ಕುಮಾರಸ್ವಾಮಿಗೆ ಮಂಪರು ಪರೀಕ್ಷೆ ಮಾಡಬೇಕು: ವಿ.ಎಸ್. ಉಗ್ರಪ್ಪ
ಬೆಂಗಳೂರು: ‘ಸ್ಟಿಂಗ್ ಕಾರ್ಯಾಚರಣೆ ಪ್ರಕರಣದಲ್ಲಿ ಅಡಗಿರುವ ಸತ್ಯ ಹೊರಗೆ ಬರಬೇಕಾದರೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕು’ ಎಂದು ಕಾಂಗ್ರೆಸ್ ನಾಯಕರು ಒತ್ತಾಯಿಸಿದರು.ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಂಸದ ವಿ.ಎಸ್. ಉಗ್ರಪ್ಪ, ‘ಕುಮಾರಸ್ವಾಮಿ ಒಮ್ಮೆ, ಸ್ಟಿಂಗ್ ಮಾಡಿದವರನ್ನು ಮುಖ್ಯಮಂತ್ರಿ ಡಿ.ಕೆ. ಶಿವ

ಬೆಂಗಳೂರು: ‘ಸ್ಟಿಂಗ್ ಕಾರ್ಯಾಚರಣೆ ಪ್ರಕರಣದಲ್ಲಿ ಅಡಗಿರುವ ಸತ್ಯ ಹೊರಗೆ ಬರಬೇಕಾದರೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕು’ ಎಂದು ಕಾಂಗ್ರೆಸ್ ನಾಯಕರು ಒತ್ತಾಯಿಸಿದರು.ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಂಸದ ವಿ.ಎಸ್. ಉಗ್ರಪ್ಪ, ‘ಕುಮಾರಸ್ವಾಮಿ ಒಮ್ಮೆ, ಸ್ಟಿಂಗ್ ಮಾಡಿದವರನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಖಾಸಗಿ ಹೋಟೆಲ್ನಲ್ಲಿ ಭೇಟಿ ಮಾಡಿದ್ದಾರೆ ಅಂದರು. ನಂತರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಕುಟುಂಬ ಸಿದ್ದರಾಮಯ್ಯ ವಿರುದ್ಧ ಸಂಚು ನಡೆಸುತ್ತಿದೆ ಎಂದರು. ಜಮೀರ್ ಅವರನ್ನು ಮಂತ್ರಿ ಮಾಡಿಲ್ಲವೆಂದು ಸ್ಟಿಂಗ್ ಮಾಡಿಸಿರಬಹುದು ಎಂದು ಆರೋಪಿಸಿದರು. ಬಳಿಕ ₹ 600 ಕೋಟಿಯ ಸಂಚು ಇದು ಎಂದರು. ಅವರು ಕೇಂದ್ರದ ಮಂತ್ರಿಯೊ ಅಥವಾ ಸ್ಟಿಂಗ್ ಕೇಸ್ ತನಿಖಾ ಅಧಿಕಾರಿಯೊ’ ಎಂದು ಪ್ರಶ್ನಿಸಿದರು.‘ಈ ಪ್ರಕರಣದಿಂದ ರಾಜ್ಯದ ಘನತೆ, ಗೌರವಕ್ಕೆ ಧಕ್ಕೆ ಆಗುವ ಸಾಧ್ಯತೆಯಿದೆ. ಸಂವಿಧಾನವು ಪ್ರತಿಯೊಬ್ಬ ವ್ಯಕ್ತಿಗೂ ವೈಯಕ್ತಿಕ ಸ್ವಾತಂತ್ರ್ಯದ ಹಕ್ಕು ನೀಡಿದೆ. ಅದನ್ನು ಕಾಪಾಡುವ ಜವಾಬ್ದಾರಿ ಎಲ್ಲರ ಮೇಲಿದೆ. ಸಿದ್ದರಾಮಯ್ಯ ಅವರನ್ನು ಜೆಡಿಎಸ್ ಪಕ್ಷದಿಂದ ಅವರನ್ನು ಹೊರ ಹಾಕಿದ ಬಳಿಕ ಅವರ ಮೇಲೆ ಕುಮಾರಸ್ವಾಮಿ ಸೇಡು ತೀರಿಸಿಕೊಳ್ಳುವ ಕೆಲಸ ಮಾಡುತ್ತಾ ಬಂದಿದ್ದಾರೆ. ಅವರಿಗೆ ಅಧಿಕಾರದ ಹಪಾಹಪಿ’ ಎಂದೂ ದೂರಿದರು.‘ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದನ್ನು ಸಹಿಸದೆ ಅವರ ಅಧಿಕಾರದುದ್ದಕ್ಕೂ ಕುಮಾರಸ್ವಾಮಿ ಆರೋಪಗಳನ್ನು ಮಾಡಿದರು. ಈಗ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿ ಆಗಿರುವುದನ್ನೂ ಸಹಿಸಿಕೊಳ್ಳುತ್ತಿಲ್ಲ. ಇಲ್ಲಿಯವರೆಗೆ ಸಿದ್ದರಾಮಯ್ಯ ಅವರ ಬಗ್ಗೆ ಒಂದೂ ಒಳ್ಳೆಯ ಮಾತು ಆಡದವರಿಗೆ ಇದ್ದಕ್ಕಿದ್ದಂತೆ ಪ್ರೀತಿ ಜಾಸ್ತಿಯಾಗಿದ್ದು ಏಕೆ’ ಎಂದೂ ಕೇಳಿದರು.ಎಚ್.ಎಂ. ರೇವಣ್ಣ ಮಾತನಾಡಿ, ‘ಕುಮಾರಸ್ವಾಮಿ ಅವರು ಕೇಂದ್ರ ಸಚಿವರಲ್ಲ, ಬೆಂಗಳೂರಿಗೆ ಸೀಮಿತವಾದ ಮಂತ್ರಿ. ಅವರ ತಂದೆಯನ್ನು ಪ್ರಧಾನಿ ಮಾಡಿದ್ದು ಕಾಂಗ್ರೆಸ್. ಒಮ್ಮೆ ಅವರೂ ಮುಖ್ಯಮಂತ್ರಿಯಾಗಿದ್ದು ಕಾಂಗ್ರೆಸ್ ನೆರವಿನಿಂದ ಎನ್ನುವುದನ್ನು ಅವರು ಮರೆಯಬಾರದು. ಅಧಿಕಾರಕ್ಕಾಗಿ ಇಂತಹ ನೀಚ ರಾಜಕಾರಣ, ದ್ವೇಷದ ರಾಜಕಾರಣ ಸರಿಯಲ್ಲ. ಕುಮಾರಸ್ವಾಮಿ ಇದುವರೆಗೂ ಪ್ರಸ್ತಾಪಿಸಿದ ಯಾವ ವಿಷಯವನ್ನೂ ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗಿಲ್ಲ. ಅವರನ್ನು ರೂಟ್ ನಂ.4ರ ಬಸ್ ಹತ್ತಿಸಿ ನಿಮ್ಹಾನ್ಸ್ ಆಸ್ಪತ್ರೆಗೆ ಸೇರಿಸಬೇಕು’ ಎಂದೂ ಕಿಡಿಕಾರಿದರು.