ಸಕ್ಕರೆ ಬೆಲೆ ಏರಿಕೆ
ನವದೆಹಲಿ: ಸಕ್ಕರೆ ಬೆಲೆಯು ಒಂದು ತಿಂಗಳ ಅವಧಿಯಲ್ಲಿ ರಿಟೇಲ್ ಮಾರುಕಟ್ಟೆ ಹಾಗೂ ಸಗಟು ಮಾರುಕಟ್ಟೆಯಲ್ಲಿ ಕೆ.ಜಿ.ಗೆ ₹4ರಷ್ಟು ಹೆಚ್ಚಳ ಆಗಿದೆ. ಹಬ್ಬಗಳ ಸಂದರ್ಭದಲ್ಲಿ ಸಕ್ಕರೆ ಪೂರೈಕೆಯನ್ನು ಹೆಚ್ಚಿಸುವುದಕ್ಕೆ ಕೇಂದ್ರ ಸರ್ಕಾರವು ಕೆಲವು ಕ್ರಮಗಳನ್ನು ಕೈಗೊಂಡಿದ್ದರೂ, ಬೆಲೆ ಏರಿಕೆ ಆಗಿದೆ.ಕೇಂದ್ರ ಗ್ರಾಹಕರ ವ್ಯವಹಾರಗಳ ಸಚಿವಾಲಯದ ಬಳಿ ಇರುವ ಮಾಹಿತಿ ಪ್ರಕಾರ, ಕೆ.ಜಿ.

ನವದೆಹಲಿ: ಸಕ್ಕರೆ ಬೆಲೆಯು ಒಂದು ತಿಂಗಳ ಅವಧಿಯಲ್ಲಿ ರಿಟೇಲ್ ಮಾರುಕಟ್ಟೆ ಹಾಗೂ ಸಗಟು ಮಾರುಕಟ್ಟೆಯಲ್ಲಿ ಕೆ.ಜಿ.ಗೆ ₹4ರಷ್ಟು ಹೆಚ್ಚಳ ಆಗಿದೆ. ಹಬ್ಬಗಳ ಸಂದರ್ಭದಲ್ಲಿ ಸಕ್ಕರೆ ಪೂರೈಕೆಯನ್ನು ಹೆಚ್ಚಿಸುವುದಕ್ಕೆ ಕೇಂದ್ರ ಸರ್ಕಾರವು ಕೆಲವು ಕ್ರಮಗಳನ್ನು ಕೈಗೊಂಡಿದ್ದರೂ, ಬೆಲೆ ಏರಿಕೆ ಆಗಿದೆ.ಕೇಂದ್ರ ಗ್ರಾಹಕರ ವ್ಯವಹಾರಗಳ ಸಚಿವಾಲಯದ ಬಳಿ ಇರುವ ಮಾಹಿತಿ ಪ್ರಕಾರ, ಕೆ.ಜಿ. ಸಕ್ಕರೆಯ ಸರಾಸರಿ ಬೆಲೆಯು ಸಗಟು ಮಾರುಕಟ್ಟೆಯಲ್ಲಿ ₹55.40 ಹಾಗೂ ರಿಟೇಲ್ ಮಾರುಕಟ್ಟೆಯಲ್ಲಿ ₹59.50 ಆಗಿದೆ.ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಬೆಲೆ ಏರಿಕೆಯು ಕೆ.ಜಿ.ಗೆ ₹12ರಿಂದ ₹13ರಷ್ಟು ಇದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ ಸಕ್ಕರೆಯ ರಿಟೇಲ್ ಮಾರಾಟ ಬೆಲೆಯು ₹46.50 ಹಾಗೂ ಸಗಟು ಮಾರಾಟ ಬೆಲೆಯು ₹43.23 ಆಗಿತ್ತು.ಮಹಾನಗರಗಳ ಪೈಕಿ ಕೋಲ್ಕತ್ತದಲ್ಲಿ ಬೆಲೆ ಅತಿಹೆಚ್ಚು ಇದೆ. ಅಲ್ಲಿ ಬೆಲೆಯು ನವೆಂಬರ್ 3ರಂದು ₹65 ಇತ್ತು. ಇದು, ಹಿಂದಿನ ವರ್ಷದ ಇದೇ ಹೊತ್ತಿಗೆ ₹50 ಆಗಿತ್ತು. ದೆಹಲಿಯಲ್ಲಿ ಬೆಲೆಯು ₹64 (ಹಿಂದಿನ ವರ್ಷ ₹46), ಮುಂಬೈನಲ್ಲಿ ₹61 (ಹಿಂದಿನ ವರ್ಷ ₹45) ಆಗಿದೆ.2025–26ನೆಯ ಸಾಲಿನಲ್ಲಿ ಸಕ್ಕರೆ ಉತ್ಪಾದನೆಯು ಅಂದಾಜಿಗಿಂತ ಕಡಿಮೆ ಆಗಿದ್ದುದು ಬೆಲೆ ಹೆಚ್ಚಳಕ್ಕೆ ಒಂದು ಕಾರಣ. ಅಲ್ಲದೆ, ಹಬ್ಬಗಳ ಸಂದರ್ಭದಲ್ಲಿನ ಬೇಡಿಕೆ, ಬೆಳೆಹಾನಿ, ಜಾಗತಿಕ ಮಟ್ಟದಲ್ಲಿ ಸಕ್ಕರೆ ಪೂರೈಕೆ ಕಡಿಮೆ ಇರುವುದು ಕೂಡ ಬೆಲೆ ಏರಿಕೆಗೆ ಕಾರಣಗಳಾಗಿವೆ.