ಫ್ಯಾಕ್ಟ್ಚೆಕ್: ದೆಹಲಿ ಮಾಲಿನ್ಯಕ್ಕೆ ಮತಕಳವು ಕಾರಣ ಎಂದು ರಾಹುಲ್ ಹೇಳಿಲ್ಲ
ಕಾಂಗ್ರೆಸ್ ಮುಖಂಡ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಭಾಷಣದ ವಿಡಿಯೊವೊಂದನ್ನು ‘ರಿಪಬ್ಲಿಕ್’ ವಾಹಿನಿಯ ಅಧಿಕೃತ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ‘ಇದೇ ನವೆಂಬರ್ 1ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ರಾಹುಲ್ ಅವರು ಮಾತನಾಡುತ್ತಾ, ರಾಷ್ಟ್ರದ ರಾಜಧಾನಿಯಲ್ಲಿನ ಮಾಲಿನ್ಯಕ್ಕೆ ಮತಕಳವು ಕಾರಣ ಎಂದಿದ್ದಾರೆ’ ಎಂದು ‘ರಿಪಬ್ಲಿ

ಕಾಂಗ್ರೆಸ್ ಮುಖಂಡ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಭಾಷಣದ ವಿಡಿಯೊವೊಂದನ್ನು ‘ರಿಪಬ್ಲಿಕ್’ ವಾಹಿನಿಯ ಅಧಿಕೃತ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ‘ಇದೇ ನವೆಂಬರ್ 1ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ರಾಹುಲ್ ಅವರು ಮಾತನಾಡುತ್ತಾ, ರಾಷ್ಟ್ರದ ರಾಜಧಾನಿಯಲ್ಲಿನ ಮಾಲಿನ್ಯಕ್ಕೆ ಮತಕಳವು ಕಾರಣ ಎಂದಿದ್ದಾರೆ’ ಎಂದು ‘ರಿಪಬ್ಲಿಕ್’ ಪ್ರತಿಪಾದಿಸಿದೆ. ಆದರೆ, ಇದು ವಾಸ್ತವ ಅಲ್ಲ.ಮೊದಲಿಗೆ, ನಿರ್ದಿಷ್ಟ ಪದದ ಮೂಲಕ ಗೂಗಲ್ನಲ್ಲಿ ಹುಡುಕಾಟ ನಡೆಸಿದಾಗ, ಅದು ‘ಜೀ ಬ್ಯುಸಿನೆಸ್’ ಮಾಧ್ಯಮದಲ್ಲಿ 2025ರ ಡಿ.15ರಂದು ಪ್ರಕಟವಾಗಿದ್ದ ವರದಿಗೆ ಸಂಪರ್ಕ ಕಲ್ಪಿಸಿತು. ರಾಮಲೀಲಾ ಮೈದಾನದಲ್ಲಿ ರಾಹುಲ್ ಗಾಂಧಿ ಅವರು ಮಾತನಾಡಿದ್ದರ ಬಗೆಗಿನ ವರದಿ ಅದು. ಹುಡುಕಾಟ ಮುಂದುವರಿಸಿದಾಗ, ಅದರ ನೇರಪ್ರಸಾರದ ವಿಡಿಯೊ ಕಂಡಿತು. ಅದರಲ್ಲಿ, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದ ರಾಹುಲ್ ಅವರು, ಮತಕಳವಿನ ಮೂಲಕ ಬಿಜೆಪಿ ಅಧಿಕಾರದಲ್ಲಿ ಮುಂದುವರಿಯುತ್ತಿದೆ ಎಂದು ಆರೋಪಿಸಿರುವುದು ಕಂಡಿತು. ‘ಮತಕಳವು ಅಂಬೇಡ್ಕರ್ ರಚಿಸಿದ ಸಂವಿಧಾನದ ಮೇಲೆ ನಡೆಸಿದ ದಾಳಿಯಾಗಿದೆ. ಬಿಜೆಪಿ ಸಣ್ಣ ಉದ್ದಿಮೆಗಳನ್ನು ನಾಶಪಡಿಸಿತು. ದೋಷಪೂರಿತ ಜಿಎಸ್ಟಿ ಜಾರಿಗೊಳಿಸಿತು. ನಿರುದ್ಯೋಗ ಮತ್ತು ಮಾಲಿನ್ಯದತ್ತ ನೋಡಿ. ಇವೆಲ್ಲವೂ ನಡೆಯುತ್ತಿರುವುದಕ್ಕೆ ಮತಗಳ್ಳತನವೇ ಕಾರಣ’ ಎಂದು ರಾಹುಲ್ ಆರೋಪಿಸಿದ್ದರು. ಅವರ ಹಳೆಯ ವಿಡಿಯೊ ಅನ್ನು ಹಂಚಿಕೊಂಡು ಈಗ ಸುಳ್ಳು ಸುದ್ದಿ ಹರಡಲಾಗುತ್ತಿದೆ ಎಂದು ಬೂಮ್ ಫ್ಯಾಕ್ಟ್ ಚೆಕ್ ವರದಿ ತಿಳಿಸಿದೆ.ಕ್