ಸುಲಿಗೆ ಕಾಂಗ್ರೆಸ್ ಸರ್ಕಾರ ತೊಲಗುವವರೆಗೂ ಕನ್ನಡಿಗರಿಗೆ ನೆಮ್ಮದಿ ಇಲ್ಲ: ಬಿಜೆಪಿ
ಬೆಂಗಳೂರು: ರಾಜ್ಯದಲ್ಲಿ ಬಸ್ ಪ್ರಯಾಣ ದರ ಏರಿಕೆಯನ್ನು ಖಂಡಿಸಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ರಾಜ್ಯ ಬಿಜೆಪಿ ಘಟಕವು ತೀವ್ರ ತರಾಟೆಗೆ ತೆಗೆದುಕೊಂಡಿದೆ. 'ಕಿತ್ಕೊಂಡ್ ತಿನ್ನೋ, ಕಿತ್ತೋದ್ ಕಾಂಗ್ರೆಸ್ ಸರ್ಕಾರ..!' ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ಮಗದೊಂದು ಪೋಸ್ಟ್ನಲ್ಲಿ 'ಸುಲಿಗೆ ಕಾಂಗ್ರೆಸ್ ಸರ್ಕಾರ ತೊಲಗುವವ

ಬೆಂಗಳೂರು: ರಾಜ್ಯದಲ್ಲಿ ಬಸ್ ಪ್ರಯಾಣ ದರ ಏರಿಕೆಯನ್ನು ಖಂಡಿಸಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ರಾಜ್ಯ ಬಿಜೆಪಿ ಘಟಕವು ತೀವ್ರ ತರಾಟೆಗೆ ತೆಗೆದುಕೊಂಡಿದೆ. 'ಕಿತ್ಕೊಂಡ್ ತಿನ್ನೋ, ಕಿತ್ತೋದ್ ಕಾಂಗ್ರೆಸ್ ಸರ್ಕಾರ..!' ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ಮಗದೊಂದು ಪೋಸ್ಟ್ನಲ್ಲಿ 'ಸುಲಿಗೆ ಕಾಂಗ್ರೆಸ್ ಸರ್ಕಾರ ತೊಲಗುವವರೆಗೂ ಕನ್ನಡಿಗರಿಗೆ ನೆಮ್ಮದಿ ಇಲ್ಲ!' ಎಂದು ತಿರುಗೇಟು ನೀಡಿದೆ. ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ, 'ಕಾಂಗ್ರೆಸ್ ಸರ್ಕಾರದ ದುರಾಡಳಿತ ಮತ್ತು ವೈಫಲ್ಯಗಳಿಗೆ ಬಡಜನರ ಮೇಲೆ ಮತ್ತೊಂದು ದರ ಏರಿಕೆಯ ಬರೆ' ಎಂದು ಹೇಳಿದ್ದಾರೆ. 'ಹಾಲು, ಮೊಸರು, ವಿದ್ಯುತ್ ದರಗಳನ್ನು ಏರಿಸಿ ಜನಸಾಮಾನ್ಯರನ್ನು ಸಂಕಷ್ಟಕ್ಕೆ ದೂಡಿರುವ ಈ ಭ್ರಷ್ಟ, ಜನವಿರೋಧಿ ಕಾಂಗ್ರೆಸ್ ಸರ್ಕಾರಕ್ಕೆ ಇನ್ನೂ ತೃಪ್ತಿಯಾದಂತಿಲ್ಲ! ಈಗ ಬಸ್ ದರದ ಸರದಿ' ಎಂದು ಪೋಸ್ಟ್ ಮಾಡಿದ್ದಾರೆ. 'ಬೆಂಗಳೂರಿನಲ್ಲಿ ಕನಿಷ್ಠ ಟಿಕೆಟ್ ₹6ರಿಂದ ₹10ರವರೆಗೆ ಅಂದರೆ ಸುಮಾರು ಶೇ 67ರಷ್ಟು ಏರಿಕೆ! ಕೆಎಸ್ಆರ್ಟಿಸಿಯಲ್ಲಿ ಗರಿಷ್ಠ ₹9 ಏರಿಕೆ, ಒಟ್ಟಾರೆ ₹4 ರಿಂದ ₹20ರವರೆಗೆ ಜನರ ಮೇಲೆ ಹೊರೆ ಹೊರಿಸಿರುವ ಈ ಕಾಂಗ್ರೆಸ್ ಸರ್ಕಾರ ತನ್ನ ವೈಫಲ್ಯಗಳನ್ನು ಸರಿಪಡಿಸಿಕೊಳ್ಳುವುದಿರಲಿ, ಕನಿಷ್ಠ ಮಾನವೀಯತೆಯನ್ನೂ ಕೂಡ ಉಳಿಸಿಕೊಂಡಿಲ್ಲ' ಎಂದು ದೂರಿದ್ದಾರೆ. ಕಾಂಗ್ರೆಸ್ ಸರ್ಕಾರದ ದುರಾಡಳಿತ ಮತ್ತು ವೈಫಲ್ಯಗಳಿಗೆ ಬಡಜನರ ಮೇಲೆ ಮತ್ತೊಂದು ದರ ಏರಿಕೆಯ ಬರೆ!ಹಾಲು, ಮೊಸರು, ವಿದ್ಯುತ್ ದರಗಳನ್ನು ಏರಿಸಿ ಜನಸಾಮಾನ್ಯರನ್ನು ಸಂಕಷ್ಟಕ್ಕೆ ದೂಡಿರುವ ಈ ಭ್ರಷ್ಟ, ಜನವಿರೋಧಿ ಕಾಂಗ್ರೆಸ್ ಸರ್ಕಾರಕ್ಕೆ ಇನ್ನೂ ತೃಪ್ತಿಯಾದಂತಿಲ್ಲ! ಈಗ ಬಸ್ ದರದ ಸರದಿ!ಬೆಂಗಳೂರಿನಲ್ಲಿ ಕನಿಷ್ಠ ಟಿಕೆಟ್ 6 ರೂ, ನಿಂದ 10 ರೂ.… pic.twitter.com/OnVVpDrx1o— Vijayendra Yediyurappa (@BYVijayendra) November 4, 2026 'ದುಡಿಯಲು ಹೊರಡುವ ಕಾರ್ಮಿಕ, ಶಾಲೆ-ಕಾಲೇಜಿಗೆ ಹೋಗುವ ವಿದ್ಯಾರ್ಥಿ-ವಿದ್ಯಾರ್ಥಿನಿಯರು, ಆಸ್ಪತ್ರೆಗೆ ಹೊರಡುವ ಬಡ ರೋಗಿಗಳು, ಸಾಮಾನ್ಯ ಜನರು ನಿಮ್ಮ ಕಾಂಗ್ರೆಸ್ ಸರ್ಕಾರದ ಕೆಟ್ಟ ಆರ್ಥಿಕ ನಿರ್ವಹಣೆಗೆ ಬೆಲೆ ತೆರಬೇಕೇ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೇ?' ಎಂದು ಪ್ರಶ್ನಿಸಿದ್ದಾರೆ. 'ಒಂದೆಡೆ ಗ್ಯಾರಂಟಿಗಳನ್ನು ಕೊಟ್ಟಂತೆ ಮಾಡಿ, ಮತ್ತೊಂದೆಡೆ ಬೆಲೆ ಏರಿಕೆಯ ಮೂಲಕ ಎರಡೂ ಕೈಗಳಿಂದ ಜನರ ಜೇಬು ದೋಚುವುದೇ ಈ ಕಾಂಗ್ರೆಸ್ ಸರ್ಕಾರದ ಆಡಳಿತ ಮಂತ್ರವಾಗಿದೆ. ಹಾಲಿನ ದರ ಏರಿಕೆಯ ಬೆನ್ನಲ್ಲೇ ಬಸ್ ಪ್ರಯಾಣವನ್ನೂ ದುಬಾರಿಯಾಗಿಸಿರುವ ಸರ್ಕಾರ, ಜನಸಾಮಾನ್ಯರ ದಿನನಿತ್ಯದ ಬದುಕನ್ನೇ ಸಂಕಷ್ಟಕ್ಕೆ ಸಿಲುಕಿಸಿದೆ' ಎಂದು ಆರೋಪಿಸಿದ್ದಾರೆ. 'ಈ ರೀತಿ ಪ್ರತಿಯೊಂದು ಅಗತ್ಯ ವಸ್ತುಗಳ ಬೆಲೆ ಏರಿಸುತ್ತಾ ಜನರ ಜೀವನವನ್ನೇ ದುಸ್ತರ ಮಾಡಿರುವ ಈ ಜನವಿರೋಧಿ ಕಾಂಗ್ರೆಸ್ ಸರ್ಕಾರ ಜನಾಕ್ರೋಶವನ್ನು ಎದುರಿಸುವ ದಿನ ದೂರವಿಲ್ಲ! ಮೊದಲು ಸಾರಿಗೆ ನಿಗಮಗಳ ನಷ್ಟದ ಪೂರ್ಣ ಲೆಕ್ಕವನ್ನು ಜನರ ಮುಂದಿಡಿ, ಈ ದರ ಏರಿಕೆಯನ್ನು ತಕ್ಷಣ ಹಿಂಪಡೆಯಿರಿ ಎಂದು ಅತ್ಯಂತ ತೀವ್ರವಾಗಿ ಆಗ್ರಹಿಸುತ್ತೇವೆ' ಎಂದಿದ್ದಾರೆ. ರಾಜ್ಯಲ್ಲಿ ಕೆಎಸ್ಆರ್ಟಿಸಿ ಬಸ್ ಪ್ರಯಾಣದ ಟಿಕೆಟ್ ದರವನ್ನು ಶೇ 23ರಷ್ಟು ಮತ್ತು ಬಿಎಂಟಿಸಿ ಟಿಕೆಟ್ ದರವನ್ನು ಶೇ 35ರಷ್ಟು ಏರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಪರಿಷ್ಕೃತ ದರ ಇಂದು ರಾತ್ರಿಯಿಂದಲೇ ಜಾರಿಗೆ ಬರಲಿದೆ. ಕಿತ್ಕೊಂಡ್ ತಿನ್ನೋ,ಕಿತ್ತೋದ್ ಕಾಂಗ್ರೆಸ್ ಸರ್ಕಾರ..!@INCKarnataka— BJP Karnataka (@BJP4Karnataka) November 4, 2026 ಸುಲಿಗೆ ಕಾಂಗ್ರೆಸ್ ಸರ್ಕಾರ ತೊಲಗುವವರೆಗೂ ಕನ್ನಡಿಗರಿಗೆ ನೆಮ್ಮದಿ ಇಲ್ಲ.!#CongressFailsKarnataka pic.twitter.com/PBDYjV4av1— BJP Karnataka (@BJP4Karnataka) November 4, 2026 ಸಾರಿಗೆ ನಿಗಮಗಳ ನಷ್ಟದ ನೆಪ ಹೇಳಿ ಪ್ರಯಾಣ ದರ ಏರಿಸಿದ ಸರ್ಕಾರಹಾಲು ದರ ಏರಿಕೆ ಬೆನ್ನಲ್ಲೇ ಬಸ್ ಪ್ರಯಾಣ ದರ ಹೆಚ್ಚಿಸಲು ಸಜ್ಜಾದ ಸರ್ಕಾರ