ಸತ್ಯ–ಧರ್ಮದ ಮಾರ್ಗದಲ್ಲಿ ನಡೆಯಿರಿ: ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ
ಸರಗೂರು: ಮನುಷ್ಯ ಜೀವನದಲ್ಲಿ ಧರ್ಮ ಪಾಲಿಸುವುದರೊಂದಿಗೆ ಸಮಾಜದ ಒಳಿತಿಗಾಗಿಯೂ ಕೆಲಸ ಮಾಡುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಆ ಮೂಲಕ ಸತ್ಯ, ಧರ್ಮದ ಮಾರ್ಗದಲ್ಲಿ ನಡೆಯಬೇಕು ಎಂದು ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು.ಪಟ್ಟಣದ ಶಿವರಾತ್ರಿ ಶಿವಾನುಭವ ಮಂದಿರದಲ್ಲಿ ಸೋಮವಾರ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರ ಭಕ್ತ ಬಳಗ, ತಾಲ್ಲೂಕು ಅಖಿ

ಸರಗೂರು: ಮನುಷ್ಯ ಜೀವನದಲ್ಲಿ ಧರ್ಮ ಪಾಲಿಸುವುದರೊಂದಿಗೆ ಸಮಾಜದ ಒಳಿತಿಗಾಗಿಯೂ ಕೆಲಸ ಮಾಡುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಆ ಮೂಲಕ ಸತ್ಯ, ಧರ್ಮದ ಮಾರ್ಗದಲ್ಲಿ ನಡೆಯಬೇಕು ಎಂದು ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು.ಪಟ್ಟಣದ ಶಿವರಾತ್ರಿ ಶಿವಾನುಭವ ಮಂದಿರದಲ್ಲಿ ಸೋಮವಾರ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರ ಭಕ್ತ ಬಳಗ, ತಾಲ್ಲೂಕು ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ, ವಿವಿಧ ಸಂಘ-ಸಂಸ್ಥೆಗಳು, ಜೆಎಸ್ಎಸ್ ಶಿಕ್ಷಣ ಸಂಸ್ಥೆಗಳು ಜಂಟಿಯಾಗಿ ಆಯೋಜಿಸಿದ್ದ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರ 111ನೇ ಜಯಂತಿ, ಮಹಾಸಭಾದ ತಾಲ್ಲೂಕು ಘಟಕದ ಸಭಾಭವನದ ಭೂಮಿಪೂಜೆ ಕಾರ್ಯಕ್ರಮದ ಧಾರ್ಮಿಕ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.ಬಿಡುಗಲು ಪಡುವಲು ವಿರಕ್ತಮಠದ ಮಹದೇವ ಸ್ವಾಮೀಜಿ, ದಡದಹಳ್ಳಿ ಮಠದ ಷಡಕ್ಷರಿ ಸ್ವಾಮೀಜಿ ಮಾತನಾಡಿ, ಶ್ರೀಗಳು ತಮ್ಮ ಜೀವನವನ್ನು ಸಮಾಜದ ಒಳಿತಿಗಾಗಿ ಮುಡಿಪಾಗಿಟ್ಟು, ಜನರಲ್ಲಿ ಸಂಸ್ಕಾರ, ಸತ್ಯನಿಷ್ಠೆ ಮತ್ತು ಧಾರ್ಮಿಕ ಮೌಲ್ಯಗಳನ್ನು ಬೆಳೆಸುವ ಕೆಲಸ ಮಾಡಿದ್ದಾರೆ. ಇಂತಹ ಮಹನೀಯರ ಸೇವೆಯನ್ನು ಸಮಾಜ ಸದಾ ಸ್ಮರಿಸಬೇಕು. ಅವರ ಆದರ್ಶಗಳನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ಸಮಾಜ ಸೇವಕ ವರುಣ್ ಮಹೇಶ್ ಮಾತನಾಡಿ, ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಸತ್ಯ ಮತ್ತು ಧರ್ಮವನ್ನು ಅಳವಡಿಸಿಕೊಂಡು, ಸಮಾಜದ ಒಳಿತಿಗಾಗಿ ಕೈಜೋಡಿಸಬೇಕು. ಮಹಾತ್ಮರು ಹಾಗೂ ಪೂಜ್ಯ ಸ್ವಾಮೀಜಿಗಳು ತೋರಿಸಿಕೊಟ್ಟ ಸನ್ಮಾರ್ಗದಲ್ಲಿ ನಡೆದು, ಉತ್ತಮ ಸಂಸ್ಕಾರ ಹೊಂದಿದ ಸಮಾಜವನ್ನು ನಿರ್ಮಿಸುವ ಸಂಕಲ್ಪ ಮಾಡೋಣ ಎಂದು ತಿಳಿಸಿದರು.ಮಹಾಸಭಾದ ಮಾಜಿ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಶಿವಮೂರ್ತಿ ಕಾನ್ಯ, ಮಹಾಸಭಾದ ತಾಲ್ಲೂಕು ಅಧ್ಯಕ್ಷ ಕೆ.ಎಸ್.ವೀರಭದ್ರಪ್ಪ, ಮಹಾಸಭಾದ ಕೋಶಾಧ್ಯಕ್ಷ ಸಿ.ಕೆ.ಗಿರೀಶ್, ಬಸವ ಬಳಗಗಳ ಒಕ್ಕೂಟದ ಮಾಜಿ ಜಿಲ್ಲಾ ಘಟಕದ ಅಧ್ಯಕ್ಷ ಪ್ರದೀಪ್ಕುಮಾರ್, ಜೆಎಸ್ಎಸ್ ಶಿಕ್ಷಣ ಸಂಸ್ಥೆಗಳ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಸುಧಾ ಮೃತ್ಯುಂಜಯಪ್ಪ, ರಾಜೇಂದ್ರ ಮಹಾಸ್ವಾಮಿಗಳ ಭಕ್ತ ಬಳಗದ ಗೌರವಾಧ್ಯಕ್ಷ ಡಿ.ಜಿ.ಶಿವರಾಜು, ಅಧ್ಯಕ್ಷ ಮಹೇಶ್, ಪ್ರಧಾನ ಕಾರ್ಯದರ್ಶಿ ಬಾಡಗ ಸಿದ್ದಪ್ಪ ಮಾತನಾಡಿದರು.ಕಿರಿಯ ತೋಂಟದಾರ್ಯಸ್ವಾಮೀಜಿ, ಬೀಚನಹಳ್ಳಿಪುರ ಮಠದ ಜಕ್ಕಹಳ್ಳಿ ಮಠದ ಶಿವಕುಮಾರಸ್ವಾಮೀಜಿ, ಪುರ ಮಠದ ಚಂದ್ರಶೇಖರ್ಸ್ವಾಮೀಜಿ, ಸೇರಿದಂತೆ ವಿವಿಧ ಮಠಾಧೀಶರು ಆಶೀರ್ವಚನ ನೀಡಿದರು.ರೈಟ್ಸ್ ಸಂಸ್ಥೆ ಜನರಲ್ ಮ್ಯಾನೇಜರ್ ಎಂ.ಜಿ.ಸುಧೀಪ್, ಕೆಂಡಗಣ್ಣೇಶ್ವರಸ್ವಾಮಿ ಗದ್ದಿಗೆ ಧರ್ಮದರ್ಶಿಗಳಾದ ಬಿ.ಎಸ್.ಮಹದೇವಪ್ಪ, ಬಸವ ಬಳಗದ ತಾಲ್ಲೂಕು ಅಧ್ಯಕ್ಷ ಹಂಚೀಪುರ ಗಣಪತಿ, ಸಾಹಿತ್ಯ ಪರಿಷತ್ ಅಧ್ಯಕ್ಷ ಗುರುಸ್ವಾಮಿ, ಮುಖಂಡರಾದ ಮಾದಪ್ಪ, ಮಹದೇವಪ್ಪ, ಚನ್ನಮಲ್ಲು, ಮಹೇಶ್, ಜಯಕುಮಾರ್, ನಿಜಗುಣ, ಆನಂದಪ್ಪ, ಕುಮಾರಸ್ವಾಮಿ, ನಾಗರಾಜಪ್ಪ, ಚಂದ್ರ, ಶೇಖರ್, ಪುಟ್ಟಮಲ್ಲಪ್ಪ, ಬಸವರಾಜು, ಜೆಎಸ್ಎಸ್ ಕಾಲೇಜಿನ ಪ್ರಾಂಶುಪಾಲ ಮಹದೇವಸ್ವಾಮಿ, ಜಯಣ್ಣ, ಹಂಚೀಪುರ ಗಣಪತಿ, ಕೃಷ್ಣಮೂರ್ತಿ ಸೇರಿದಂತೆ ಭಕ್ತ ಬಳಗದ ಪದಾಧಿಕಾರಿಗಳು, ಜೆಎಸ್ಎಸ್ ಶಾಲಾ-ಕಾಲೇಜು ಶಿಕ್ಷಕರು, ಇನ್ನಿತರರು ಹಾಜರಿದ್ದರು.ಇದಕ್ಕೂ ಮುನ್ನ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರ ಪುತ್ಥಳಿಯನ್ನು ಬೆಳ್ಳಿ ರಥದಲ್ಲಿ ಕೂರಿಸಿ, ನಂದಿಧ್ವಜ, ಸತ್ತಿಗೆ ಪೂಜೆ, ಮಂಗಳವಾದ್ಯ, ಹಳೆ ಹೆಗ್ಗುಡಿಲು ನೀಲಕಂಠ ತಂಡದಿಂದ ವೀರಗಾಸೆ ನೃತ್ಯ, ಕರಡಿ ಮದ್ದಳೆ, ನಗರಿ, ಗಾರುಡಿಗೊಂಬೆಯೊಂದಿಗೆ ಮೆರವಣಿಗೆ ಮಾಡಲಾಯಿತು. ಮೆರವಣಿಗೆ ಜೆಎಸ್ಎಸ್ ಶಿವಾನುಭವ ಮಂಟಪದಿಂದ ಹೊರಟು ಮಹಾವೀರ ವೃತ್ತ ತಲುಪಿ, 1ನೇ ಮುಖ್ಯ ರಸ್ತೆ ಮೂಲಕ ಸಂತೆಮಾಸ್ತಮ್ಮನ ದೇವಸ್ಥಾನದ ಮೂಲಕ ಮತ್ತೆ ಜೆಎಸ್ಎಸ್ ಶಿವಾನುಭವ ಮಂಟಪದಲ್ಲಿ ಕೊನೆಗೊಂಡಿತು.ಸಂಸ್ಕಾರಕ್ಕೆ ಮಹತ್ವವಿದೆಮನುಷ್ಯನ ಜೀವನದಲ್ಲಿ ಧರ್ಮ ಮತ್ತು ಸಂಸ್ಕಾರಕ್ಕೆ ಅತ್ಯಂತ ಮಹತ್ವದ ಸ್ಥಾನವಿದೆ. ಧರ್ಮವೆಂದರೆ ಕೇವಲ ಆಚರಣೆಗಳಿಗೆ ಸೀಮಿತವಾಗಿರುವುದಲ್ಲ, ಬದಲಿಗೆ ಸತ್ಯ, ನ್ಯಾಯ, ಪ್ರಾಮಾಣಿಕತೆ, ಮಾನವೀಯತೆ ಹಾಗೂ ಪರೋಪಕಾರದ ಮಾರ್ಗದಲ್ಲಿ ನಡೆಯುವುದೇ ನಿಜವಾದ ಧರ್ಮ. ಧರ್ಮದ ಪಾಲನೆಯೊಂದಿಗೆ ಸಮಾಜದ ಒಳಿತಿಗಾಗಿ ಕೆಲಸ ಮಾಡಬೇಕು. ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಮತ್ತು ಪರಸ್ಪರ ವಿಶ್ವಾಸ ಮೂಡಬೇಕಾದರೆ ಪ್ರತಿಯೊಬ್ಬರೂ ಸತ್ಯ ಮತ್ತು ಧರ್ಮದ ಮಾರ್ಗದಲ್ಲಿ ನಡೆಯಬೇಕು ಎಂದು ಸುತ್ತೂರು ಶ್ರೀ ಹೇಳಿದರು.261103-38-758100008