ದೆಹಲಿಯಲ್ಲಿ ಕನ್ನಡದ ಕಂಪು: ಜನಕಪುರಿ ಕನ್ನಡ ಕೂಟಕ್ಕೆ ಸುವರ್ಣ ಸಂಭ್ರಮ
ತಾಯ್ನಾಡಿನಿಂದ ದೂರವಿದ್ದರೂ ಭಾಷೆ, ಸಂಸ್ಕೃತಿ ಮತ್ತು ಕಲೆಯ ನಂಟನ್ನು ಉಳಿಸಿಕೊಳ್ಳುವ ಹಂಬಲ. ಮುಂದಿನ ಪೀಳಿಗೆಗೂ ಕನ್ನಡದ ಪರಿಚಯ ಮಾಡಿಕೊಡಬೇಕೆಂಬ ಕಾಳಜಿ. ಇಂತಹ ಆಶಯದಿಂದ ದೆಹಲಿಯಲ್ಲಿ ಆರಂಭವಾದ ಜನಕಪುರಿ ಕನ್ನಡ ಕೂಟ ಇಂದು ಐದು ದಶಕಗಳ ಪಯಣವನ್ನು ಪೂರ್ಣಗೊಳಿಸಿದೆ. ನಾಟಕ, ಸಂಗೀತ, ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಸಮಾಜಸೇವೆಯ ಮೂಲಕ ರಾಷ್ಟ್ರ ರಾಜಧಾನಿಯಲ್ಲಿ ಕನ್ನಡದ ಅ
ತಾಯ್ನಾಡಿನಿಂದ ದೂರವಿದ್ದರೂ ಭಾಷೆ, ಸಂಸ್ಕೃತಿ ಮತ್ತು ಕಲೆಯ ನಂಟನ್ನು ಉಳಿಸಿಕೊಳ್ಳುವ ಹಂಬಲ. ಮುಂದಿನ ಪೀಳಿಗೆಗೂ ಕನ್ನಡದ ಪರಿಚಯ ಮಾಡಿಕೊಡಬೇಕೆಂಬ ಕಾಳಜಿ. ಇಂತಹ ಆಶಯದಿಂದ ದೆಹಲಿಯಲ್ಲಿ ಆರಂಭವಾದ ಜನಕಪುರಿ ಕನ್ನಡ ಕೂಟ ಇಂದು ಐದು ದಶಕಗಳ ಪಯಣವನ್ನು ಪೂರ್ಣಗೊಳಿಸಿದೆ. ನಾಟಕ, ಸಂಗೀತ, ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಸಮಾಜಸೇವೆಯ ಮೂಲಕ ರಾಷ್ಟ್ರ ರಾಜಧಾನಿಯಲ್ಲಿ ಕನ್ನಡದ ಅಸ್ಮಿತೆಯನ್ನು ಉಳಿಸಿಕೊಂಡು ಬಂದಿರುವ ಈ ಸಂಸ್ಥೆ, ಹಲವು ತಲೆಮಾರುಗಳ ಕನ್ನಡಿಗರನ್ನು ಬೆಸೆಯುವ ವೇದಿಕೆಯಾಗಿ ಬೆಳೆದಿದೆ.ಕನ್ನಡ ನೌಕೆಯಲ್ಲಿ ವಿಶ್ವ ಕನ್ನಡಿಗರನ್ನು ಬೆಸೆಯುತ್ತಿರುವ ‘ನಾವಿಕ’ ಕನ್ನಡದ ಒಲವಿನಿಂದ ಹುಟ್ಟಿದ ಕೂಟ1976ರ ನವೆಂಬರ್ 26ರಂದು ಜನಕಪುರಿಯಲ್ಲಿ ನೆಲೆಸಿದ್ದ ಕನ್ನಡಿಗರು ಮತ್ತು ಕನ್ನಡಾಭಿಮಾನಿಗಳು ಒಂದೆಡೆ ಸೇರಿದರು. ಪಿ.ಎಲ್. ಅಗ್ನಿಹೋತ್ರಿಯವರ ಮನೆಯಲ್ಲಿ ನಡೆದ ಈ ಸಭೆಯಲ್ಲಿ ಕೆ.ಬಿ. ದೇಸಾಯಿ, ಬಿ.ಎಸ್. ರಾಮಕೃಷ್ಣ, ಆರ್.ಆರ್. ಪಾಟೀಲ, ಬಿ.ಆರ್. ವೆಂಕಟೇಶ್, ಎ. ಸುಧೀಂದ್ರ, ಎಸ್. ಗುಂಡಪ್ಪ, ಕೆ. ಮಾಧವರಾವ್, ಸಿ.ಬಿ. ವೆಂಕಟರಾವ್, ಟಿ.ವಿ.ಎಲ್. ನರಸಯ್ಯ ಸೇರಿದಂತೆ ಹಲವು ಹಿರಿಯರು ಭಾಗವಹಿಸಿದ್ದರು.ತಾಯ್ನಾಡಿನಿಂದ ದೂರ ಬಂದು ದೆಹಲಿಯಲ್ಲಿ ನೆಲೆಸಿದ್ದ ಕನ್ನಡಿಗರು ಮತ್ತು ಅವರ ಮಕ್ಕಳಿಗೆ ಕನ್ನಡ ಭಾಷೆ, ಸಂಸ್ಕೃತಿ ಹಾಗೂ ನಾಡಿನ ಪರಿಚಯ ಮಾಡಿಕೊಡುವುದು ಈ ಹಿರಿಯರ ಆಶಯವಾಗಿತ್ತು. ಕನ್ನಡಿಗರಲ್ಲಿರುವ ಕಲೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವುದರ ಜತೆಗೆ, ಮಕ್ಕಳನ್ನೂ ಈ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಉದ್ದೇಶದಿಂದ 'ಜನಕಪುರಿ ಕನ್ನಡ ಕೂಟ' ಸ್ಥಾಪನೆಯಾಯಿತು.'ಕನ್ನಡ ಕೂಟ' ಎಂಬ ಹೆಸರನ್ನು ಸೂಚಿಸಿದವರು ಸಿ.ಬಿ. ವೆಂಕಟರಾವ್. ಸಂಸ್ಥೆಯ ಮೊದಲ ನಿಯಮಾವಳಿಗಳನ್ನೂ ಅವರೇ ರೂಪಿಸಿದರು. ಟಿ.ವಿ.ಎಲ್. ನರಸಯ್ಯ ಮೊದಲ ಅಧ್ಯಕ್ಷರಾದರೆ, ಎಸ್. ಗುಂಡಪ್ಪ ಉಪಾಧ್ಯಕ್ಷರಾದರು. ಆರ್.ಆರ್. ಪಾಟೀಲ ಕಾರ್ಯದರ್ಶಿಯಾಗಿ, ಎಸ್.ಆರ್. ವಿಜಯರಾಘವನ್ ಖಜಾಂಚಿಯಾಗಿ ಜವಾಬ್ದಾರಿ ವಹಿಸಿಕೊಂಡರು.ನಾಟಕಗಳ ಮೂಲಕ ಗುರುತಿಸಿಕೊಂಡ ಸಂಸ್ಥೆ1986ರಲ್ಲಿ ಕೂಟದ ದಶಮಾನೋತ್ಸವ ಆಚರಿಸಲಾಯಿತು. ಈ ಸಂದರ್ಭದಲ್ಲಿ ಸ್ಮರಣ ಸಂಚಿಕೆ ಪ್ರಕಟಿಸುವ ಪ್ರಯತ್ನ ನಡೆಯಿತು. ಬಿ.ಎಸ್. ರಾಮಕೃಷ್ಣ ಸೇರಿದಂತೆ ಹಲವರು ಇದಕ್ಕಾಗಿ ಶ್ರಮಿಸಿದರು. ಇದೇ ವರ್ಷ ದೆಹಲಿಯ ನೋಂದಣಿ ಕಚೇರಿಯಲ್ಲಿ ಸಂಸ್ಥೆಯನ್ನು ಅಧಿಕೃತವಾಗಿ ನೋಂದಾಯಿಸಲಾಯಿತು. ಈ ಪ್ರಯತ್ನದಲ್ಲಿ ಆರ್.ಆರ್. ರಾವ್ ಪ್ರಮುಖ ಪಾತ್ರ ವಹಿಸಿದರು.ದಶಮಾನೋತ್ಸವದ ಅಂಗವಾಗಿ ಪ್ರದರ್ಶಿಸಿದ 'ಟ್ರಿಬಲ್ ತಾಳಿ' ನಾಟಕ ದೆಹಲಿ ಕರ್ನಾಟಕ ಸಂಘದ ನಾಟಕೋತ್ಸವದಲ್ಲಿ ಗಮನ ಸೆಳೆಯಿತು. ಅತ್ಯುತ್ತಮ ನಾಟಕ, ಅತ್ಯುತ್ತಮ ನಟ ಪ್ರಥಮ ಹಾಗೂ ಅತ್ಯುತ್ತಮ ನಟ ದ್ವಿತೀಯ ಪ್ರಶಸ್ತಿಗಳನ್ನು ಗಳಿಸಿತು. 1996ರ ಎರಡನೇ ದಶಮಾನೋತ್ಸವದ ವೇಳೆಗೆ ಕೂಟವು ದೆಹಲಿ ಕರ್ನಾಟಕ ಸಂಘದಲ್ಲಿ 20ಕ್ಕೂ ಹೆಚ್ಚು ನಾಟಕಗಳನ್ನು ಪ್ರದರ್ಶಿಸಿತ್ತು. ನಾಟಕಗಳ ಮೂಲಕ ಕನ್ನಡ ರಂಗಭೂಮಿಯ ಚಟುವಟಿಕೆಗಳಲ್ಲಿ ತನ್ನದೇ ಆದ ಸ್ಥಾನವನ್ನು ಗಳಿಸಿತ್ತು.1990ರಲ್ಲಿ ಅಧ್ಯಕ್ಷರಾಗಿದ್ದ ಪಿ.ಎಲ್. ಅಗ್ನಿಹೋತ್ರಿಯವರ ಅವಧಿಯಲ್ಲಿ ಸದಸ್ಯರ ವಿಳಾಸ ಮತ್ತು ದೂರವಾಣಿ ಸಂಖ್ಯೆಗಳನ್ನು ಒಳಗೊಂಡ ಕಿರು ಕೈಪಿಡಿಯನ್ನೂ ಪ್ರಕಟಿಸಲಾಯಿತು.ಲಂಡನ್ನಲ್ಲಿ ಕನ್ನಡಿಗರ ನೆನಹುಗಳು: ಥೇಮ್ಸ್ ತೀರದಲ್ಲಿ ಸರ್ವ ಜನಾಂಗದ ಶಾಂತಿಯ ತೋಟ ಬೆಳ್ಳಿಹಬ್ಬದ ಸಂಭ್ರಮ2001ರಲ್ಲಿ ಕೂಟದ ಬೆಳ್ಳಿಹಬ್ಬದ ಸಿದ್ಧತೆಗಳು ನಡೆದವು. ಆಗ ಅಧ್ಯಕ್ಷರಾಗಿದ್ದವರು ಎಚ್.ಎಸ್. ಕುಲಕರ್ಣಿ; ಕಾರ್ಯದರ್ಶಿಯಾಗಿದ್ದವರು ಆರ್.ಎಸ್. ಮನಗೊಳ್ಳಿ. ಇದೇ ಸಂದರ್ಭದಲ್ಲಿ ಮಹೇಂದ್ರಕುಮಾರ ಬಾಲಗವಿಯವರ ಮೂಲಕ ಎಸ್.ಎಲ್. ಭಂಡಾರಕರ್ ಅವರಿಗೆ ಕೂಟದ ಪರಿಚಯವಾಯಿತು. ಅವರು ಆಜೀವ ಸದಸ್ಯರಾದರು.ಬಾಲ್ಯದಿಂದಲೂ ನಾಟಕಗಳಲ್ಲಿ ಆಸಕ್ತಿ ಹೊಂದಿದ್ದ ಭಂಡಾರಕರ್, ಎಚ್.ಎಸ್. ಕುಲಕರ್ಣಿಯವರ ನಿರ್ದೇಶನದಲ್ಲಿ 'ದೇವರು ಎದ್ದು ಬಂದಾಗ' ನಾಟಕದಲ್ಲಿ ದೇವರ ಪಾತ್ರ ಹಾಗೂ 'ನರಕದಲ್ಲೊಂದು ನಾಟಕ'ದಲ್ಲಿ ನಾರದನ ಪಾತ್ರ ನಿರ್ವಹಿಸಿದರು. 'ದೇವರು ಎದ್ದು ಬಂದಾಗ' ನಾಟಕಕ್ಕೆ ಅತ್ಯುತ್ತಮ ನಾಟಕ ಪ್ರಶಸ್ತಿ ಲಭಿಸಿತು. ಈ ನಾಟಕೀಯ ಚಟುವಟಿಕೆಗಳ ಮೂಲಕ ಎಸ್.ಎಲ್. ಭಂಡಾರಕರ್ ಮತ್ತು ಸಂಜೀವ ದೇಶಪಾಂಡೆ ಕಾರ್ಯಕಾರಿ ಸಮಿತಿಯೊಂದಿಗೆ ಸಕ್ರಿಯವಾಗಿ ತೊಡಗಿಸಿಕೊಂಡರು.2002ರಲ್ಲಿ ನಡೆದ ಚುನಾವಣೆಯಲ್ಲಿ ಪಿ.ಎಲ್. ಅಗ್ನಿಹೋತ್ರಿ ಅಧ್ಯಕ್ಷರಾಗಿ, ಎಸ್.ಎಲ್. ಭಂಡಾರಕರ್ ಕಾರ್ಯದರ್ಶಿಯಾಗಿ ಆಯ್ಕೆಯಾದರು. ಕೆ.ಟಿ. ಗೌಡ ಉಪಾಧ್ಯಕ್ಷರಾದರು. ಈ ಅವಧಿಯಲ್ಲಿ ಭಂಡಾರಕರ್ ನಿರ್ದೇಶಿಸಿದ 'ಜಾತ್ರೆ' ನಾಟಕ ದೆಹಲಿ ಕರ್ನಾಟಕ ಸಂಘದ ನಾಟಕೋತ್ಸವದಲ್ಲಿ ಅತ್ಯುತ್ತಮ ನಾಟಕ ಪ್ರಶಸ್ತಿ ಗಳಿಸಿತು. ಮುರಳೀಧರ ಮುಧೋಳ ಅವರಿಗೆ ಅತ್ಯುತ್ತಮ ನಟ ಪ್ರಥಮ ಪ್ರಶಸ್ತಿ ದೊರೆಯಿತು. ನಾಟಕಕ್ಕೆ ರೋಲಿಂಗ್ ಶೀಲ್ಡ್ ಕೂಡ ಲಭಿಸಿತು. ಹಿರಿಯ ರಂಗಕರ್ಮಿ ಬಿ. ಜಯಶ್ರೀ ಅವರಿಂದ ಪ್ರಶಸ್ತಿ ಸ್ವೀಕರಿಸಿದ್ದು ಕೂಟದ ಸದಸ್ಯರಿಗೆ ಹೆಮ್ಮೆಯ ಕ್ಷಣವಾಗಿತ್ತು.ಇದೇ ವರ್ಷ ಕೆ.ಟಿ. ಗೌಡರು 'ಕನ್ನಡ ಕೂಟ ರತ್ನ' ಪ್ರಶಸ್ತಿಯನ್ನು ಆರಂಭಿಸಿದರು. ಮೊದಲ ಪ್ರಶಸ್ತಿಯನ್ನು ಎಚ್.ಎಸ್. ಕುಲಕರ್ಣಿ ಅವರಿಗೆ ನೀಡಲಾಯಿತು.2003ರಲ್ಲಿ ಕೆ.ಟಿ. ಗೌಡ ಅಧ್ಯಕ್ಷರಾದರು. ಕೆ.ಬಿ. ದೇಸಾಯಿ ಉಪಾಧ್ಯಕ್ಷರಾಗಿ, ಎಸ್.ಎಲ್. ಭಂಡಾರಕರ್ ಕಾರ್ಯದರ್ಶಿಯಾಗಿ ಮುಂದುವರಿದರು. ಸಂಜೀವ ದೇಶಪಾಂಡೆ ಜಂಟಿ ಕಾರ್ಯದರ್ಶಿಯಾಗಿ, ಮಂಜುನಾಥ ಶೆಟ್ಟಿ ಖಜಾಂಚಿಯಾಗಿ ತಂಡಕ್ಕೆ ಸೇರಿದರು. ಇದೇ ವರ್ಷ ಸಂಸ್ಥಾಪಕ ಸದಸ್ಯ ಕೆ.ಬಿ. ದೇಸಾಯಿ ಅವರಿಗೆ 'ಜನಕಪುರಿ ಕನ್ನಡ ಕೂಟ ರತ್ನ' ಪ್ರಶಸ್ತಿ ನೀಡಿ ಗೌರವಿಸಲಾಯಿತು.2004ರ ಜನವರಿಯಲ್ಲಿ ಮುಂಬೈನಲ್ಲಿ ನಡೆದ ಹೊರನಾಡ ಕನ್ನಡಿಗರ ಸಂಸ್ಕೃತಿ ಸಮಾವೇಶದಲ್ಲಿ ಕೂಟದ ಸದಸ್ಯರು ಭಾಗವಹಿಸಿದರು. ಎಚ್.ಎಸ್. ಕುಲಕರ್ಣಿ ನಿರ್ದೇಶನದ 'ದೇವರು ಎದ್ದು ಬಂದಾಗ' ನಾಟಕವನ್ನು ದೆಹಲಿ ಕರ್ನಾಟಕ ಸಂಘದ ಸಹಯೋಗದಲ್ಲಿ ಪ್ರದರ್ಶಿಸಲಾಯಿತು. ಇದು ಕೂಟದ ಚಟುವಟಿಕೆಗಳಿಗೆ ಮತ್ತೊಂದು ಆಯಾಮ ನೀಡಿತು. ಇದೇ ವರ್ಷ ಕೆ.ಟಿ. ಗೌಡರಿಗೆ ವರ್ಗಾವಣೆಯಾದ ಹಿನ್ನೆಲೆಯಲ್ಲಿ ಜಿ.ವಿ. ನಾಯಕ ಅಧ್ಯಕ್ಷರಾಗಿ ಜವಾಬ್ದಾರಿ ವಹಿಸಿಕೊಂಡರು. ಕೂಟದ ಹಿರಿಯ ಸದಸ್ಯೆ ಹಾಗೂ ದಾನಿ ನೇತ್ರಾವತಿ ಮಯ್ಯ ಅವರಿಗೆ 'ಜನಕಪುರಿ ಕನ್ನಡ ಕೂಟ ರತ್ನ' ಪ್ರಶಸ್ತಿ ನೀಡಿ ಗೌರವಿಸಲಾಯಿತು.ಮಹಿಳಾ ಮಂಡಳಿಜನಕಪುರಿ ಕನ್ನಡ ಕೂಟದ ಬೆಳವಣಿಗೆಯಲ್ಲಿ ಮಹಿಳಾ ಮಂಡಳಿಯ ಪಾತ್ರವೂ ಮಹತ್ವದ್ದಾಗಿದೆ. 2006ರಲ್ಲಿ ಕೂಟದ 30ನೇ ವರ್ಷದ ಸಂದರ್ಭದಲ್ಲಿ ಪಾರ್ವತಿ ಭವಾನಿ ಶಂಕರ್ ಅಧ್ಯಕ್ಷರಾಗಿ ಆಯ್ಕೆಯಾದರು. ಸಂಜೀವ ದೇಶಪಾಂಡೆ ಕಾರ್ಯದರ್ಶಿಯಾದರು. ಮಹಿಳಾ ಮಂಡಳಿಯ ಸದಸ್ಯರು ನಾಟಕ, ಸಾಂಸ್ಕೃತಿಕ ಕಾರ್ಯಕ್ರಮ, ಹಬ್ಬಗಳು ಹಾಗೂ ವಾರ್ಷಿಕೋತ್ಸವಗಳಲ್ಲಿ ಸಮಾನ ಜವಾಬ್ದಾರಿ ವಹಿಸಿಕೊಂಡರು.ಈ ಅವಧಿಯಲ್ಲಿ 'ಮಂಚದ ಮೇಲಿನ ಮನುಷ್ಯ', 'ನಾಟಕ ಮಾಡುತ್ತಿದ್ದೇವೆ' ಸೇರಿದಂತೆ ಹಲವು ನಾಟಕಗಳನ್ನು ಪ್ರದರ್ಶಿಸಲಾಯಿತು. ಮಹಿಳಾ ಮಂಡಳಿಯ 'ಸೆಕೆಂಡ್ ಹ್ಯಾಂಡ್ ಸದಾಶಿವ' ನಾಟಕಕ್ಕೆ ದೆಹಲಿ ಕರ್ನಾಟಕ ಸಂಘದ ನಾಟಕೋತ್ಸವದಲ್ಲಿ ಅತ್ಯುತ್ತಮ ನಾಟಕ ಪ್ರಶಸ್ತಿ ದೊರೆಯಿತು. ಕಲ್ಪನಾ ದೇಶಪಾಂಡೆ ಅವರಿಗೆ ಅತ್ಯುತ್ತಮ ನಟಿ ಪ್ರಶಸ್ತಿ ಲಭಿಸಿತು. ನಾಟಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಕೂಟಕ್ಕೆ ಹೊಸ ಬಲ ನೀಡಿತು.2007ರಲ್ಲಿ ಡಾ. ಧೀರೇಂದ್ರ ರಾವ್ ಅಧ್ಯಕ್ಷರಾಗಿದ್ದ ಅವಧಿಯಲ್ಲಿ 'ಅಪರಾಧಿ ನಾನಲ್ಲ' ನಾಟಕವನ್ನು ಪ್ರದರ್ಶಿಸಲಾಯಿತು. ಮಹಿಳಾ ಮಂಡಳಿಯ 'ಸೆಕೆಂಡ್ ಹ್ಯಾಂಡ್ ಸದಾಶಿವ' ನಾಟಕವೂ ಪ್ರಶಸ್ತಿ ಗಳಿಸಿತು. 2008ರಲ್ಲಿ ಡಾ. ಬಿ.ಟಿ. ಚಿದಾನಂದ ಮೂರ್ತಿ ಅಧ್ಯಕ್ಷರಾದರು. ಈ ಅವಧಿಯಲ್ಲಿ ದೆಹಲಿ ಕರ್ನಾಟಕ ಸಂಘದ ಕಾರ್ಯಕಾರಿ ಸಮಿತಿಯಲ್ಲಿಯೂ ಕೂಟದ ಸದಸ್ಯರು ಪ್ರಮುಖ ಸ್ಥಾನಗಳನ್ನು ಪಡೆದರು.ಸುವರ್ಣ ಕರ್ನಾಟಕ ದೆಹಲಿ ಉತ್ಸವದಲ್ಲಿಯೂ ಕೂಟದ ಸದಸ್ಯರು ಭಾಗವಹಿಸಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿದರು. ಸಂಸ್ಥೆಯ ಹಿರಿಯ ಸದಸ್ಯ ಬಿ.ಆರ್. ವೆಂಕಟೇಶ್ ಅವರಿಗೆ 2009ರಲ್ಲಿ 'ಜನಕಪುರಿ ಕನ್ನಡ ಕೂಟ ರತ್ನ' ಪ್ರಶಸ್ತಿ ನೀಡಲಾಯಿತು.ಮರುಭೂಮಿಯಲ್ಲಿ ಕನ್ನಡದ ಕಂಪು: ಹೆಮ್ಮೆಯ ದುಬೈ ಕನ್ನಡ ಸಂಘದ ದಶಕದ ಸೇವಾ ಪಯಣ ಸಾಂಸ್ಕೃತಿಕ ಚಟುವಟಿಕೆಗಳು2010ರ ಅವಧಿಯಲ್ಲಿ ಆರೋಗ್ಯ ಶಿಬಿರ, ಮಹಿಳಾ ಮತ್ತು ಮಕ್ಕಳ ದಿನಾಚರಣೆ, ಹಬ್ಬಗಳು ಹಾಗೂ ವಾರ್ಷಿಕೋತ್ಸವದಂತಹ ಕಾರ್ಯಕ್ರಮಗಳಿಗೆ ಆದ್ಯತೆ ನೀಡಲಾಯಿತು. ಪಾರ್ವತಿ ಭವಾನಿ ಶಂಕರ್, ಬಿ.ಕೆ. ಬಸವರಾಜು, ಡಾ. ಅಶೋಕ ಎಂ. ಈಟಿ, ಸಂಜೀವ ದೇಶಪಾಂಡೆ, ಎಸ್.ಎಲ್. ಭಂಡಾರಕರ್ ಸೇರಿದಂತೆ ಹಲವು ಸದಸ್ಯರು ಸಂಸ್ಥೆಯ ಚಟುವಟಿಕೆಗಳನ್ನು ಮುನ್ನಡೆಸಿದರು.2011-12ರಲ್ಲಿ ಬಿ.ಎಸ್. ರಾಮಕೃಷ್ಣ ಅಧ್ಯಕ್ಷರಾಗಿದ್ದರು. ಈ ಅವಧಿಯಲ್ಲಿ 'ಭಕ್ತ ಪ್ರಹ್ಲಾದ' ನಾಟಕವನ್ನು ಎಂ.ವಿ. ವೆಂಕಟೇಶ್ ಬರೆದು ನಿರ್ದೇಶಿಸಿದರು. ಕೂಟಕ್ಕೆ ನೀಡಿದ ಸೇವೆಗಾಗಿ ಬಿ.ಆರ್. ವಿಶ್ವನಾಥ ಮತ್ತು ಕೆ.ಎಸ್.ಜಿ. ಶೆಟ್ಟಿ ಅವರಿಗೆ 'ಜನಕಪುರಿ ಕನ್ನಡ ಕೂಟ ರತ್ನ' ಪ್ರಶಸ್ತಿ ನೀಡಲಾಯಿತು.2012ರಿಂದ 2014ರವರೆಗೆ ಎಸ್.ಎಲ್. ಭಂಡಾರಕರ್ ಅಧ್ಯಕ್ಷರಾಗಿದ್ದರು. ಎನ್.ಆರ್. ಶ್ರೀನಾಥ ಕಾರ್ಯದರ್ಶಿಯಾಗಿ, ಹರಿಚರಣ ಕಾಮತ್ ಉಪಾಧ್ಯಕ್ಷರಾಗಿ, ಎಂ.ವಿ. ವೆಂಕಟೇಶ್ ಖಜಾಂಚಿಯಾಗಿ ಕಾರ್ಯನಿರ್ವಹಿಸಿದರು. ಈ ಅವಧಿಯಲ್ಲಿ ನಾಟಕ, ಹಬ್ಬ, ಆಟೋಟ ಸ್ಪರ್ಧೆ, ಮಹಿಳಾ ಮತ್ತು ಮಕ್ಕಳ ದಿನಾಚರಣೆ ಸೇರಿದಂತೆ ಹಲವು ಕಾರ್ಯಕ್ರಮಗಳು ನಡೆದವು. ಕೆ.ಟಿ. ಗೌಡ ಮತ್ತು ಅಶೋಕ ಹನಮಸಾಗರ ಅವರಿಗೆ ಕೂಟದ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.2014-15ರಲ್ಲಿ ಬಿ.ಕೆ. ಬಸವರಾಜು ಅಧ್ಯಕ್ಷರಾಗಿ ಮರು ಆಯ್ಕೆಯಾದರು. ಡಾ. ಬಿ.ಟಿ. ಚಿದಾನಂದ ಮೂರ್ತಿ ಮತ್ತು ಡಾ. ಕಿರಣ ಡಂಬಳ್ಕರ್ ಅವರಿಗೆ ಕೂಟದ ಸೇವೆಗಾಗಿ ರತ್ನ ಪ್ರಶಸ್ತಿ ನೀಡಲಾಯಿತು. 2016ರಲ್ಲಿ ಎಸ್.ಎಲ್. ಭಂಡಾರಕರ್ ಅವರಿಗೆ ದೆಹಲಿ ಕರ್ನಾಟಕ ಸಂಘದ 'ವಿಶಿಷ್ಟ ಕನ್ನಡಿಗ' ಪ್ರಶಸ್ತಿ ಲಭಿಸಿತು. ನಾಟಕ ಮತ್ತು ಶಿಕ್ಷಣ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆಯನ್ನು ಪರಿಗಣಿಸಿ ಈ ಗೌರವ ನೀಡಲಾಯಿತು.2017ರಲ್ಲಿ ಜನಕಪುರಿ ಮಹಿಳಾ ಮಂಡಳಿಯ ಬೆಳ್ಳಿಹಬ್ಬ ಆಚರಿಸಲಾಯಿತು. ಈ ಸಂದರ್ಭದಲ್ಲಿ 'ದೇವರು ಎದ್ದು ಬಂದಾಗ' ನಾಟಕವನ್ನು ಮೂರನೇ ಬಾರಿಗೆ ಪ್ರದರ್ಶಿಸಲಾಯಿತು. ಕೂಟದ ಸದಸ್ಯರು ಮತ್ತು ಮಹಿಳಾ ಮಂಡಳಿಯ ಸದಸ್ಯೆಯರು ಒಟ್ಟಾಗಿ ಈ ಪ್ರದರ್ಶನದಲ್ಲಿ ಪಾಲ್ಗೊಂಡರು.ಸಾಗರದಾಚೆ ಕನ್ನಡದ ಕಂಪು: ಕತಾರ್ನಲ್ಲಿ ಕನ್ನಡತನದ ಬೆಳ್ಳಿ ಹಬ್ಬದ ಪಯಣ ಹೊಸ ತಲೆಮಾರಿನ ನಾಯಕತ್ವ2018 ಮತ್ತು 2019ರಲ್ಲಿ ಬಿ.ಕೆ. ಬಸವರಾಜು ಅಧ್ಯಕ್ಷರಾಗಿ ಮುಂದುವರಿದರು. ಈ ಅವಧಿಯಲ್ಲಿಯೂ ರಾಮನವಮಿ, ಗಣೇಶ ಹಬ್ಬ, ಆಟೋಟ ಸ್ಪರ್ಧೆಗಳು, ರಾಜ್ಯೋತ್ಸವ ಮತ್ತು ವಾರ್ಷಿಕೋತ್ಸವದಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆದವು.2020ರಲ್ಲಿ ಎನ್.ಆರ್. ಶ್ರೀನಾಥ ಅಧ್ಯಕ್ಷರಾಗಿ ಜವಾಬ್ದಾರಿ ವಹಿಸಿಕೊಂಡರು. ಶೇಷಗಿರಿ ನಾಯಕ್ ಕಾರ್ಯದರ್ಶಿಯಾದರು. ಕೊರೊನಾ ಸಾಂಕ್ರಾಮಿಕದ ಸಂಕಷ್ಟದ ಅವಧಿಯಲ್ಲಿಯೂ ಕೂಟವು ಸದಸ್ಯರೊಂದಿಗೆ ನಿಂತಿತು. ಅಧ್ಯಕ್ಷರಾಗಿದ್ದ ಶ್ರೀನಾಥ ಅವರು ಸಂಕಷ್ಟದಲ್ಲಿದ್ದ ಸದಸ್ಯರಿಗೆ ನೆರವಾಗಲು ಮುಂದಾದರು. ಸದಸ್ಯರ ಕಷ್ಟ-ಸುಖಗಳಲ್ಲಿ ಜೊತೆಯಾಗಿ ನಿಲ್ಲುವ ಈ ನಡೆ ಸಂಸ್ಥೆಯ ಸಾಮಾಜಿಕ ಬದ್ಧತೆಯನ್ನು ತೋರಿಸಿತು.2022ರಿಂದ 2024ರವರೆಗೆ ಎನ್.ಆರ್. ಶ್ರೀನಾಥ ಅಧ್ಯಕ್ಷರಾಗಿ ಮುಂದುವರಿದರು. ಈ ಅವಧಿಯಲ್ಲಿ ಗಣೇಶೋತ್ಸವ, ವಾರ್ಷಿಕೋತ್ಸವ, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ವಿವಿಧ ಚಟುವಟಿಕೆಗಳು ನಡೆದವು. ಹಿರಿಯ ಸದಸ್ಯೆ ಉಮಾ ರಾವ್, ಬಿ.ಕೆ. ಬಸವರಾಜು ಮತ್ತು ಸಂಜೀವ ದೇಶಪಾಂಡೆ ಅವರಿಗೆ ಸಂಸ್ಥೆಯ ಸೇವೆಗಾಗಿ 'ಜನಕಪುರಿ ಕನ್ನಡ ಕೂಟ ರತ್ನ' ಪ್ರಶಸ್ತಿ ನೀಡಿ ಗೌರವಿಸಲಾಯಿತು. 2024ರಲ್ಲಿ ಕಲಾವಿದೆ ಮತ್ತು ನೃತ್ಯ ಶಿಕ್ಷಕಿ ಕಲ್ಪನಾ ದೇಶಪಾಂಡೆ ಅವರಿಗೆ ಮರಣೋತ್ತರವಾಗಿ ಕೂಟ ರತ್ನ ಪ್ರಶಸ್ತಿ ನೀಡಲಾಯಿತು.2025ರಲ್ಲಿ ಡಾ. ಅಶೋಕ ಎಂ. ಈಟಿ ಅಧ್ಯಕ್ಷರಾಗಿ ಆಯ್ಕೆಯಾದರು. ಅವರ ನೇತೃತ್ವದ ಸಮಿತಿಯಲ್ಲಿ ಡಾ. ಬಸವರಾಜ್, ರಾಜನಾರಾಯಣ, ಕೃಷ್ಣರಾಜ್, ಎಂ.ವಿ. ವೆಂಕಟೇಶ್ ಸೇರಿದಂತೆ ಹಲವು ಸದಸ್ಯರು ಜವಾಬ್ದಾರಿ ವಹಿಸಿಕೊಂಡರು. ರಾಮನವಮಿ, ಗಣೇಶ ಪೂಜೆ, ಆಟೋಟ ಸ್ಪರ್ಧೆ ಹಾಗೂ ಸುವರ್ಣ ಮಹೋತ್ಸವದ ಕರ್ಟನ್ ರೈಸರ್ ಕಾರ್ಯಕ್ರಮಗಳನ್ನು ಆಯೋಜಿಸಲಾಯಿತು.2026ರಲ್ಲಿ ಡಾ. ಅಶೋಕ ಎಂ. ಈಟಿ ಅಧ್ಯಕ್ಷರಾಗಿ ಮುಂದುವರಿದರೆ, ಡಾ. ಎಸ್.ಎಲ್. ಭಂಡಾರಕರ್ ಉಪಾಧ್ಯಕ್ಷರಾಗಿ, ಡಾ. ಬಸವರಾಜ್ ಕಾರ್ಯದರ್ಶಿಯಾಗಿ ಆಯ್ಕೆಯಾದರು. ಸುವರ್ಣ ಮಹೋತ್ಸವದ ಅಂಗವಾಗಿ ನಾಟಕ, ಆಟೋಟ ಸ್ಪರ್ಧೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಸಿದ್ಧತೆಯನ್ನು ಸಮಿತಿ ಕೈಗೊಂಡಿತು. ಜನಕಪುರಿ ಮಹಿಳಾ ಮಂಡಳಿಯೂ ಈ ಸಂಭ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದೆ.ಐದು ದಶಕಗಳ ಕನ್ನಡದ ಸೇತು1976ರಲ್ಲಿ ಕೆಲವೇ ಕನ್ನಡಿಗರ ಒಗ್ಗೂಡುವಿಕೆಯಿಂದ ಆರಂಭವಾದ ಜನಕಪುರಿ ಕನ್ನಡ ಕೂಟ, ಇಂದು ಐದು ದಶಕಗಳ ಸಾಂಸ್ಕೃತಿಕ ಪಯಣವನ್ನು ಪೂರೈಸಿದೆ. ಈ ಅವಧಿಯಲ್ಲಿ ಹಲವು ಅಧ್ಯಕ್ಷರು, ಕಾರ್ಯದರ್ಶಿಗಳು, ಪದಾಧಿಕಾರಿಗಳು, ಮಹಿಳಾ ಮಂಡಳಿಯ ಸದಸ್ಯರು ಮತ್ತು ಸ್ವಯಂಸೇವಕರು ಸಂಸ್ಥೆಯ ಬೆಳವಣಿಗೆಗೆ ಶ್ರಮಿಸಿದ್ದಾರೆ. ಸಂಸ್ಥಾಪಕರ ದೂರದೃಷ್ಟಿ ಮತ್ತು ಸದಸ್ಯರ ನಿರಂತರ ಸಹಕಾರವೇ ಈ ಪಯಣದ ಹಿಂದಿನ ಶಕ್ತಿ.ಕನ್ನಡ ಭಾಷೆ, ಸಂಗೀತ, ನೃತ್ಯ, ನಾಟಕ ಮತ್ತು ಸಮಾಜಸೇವೆಯ ಮೂಲಕ ದೆಹಲಿಯಲ್ಲಿ ಕನ್ನಡತನವನ್ನು ಜೀವಂತವಾಗಿರಿಸಿರುವ ಕೂಟ, ವಿವಿಧ ತಲೆಮಾರುಗಳನ್ನು ಬೆಸೆಯುವ ಕೊಂಡಿಯಾಗಿದೆ. ಇದು ಕೇವಲ ಒಂದು ಸಂಸ್ಥೆಯ ಸುವರ್ಣ ಮಹೋತ್ಸವವಲ್ಲ; ತಾಯ್ನಾಡಿನಿಂದ ದೂರವಿದ್ದರೂ ಭಾಷೆ, ಸಂಸ್ಕೃತಿ ಮತ್ತು ಸಮುದಾಯದ ನಂಟನ್ನು ಉಳಿಸಿಕೊಂಡು ಬಂದ ಕನ್ನಡಿಗರ ಐದು ದಶಕಗಳ ಒಗ್ಗಟ್ಟಿನ ಸಂಭ್ರಮವೂ ಹೌದು.AI ಯುಗದಲ್ಲಿ ಕನ್ನಡ ಭಾಷೆಯ ಮುಂದಿರುವ ಸವಾಲುಗಳು