ಎಸ್ಐಆರ್ ಸಮರ್ಥಿಸಿದ ಆರ್ಎಸ್ಎಸ್ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ
ಪಿಟಿಐಇಂದೋರ್: ‘ಕೆಲವು ಆಂತರಿಕ ಮತ್ತು ಬಾಹ್ಯ ‘ಅರಾಜಕ ಶಕ್ತಿಗಳು’ ದೇಶದ ಯುವಜನರನ್ನು ಪ್ರಚೋದಿಸುತ್ತಿವೆ. ಅಧಿಕಾರ ಬದಲಾವಣೆಯು ಚುನಾವಣೆ ಮೂಲಕ ನಡೆಯುತ್ತದೆಯೇ ಹೊರತು, ಗಲಭೆ, ಹಿಂಸಾಚಾರದಿಂದ ಸಾಧ್ಯವಿಲ್ಲ’ ಎಂದು ಆರ್ಎಸ್ಎಸ್ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಎಂದು ಹೇಳಿದರು.ಚುನಾವಣಾ ಆಯೋಗದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಶೀಲನೆ (ಎಸ್ಐಆರ್) ಪ್ರಕ್ರಿ

ಪಿಟಿಐಇಂದೋರ್: ‘ಕೆಲವು ಆಂತರಿಕ ಮತ್ತು ಬಾಹ್ಯ ‘ಅರಾಜಕ ಶಕ್ತಿಗಳು’ ದೇಶದ ಯುವಜನರನ್ನು ಪ್ರಚೋದಿಸುತ್ತಿವೆ. ಅಧಿಕಾರ ಬದಲಾವಣೆಯು ಚುನಾವಣೆ ಮೂಲಕ ನಡೆಯುತ್ತದೆಯೇ ಹೊರತು, ಗಲಭೆ, ಹಿಂಸಾಚಾರದಿಂದ ಸಾಧ್ಯವಿಲ್ಲ’ ಎಂದು ಆರ್ಎಸ್ಎಸ್ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಎಂದು ಹೇಳಿದರು.ಚುನಾವಣಾ ಆಯೋಗದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಶೀಲನೆ (ಎಸ್ಐಆರ್) ಪ್ರಕ್ರಿಯೆಯನ್ನು ಸಮರ್ಥಿಸಿದ ಅವರು, ‘ಮತದಾರರ ಪಟ್ಟಿಯನ್ನು ದೋಷಮುಕ್ತಗೊಳಿಸುವುದು ಅಗತ್ಯ. ವಿರೋಧ ಪಕ್ಷಗಳು ಸಹ ಪ್ರತಿಭಟನೆಗೂ ಮೊದಲು ಪರಿಶೀಲನೆ ನಡೆಸಬೇಕು’ ಎಂದರು.ಅಖಿಲ ಭಾರತೀಯ ಕಾರ್ಯಕಾರಿ ಮಂಡಲದ ವಾರ್ಷಿಕ ಸಭೆ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಜಂತರ್ ಮಂತರ್ನಲ್ಲಿ ಜೆನ್–ಝೀ ಪ್ರತಿಭಟನೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ದೇಶದ ಒಳಗಿನ ಮತ್ತು ಹೊರಗಿನ ಕೆಲವು ಅರಾಜಕ ಶಕ್ತಿಗಳು ಯುವಜನತೆಯನ್ನು ಪ್ರಚೋದಿಸುತ್ತಿವೆ. ಆದರೆ ಸಮಾಜ ಮತ್ತು ಸರ್ಕಾರ ಯುವಜನರ ಆಕಾಂಕ್ಷೆಗಳು ಮತ್ತು ಕಳವಳಗಳತ್ತ ಗಮನಹರಿಸಬೇಕು. ಯುವಜನತೆಯೊಂದಿಗೆ ಸರ್ಕಾರ ಮಾತುಕತೆ ನಡೆಸುವುದು ಅಗತ್ಯವಿದೆ’ ಎಂದು ಹೇಳಿದರು.ಮತದಾರರ ಪಟ್ಟಿಯನ್ನು ಪರಿಷ್ಕರಿಸುವುದು ಎಸ್ಐಆರ್ ಉದ್ದೇಶ. ಎಸ್ಐಆರ್ ಅನ್ನು ಆಗಾಗ ನಡೆಸಲಾಗುತ್ತದೆ. ಈ ವಿಷಯದಲ್ಲಿ ಏಕೆ ರಾಜಕೀಯ ಮಾಡಲಾಗುತ್ತದೆ ಎಂದು ಅರ್ಥವಾಗುತ್ತಿಲ್ಲ ಎಂದು ಹೇಳಿದರು.ಪ್ರಜಾಪ್ರಭುತ್ವದಲ್ಲಿ ಸರ್ಕಾರದ ಬದಲಾವಣೆ ಚುನಾವಣೆಗಳಿಂದ ಮಾತ್ರ ಎಂದು ಅವರು ಹೇಳಿದರು.