BBK13: ಮನೆಯಿಂದ ಬಂದ ಪತ್ರ ನೋಡುತ್ತಿದ್ದಂತೆ ಕಣ್ಣೀರಿಟ್ಟ ಸ್ಪರ್ಧಿಗಳು
ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 13 ಆರಂಭವಾಗಿ 57 ದಿನಗಳು ಪೂರೈಸಿವೆ. ಇಷ್ಟು ದಿನ ಜಗಳ, ಕಟು ಮಾತುಗಳು ಹಾಗೂ ಟಾಸ್ಕ್ಗಳಲ್ಲಿ ನಿರತರಾಗಿದ್ದ ಸ್ಪರ್ಧಿಗಳು ಇದೀಗ ಕಣ್ಣೀರಿಟ್ಟಿದ್ದು, ಕುಟುಂಬಸ್ಥರಿಂದ ಬಂದಿರುವ ಪತ್ರವೇ ಇದಕ್ಕೆ ಕಾರಣವಾಗಿದೆ.ಕಲರ್ಸ್ ಕನ್ನಡ ವಾಹಿನಿ ಬಿಡುಗಡೆ ಮಾಡಿರುವ ಪ್ರೋಮೊದಲ್ಲಿ, ಬಿಗ್ ಬಾಸ್ ಸ್ಪರ್ಧಿಗಳಿಗೆ ದೊಡ್ಡ ಉಡುಗೊರೆಯೊ

ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 13 ಆರಂಭವಾಗಿ 57 ದಿನಗಳು ಪೂರೈಸಿವೆ. ಇಷ್ಟು ದಿನ ಜಗಳ, ಕಟು ಮಾತುಗಳು ಹಾಗೂ ಟಾಸ್ಕ್ಗಳಲ್ಲಿ ನಿರತರಾಗಿದ್ದ ಸ್ಪರ್ಧಿಗಳು ಇದೀಗ ಕಣ್ಣೀರಿಟ್ಟಿದ್ದು, ಕುಟುಂಬಸ್ಥರಿಂದ ಬಂದಿರುವ ಪತ್ರವೇ ಇದಕ್ಕೆ ಕಾರಣವಾಗಿದೆ.ಕಲರ್ಸ್ ಕನ್ನಡ ವಾಹಿನಿ ಬಿಡುಗಡೆ ಮಾಡಿರುವ ಪ್ರೋಮೊದಲ್ಲಿ, ಬಿಗ್ ಬಾಸ್ ಸ್ಪರ್ಧಿಗಳಿಗೆ ದೊಡ್ಡ ಉಡುಗೊರೆಯೊಂದನ್ನು ನೀಡುವ ಜೊತೆಗೆ ಅಷ್ಟೇ ಕಠಿಣ ಟ್ವಿಸ್ಟ್ ಕೂಡ ನೀಡಿದ್ದಾರೆ. ಹಲವು ದಿನಗಳಿಂದ ಕುಟುಂಬಸ್ಥರಿಂದ ದೂರವಿರುವ ಸ್ಪರ್ಧಿಗಳಿಗೆ ಮನೆಯವರು ಕಳುಹಿಸಿರುವ ಪತ್ರಗಳನ್ನು ಪಡೆದುಕೊಳ್ಳಲು ಬಿಗ್ ಬಾಸ್ ವಿಶೇಷ ಟಾಸ್ಕ್ ಕೊಟ್ಟಿದ್ದಾರೆ. View this post on Instagram ಮನೆಯ ಅಂಚೆಪೆಟ್ಟಿಗೆಯಲ್ಲಿ ಕುಟುಂಬದವರು ಬರೆದಿರುವ ಪ್ರೀತಿಯ ಪತ್ರಗಳು ಲಭ್ಯವಿದ್ದು, ಅವುಗಳನ್ನು ಪಡೆದುಕೊಳ್ಳುವ ಅವಕಾಶವನ್ನು ಸ್ಪರ್ಧಿಗಳಿಗೆ ನೀಡಲಾಗಿದೆ. ಆದರೆ, ಅಂಚೆ ಪೆಟ್ಟಿಗೆಯಲ್ಲಿರುವ ಪತ್ರಗಳು ಆರಂಭದಲ್ಲಿ ಖಾಲಿಯಿದ್ದು, ಸ್ಪರ್ಧಿಗಳು ನೀಡಿದ ಟಾಸ್ಕ್ ಗೆಲ್ಲುವ ಮೂಲಕವೇ ಆ ಪತ್ರಗಳಲ್ಲಿರುವ ಸಂದೇಶವನ್ನು ಪಡೆದುಕೊಳ್ಳಬೇಕಿದೆ.ಸದ್ಯ ಖಾಲಿ ಪತ್ರವನ್ನು ನೋಡಿದ ಸ್ಪರ್ಧಿಗಳು ಕಣ್ಣೀರಿಟ್ಟಿದ್ದಾರೆ. ದಯವಿಟ್ಟು ಪತ್ರ ಕಳುಹಿಸಿ ಕೊಡಿ ಬಿಗ್ ಬಾಸ್ ಎಂದು ಬೇಡಿಕೊಂಡಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಧನುಷ್, ಆಸಿಯಾ, ಗಗನ್, ತಾಂಡವ್, ಸೌಂದರ್ಯ, ಯಶಸ್, ಗಾನವಿ, ಸೋನಿಕಾ, ಜಗದೀಶ್, ಕಿರಣ್ ಹಾಗೂ ಪ್ರಶಾಂತ್ ಉಳಿದುಕೊಂಡಿದ್ದಾರೆ.