ಬದಲಾವಣೆ ಬಯಸಿದ ಅಮೆರಿಕನ್ನರು: ಮಧ್ಯಂತರ ಚುನಾವಣೆಯಲ್ಲಿ ಟ್ರಂಪ್ಗೆ ಹಿನ್ನಡೆ
ವಾಷಿಂಗ್ಟನ್: ಅಮೆರಿಕದಲ್ಲಿ ನವೆಂಬರ್ 3ರಂದು (ಮಂಗಳವಾರ) ಮಧ್ಯಂತರ ಚುನಾವಣೆ ನಡೆದಿದ್ದು, ಫಲಿತಾಂಶ ಪ್ರಕಟಗೊಳ್ಳುತ್ತಿವೆ. ಆರಂಭಿಕ ಹಂತದಲ್ಲಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಗಳು ಹಲವು ರಾಜ್ಯಗಳಲ್ಲಿ ಜಯ ಸಾಧಿಸಿದ್ದು, ಅಮೆರಿಕನ್ನರು ಬದಲಾವಣೆ ಬಯಸಿರುವ ಸೂಚನೆ ಸಿಕ್ಕಿದೆ.ಓಹಿಯಾ, ಜಾರ್ಜಿಯಾ, ಕೆರೊಲಿನಾ ಸೇರಿದಂತೆ ಹಲವು ರಾಜ್ಯಗಳಲ್ಲಿ ಮತದಾನ ಮುಗಿಯುತ್ತಿದ್ದಂತೆ

ವಾಷಿಂಗ್ಟನ್: ಅಮೆರಿಕದಲ್ಲಿ ನವೆಂಬರ್ 3ರಂದು (ಮಂಗಳವಾರ) ಮಧ್ಯಂತರ ಚುನಾವಣೆ ನಡೆದಿದ್ದು, ಫಲಿತಾಂಶ ಪ್ರಕಟಗೊಳ್ಳುತ್ತಿವೆ. ಆರಂಭಿಕ ಹಂತದಲ್ಲಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಗಳು ಹಲವು ರಾಜ್ಯಗಳಲ್ಲಿ ಜಯ ಸಾಧಿಸಿದ್ದು, ಅಮೆರಿಕನ್ನರು ಬದಲಾವಣೆ ಬಯಸಿರುವ ಸೂಚನೆ ಸಿಕ್ಕಿದೆ.ಓಹಿಯಾ, ಜಾರ್ಜಿಯಾ, ಕೆರೊಲಿನಾ ಸೇರಿದಂತೆ ಹಲವು ರಾಜ್ಯಗಳಲ್ಲಿ ಮತದಾನ ಮುಗಿಯುತ್ತಿದ್ದಂತೆ ಫಲಿತಾಂಶ ಪ್ರಕಟವಾಗಿವೆ. ಡೆಮಾಕ್ರಟಿಕ್ ಅಭ್ಯರ್ಥಿಗಳು ಹೆಚ್ಚು ಕಡೆ ಗೆಲುವು ಸಾಧಿಸಿದ್ದಾರೆ.ಇದರೊಂದಿಗೆ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದ ರಿಪಬ್ಲಿಕನ್ ಪಕ್ಷವು ಪ್ರಸ್ತುತ ಅಧಿಕಾರಾವಧಿಯ ಕೊನೇ ಎರಡು ವರ್ಷಗಳಲ್ಲಿ ಕಾಂಗ್ರೆಸ್ನ (ಸಂಸತ್ತಿನ) ಉಭಯ ಸದನಗಳಾದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ (ಕೆಳಮನೆ) ಮತ್ತು ಸೆನೆಟ್ನಲ್ಲಿ (ಮೇಲ್ಮನೆ) ಹಿಡಿತ ಕಾಯ್ದುಕೊಳ್ಳುವ ಸಾಧ್ಯತೆ ಇದೆ.ಜಾರ್ಜಿಯಾದಲ್ಲಿ ಡೆಮಾಕ್ರಟಿಕ್ನ ಜಾನ್ ಒಸಾಫ್ ಜಯ ಸಾಧಿಸಿದ್ದಾರೆ.ಪ್ಲೋರಿಡಾದಲ್ಲಿ ನಡೆದ ಚುನಾವಣೆಯಲ್ಲಿ ಗೆದ್ದಿರುವ ಭಾರತೀಯ ಮೂಲದ ಪಿಯಾ ದಾಂಡಿಯಾ ಅವರು ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಪ್ರವೇಶಿಸಿದ್ದಾರೆ. ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅವರ ಸಲಹೆಗಾರರಾಗಿದ್ದ ಸುಹಾಸ್ ಸುಬ್ರಹ್ಮಣ್ಯಂ ಅವರು ವರ್ಜೀನಿಯಾದಲ್ಲಿ ಗೆದ್ದಿದ್ದಾರೆ.ಇಲಿನಿಯೊಸ್ನಲ್ಲಿ ಡೆಮಾಕ್ರಟಿಕ್ ಅಭ್ಯರ್ಥಿ ಜೂಲಿಯನಾ ಸ್ಟ್ರಾಟನ್ ಹಾಗೂ ಪಶ್ಚಿಮ ವರ್ಜೀನಿಯಾದಲ್ಲಿ ರಿಪಬ್ಲಿಕನ್ ಪಕ್ಷದ ಶೆಲ್ಲಿ ಕಾಪಿಟೋ ಅವರು ಸೆನೆಟರ್ ಆಗಿ ಚುನಾಯಿತರಾಗಿದ್ದಾರೆ.ಅಮೆರಿಕದಲ್ಲಿ ಇಂದು ಮಧ್ಯಂತರ ಚುನಾವಣೆ: ಟ್ರಂಪ್ ಆಡಳಿತಕ್ಕೆ ಜನಾದೇಶದ ಪರೀಕ್ಷೆಇರಾನ್ ಮೇಲೆ ದಾಳಿ ಮಾಡುವ ಯೋಜನೆ ಸದ್ಯಕ್ಕಿಲ್ಲ: ಅಮೆರಿಕ ಅಧ್ಯಕ್ಷ ಟ್ರಂಪ್