ಚಿನ್ನದ ನಾಣ್ಯದಂತ ಸಿಹಿತಿಂಡಿ: ಒಂದು ಕೆಜಿಗೆ ₹1.23 ಲಕ್ಷ!
ಜೈಪುರ: ಇಲ್ಲಿನ ಸಿಹಿ ಮಾರಾಟ ಮಳಿಗೆಯೊಂದು ದೀಪಾವಳಿ ಪ್ರಯುಕ್ತ ಚಿನ್ನದ ನಾಣ್ಯದ ರೂಪದ ಸಿಹಿ ತಿನಿಸು ಪರಿಚಯಿಸಿದೆ.ಒಂಬತ್ತು ಗ್ರಾಂನ ಈ ಸಿಹಿ ತಿನಿಸಿಗೆ ಬರೋಬ್ಬರಿ ₹1,111 ಬೆಲೆ ನಿಗದಿ ಪಡಿಸಿದ್ದು, ಒಂದು ಕೆಜಿ ಸಿಹಿ ತಿನಿಸಿಗೆ ₹1.23 ಲಕ್ಷವಾಗಲಿದೆ.ಸಿಹಿ ತಿನಿಸಿಗೆ ‘ತ್ಯೋಹಾರ್ ಅಶಾರ್ಫಿ’ ಎಂದು ಹೆಸರಿಡಲಾಗಿದ್ದು, ಅದರ ತಿರುಳನ್ನು ಬಾದಾಮಿಯಿಂದ ಮಾಡಲಾಗಿದ

ಜೈಪುರ: ಇಲ್ಲಿನ ಸಿಹಿ ಮಾರಾಟ ಮಳಿಗೆಯೊಂದು ದೀಪಾವಳಿ ಪ್ರಯುಕ್ತ ಚಿನ್ನದ ನಾಣ್ಯದ ರೂಪದ ಸಿಹಿ ತಿನಿಸು ಪರಿಚಯಿಸಿದೆ.ಒಂಬತ್ತು ಗ್ರಾಂನ ಈ ಸಿಹಿ ತಿನಿಸಿಗೆ ಬರೋಬ್ಬರಿ ₹1,111 ಬೆಲೆ ನಿಗದಿ ಪಡಿಸಿದ್ದು, ಒಂದು ಕೆಜಿ ಸಿಹಿ ತಿನಿಸಿಗೆ ₹1.23 ಲಕ್ಷವಾಗಲಿದೆ.ಸಿಹಿ ತಿನಿಸಿಗೆ ‘ತ್ಯೋಹಾರ್ ಅಶಾರ್ಫಿ’ ಎಂದು ಹೆಸರಿಡಲಾಗಿದ್ದು, ಅದರ ತಿರುಳನ್ನು ಬಾದಾಮಿಯಿಂದ ಮಾಡಲಾಗಿದೆ. ಒಳಗೆ ಸ್ವರ್ಣ ಭಾಷಂ ಎಂಬ ಖಾದ್ಯ ತುಂಬಿಸಲಾಗಿದ್ದು, ಮೇಲ್ಭಾಗವನ್ನೂ ಎಲೆಗಳಂತೆ ರಚಿಸಿ, ಕೇಸರಿಯಿಂದ ಅಲಂಕರಿಸಲಾಗಿದೆ.‘ತ್ಯೋಹಾರ್ ಅಶಾರ್ಫಿ‘ ಎಂಬ ಮಳಿಗೆ ಈ ಸಿಹಿಯನ್ನು ಪರಿಚಯಿಸಿದ್ದು, ಅದರ ಸಂಸ್ಥಾಪಕಿ ಅಂಜಲಿ ಜೈನ್ ಅವರು ಈ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.‘ಈ ಸಿಹಿ ತಿನಿಸು ದೀಪಾವಳಿಗೆ ಕೊಡಬಹುದಾದ ಐಷಾರಾಮಿ ಉಡುಗೊರೆಯಾಗಿದ್ದು, ಸಮೃದ್ಧಿ ಮತ್ತು ಶಾಂತಿಯನ್ನು ಪ್ರತಿನಿಧಿಸುತ್ತದೆ. ಒಂಬತ್ತು ಸಿಹಿ ತುಂಡುಗಳಿರುವ ಬಾಕ್ಸ್ ಕೂಡ ಲಭ್ಯವಿರಲಿದ್ದು, ಅದರ ಬೆಲೆ 9,999 ಆಗಿರಲಿದೆ’ ಎಂದೂ ಅಂಜಲಿ ಹೇಳಿದ್ದಾರೆ.
Read the complete story at Prajavani