ಬೆಳಗಾವಿ: ರೈತ ಮುಖಂಡರು- ಕಾರ್ಖಾನೆಗಳ ಪ್ರತಿನಿಧಿಗಳ ಸಭೆ ನಡೆಸಲು ಒಪ್ಪಿದ ಸಚಿವ
ಬೆಳಗಾವಿ: ರೈತರ ಹೋರಾಟಕ್ಕೆ ಮಣಿದ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಅಧಿಕಾರಿಗಳು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಎಲ್ಲ ರೈತರ ಸಾಮೂಹಿಕ ಸಭೆ ಆರಂಭಿಸಿದರು.ಕಾರ್ಖಾನೆಗಳ ಪ್ರತಿನಿಧಿಗಳನ್ನೂ ಕರೆಸಬೇಕು ಎಂದು ರೈತರು ಪಟ್ಟು ಹಿಡಿದರು. ಕಾರ್ಖಾನೆಗಳ ಜೊತೆಗೆ ನಾನೆ ಮಾತಾಡುತ್ತೇನೆ ನೀವು ನಿಮ್ಮ ಅಭಿಪ್ರಾಯ ಹೇಳಿ ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿದರು.ಸಭೆ ಆರಂಭದಕ್ಕೆ ಎಲ

ಬೆಳಗಾವಿ: ರೈತರ ಹೋರಾಟಕ್ಕೆ ಮಣಿದ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಅಧಿಕಾರಿಗಳು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಎಲ್ಲ ರೈತರ ಸಾಮೂಹಿಕ ಸಭೆ ಆರಂಭಿಸಿದರು.ಕಾರ್ಖಾನೆಗಳ ಪ್ರತಿನಿಧಿಗಳನ್ನೂ ಕರೆಸಬೇಕು ಎಂದು ರೈತರು ಪಟ್ಟು ಹಿಡಿದರು. ಕಾರ್ಖಾನೆಗಳ ಜೊತೆಗೆ ನಾನೆ ಮಾತಾಡುತ್ತೇನೆ ನೀವು ನಿಮ್ಮ ಅಭಿಪ್ರಾಯ ಹೇಳಿ ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿದರು.ಸಭೆ ಆರಂಭದಕ್ಕೆ ಎಲ್ಲ ರೈತರೂ, ಕಬ್ಬಿಗೆ ₹4,500 ದರ ಘೋಷಿಸಬೇಕು, ರಾಜ್ಯ ಸರ್ಕಾರ ₹1,000 ಪ್ರೋತ್ಸಾಹ ಧನ ಕೊಡಬೇಕು, ಕೇಂದ್ರ ಸರ್ಕಾರ ಸಕ್ಕರ ಎಂಎಸ್ಪಿ ದರವನ್ನು ₹60ಕ್ಕೆ ಏರಿಸಬೇಕು, ಎಥೆನಾಲ್ ಪೂರ್ಣ ಖರೀದಿ ಮಾಡಬೇಕು ಎಂದು ಪಟ್ಟು ಹಿಡಿದರು.ಈಗಾಗಲೇ ಕಬ್ಬು ಒಣಗುತ್ತಿದೆ. ಶೇ 25ರಷ್ಟು ಇಳುವರಿ ಕುಸಿದಿದೆ. ಕೂಡಲೇ ದರ ಘೋಷಣೆ ಮಾಡಿ ಕಾರ್ಖಾನೆ ಆರಂಭಿಸಿ, ರೈತರನ್ನು ಬದುಕಿಸಬೇಕು ಎಂದು ಮುಖಂಡರು ಪದೇ ಪದೇ ಆಗ್ರಹ ಮಾಡಿದರು.ಅಪಾರ ಸಂಖ್ಯೆಯ ರೈತರು ಕಿಕ್ಕಿರಿದು ಸೇರಿದರು. ಇವತ್ತು ದಿಟ್ಟ ನಿರ್ಧಾರ ಆಗುವವರೆಗೆ ಸ್ಥಳ ಬಿಟ್ಟು ಹೋಗುವುದಿಲ್ಲ ಎಂದು ನಿರ್ಧಾರ ಪ್ರಕಟಿಸಿದರು.ಒಂದು ವೇಳೆ ಯಾವುದೇ ನಿರ್ಧಾರ ಮಾಡಲು ಆಗದೇ ಇದ್ದಲ್ಲಿ ಬುಧವಾರ ಜೈಲ್ ಭರೋ ನಡೆಯುತ್ತದೆ. ನಾವು ಸಾವಿರಾರು ಸಂಖ್ಯೆಯಲ್ಲಿ ಸ್ವಯಂ ಪ್ರೇರಣೆಯಿಂದ ಬಂಧನಕ್ಕೆ ಒಳಗಾಗುತ್ತೇವೆ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಚೂನಪ್ಪ ಪೂಜೇರಿ, ಗೌರವಾಧ್ಯಕ್ಷ ಶಶಿಕಾಂತ ಪಡಸಲಗಿ ಹೇಳಿದರು.ಇವತ್ತೇ ಎಲ್ಲವೂ ನಿರ್ಧಾರ ಆಗಬೇಕು ಎಂದು ಎಲ್ಲರೂ ಪಟ್ಟು ಹಿಡಿದರು.ಕೊನೆಗೆ ಒಂದು ನಿರ್ಧಾರಕ್ಕೆ ಬಂದ ಸಚಿವ ಜಾರಕಿಹೊಳಿ ಅವರು, ಮುಖಂಡರು ಹಾಗೂ ಕಾರ್ಖಾನೆಗಳ ಪ್ರತಿನಿಧಿಗಳ ಜತೆಗೆ ಸಭೆಯನ್ನು ಜಿಲ್ಲಾಧಿಕಾರಿ ಕಚೇರಿ ಸಭಾಂಗಣಕ್ಕೆ ಸ್ಥಳಾಂತರಿಸಿದರು.