಖರೀದಿಸಲಿಲ್ಲ ಎಂದು ವರದಿ ತಿಳಿಸಿದೆ.ಮುಂದಿನ ನಿರೀಕ್ಷೆಗಳೇನು?ಡಬ್ಲ್ಯುಜಿಸಿ ಭಾರತದ ಪ್ರಾದೇಶಿಕ ಸಿಇಒ ಸಚಿನ್ ಜೈನ್ ಅವರ ಪ್ರಕಾರ, ಗ್ರಾಹಕರು ಹೆಚ್ಚಿನ ಬೆಲೆಗೆ ಹೊಂದಿಕೊಳ್ಳುತ್ತಿದ್ದು, ಹಳೆಯ ಚಿನ್ನವನ್ನು ಬದಲಾಯಿಸಿಕೊಳ್ಳುವ ಯೋಜನೆಗಳು ಹಾಗೂ ಕಡಿಮೆ ತೂಕದ ಆಭರಣಗಳ ಖರೀದಿಗೆ ಒಲವು ತೋರುತ್ತಿದ್ದಾರೆ. ದಕ್ಷಿಣ ಭಾರತದಲ್ಲಿ ಹಬ್ಬಗಳು ಹಾಗೂ ಮದುವೆ ಋತು ಆರಂಭವಾಗುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಬೇಡಿಕೆ ಹೆಚ್ಚಾಗುವ ನಿರೀಕ್ಷೆಯಿದೆ. 2026ರ ಸಂಪೂರ್ಣ ವರ್ಷದ ಚಿನ್ನದ ಬೇಡಿಕೆ 625 ರಿಂದ 675 ಟನ್ಗಳಷ್ಟಿರಬಹುದು ಎಂದು ಅಂದಾಜಿಸಲಾಗಿದೆ.ಸಚಿನ್ ಜೈನ್, ಭಾರತದ ಪ್ರಾದೇಶಿಕ ಸಿಇಒ, ಡಬ್ಲ್ಯುಜಿಸಿ ಮುಂದಿನ ದಿನಗಳಲ್ಲಿ ಬರುವ ಹಬ್ಬಗಳು, ಮದುವೆ ಋತು ಚಿನ್ನಕ್ಕೆ ಬೇಡಿಕೆಯನ್ನು ಹೆಚ್ಚಿಸುವ ನಿರೀಕ್ಷೆಯಿದೆ.ಆಭರಣ ಪ್ರಿಯರಿಗೆ ಸಿಹಿ ಸುದ್ದಿ: ಚಿನ್ನ–ಬೆಳ್ಳಿ ದರ ಕುಸಿತ, ಇಲ್ಲಿದೆ ಮಾಹಿತಿ ಮಲ-ಮೂತ್ರ ತಡೆಯುವ ಅಭ್ಯಾಸ ಇದೆಯೇ? ಈ ಆರೋಗ್ಯ ಸಮಸ್ಯೆ ತಪ್ಪಿದ್ದಲ್ಲ!