ಅಮೆರಿಕ ಚುನಾವಣೆ: ಟ್ರಂಪ್ಗೆ ಹಿನ್ನಡೆ, ಡೆಮಾಕ್ರಾಟ್ಗಳ ಪಾಲಾದ ಸೆನೆಟ್, ಹೌಸ್
ಅಮೆರಿಕದ ಮಧ್ಯಂತರ ಚುನಾವಣೆಯಲ್ಲಿ ಸೆನೆಟ್ ಮತ್ತು ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಎರಡರಲ್ಲೂ ಡೆಮಾಕ್ರಟಿಕ್ ಪಕ್ಷ ಗೆಲುವು ಸಾಧಿಸಿದೆ. ಡೊನಾಲ್ಡ್ ಟ್ರಂಪ್ ಅವರ ಅಧ್ಯಕ್ಷೀಯ ಅವಧಿಯ ಉಳಿದ ಭಾಗದಲ್ಲಿ ಕಾಂಗ್ರೆಸ್ನ (ಸಂಸತ್) ನಿಯಂತ್ರಣವನ್ನು ತನ್ನದಾಗಿಸಿಕೊಂಡಿದೆ.ಮತ ಎಣಿಕೆ ನಡೆಯುತ್ತಿದ್ದು, ಪೂರ್ಣ ಫಲಿತಾಂಶ ಹೊರಬೀಳಬೇಕಿದೆ. ಅಂದಾಜು ಫಲಿತಾಂಶಗಳು ಡೆಮಾಕ್ರಟ
ಅಮೆರಿಕದ ಮಧ್ಯಂತರ ಚುನಾವಣೆಯಲ್ಲಿ ಸೆನೆಟ್ ಮತ್ತು ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಎರಡರಲ್ಲೂ ಡೆಮಾಕ್ರಟಿಕ್ ಪಕ್ಷ ಗೆಲುವು ಸಾಧಿಸಿದೆ. ಡೊನಾಲ್ಡ್ ಟ್ರಂಪ್ ಅವರ ಅಧ್ಯಕ್ಷೀಯ ಅವಧಿಯ ಉಳಿದ ಭಾಗದಲ್ಲಿ ಕಾಂಗ್ರೆಸ್ನ (ಸಂಸತ್) ನಿಯಂತ್ರಣವನ್ನು ತನ್ನದಾಗಿಸಿಕೊಂಡಿದೆ.ಮತ ಎಣಿಕೆ ನಡೆಯುತ್ತಿದ್ದು, ಪೂರ್ಣ ಫಲಿತಾಂಶ ಹೊರಬೀಳಬೇಕಿದೆ. ಅಂದಾಜು ಫಲಿತಾಂಶಗಳು ಡೆಮಾಕ್ರಟಿಕ್ ಪಕ್ಷವು ಗೆಲುವನ್ನು ಸೂಚಿಸುತ್ತಿದ್ದು, ಅಭಿಮಾನಿಗಳು ಸಂಭ್ರಮಾಚರಣೆ ನಡೆಸುತ್ತಿದ್ದಾರೆ.ಅಮೆರಿಕದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ನಲ್ಲಿ ಡೆಮಾಕ್ರಟಿಕ್ ಪಕ್ಷ ನಿಯಂತ್ರಣ ಸಾಧಿಸಿದ್ದು, ಕಳೆದ ಸುಮಾರು ಎರಡು ದಶಕಗಳಲ್ಲೇ ಪಕ್ಷ ಅತಿ ಹೆಚ್ಚು ಸ್ಥಾನಗಳನ್ನು ಗಳಿಸುವ ಸಾಧ್ಯತೆಯಿದೆ ಎಂದು ಎನ್ಬಿಸಿ ನ್ಯೂಸ್ ಅಂದಾಜಿಸಿದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ರಿಪಬ್ಲಿಕನ್ ಪಕ್ಷಕ್ಕೆ ಮತದಾರರು ತೀವ್ರ ಹಿನ್ನಡೆ ನೀಡಿದ್ದಾರೆ.ಡೆಮಾಕ್ರಟಿಕ್ ಪಕ್ಷ ಸುಮಾರು 255 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆ ಇದೆ. ಮತ ಎಣಿಕೆ ಪೂರ್ಣಗೊಂಡರೆ ಕೆಲವು ಸ್ಥಾನಗಳಷ್ಟು ಏರಿಳಿತವಾಗಬಹುದು. ಬಹುಮತಕ್ಕೆ 218 ಸ್ಥಾನಗಳು ಬೇಕು. ದಕ್ಷಿಣ ಕೆರೊಲಿನಾ, ಉತ್ತರ ಕೆರೊಲಿನಾ, ಮಿಷಿಗನ್, ಓಹಿಯೊ ಮತ್ತು ಟೆಕ್ಸಾಸ್ ರಾಜ್ಯಗಳಲ್ಲಿ ಡೊನಾಲ್ಡ್ ಟ್ರಂಪ್ ಬೆಂಬಲಿತ ಅಭ್ಯರ್ಥಿಗಳು ಸೋಲು ಕಂಡಿದ್ದಾರೆ.