ಬೀದಿಗೆ ಬಂದ ಕಾಂಗ್ರೆಸ್ ಬಣ ರಾಜಕೀಯ: ಅಶೋಕ
ಪ್ರಜಾವಾಣಿ ವಾರ್ತೆಬೆಂಗಳೂರು:‘ಕಾಂಗ್ರೆಸ್ ಪಕ್ಷದಲ್ಲಿ ಬಣ ರಾಜಕೀಯ ಎಲ್ಲೆ ಮೀರಿ ಹೋಗಿದೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ಆರೋಪಿಸಿದ್ದಾರೆ.ಸಚಿವ ಎಚ್.ಸಿ.ಬಾಲಕೃಷ್ಣ ಅವರು ಸುದ್ದಿಮಾಧ್ಯಮಗಳ ಜತೆಗೆ ಮಾತನಾಡಿರುವ ವಿಡಿಯೊವನ್ನು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಅವರು, ‘ಕಾಂಗ್ರೆಸ್ ನಾಯಕರ ಬೀದಿ ಕಚ್ಚಾಟ, ಆಡಳಿತದಲ್ಲಿ ನಿಯಂತ್ರಣ ಇಲ್ಲದ ಹುಚ್ಚಾಟ’
ಪ್ರಜಾವಾಣಿ ವಾರ್ತೆಬೆಂಗಳೂರು:‘ಕಾಂಗ್ರೆಸ್ ಪಕ್ಷದಲ್ಲಿ ಬಣ ರಾಜಕೀಯ ಎಲ್ಲೆ ಮೀರಿ ಹೋಗಿದೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ಆರೋಪಿಸಿದ್ದಾರೆ.ಸಚಿವ ಎಚ್.ಸಿ.ಬಾಲಕೃಷ್ಣ ಅವರು ಸುದ್ದಿಮಾಧ್ಯಮಗಳ ಜತೆಗೆ ಮಾತನಾಡಿರುವ ವಿಡಿಯೊವನ್ನು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಅವರು, ‘ಕಾಂಗ್ರೆಸ್ ನಾಯಕರ ಬೀದಿ ಕಚ್ಚಾಟ, ಆಡಳಿತದಲ್ಲಿ ನಿಯಂತ್ರಣ ಇಲ್ಲದ ಹುಚ್ಚಾಟ’ ಎಂದಿದ್ದಾರೆ.‘ಸಚಿವ ಬಾಲಕೃಷ್ಣ ನೇರವಾಗಿ ಮಾಜಿ ಸಚಿವ ಕೆ.ಎನ್.ರಾಜಣ್ಣ ವಿರುದ್ಧ ಪಕ್ಷ ವಿರೋಧಿ ಚಟುವಟಿಕೆಯ ಆರೋಪ ಮಾಡಿದ್ದಾರೆ. ‘ರಾಜಣ್ಣ ಪಕ್ಷ ಬಿಟ್ಟು ಹೋಗುವುದಾದರೆ ಹೋಗಲಿ’ ಎಂದು ಸವಾಲು ಹಾಕಿದ್ದಾರೆ. ಸ್ಟಿಂಗ್ ಕಾರ್ಯಾಚರಣೆ, ವಿಧಾನಪರಿಷತ್ ಚುನಾವಣೆಯಲ್ಲಿ ಹೀನಾಯ ಸೋಲು, ಬಣ ರಾಜಕೀಯ, ಎಸ್ಐಆರ್ ಹೋರಾಟಕ್ಕಾಗಿ ದೆಹಲಿಗೆ ಓಟ - ಇವೆಲ್ಲದರಿಂದಾಗಿ ಇಡೀ ಆಡಳಿತ ಮಕಾಡೆ ಮಲಗಿದೆ’ ಎಂದು ಕುಟುಕಿದ್ದಾರೆ.‘ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೇ, ರೈತರಿಗೆ ಬರ ಪರಿಹಾರ ಸಿಗುತ್ತಿಲ್ಲ, ಕಬ್ಬು ಬೆಳೆಗಾರರ ಸಂಕಷ್ಟ ಆಲಿಸುತ್ತಿಲ್ಲ, ಶಾಲೆಗಳ ಅಭಿವೃದ್ಧಿ ನಡೆಯುತ್ತಿಲ್ಲ, ವಿಕಲಚೇತನರಿಗೆ ಪಿಂಚಣಿ ಸಿಗುತ್ತಿಲ್ಲ, ಗುತ್ತಿಗೆದಾರರಿಗೆ ಬಾಕಿ ಬಿಲ್ ಸಿಕ್ಕಿಲ್ಲ. ಹೀಗೆ ಎಲ್ಲದರಲ್ಲೂ ‘ಇಲ್ಲ’ ಎಂಬುದನ್ನು ನಿಮ್ಮ ಕಾಂಗ್ರೆಸ್ ಆಡಳಿತ ತೋರಿಸಿಕೊಟ್ಟಿದೆ’ ಎಂದಿದ್ದಾರೆ.‘ಈ ಸರ್ಕಾರದಲ್ಲಿ ಸ್ಥಳೀಯ ಮುಖಂಡರಿಂದ ಆರಂಭವಾಗಿ, ಶಾಸಕರು, ಸಚಿವರು ಪರಸ್ಪರ ಕಿತ್ತಾಡಿಕೊಂಡು ಜನರ ಸಂಕಷ್ಟಗಳನ್ನು ಕೇಳುವವರಿಲ್ಲದಂತಾಗಿದೆ. ಇನ್ನು ಎಲ್ಲರೂ ಬೀದಿಗೆ ಬಂದು ಹೊಡೆದಾಟ ಮಾಡುವುದೊಂದು ಬಾಕಿ ಇದೆ. ಪಕ್ಷದಲ್ಲಿ ಹಾಗೂ ಸರ್ಕಾರದಲ್ಲಿ ಯಾವುದೇ ತಾಳಮೇಳ ಇಲ್ಲ. ಈ ಕಿತ್ತುಹೋದ ನಿಮ್ಮ ಆಡಳಿತಕ್ಕೆ ತೇಪೆ ಹಾಕುವ ಬದಲು ರಾಜೀನಾಮೆ ನೀಡಿ ಅಧಿಕಾರದಿಂದ ತೊಲಗಿ’ ಎಂದು ಕಿಡಿಕಾರಿದ್ದಾರೆ.