ಚೆನ್ನೈನಲ್ಲಿ ‘ಸುvijayಪ್ರೀಂ’ ಪೀಠಕ್ಕೆ ಆಗ್ರಹ: ಮೋದಿಗೆ ವಿಜಯ್ ಪತ್ರ
ಚೆನ್ನೈ: ಚೆನ್ನೈನಲ್ಲಿ ಸುಪ್ರೀಂ ಕೋರ್ಟ್ ಪೀಠವನ್ನು ಸ್ಥಾಪಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿ ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬುಧವಾರ ಪತ್ರ ಬರೆದಿದ್ದಾರೆ.‘ದಕ್ಷಿಣ ಭಾರತದ ದಾವೆದಾರರು ದೂರದ ದೆಹಲಿಗೆ ಹೋಗದೆ, ತಮ್ಮ ಕುಂದು ಕೊರತೆಗಳನ್ನು ಪರಿಹರಿಸಿಕೊಳ್ಳಲು ಸಹಾಯ ಮಾಡಲು ಚೆನ್ನೈನಲ್

ಚೆನ್ನೈ: ಚೆನ್ನೈನಲ್ಲಿ ಸುಪ್ರೀಂ ಕೋರ್ಟ್ ಪೀಠವನ್ನು ಸ್ಥಾಪಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಆಗ್ರಹಿಸಿ ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬುಧವಾರ ಪತ್ರ ಬರೆದಿದ್ದಾರೆ.‘ದಕ್ಷಿಣ ಭಾರತದ ದಾವೆದಾರರು ದೂರದ ದೆಹಲಿಗೆ ಹೋಗದೆ, ತಮ್ಮ ಕುಂದು ಕೊರತೆಗಳನ್ನು ಪರಿಹರಿಸಿಕೊಳ್ಳಲು ಸಹಾಯ ಮಾಡಲು ಚೆನ್ನೈನಲ್ಲಿ ಪೀಠ ಸ್ಥಾಪಿಸಬೇಕು’ ಎಂದು ಒತ್ತಾಯಿಸಿದ್ದಾರೆ. ‘ಚೆನ್ನೈನಲ್ಲಿ ಪೀಠ ಸ್ಥಾಪಿಸಬೇಕೆಂಬುದು ಹಲವು ದಶಕಗಳ ಹಳೆಯ ಬೇಡಿಕೆ. ಸಂವಿಧಾನದಲ್ಲಿನ ನಿಬಂಧನೆಗಳು, ಚೆನ್ನೈನ ಭೌಗೋಳಿಕ ಅನುಕೂಲಗಳು ಮತ್ತು 1982ರಲ್ಲಿ ಸ್ಥಾಪನೆಯಾದ ಭಾರತದ ಹಳೆಯ ಚಾರ್ಟರ್ಡ್ ಹೈಕೋರ್ಟ್ಗಳಲ್ಲಿ ಒಂದಾಗಿರುವ ಮದ್ರಾಸ್ ಹೈಕೋರ್ಟ್ ರಾಜ್ಯದಲ್ಲೇ ಇದ್ದು, ಈ ಎಲ್ಲ ಅಂಶಗಳನ್ನು ಪರಿಗಣಿಸಿ’ ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ. ‘ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ಸ್ಥಾನಮಾನಕ್ಕೆ ಅಗತ್ಯವಾದ ವಸತಿ ಸೌಕರ್ಯ ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಲಾಗುವುದು ಎಂದು ತಮಿಳುನಾಡು ಭರವಸೆ ನೀಡಿದ್ದರೂ, 2007ರಲ್ಲಿ ನಡೆದ ಸಭೆಯಲ್ಲಿ ಸುಪ್ರೀಂ ಕೋರ್ಟ್ ರಾಜ್ಯದ ಪ್ರಸ್ತಾವವನ್ನು ತಿರಸ್ಕರಿಸಿತ್ತು’ ಎಂದು ವಿಜಯ್ ಅವರು ಉಲ್ಲೇಖಿಸಿದ್ದಾರೆ. ‘ಸುಪ್ರೀಂ ಕೋರ್ಟ್ನ ನಿಲುವನ್ನು ಮರುಪರಿಶೀಲಿಸಿ, ಚೆನ್ನೈನಲ್ಲಿ ಪೀಠ ಸ್ಥಾಪಿಸಲು ಅನುಕೂಲಕರ ನಿರ್ಧಾರ ಕೈಗೊಳ್ಳಬೇಕು. ಈ ವಿಷಯವನ್ನು ಮತ್ತೊಮ್ಮೆ ಸುಪ್ರೀಂ ಕೋರ್ಟ್ನಲ್ಲಿ ಪ್ರಸ್ತಾಪಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ಹೇಳಿದ್ದಾರೆ.