ಮಂಡ್ಯ | 12 ಪಶು ಆಸ್ಪತ್ರೆಗಳಿಗೆ ಒಬ್ಬರೇ ವೈದ್ಯ, ರೈತರಿಗೆ ಸಂಕಷ್ಟ
ಭಾರತೀನಗರ: ಇಲ್ಲಿನ ಪಶು ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಹೆಚ್ಚಿದೆ. ಇದರಿಂದ ಪಶುಗಳಿಗೆ ಸಕಾಲಕ್ಕೆ ಚಿಕಿತ್ಸೆ ದೊರೆಯುತ್ತಿಲ್ಲ. ರೈತರು ಸಂಕಷ್ಟ ಎದುರಿಸುವಂತಾಗಿದೆ.ಭಾರತೀನಗರ ಪಶು ಆಸ್ಪತ್ರೆ ವ್ಯಾಪ್ತಿಯ ಮೆಣಸಗೆರೆ, ಬೊಪ್ಪಸಮುದ್ರ, ತೊರೆಬೊಮ್ಮನಹಳ್ಳಿ, ಬಿದರಹೊಸಹಳ್ಳಿ ಪಶು ಆರೋಗ್ಯ ಕೇಂದ್ರಗಳಲ್ಲಿ ವೈದ್ಯರೇ ಇಲ್ಲ. ಭಾರತೀನಗರದ ಪಶು ಆಸ್ಪತ್ರೆಯ ವೈದ್ಯರೇ ಕರ್ತವ್ಯ

ಭಾರತೀನಗರ: ಇಲ್ಲಿನ ಪಶು ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಹೆಚ್ಚಿದೆ. ಇದರಿಂದ ಪಶುಗಳಿಗೆ ಸಕಾಲಕ್ಕೆ ಚಿಕಿತ್ಸೆ ದೊರೆಯುತ್ತಿಲ್ಲ. ರೈತರು ಸಂಕಷ್ಟ ಎದುರಿಸುವಂತಾಗಿದೆ.ಭಾರತೀನಗರ ಪಶು ಆಸ್ಪತ್ರೆ ವ್ಯಾಪ್ತಿಯ ಮೆಣಸಗೆರೆ, ಬೊಪ್ಪಸಮುದ್ರ, ತೊರೆಬೊಮ್ಮನಹಳ್ಳಿ, ಬಿದರಹೊಸಹಳ್ಳಿ ಪಶು ಆರೋಗ್ಯ ಕೇಂದ್ರಗಳಲ್ಲಿ ವೈದ್ಯರೇ ಇಲ್ಲ. ಭಾರತೀನಗರದ ಪಶು ಆಸ್ಪತ್ರೆಯ ವೈದ್ಯರೇ ಕರ್ತವ್ಯ ನಿರ್ವಹಿಸುತ್ತಾ ಬಂದಿದ್ದಾರೆ.ಚಂದೂಪುರ, ಎಸ್.ಐ. ಹಾಗಲಹಳ್ಳಿ, ಗುರುದೇವರಹಳ್ಳಿ, ದೊಡ್ಡರಸಿನಕೆರೆ, ಕೆ. ಶೆಟ್ಟಹಳ್ಳಿ ಹಾಗೂ ಮಾದರಹಳ್ಳಿ ಪಶು ಆರೋಗ್ಯ ಕೇಂದ್ರಗಳಲ್ಲೂ ಕಾಯಂ ವೈದ್ಯರಿಲ್ಲ. ಈ ಕಾರಣ ಅಲ್ಲಿಗೂ ಭಾರತೀನಗರ ಪಶು ಆಸ್ಪತ್ರೆಯ ವೈದ್ಯರೇ ತೆರಳಿ ಚಿಕಿತ್ಸೆ ನೀಡುವ ಪರಿಸ್ಥಿತಿ ಇದೆ.ಪ್ರತಿ ತಿಂಗಳು ಭಾರತೀನಗರ ಸೇರಿದಂತೆ ಸುತ್ತಲಿನ 12 ಪಶು ಆರೋಗ್ಯ ಕೇಂದ್ರಗಳಿಂದ 100ರಿಂದ 150 ರಾಸುಗಳು ಚಿಕಿತ್ಸೆಗೆ ಬರುತ್ತವೆ. ಪಶು ನಿರೀಕ್ಷಕರು ಅನಾರೋಗ್ಯಕ್ಕೀಡಾದ ರಾಸುಗಳಿಗೆ ಚಿಕಿತ್ಸೆ ನೀಡುವುದರ ಜತೆಗೆ ಮೇಕೆ, ಕುರಿಗಳಿಗೆ ನೀಡುವ ಟಿಪಿಆರ್, ಇಟಿ, ಎಚ್ಎಸ್ ಲಸಿಕೆಗಳನ್ನು ಅಗತ್ಯವಿರುವ ಪ್ರಾಣಿಗಳಿಗೆ ನೀಡುತ್ತಿದ್ದಾರೆ. ಗಂಭೀರ ಸಮಸ್ಯೆಗಳಿರುವ ರಾಸುಗಳಿಗೆ ಚಿಕಿತ್ಸೆ ನೀಡಲು ಇರುವ ಒಬ್ಬರೇ ವೈದ್ಯರನ್ನು ಅವಲಂಬಿಸಬೇಕಾಗಿದೆ.ಪ್ರತಿ ಗುರುವಾರ ಕುರಿ, ಮೇಕೆಗಳಿಗೆ ಕರುಡು (ಕ್ಯಾಸ್ಟ್ರೇಷನ್) ತೆಗೆಯುವ ಕಾರ್ಯ ನಡೆಯುತ್ತದೆ. ಪ್ರತಿ ಆರೋಗ್ಯ ಕೇಂದ್ರಗಳಿಗೆ 20ಕ್ಕೂ ಹೆಚ್ಚು ಕುರಿ, ಮೇಕೆಗಳು ಬರುತ್ತವೆ. ಇವುಗಳಿಗೆ ಆಸ್ಪತ್ರೆಯ ವೈದ್ಯರು ತೆರಳಿ ಕ್ಯಾಸ್ಟ್ರೇಷನ್ ಮಾಡುತ್ತಿದ್ದಾರೆ. ಸಾಮಾನ್ಯವಾಗಿ ಹಸುಗಳಿಗೆ ಹೆಚ್ಚು ಬಾಧಿಸುವ ಅಜೀರ್ಣ, ಭೇದಿ, ಕೆಚ್ಚಲು ಬಾವು, ಮಿಲ್ಕ್ ಫೀವರ್ (ಹಾಲು ಜ್ವರ), ಗರ್ಭಕೋಶದಲ್ಲಿ ಕರು ಸತ್ತಿರುವುದು ಸೇರಿದಂತೆ ಮತ್ತಿತರ ಗಂಭೀರ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಅಗತ್ಯವಿದ್ದ ಸಂದರ್ಭಗಳಲ್ಲಿ ವೈದ್ಯರಿಲ್ಲದ ಕಾರಣ ಪಶು ಪರೀಕ್ಷಕರೇ ಚಿಕಿತ್ಸೆ ನೀಡುವ ಸ್ಥಿತಿ ಇದೆ. ಪ್ರತಿ ತಿಂಗಳು 15ರಿಂದ 20 ಕುರಿ, ಮೇಕೆಗಳು ಹಾಗೂ ಐದು ಹಸುಗಳು ಸಾವಿಗೀಡಾಗುತ್ತಿದ್ದು, ಸಾವಿಗೀಡಾದ ಪ್ರಾಣಿಗಳ ಮರಣೋತ್ತರ ಪರೀಕ್ಷೆಗೆ ಭಾರತೀನಗರ ಪಶು ಆಸ್ಪತ್ರೆಯ ವೈದ್ಯರೇ ತೆರಳಬೇಕಾಗಿದೆ.ವೈದ್ಯರ ಜತೆಗೆ ಪಶು ಆಸ್ಪತ್ರೆಗಳಲ್ಲಿ ‘ಡಿ’ ಗ್ರೂಪ್ ನೌಕರರೂ ಇಲ್ಲ. ಹೀಗಾಗಿ ಎಲ್ಲ ಕಾರ್ಯ ಒಬ್ಬ ವೈದ್ಯರೇ ಮಾಡಬೇಕಿದೆ. ಸಾವಿಗೀಡಾಗುವ ಪಶುಗಳ ಮರಣೋತ್ತರ ಪರೀಕ್ಷೆಯನ್ನೂ ಈ ವೈದ್ಯರೇ ಮಾಡಬೇಕಾದ ಸ್ಥಿತಿ ಇದೆ.ಸಾಮೂಹಿಕ ಲಸಿಕಾ ಕಾರ್ಯಕ್ರಮಗಳಾದ ಕಾಲುಬಾಯಿ ಜ್ವರ, ಗಂಟಲು ಬೇನೆ ಹಾಗೂ ಬಂಜೆತನ ನಿವಾರಣಾ ತಪಾಸಣೆ ಸಂದರ್ಭಗಳಲ್ಲಿ ವೈದ್ಯರ ಕೊರತೆಯಿಂದಾಗಿ ಎಲ್ಲಾ ಕಾರ್ಯಕ್ರಮಗಳಿಗೂ ತೊಂದರೆಯಾಗುತ್ತಿದೆ.ಕೆಲವು ಸಂದರ್ಭಗಳಲ್ಲಿ ರೇಬಿಸ್ ಲಸಿಕೆಗಳ ಪೂರೈಕೆಯೂ ಇರುವುದಿಲ್ಲ. ರೇಬಿಸ್ ಲಸಿಕೆ ಹಾಕಿಸಿಕೊಳ್ಳಲು ಬರುವ ಶ್ವಾನ ಪ್ರಿಯರು ಲಸಿಕೆ ಬರುವವರೆಗೂ ಕಾಯಬೇಕಾದ ಪರಿಸ್ಥಿತಿ ಇದೆ.ಜಿಲ್ಲಾ ಪಶು ಇಲಾಖೆ ಈ ಸಂಬಂಧ ಗಮನಹರಿಸಿ, ಖಾಲಿ ಇರುವ ಪಶು ಕೇಂದ್ರಗಳಿಗೆ ಕಾಯಂ ವೈದ್ಯರನ್ನು ನೇಮಿಸಲು ಕ್ರಮ ಕೈಗೊಳ್ಳಬೇಕು ಎಂಬುದು ರೈತರ ಆಗ್ರಹ.ಸಚಿವರು, ಸರ್ಕಾರಕ್ಕೆ ಹಲವು ಪತ್ರ‘ಮದ್ದೂರು ತಾಲ್ಲೂಕಿನಲ್ಲಿ ಶೇ 28ರಷ್ಟು ವೈದ್ಯರು ಹಾಗೂ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. 28 ಮಂದಿ ವೈದ್ಯರು ಇರಬೇಕಾಗಿದ್ದು, ಪ್ರಸ್ತುತ 9 ಮಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಭಾರತೀನಗರದ ಸುತ್ತಲಿನ ಒಂಬತ್ತು ಕೇಂದ್ರಗಳಿಗೆ ಒಬ್ಬರೇ ವೈದ್ಯರು ಕರ್ತವ್ಯ ನಿರ್ವಹಿಸುತ್ತಿದ್ದು, ಲಸಿಕೆ ಹಾಕುವ ಸಂದರ್ಭದಲ್ಲಿ ವೈದ್ಯರ ಕೊರತೆಯಿಂದ ಸಾಕಷ್ಟು ಸಮಸ್ಯೆಗಳು ಎದುರಾಗುತ್ತಿವೆ. ಈ ಸಂಬಂಧ ಪಶುಸಂಗೋಪನಾ ಸಚಿವರು ಹಾಗೂ ಸರ್ಕಾರಕ್ಕೆ ಹಲವು ಪತ್ರಗಳನ್ನು ಬರೆದಿದ್ದೇವೆ. ವೈದ್ಯರ ನೇಮಕಾತಿಯಲ್ಲಿ ವಿಳಂಬವಾಗಿದೆ. ಪಶು ವೈದ್ಯರನ್ನು ನೇಮಿಸುವಂತೆ ಸರ್ಕಾರದ ಮೇಲೆ ಇನ್ನೂ ಹೆಚ್ಚಿನ ಒತ್ತಡ ಹೇರಲಾಗುವುದು’ ಎಂದು ಮಂಡ್ಯ ಪಶು ವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕ ಡಾ. ರಾಮಚಂದ್ರು ಹೇಳಿದರು.ಬೊಮ್ಮಲಿಂಗೇಗೌಡ, ರೈತ, ಕರಡಕೆರೆಕೆ. ಶೆಟ್ಟಹಳ್ಳಿ ಪಶು ಆರೋಗ್ಯ ಕೇಂದ್ರದಲ್ಲಿ ವೈದ್ಯರಿಲ್ಲ. ಭಾರತೀನಗರ ಪಶು ಆಸ್ಪತ್ರೆಯ ವೈದ್ಯರು ಬಂದು ಜಾನುವಾರುಗಳಿಗೆ ಚಿಕಿತ್ಸೆ ನೀಡಬೇಕಾದ ಪರಿಸ್ಥಿತಿ ಇದೆ. ಸರ್ಕಾರ ವೈದ್ಯರನ್ನು ನೇಮಿಸಲು ಕ್ರಮ ಕೈಗೊಳ್ಳಬೇಕು 261104-40-534815210