ಉ.ಕ ಶಿಕ್ಷಣ ಸಂಸ್ಥೆಗಳೆಡೆ ಶಿಕ್ಷಕರ ನೇಮಕಾತಿಯಲ್ಲಿ ತಾರತಮ್ಯ: ಬಸವರಾಜ ಹೊರಟ್ಟಿ
ಹಿರೇಕೆರೂರ: ಉತ್ತರ ಕರ್ನಾಟಕ ಭಾಗದ ಶಿಕ್ಷಣ ಸಂಸ್ಥೆಗಳಿಗೆ ಶಿಕ್ಷಕರ ನೇಮಕಾತಿಯಲ್ಲಿ ಸರ್ಕಾರ ತಾರತಮ್ಯ ಮಾಡುತ್ತಿದೆ. ಇದರ ವಿರುದ್ಧ ಹೋರಾಟ ಮಾಡಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಹೇಳಿದರು.ತಾಲ್ಲೂಕಿನ ಹಂಸಭಾವಿ ಗ್ರಾಮದ ಪಾಲಿಟೆಕ್ನಿಕ್ ಕಾಲೇಜಿನ ಆವರಣದಲ್ಲಿ ಮಂಗಳವಾರ ನಡೆದ ಮೃತ್ಯುಂಜಯ ವಿದ್ಯಾಪೀಠದ ಶತಮಾನೋತ್ಸವ ಸಂಭ್ರಮದ ಸ್ಮರಣ ಸಂಚಿಕೆ ಜ್ಞಾ

ಹಿರೇಕೆರೂರ: ಉತ್ತರ ಕರ್ನಾಟಕ ಭಾಗದ ಶಿಕ್ಷಣ ಸಂಸ್ಥೆಗಳಿಗೆ ಶಿಕ್ಷಕರ ನೇಮಕಾತಿಯಲ್ಲಿ ಸರ್ಕಾರ ತಾರತಮ್ಯ ಮಾಡುತ್ತಿದೆ. ಇದರ ವಿರುದ್ಧ ಹೋರಾಟ ಮಾಡಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಹೇಳಿದರು.ತಾಲ್ಲೂಕಿನ ಹಂಸಭಾವಿ ಗ್ರಾಮದ ಪಾಲಿಟೆಕ್ನಿಕ್ ಕಾಲೇಜಿನ ಆವರಣದಲ್ಲಿ ಮಂಗಳವಾರ ನಡೆದ ಮೃತ್ಯುಂಜಯ ವಿದ್ಯಾಪೀಠದ ಶತಮಾನೋತ್ಸವ ಸಂಭ್ರಮದ ಸ್ಮರಣ ಸಂಚಿಕೆ ಜ್ಞಾನದೀವಿಗೆ ಬಿಡುಗಡೆ ಸಮಾರಂಭದಲ್ಲಿ ಸಂಚಿಕೆ ಬಿಡುಗಡೆ ಗೋಳಿಸಿ ಅವರು ಮಾತನಾಡಿದರು.ಮೃತ್ಯುಂಜಯ ವಿದ್ಯಾಪೀಠವು ನೂರು ವರ್ಷಗಳ ಗಡಿ ದಾಟಿ ಬೃಹದಾಕಾರವಾಗಿ ಬೆಳೆದು ನಿಂತಿರುವುದು ಸಂತಸದ ಸಂಗತಿ. ಇಂತಹ ಶೈಕ್ಷಣಿಕ ಸಂಸ್ಥೆಯ ಶತಮಾನೋತ್ಸವದ ‘ಜ್ಞಾನದೀವಿಗೆ’ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಿರುವುದು ನನಗೆ ಸಂತಸ ಮೂಡಿಸಿದೆ ಎಂದರು.ಸಂಸ್ಥೆಯ ಶತಮಾನೋತ್ಸವದ ನೂತನ ಕಟ್ಟಡ ನಿರ್ಮಾಣಕ್ಕೆ ₹25 ಲಕ್ಷ ನೆರವು ನೀಡುವುದಾಗಿ ಅವರು ಪ್ರಕಟಿಸಿದರು.ಕಾರ್ಯಕ್ರಮ ಉದ್ಘಾಟಸಿ ಮಾತನಾಡಿದ ಶಾಸಕ ಯು.ಬಿ.ಬಣಕಾರ, ಶತಮಾನೋತ್ಸವದ ‘ಜ್ಞಾನದೀವಿಗೆ’ ಸ್ಮರಣ ಸಂಚಿಕೆಯಲ್ಲಿ ಸಂಸ್ಥೆಯ ನೂರು ವರ್ಷಗಳ ಇತಿಹಾಸ, ಸಾಧನೆ, ಬೆಳವಣಿಗೆ.ಹಾಗೂ ಪ್ರಮುಖ ಘಟನೆಗಳನ್ನು ಒಂದೇ ಕಡೆ ಸಮಗ್ರವಾಗಿ ದಾಖಲಿಸಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದರು.ಮಾಜಿ ಶಾಸಕ ಬಿ.ಎಚ್.ಬನ್ನಿಕೋಡ , ಮಾಜಿ ಕೃಷಿ ಸಚಿವ ಬಿ.ಸಿ. ಪಾಟೀಲ , ಮೃತ್ಯುಂಜಯ ವಿದ್ಯಾಪೀಠದ ಅಧ್ಯಕ್ಷ ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ.ಎಸ್. ಎಂ.ಎಲಿ ಹಾಗೂ ಸಂಸ್ಥೆಯ ಕಾರ್ಯಧ್ಯಕ್ಷ ಪಿ ವಿ ಕೆರೂಡಿ ಮಾತನಾಡಿದರು.ಸಂಸ್ಥೆಯ ಉಪಾದ್ಯಕ್ಷ ಬಸವರಾಜ ಕೋತ, ಬೆಳಗಾವಿ ಕೆ.ಎಲ್.ಇ ಸಂಸ್ಥೆಯ ನಿರ್ದೇಶಕ ಮಂಜುನಾಥ ಎಸ್ ಮುನವಳ್ಳಿ, ಆಡಳಿತ ಮಂಡಳಿಯ ಸದಸ್ಯ ಪ್ರಭಣ್ಣ ಬಳಗಾನೂರ, ವಿಜಯಕುಮಾರ ಕೆರೂಡಿ, ಓಂಕಾರೇಪ್ಪಾ ಎ.ಬಿ , ಲಿಂಗರಾಜ ಎಲಿ, ಶೋಭಾ ಪಾಟೀಲ , ಜಗದೀಶ ಕೆರೂಡಿ, ಸುರೇಶ ಗಿಡ್ಡಪ್ಪನವರ, ಪಲ್ಲವಿ ಬೋಳಕಟ್ಟಿ , ಗೋಪಾಲ ಗಾಣಿಗ ಭಾಗವಹಿಸಿದ್ದರು.261104-22-1631983023