ಅಧಿವೇಶನ ಡಿ. 2ರಿಂದ?
ಬೆಂಗಳೂರು: ವಿಧಾನಮಂಡಲದ ಚಳಿಗಾಲದ ಅಧಿವೇಶನವನ್ನು ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನ. 30ರ ಬದಲು, ಡಿ. 2ರಿಂದ ನಡೆಸಲು ಸರ್ಕಾರ ಚಿಂತನೆ ನಡೆಸಿದೆ.ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ನ. 30ರಿಂದ ಡಿ. 11ರವರೆಗೆ ಒಟ್ಟು 10 ದಿನ ಅಧಿವೇಶನ ನಡೆಸಲು ನಿರ್ಣಯ ತೆಗೆದುಕೊಳ್ಳಲಾಗಿತ್ತು. ಅಲ್ಲದೆ, ಈ ಕುರಿತ ಕಡತವನ್ನು ರಾಜ್ಯಪಾಲರ ಅನುಮೋದನೆಗಾಗಿ ಸಂಸದೀಯ ವ್ಯವಹಾರ

ಬೆಂಗಳೂರು: ವಿಧಾನಮಂಡಲದ ಚಳಿಗಾಲದ ಅಧಿವೇಶನವನ್ನು ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನ. 30ರ ಬದಲು, ಡಿ. 2ರಿಂದ ನಡೆಸಲು ಸರ್ಕಾರ ಚಿಂತನೆ ನಡೆಸಿದೆ.ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ನ. 30ರಿಂದ ಡಿ. 11ರವರೆಗೆ ಒಟ್ಟು 10 ದಿನ ಅಧಿವೇಶನ ನಡೆಸಲು ನಿರ್ಣಯ ತೆಗೆದುಕೊಳ್ಳಲಾಗಿತ್ತು. ಅಲ್ಲದೆ, ಈ ಕುರಿತ ಕಡತವನ್ನು ರಾಜ್ಯಪಾಲರ ಅನುಮೋದನೆಗಾಗಿ ಸಂಸದೀಯ ವ್ಯವಹಾರಗಳ ಇಲಾಖೆಯು ರಾಜ್ಯಪಾಲರಿಗೆ ಕಳುಹಿಸಿತ್ತು.ಸರ್ಕಾರದ ಸೂಚನೆ ಅನ್ವಯ ಕಡತವನ್ನು ವಾಪಸ್ ಪಡೆದುಕೊಂಡಿರುವ ಇಲಾಖೆಯು, ಡಿ. 2ರಿಂದ ಅಧಿವೇಶನ ಆರಂಭಿಸುವ ಬಗ್ಗೆ ದಿನ ಮರುನಿಗದಿಪಡಿಸಿ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಕಡತ ರವಾನಿಸಿದೆ. ಇದೇ 5ರಂದು ನಡೆಯಲಿರುವ ಸಚಿವ ಸಂಪುಟ ಸಭೆಯು ಈ ಬಗ್ಗೆ ಅಂತಿಮ ನಿರ್ಣಯ ತೆಗೆದುಕೊಳ್ಳುವ ಸಾಧ್ಯತೆಯಿದೆ.ಡಿ. 2ರಿಂದ 11ರವರೆಗೆ ಎಂಟು ದಿನ ಅಧಿವೇಶನ ನಡೆಸುವ ಬಗ್ಗೆ ಚರ್ಚೆ ನಡೆದಿದೆ ಎಂದೂ ಸರ್ಕಾರದ ಮೂಲಗಳು ತಿಳಿಸಿವೆ.
Read the complete story at Prajavani