ಜ್ಞಾನೇಶ್ ಕುಮಾರ್ ವಿರುದ್ಧ ₹2 ಕೋಟಿ ಲಂಚದ ಆರೋಪ ಪರಿಶೀಲಿಸಲಿರುವ ಕೇರಳಂ ಸರ್ಕಾರ
ತಿರುವನಂತಪುರ: ಸುಮಾರು ಎರಡು ದಶಕಗಳ ಹಿಂದೆ ಕೇರಳಂ ರಾಜ್ಯ ಸಾರಿಗೆ ಯೋಜನೆ (ಕೆಎಸ್ಟಿಪಿ) ಅಡಿ ಕೈಗೊಂಡಿದ್ದ ರಸ್ತೆ ನಿರ್ಮಾಣ ಕಾಮಗಾರಿಗೆ ಸಂಬಂಧಿಸಿದಂತೆ, ಹಾಲಿ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ವಿರುದ್ಧ ಮಾಜಿ ಗುತ್ತಿಗೆದಾರರೊಬ್ಬರು ಮಾಡಿರುವ ₹2 ಕೋಟಿ ಲಂಚದ ಆರೋಪದ ಕುರಿತು ಪರಿಶೀಲನೆ ನಡೆಸುವಂತೆ ಕೇರಳಂ ಗೃಹ ಸಚಿವ ರಮೇಶ್ ಚೆನ್ನಿತ್ತಲ ಅವರು

ತಿರುವನಂತಪುರ: ಸುಮಾರು ಎರಡು ದಶಕಗಳ ಹಿಂದೆ ಕೇರಳಂ ರಾಜ್ಯ ಸಾರಿಗೆ ಯೋಜನೆ (ಕೆಎಸ್ಟಿಪಿ) ಅಡಿ ಕೈಗೊಂಡಿದ್ದ ರಸ್ತೆ ನಿರ್ಮಾಣ ಕಾಮಗಾರಿಗೆ ಸಂಬಂಧಿಸಿದಂತೆ, ಹಾಲಿ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ವಿರುದ್ಧ ಮಾಜಿ ಗುತ್ತಿಗೆದಾರರೊಬ್ಬರು ಮಾಡಿರುವ ₹2 ಕೋಟಿ ಲಂಚದ ಆರೋಪದ ಕುರಿತು ಪರಿಶೀಲನೆ ನಡೆಸುವಂತೆ ಕೇರಳಂ ಗೃಹ ಸಚಿವ ರಮೇಶ್ ಚೆನ್ನಿತ್ತಲ ಅವರು ವಿಜಿಲೆನ್ಸ್ ಮತ್ತು ಭ್ರಷ್ಟಾಚಾರ ನಿಗ್ರಹ ದಳಕ್ಕೆ (ವಿಎಸಿಬಿ) ಸೂಚಿಸಿದ್ದಾರೆ ಎಂದು ಬುಧವಾರ ಅಧಿಕೃತ ಮೂಲಗಳು ತಿಳಿಸಿವೆ.ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ವಿಚಾರವಾಗಿ ಸಿಇಸಿ ಜ್ಞಾನೇಶ್ ಕುಮಾರ್ ವಿರುದ್ಧ ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳ ಪ್ರತಿಭಟನೆಯ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.ಕೊಲ್ಲಂ ಜಿಲ್ಲೆಯ ಚದಯಮಂಗಲಂ ಮೂಲದ ಗುತ್ತಿಗೆದಾರ ಸಾಜನ್ ಎಂಬುವವರು ವಿಎಸಿಬಿ ನಿರ್ದೇಶಕರಿಗೆ ದೂರು ನೀಡಿದ್ದು, ಕೆಎಸ್ಟಿಪಿ ಅಡಿ ಪೂರ್ಣಗೊಂಡ ಕಾಮಗಾರಿಗಳ ಬಿಲ್ ಪಾವತಿ ಮಾಡಲು, ಆಗಿನ ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯುಡಿ) ಕಾರ್ಯದರ್ಶಿಯಾಗಿದ್ದ ಜ್ಞಾನೇಶ್ ಕುಮಾರ್ ಅವರು ₹2 ಕೋಟಿ ಲಂಚಕ್ಕೆ ಬೇಡಿಕೆಯಿಟ್ಟಿದ್ದರು ಎಂದು ಆರೋಪಿಸಿದ್ದಾರೆ.ಎಂಜಿನಿಯರ್ಗಳು ಅನುಮೋದಿಸಿದ್ದ ಸುಮಾರು ₹17 ಕೋಟಿ ಮೌಲ್ಯದ ಬಿಲ್ಗಳ ಚೆಕ್ಗಳನ್ನು ಉದ್ದೇಶಪೂರ್ವಕವಾಗಿ ಜ್ಞಾನೇಶ್ ತಡೆಹಿಡಿದಿದ್ದರು. ಇದರಿಂದಾಗಿ ಮಲೇಷ್ಯಾ ಮೂಲದ ಕಂಪನಿ ಹಾಗೂ ಅದರ ಗುತ್ತಿಗೆದಾರರು ಮತ್ತು ಕಾರ್ಮಿಕರು ತೀವ್ರ ಆರ್ಥಿಕ ಸಂಕಷ್ಟ ಎದುರಿಸುವಂತಾಯಿತು ಎಂದು ಸಾಜನ್ ಆರೋಪಿಸಿದ್ದಾರೆ.ಲಂಚ ನೀಡದ ಹೊರತು ಚೆಕ್ಗಳನ್ನು ಬಿಡುಗಡೆ ಮಾಡಲು ಜ್ಞಾನೇಶ್ ನಿರಾಕರಿಸುತ್ತಿದ್ದಾರೆ ಎಂದು ಕಂಪನಿಯ ಪ್ರಾಜೆಕ್ಟ್ ಎಂಜಿನಿಯರ್, ಮಲೇಷ್ಯಾ ಪ್ರಜೆ ಲೀ ಸೀ ಬೀನ್ ತಮಗೆ ತಿಳಿಸಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.ದೂರಿನ ಆಧಾರದ ಮೇಲೆ, ಪ್ರಾಥಮಿಕ ತನಿಖೆ ನಡೆಸಿದ ನಂತರ ಪ್ರಕರಣ ದಾಖಲಿಸಲು ವಿಜಿಲೆನ್ಸ್ ಇಲಾಖೆಯು ಗೃಹ ಇಲಾಖೆಯ ಅನುಮತಿ ಕೋರಿತ್ತು. ಕಾನೂನು ಅಭಿಪ್ರಾಯ ಪಡೆದ ಬಳಿಕ ಗೃಹ ಸಚಿವ ಚೆನ್ನಿತ್ತಲ ಅವರು ಪ್ರಾಥಮಿಕ ತನಿಖೆಗೆ ಆದೇಶಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.ಜ್ಞಾನೇಶ್ ಕುಮಾರ್ ವಿರುದ್ಧದ ಆರೋಪಗಳು ಇನ್ನೂ ಸಾಬೀತಾಗಿಲ್ಲ, ವಿಜಿಲೆನ್ಸ್ ತನಿಖೆಯು ಈ ದೂರುಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಲಿದೆ. ಈ ಬಗ್ಗೆ ಜ್ಞಾನೇಶ್ ಕುಮಾರ್ ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.ಸಿಇಸಿ ಜ್ಞಾನೇಶ್ ವಿರುದ್ಧದ ವಿಜಿಲೆನ್ಸ್ ತನಿಖೆ ಪ್ರಗತಿಯಲ್ಲಿದೆ: ಕೇರಳ ಸಚಿವಇರಾನ್ ಮೇಲೆ ದಾಳಿ ಮಾಡುವ ಯೋಜನೆ ಸದ್ಯಕ್ಕಿಲ್ಲ: ಅಮೆರಿಕ ಅಧ್ಯಕ್ಷ ಟ್ರಂಪ್