ಹುಣಸೂರಿನಲ್ಲಿ ರಾಜ್ಯೋತ್ಸವ ಕಾರ್ಯಕ್ರಮ ಅಧ್ವಾನ| ಶಾಸಕರ ನಿರ್ಲಕ್ಷ್ಯ ಕಾರಣ: ಆರೋಪ
ಹುಣಸೂರು: ರಾಷ್ಟ್ರೀಯ ಹಬ್ಬಗಳ ಸಮಿತಿ ವತಿಯಿಂದ ನಡೆದ 71ನೇ ರಾಜ್ಯೋತ್ಸವ ಕಾರ್ಯಕ್ರಮ ಅಧ್ವಾನವಾಗಲು ಶಾಸಕರ ನಿರ್ಲಕ್ಷ್ಯವೇ ಕಾರಣ. ಕಾರ್ಯಕ್ರಮ ಸಮರ್ಪಕವಾಗಿ ನಡೆಯದ ಬಗ್ಗೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ವಕ್ತಾರ ಪುಟ್ಟರಾಜ್ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಷ್ಟ್ರೀಯ ಹಬ್ಬಗಳ ಸಮಿತಿ ಅಧ್ಯಕ್ಷ ಕ್ಷೇತ್ರದ ಶಾಸಕ ಜ

ಹುಣಸೂರು: ರಾಷ್ಟ್ರೀಯ ಹಬ್ಬಗಳ ಸಮಿತಿ ವತಿಯಿಂದ ನಡೆದ 71ನೇ ರಾಜ್ಯೋತ್ಸವ ಕಾರ್ಯಕ್ರಮ ಅಧ್ವಾನವಾಗಲು ಶಾಸಕರ ನಿರ್ಲಕ್ಷ್ಯವೇ ಕಾರಣ. ಕಾರ್ಯಕ್ರಮ ಸಮರ್ಪಕವಾಗಿ ನಡೆಯದ ಬಗ್ಗೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ವಕ್ತಾರ ಪುಟ್ಟರಾಜ್ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಷ್ಟ್ರೀಯ ಹಬ್ಬಗಳ ಸಮಿತಿ ಅಧ್ಯಕ್ಷ ಕ್ಷೇತ್ರದ ಶಾಸಕ ಜಿ.ಡಿ.ಹರೀಶ್ ಗೌಡ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಒಂದೂ ಸಭೆ ನಡೆಸಿಲ್ಲ. ಅಧಿಕಾರಿಗಳ ಹೆಗಲಿಗೆ ಎಲ್ಲ ಜವಾಬ್ದಾರಿ ಹಾಕಿದರು. ಅಧಿಕಾರಿ ಮತ್ತು ಸಂಘ ಸಂಸ್ಥೆಗಳ ಸಭೆ ನಡೆಸಿ ಪ್ರತಿಯೊಬ್ಬರಿಗೂ ಒಂದೊಂದು ಕೆಲಸ ಮತ್ತು ಜವಾಬ್ದಾರಿ ನಿಗದಿಗೊಳಿಸದೆ ಕೈ ಚೆಲ್ಲಿದ ಪರಿಣಾಮ ಕಾರ್ಯಕ್ರಮ ಯಶಸ್ವಿಗೊಳ್ಳಲಿಲ್ಲ ಎಂದು ಆರೋಪಿಸಿದರು.ರಂಗನಾಥ ಬಡಾವಣೆಯಲ್ಲಿ ಭುವನೇಶ್ವರಿಗೆ ಪುಷ್ಪ ನಮನ ಸಲ್ಲಿಸಿದ ಶಾಸಕರು ಮೆರವಣಿಗೆಯಲ್ಲಿ ಭಾಗವಹಿಸದೆ ಕಾರ್ಯಕ್ರಮದಿಂದ ನಿರ್ಗಮಿಸುತ್ತಿದ್ದಂತೆ ಅಧಿಕಾರಿಗಳು ಹಂತ ಹಂತವಾಗಿ ಮೆರವಣಿಗೆಯಿಂದ ನಿರ್ಗಮಿಸಿದರು. ಅಂತಿಮವಾಗಿ ಸ್ಥಳೀಯ ಸಾರ್ವಜನಿಕರು ಬೆರಳೆಣಿಕೆಯಷ್ಟಿದ್ದರು. ನಂತರ ಅಧಿಕಾರಿಗಳು ಮಾತ್ರ ಉಳಿದರು. ಅವರು ಮಾಡಿದ ತಪ್ಪಿನಿಂದಾಗಿ ರಾಜ್ಯೋತ್ಸವ ತನ್ನ ಘನತೆ ಕಳೆದುಕೊಂಡಿದೆ. ಸಂಜೆ ಸಾಂಸ್ಕೃತಿಕ ಕಾರ್ಯಕ್ರಮದ ಜವಾಬ್ದಾರಿ ಹೊತ್ತಿದ್ದ ನಗರಸಭೆ ಆಯುಕ್ತರು ಸಮರ್ಪಕ ವ್ಯವಸ್ಥೆ ಕೈಗೊಳ್ಳುವಲ್ಲಿ ವಿಫಲವಾಗಿ, ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಅವ್ಯವಸ್ಥೆಯಿಂದ ಕೂಡಿತ್ತು ಎಂದರು.ರಾಜ್ಯೋತ್ಸವ ಮೆರವಣಿಗೆ ತೆರಳುವ ಮಾರ್ಗಕ್ಕೆ ಶಾಸಕರು ಮಣ್ಣು ಸುರಿಸಿದ ಕಾರಣ ವಾಹನ ಸಂಚಾರದಿಂದ ದೂಳು ಎದ್ದು ಜನ ಕಿರಿಕಿರಿ ಅನುಭವಿಸಿದರು. ಈ ಎಲ್ಲವನ್ನು ತಿಳಿಯದ ಶಾಸಕರು ಕೇವಲ ಪ್ರಚಾರಕ್ಕೆ ವೇದಿಕೆಯಲ್ಲಿ ಆಡಳಿತಾರೂಢ ಪಕ್ಷವನ್ನು ನಿಂದಿಸುವ ಕೆಲಸ ನಿರಂತರವಾಗಿ ನಡೆಸಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು. ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರದಿಂದ ಎಷ್ಟು ಅನುದಾನ ಬಿಡುಗಡೆ ಆಗಿದೆ, ಎಷ್ಟು ಬಳಸಿದ್ದಾರೆ ಎಂಬ ಮಾಹಿತಿ ನಮ್ಮಲ್ಲಿ ಇದ್ದು ಸರಿಯಾದ ಸಮಯಕ್ಕೆ ಸಾರ್ವಜನಿಕರ ಗಮನಕ್ಕೆ ತರಲಿದ್ದೇವೆ ಎಂದರು.ಮೀಸಲಾತಿ: ಕಾಂಗ್ರೆಸ್ ಪಕ್ಷದ ಮುಖಂಡ ಚಿಕ್ಕಸ್ವಾಮಿ ಮಾತನಾಡಿ, ಶಾಸಕರು ಕ್ಷೇತ್ರದಲ್ಲಿ ಜಿ.ಪಂ. ಮೀಸಲಾತಿ ಕರಡು ಪಟ್ಟಿಯಲ್ಲಿ ಎಸ್.ಸಿ. ಕ್ಷೇತ್ರ ಕೈ ಬಿಟ್ಟ ಬಗ್ಗೆ ಬೃಹತ್ ಪ್ರತಿಭಟನೆ ನಡೆಸಿದರು. ಆದರೆ ಈ ಸಂಬಂಧ ಸರ್ಕಾರದ ಹಂತದಲ್ಲಿ ಸಂಬಂಧಿಸಿದ ಸಚಿವ ಅಥವಾ ಕಾರ್ಯದರ್ಶಿಗಳನ್ನು ಭೇಟಿ ಮಾಡಿ ಕ್ಷೇತ್ರದ ಮೀಸಲಾತಿ ಕುರಿತು ಚರ್ಚಿಸುವ ಪ್ರಯತ್ನ ಮಾಡಿಲ್ಲ. ಕೇವಲ ಪ್ರಚಾರಕ್ಕೆ ಮೆರವಣಿಗೆಯಲ್ಲಿ ಭಾಗವಹಿಸಿದ್ದರು ಎಂದು ಲೇವಡಿ ಮಾಡಿದರು. ಡೇವಿಡ್ ರತ್ನಾಪುರಿ, ನಿಲುವಾಗಿಲು ಪ್ರಭಾಕರ್ ಕೋಳಿ ಪುಟ್ಟರಾಜು ಇದ್ದರು.261103-38-927280293