ಪದಕಟ್ಟು ಭಾಗ– 4: ಕನ್ನಡದಲ್ಲಿ ಹೊಸ ಶಬ್ದಸೃಷ್ಟಿ ಮತ್ತು ಪರ್ಯಾಯ ಪದಗಳ ಯಶೋಗಾಥೆ
ಇಂಗ್ಲಿಷ್ ಸೇರಿದಂತೆ ಅನ್ಯಭಾಷೆಯ ತಾಂತ್ರಿಕ ಹಾಗೂ ದಿನನಿತ್ಯದ ಪದಗಳಿಗೆ ಕನ್ನಡದಲ್ಲಿ ಅತ್ಯಂತ ಸರಳ, ಅರ್ಥಪೂರ್ಣ ಮತ್ತು ನಾದಮಯ ಪರ್ಯಾಯ ಪದಗಳನ್ನು ಸೃಷ್ಟಿಸಿದ ಇತಿಹಾಸ ನಮಗೆ ದೊಡ್ಡದಿದೆ. ಶಬ್ದಗಳನ್ನು ಕೇವಲ ಅನುವಾದ ಮಾಡದೇ, ಕನ್ನಡಿಗರ ನಾಲಿಗೆಯಲ್ಲಿ ಸುಲಭವಾಗಿ ಹರಿದಾಡುವಂತೆ ಹೊಸ ಪದಗಳನ್ನು "ಕಟ್ಟಿದ" ನಮ್ಮ ಹಿರಿಯರ ಸೃಜನಶೀಲತೆ ಅಪಾರವಾದದ್ದು.ಅಂತಹ ಕೆಲವು ಪ್ರಮುಖ

ಇಂಗ್ಲಿಷ್ ಸೇರಿದಂತೆ ಅನ್ಯಭಾಷೆಯ ತಾಂತ್ರಿಕ ಹಾಗೂ ದಿನನಿತ್ಯದ ಪದಗಳಿಗೆ ಕನ್ನಡದಲ್ಲಿ ಅತ್ಯಂತ ಸರಳ, ಅರ್ಥಪೂರ್ಣ ಮತ್ತು ನಾದಮಯ ಪರ್ಯಾಯ ಪದಗಳನ್ನು ಸೃಷ್ಟಿಸಿದ ಇತಿಹಾಸ ನಮಗೆ ದೊಡ್ಡದಿದೆ. ಶಬ್ದಗಳನ್ನು ಕೇವಲ ಅನುವಾದ ಮಾಡದೇ, ಕನ್ನಡಿಗರ ನಾಲಿಗೆಯಲ್ಲಿ ಸುಲಭವಾಗಿ ಹರಿದಾಡುವಂತೆ ಹೊಸ ಪದಗಳನ್ನು "ಕಟ್ಟಿದ" ನಮ್ಮ ಹಿರಿಯರ ಸೃಜನಶೀಲತೆ ಅಪಾರವಾದದ್ದು.ಅಂತಹ ಕೆಲವು ಪ್ರಮುಖ ಪದಗಳು, ಅವು ಹುಟ್ಟಿದ ಸಂದರ್ಭ ಮತ್ತು ಬಳಕೆಗೆ ಬಂದ ಹಾದಿಯ ಅವಲೋಕನ ಮಾಡುವುದಾದರೆ ‘ನಾ ಕಸ್ತೂರಿ’ (ರಂಗನಾಥ ಶರ್ಮಾ/ಕಸ್ತೂರಿ ರಂಗನಾಥ ಶರ್ಮ)ಯವರ ಹೆಸರು ನೆನಪಿಗೆ ಬರುತ್ತದೆ. Radio ಎಂಬ ಇಂಗ್ಲೀಷ್ ಪದಕ್ಕೆ ‘ಆಕಾಶವಾಣಿ’ ಎಂಬ ಸುಂದರ, ಉಚ್ಛರಿಸಲು ಸುಲಭವಾದ ಪದವನ್ನು ಕಟ್ಟಿ ಕೊಟ್ಟವರು ನಾ. ಕಸ್ತೂರಿಯವರೇ.ಕರುನಾಡೋತ್ಸವ ’ಪದ ಕಟ್ಟು‘ ಭಾಗ–3: ಇಂದಿನ ಸವಾಲುಕರುನಾಡೋತ್ಸವ ’ಪದ ಕಟ್ಟು‘ ಭಾಗ–1: ಇಂದಿನ ಸವಾಲುಅದು 1935ರ ಸಮಯ. ಮೈಸೂರಿನಲ್ಲಿ ಪ್ರೊ. ಎಂ.ವಿ. ಗೋಪಾಲಸ್ವಾಮಿಯವರು ತಮ್ಮ ಮನೆಯಲ್ಲೇ ಖಾಸಗಿಯಾಗಿ ರೇಡಿಯೋ ಕೇಂದ್ರವೊಂದನ್ನು ಆರಂಭಿಸುತ್ತಾರೆ. ಆಗೆಲ್ಲ ಸಾಮಾನ್ಯವಾಗಿ ಇಂಗ್ಲಿಷ್ನ 'ರೇಡಿಯೋ' ಎಂಬ ಪದವನ್ನೇ ಕನ್ನಡದ ಅಕ್ಷರಗಳಲ್ಲಿ ಬಳಸಲಾಗುತ್ತಿತ್ತು. ಅದೊಂದು ದಿನ ರೇಡಿಯೋಕ್ಕೆ ಸಮರ್ಥ ಕನ್ನಡದ ಪದವೊಂದನ್ನು ಹುಟ್ಟುಹಾಕಬೇಕೆಂಬ ಯೋಚನೆ ಗೋಪಾಲಸ್ವಾಮಿಯವರಿಗೆ ಬಂತು. ಗೆಳೆಯರೂ ವಿದ್ವಾಂಸರೂ ಕನ್ನಡದ ಪ್ರಸಿದ್ಧ ಲೇಖಕರೂ ಆದ ನಾ ಕಸ್ತೂರಿಯವರ ಬಳಿ ಇದನ್ನು ಚರ್ಚಿಸಿದರು. ಅವರು ಈ ಪ್ರಸಾರ ಕೇಂದ್ರಕ್ಕೆ ‘ಆಕಾಶವಾಣಿ’ (ಆಕಾಶದಿಂದ ಬರುವ ಧ್ವನಿ) ಎಂಬ ಅದ್ಭುತ ಅಚ್ಚಕನ್ನಡ-ಸಂಸ್ಕೃತ ಸಮ್ಮಿಶ್ರಣದ ಪದವನ್ನು ನೀಡಿದರು. ಈ ಪದದ ಸೌಂದರ್ಯ ಎಷ್ಟಿತ್ತೆಂದರೆ, ಮುಂದೆ 1956ರಲ್ಲಿ ಭಾರತ ಸರ್ಕಾರವು ತನ್ನ ಆಲ್ ಇಂಡಿಯಾ ರೇಡಿಯೋ (AIR) ಅನ್ನು ಇಡೀ ದೇಶಾದ್ಯಂತ 'ಆಕಾಶವಾಣಿ' ಎಂದೇ ಹೆಸರಿಸಿ ಪ್ರಚುರಪಡಿಸಿತು. ಅದೇ ರೀತಿ, ‘ಬಾನುಲಿ’ (ಬಾನ್ + ಉಲಿ = ಆಕಾಶದ ಧ್ವನಿ) ಎಂಬ ಇನ್ನೊಂದು ಅಚ್ಚಕನ್ನಡ ಪದವನ್ನು ಕೋ. ಚೆನ್ನಬಸಪ್ಪ ಹಾಗೂ ನಿರಂಜನ ಅವರಂತಹ ಸಾಹಿತಿಗಳು ಜನಪ್ರಿಯಗೊಳಿಸಿದರು. ಇಂದು ರೇಡಿಯೋಗೆ ಪರ್ಯಾಯವಾಗಿ ಇಡೀ ನಾಡಿನಲ್ಲಿ ‘ಬಾನುಲಿ’ ಮತ್ತು ದೇಶದಲ್ಲಿ ‘ಆಕಾಶವಾಣಿ’ ಪದಗಳು ರೇಡಿಯೋ ಪದವನ್ನೇ ಮರೆಸುವಷ್ಟರ ಮಟ್ಟಿಗೆ ಬೇರೂರಿವೆ.ಹಾಗೆಯೇ ‘ದೂರದರ್ಶನ’ (Television) ಪದ ಹುಟ್ಟಿದ ಸನ್ನಿವೇಶವೂ ರೋಚಕ. ಇಂಗ್ಲಿಷ್ನ 'Tele' (ದೂರದ) ಮತ್ತು 'Vision' (ನೋಟ/ದರ್ಶನ) ಎಂಬ ಪದಗಳಿಂದ ರೂಪುಗೊಂಡ ಟೆಲಿವಿಷನ್ಗೆ ಆರಂಭದಲ್ಲಿ 'ಚಿತ್ರವಾಣಿ', 'ದೂರಚಿತ್ರ' ಎಂದೆಲ್ಲ ಕರೆಯಲಾಗುತ್ತಿತ್ತು. ಕನ್ನಡ ಭಾಷಾತಜ್ಞರು ಮತ್ತು ಮಾಧ್ಯಮ ಲೋಕದ ಹಿರಿಯರು 'ದೂರದಲ್ಲಿ ನಡೆಯುವ ಘಟನೆಯನ್ನು ಮನೆಯಲ್ಲಿ ಕುಳಿತು ನೋಡುವ ಸಾಧನ' ಎಂಬ ಸನ್ನಿವೇಶಕ್ಕೆ ಸರಿಯಾಗಿ ‘ದೂರದರ್ಶನ’ ಎಂಬ ಪದವನ್ನು ನೀಡಿದರು. ಅಲ್ಲದೆ ಟೆಲಿವಿಷನ್ ತಂತ್ರಜ್ಞಾನದ ಪ್ರಸಾರಕ್ಕೆ ‘ದೂರಸಂಪರ್ಕ’ ಮತ್ತು ಪ್ರಸಾರ ಪ್ರಕ್ರಿಯೆಗೆ ‘ಬಿತ್ತರ’ (Broadcast - ಬೀಜ ಬಿತ್ತುವಂತೆ ಧ್ವನಿ/ಚಿತ್ರಗಳನ್ನು ಎಲ್ಲೆಡೆ ಹರಡುವುದು) ಎಂಬ ಪದಗಳನ್ನು ಕಟ್ಟಿದರು. ಇಂದಿಗೂ ಇವು ಮಾಧ್ಯಮ ರಂಗದಲ್ಲಿ ಅಧಿಕೃತವಾಗಿ ಬಳಕೆಯಾಗುತ್ತಿವೆ. ಕನ್ನಡದ ಭಾಷಾ ಸಾಮರ್ಥ್ಯಕ್ಕೆ ಇವು ಚಿಕ್ಕ ಉದಾಹರಣೆಗಳು.ಆ ದೃಷ್ಟಿಯಿಂದ ಕನ್ನಡ ರಾಜ್ಯೋತ್ಸವದ ತಿಂಗಳಿನಲ್ಲಿ ನಮ್ಮಲ್ಲಿ ಬಳಕೆಯಲ್ಲಿರುವ ಒಂದಷ್ಟು ಪರಕೀಯ ಪದಗಳಿಗೆ ಪರ್ಯಾಯ ಕನ್ನಡ ಪದಗಳನ್ನು ಕಟ್ಟುವ ಪಯತ್ನಕ್ಕೆ ಮುಂದಾಗಿದೆ ‘ಪ್ರಜಾವಾಣಿ ಡಿಜಿಟಲ್’. ಕನ್ನಡದ ಪದರಚನೆಗೆ ಹೊಂದುವ, ಚಿಕ್ಕದಾದ, ಅರ್ಥಪೂರ್ಣವಾದ, ವ್ಯಾಕರಣಬದ್ಧವಾದ ಮತ್ತು ಜನಸಾಮಾನ್ಯರು ಸುಲಭವಾಗಿ ಬಳಸಬಹುದಾದ ಪರ್ಯಾಯ ಪದಗಳ ಸೃಷ್ಟಿಯ ಈ ಸವಾಲನ್ನು ಓದುಗರಾದ ನಿಮ್ಮ ಮುಂದೆಯೂ ತರುತ್ತಿದ್ದೇವೆ. ನಮ್ಮೊಂದಿಗೆ ನೀವೂ ಪ್ರಯತ್ನಿಸಿ ನೋಡಿ. ಒಳ್ಳೆಯ ಪದಗಳು ಹೊಳೆದರೆ ಇಲ್ಲಿಯೇ ಛಾಪಿಸಿ. ಆಯ್ದು ಸೂಕ್ತ ಪರ್ಯಾಯ ಪದಗಳನ್ನು ನಾಳೆ Prajavani. Net ನಲ್ಲಿ ಪ್ರಕಟಿಸುತ್ತೇವೆ;ಪದಕಟ್ಟು ನಾಲ್ಕನೇ ದಿನದ ಸವಾಲು16. ಹ್ಯಾಂಗರ್ (Hanger)17. ಡೋರ್ಬೆಲ್ (Doorbell)18. ಡೋರ್ಮ್ಯಾಟ್ (Doormat)19. ಕೀ (Key)20. ಲಾಕ್ (Lock)ಪದಕಟ್ಟು ಮೂರನೇ ದಿನದ ಸವಾಲಿಗೆ ನಮ್ಮ ಸಲಹೆಗಳು ಇಂತಿವೆ;11. ಡ್ರಾಪ್ಪಾಯಿಂಟ್(Drop Point): ಇಳಿದಾಣ12. ಚೆಕ್ಪೋಸ್ಟ್(check post): ತಪಾಸಣಾ ಕೇಂದ್ರ13. ಬಕೆಟ್(Bucket): ನೀರೆತ್ತಿಗೆ (ಉಗ್ಗ)14.ಮಗ್(Mug): ಹಿಡಿಪಾತ್ರೆ (ಕೈಹುಟ್ಟು)15. ಬಕೆಟ್ಸ್ಟ್ಯಾಂಡ್ (bucket stand): ಪಾತ್ರೆನಿಲೆಕರುನಾಡೋತ್ಸವ ’ಪದ ಕಟ್ಟು‘ ಭಾಗ–2: ಇಂದಿನ ಸವಾಲುವಿಶ್ಲೇಷಣೆ: ಮಗುಕನ್ನಡವೇ ಕನ್ನಡದ ನಾಳೆಗಳು..! ಕನ್ನಡ ಭಾಷೆ ಕಲಿಸಿ ಹಕ್ಕೊತ್ತಾಯ