ಯಾರು ದೇಶದ್ರೋಹಿ? ಬಹಿರಂಗ ಚರ್ಚೆಗೆ ಬನ್ನಿ: ಪ್ರಧಾನಿಗೆ ರಾಹುಲ್ ಮತ್ತೆ ಸವಾಲು
ನವದೆಹಲಿ: 'ವಿರೋಧ ಪಕ್ಷಗಳನ್ನು ‘ದೇಶದ್ರೋಹಿಗಳು’ ಎಂದು ಕರೆಯುವ ಪ್ರಧಾನಿ ನರೇಂದ್ರ ಮೋದಿ ಅವರು, ತಾಕತ್ತಿದ್ದರೆ ಒಂದೇ ವೇದಿಕೆಯಲ್ಲಿ ಬಹಿರಂಗ ಚರ್ಚೆಗೆ ಬರಲಿ' ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತೊಮ್ಮೆ ಸವಾಲು ಹಾಕಿದ್ದಾರೆ.ಈ ಸಂಬಂಧ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ವಿಡಿಯೊ ಬಿಡುಗಡೆ ಮಾಡಿರುವ ರಾಹುಲ್, 'ನಾನು ಸವಾಲು ಹಾಕಿ 24 ಗಂಟೆಗಳು ಕಳೆ

ನವದೆಹಲಿ: 'ವಿರೋಧ ಪಕ್ಷಗಳನ್ನು ‘ದೇಶದ್ರೋಹಿಗಳು’ ಎಂದು ಕರೆಯುವ ಪ್ರಧಾನಿ ನರೇಂದ್ರ ಮೋದಿ ಅವರು, ತಾಕತ್ತಿದ್ದರೆ ಒಂದೇ ವೇದಿಕೆಯಲ್ಲಿ ಬಹಿರಂಗ ಚರ್ಚೆಗೆ ಬರಲಿ' ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತೊಮ್ಮೆ ಸವಾಲು ಹಾಕಿದ್ದಾರೆ.ಈ ಸಂಬಂಧ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ವಿಡಿಯೊ ಬಿಡುಗಡೆ ಮಾಡಿರುವ ರಾಹುಲ್, 'ನಾನು ಸವಾಲು ಹಾಕಿ 24 ಗಂಟೆಗಳು ಕಳೆದಿವೆ. ಅಸಲಿಗೆ ಯಾರು ದೇಶದ್ರೋಹಿ? ಯಾರಿಗೆ ವಿದೇಶಿ ಶಕ್ತಿಗಳೊಂದಿಗೆ ಸಂಪರ್ಕವಿದೆ? ಆ ಸಂಪರ್ಕಗಳ ಸ್ವರೂಪವೇನು? ಎಂಬುದರ ಬಗ್ಗೆ ಚರ್ಚೆಯಾಗಲಿ. ನೀವು ಸೂಚಿಸುವ ಯಾವುದೇ ವೇದಿಕೆಗೆ ಬರಲು ನಾನು ಸಿದ್ಧ, ಆದಷ್ಟು ಬೇಗ ಈ ಚರ್ಚೆ ನಡೆಯಲಿ. ಭಯಪಡಬೇಡಿ' ಎಂದು ಹೇಳಿದ್ದಾರೆ.'ಒಂದೇ ಮೇಜಿನಲ್ಲಿ ನಾವಿಬ್ಬರೂ ಮುಖಾಮುಖಿ ಕೂರೋಣ. ಅಲ್ಲಿ ಮಾಧ್ಯಮಗಳು ಹಾಗೂ ದೇಶದ ಯುವಜನತೆಯೂ ಇರಲಿದ್ದಾರೆ. ತೀರ್ಪುಗಾರರಾಗಿ ನೀವು ಯಾರನ್ನಾದರೂ ನೇಮಿಸಿಕೊಳ್ಳಬಹುದು, ಬೇಕಿದ್ದರೆ ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರನ್ನೇ ಆ ಕುರ್ಚಿಯಲ್ಲಿ ಕೂರಿಸಿಕೊಳ್ಳಿ' ಎಂದು ಹೇಳಿದ್ದಾರೆ. 24 घंटे हो गए मोदी जी। मैंने आपको चैलेंज दिया है।आप कहते हो कि opposition देशद्रोही है। किसी भी स्टेज पे आप जगह चुनिए, डिबेट कीजिए मेरे साथ।देशद्रोही कौन है? विदेशी फोर्सेस का कनेक्शन किसका है? और किस प्रकार का कनेक्शन है? जल्दी से जल्दी कीजिए, डरिए मत। दोनों मिलेंगे,… pic.twitter.com/373F0IqdMR— Rahul Gandhi (@RahulGandhi) November 3, 2026 'ಈ ಬಹಿರಂಗ ಚರ್ಚೆಯಲ್ಲಿ ದೇಶದ ಆರ್ಥಿಕ ವ್ಯವಸ್ಥೆ, ಆರ್ಥಿಕ ರಚನೆ, ಅಮೆರಿಕದೊಂದಿಗಿನ ಒಪ್ಪಂದ ಹೇಗೆ ನಡೆಯಿತು? ಇಷ್ಟು ಬೇಗ ಏಕೆ ನಡೆಯಿತು? ಸಂಪುಟದ ಗಮನಕ್ಕೆ ತಾರದೆ ನೀವೊಬ್ಬರೇ ಏಕೆ ಆ ನಿರ್ಧಾರ ತೆಗೆದುಕೊಂಡಿರಿ? ಅದಾನಿ ಪ್ರಕರಣವನ್ನು ಏಕೆ ಮುಚ್ಚಿಹಾಕಲಾಯಿತು? ಮತ್ತು ಎಪ್ಸ್ಟೈನ್ ಫೈಲ್ನಂತಹ ಹಲವು ವಿಚಾರಗಳ ಬಗ್ಗೆ ಪ್ರಶ್ನೆಗಳು ಬರಲಿವೆ. ಇವೆಲ್ಲದರ ಬಗ್ಗೆ ಮುಕ್ತವಾಗಿ ಚರ್ಚಿಸೋಣ' ಎಂದು ಹೇಳಿದ್ದಾರೆ. 'ಹಾಲಿನಿಂದ ನೀರನ್ನು ಪ್ರತ್ಯೇಕಿಸಿದಂತೆ, ಸತ್ಯಾಂಶ ಸಂಪೂರ್ಣವಾಗಿ ಬಯಲಾಗಲಿ. ನನ್ನ ಮೇಲೆ ನೀವು ಆರೋಪಗಳನ್ನು ಮಾಡುತ್ತೀರಲ್ಲವೇ? ಈಗ ಮುಂದೆ ಬನ್ನಿ, ಎಲ್ಲವೂ ಸ್ಪಷ್ಟವಾಗುತ್ತದೆ' ಎಂದು ಹೇಳಿದ್ದಾರೆ. 'ಬೇರೆ ಬೇರೆ ವಿಚಾರಗಳಿಗೆ ಸಂಬಂಧಿಸಿದಂತೆ ನನ್ನ ವಿರುದ್ಧ ನೀವು ಸರಿಸುಮಾರು 45 ಮಾನಹಾನಿ ಮೊಕದ್ದಮೆಗಳನ್ನು ದಾಖಲಿಸಿದ್ದೀರಿ. ಆದರೆ, ಈ ವಿದೇಶಿ ನಂಟಿನ ವಿಚಾರದಲ್ಲಿ ಮತ್ತು ಚರ್ಚೆಯ ವಿಷಯದಲ್ಲಿ ಮಾತ್ರ ನೀವು ಯಾವುದೇ ಮಾನನಷ್ಟ ಮೊಕದ್ದಮೆ ಹೂಡಿಲ್ಲ. ಬೇಕಿದ್ದರೆ ಈಗಲೇ ಒಂದು ದೂರು ದಾಖಲಿಸಿ, ಅದನ್ನೂ ನಾವು ಬಹಿರಂಗವಾಗಿ ಚರ್ಚಿಸೋಣ' ಎಂದು ಸವಾಲೆಸೆದಿದ್ದಾರೆ.ಕೈಯಲ್ಲಿ ಗುಲಾಬಿ ಹೂ ಹಿಡಿದುಕೊಂಡಿದ್ದ ರಾಹುಲ್ ವಿಡಿಯೊದ ಅಂತಿಮದಲ್ಲಿ ಪ್ರಧಾನಿಗೆ ದೀಪಾವಳಿ ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ. ದೇಶ ಅಸ್ಥಿರಕ್ಕೆ ವಿದೇಶಿ ನೆರವು: ಪ್ರಧಾನಿಗೆ ಬಹಿರಂಗ ಚರ್ಚೆಗೆ ರಾಹುಲ್ ಆಹ್ವಾನಪ್ರಧಾನಿಯಾಗಲು ಬಯಸಿದರೆ ಅಣಕು ಸಂಸತ್ತಿನಲ್ಲೇ ಇರಿ: ರಾಹುಲ್ ವಿರುದ್ಧ ಶಾ ವಾಗ್ದಾಳಿ