ವಿರಳ ಖನಿಜಗಳ ಸಂಸ್ಕರಣೆಯ ಉತ್ತೇಜನಕ್ಕೆ ಸಚಿವ ಸಂಪುಟ ಅನುಮೋದನೆ: ಪ್ರಧಾನಿ ಮೋದಿ
ನವದೆಹಲಿ: ವಿರಳ ಖನಿಜಗಳ ಸಂಸ್ಕರಣೆಯನ್ನು ಉತ್ತೇಜಿಸಲು ಮತ್ತು ವಿದೇಶಿ ಪೂರೈಕೆ ಮೇಲಿನ ಭಾರತದ ಅವಲಂಬನೆಯನ್ನು ತಗ್ಗಿಸುವ ಉದ್ದೇಶದಿಂದ ₹2,814 ಕೋಟಿ ವೆಚ್ಚದ ‘ಕ್ಯಾಪೆಕ್ಸ್ ಸಪೋರ್ಟ್ ಸ್ಕೀಮ್’ಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ತಿಳಿಸಿದ್ದಾರೆ.‘ಭವಿಷ್ಯದ ತಂತ್ರಜ್ಞಾನಗಳಿಗೆ ಸಹಾಯ ಮಾಡುವ ವಿರಳ ಖನಿಜಗಳ ಸಂಸ್ಕರಣೆಗಾಗಿ

ನವದೆಹಲಿ: ವಿರಳ ಖನಿಜಗಳ ಸಂಸ್ಕರಣೆಯನ್ನು ಉತ್ತೇಜಿಸಲು ಮತ್ತು ವಿದೇಶಿ ಪೂರೈಕೆ ಮೇಲಿನ ಭಾರತದ ಅವಲಂಬನೆಯನ್ನು ತಗ್ಗಿಸುವ ಉದ್ದೇಶದಿಂದ ₹2,814 ಕೋಟಿ ವೆಚ್ಚದ ‘ಕ್ಯಾಪೆಕ್ಸ್ ಸಪೋರ್ಟ್ ಸ್ಕೀಮ್’ಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ತಿಳಿಸಿದ್ದಾರೆ.‘ಭವಿಷ್ಯದ ತಂತ್ರಜ್ಞಾನಗಳಿಗೆ ಸಹಾಯ ಮಾಡುವ ವಿರಳ ಖನಿಜಗಳ ಸಂಸ್ಕರಣೆಗಾಗಿ ಭಾರತವು ಇತರ ದೇಶಗಳ ಮೇಲೆ ಅವಲಂಬಿತವಾಗಬೇಕು ಎಂಬುದು ನಿಮ್ಮ ಅನಿಸಿಕೆಯೇ? ಖಂಡಿತವಾಗಿಯೂ ಇಲ್ಲ ಎಂಬುದು ನನ್ನ ಅಭಿಪ್ರಾಯ!’ ಎಂದು ಮೋದಿ ಅವರು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ. ವಿದ್ಯುತ್ ವಾಹನಗಳು, ಬ್ಯಾಟರಿಗಳು, ಎಲೆಕ್ಟ್ರಾನಿಕ್ಸ್ ಮತ್ತು ರಕ್ಷಣಾ ಕ್ಷೇತ್ರಕ್ಕೆ ಲಿಥಿಯಂ, ನಿಕಲ್ ಹಾಗೂ ಕೋಬಾಲ್ಟ್ ಅತ್ಯಗತ್ಯವಾಗಿದೆ. ಆದರೂ ಭಾರತವು ಇಂದಿಗೂ ಶುದ್ಧೀಕರಿಸಿದ ಖನಿಜಗಳ ಆಮದಿನ ಮೇಲೆ ಹೆಚ್ಚಾಗಿ ಅವಲಂಬಿತವಾಗಿದೆ. ಈ ಪರಿಸ್ಥಿತಿಯನ್ನು ಬದಲಾಯಿಸಲು ಸಂಪುಟವು ಹೊಸ ಯೋಜನೆಯೊಂದಕ್ಕೆ ಅನುಮೋದನೆ ನೀಡಿದೆ ಎಂದು ಹೇಳಿದ್ದಾರೆ. Do you feel India should depend on other countries for processing the critical minerals that power our future?⁰I certainly don’t! Lithium, nickel, cobalt…these are essential for EVs, batteries, electronics and defence. Yet, we remain heavily dependent on imports of refined…— Narendra Modi (@narendramodi) November 4, 2026 ವಿರಳ ಖನಿಜಗಳ ಹೊಸ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸುವುದು, ಹೂಡಿಕೆಗೆ ಉತ್ತೇಜನ ನೀಡಲು ಬಂಡವಾಳ ಸಬ್ಸಿಡಿ ನೀಡುವುದು, ದೇಶೀಯ ಮೌಲ್ಯವರ್ಧನೆ ಮತ್ತು ಪೂರೈಕೆ ಸರಪಳಿಗಳನ್ನು ನಿರ್ಮಿಸುವುದು ಈ ಯೋಜನೆಯ ಪ್ರಮುಖ ಅಂಶಗಳಾಗಿವೆ ಎಂದು ಮಾಹಿತಿ ನೀಡಿದ್ದಾರೆ. ವಿರಳ ಖನಿಜಗಳ ಸಂಸ್ಕರಣೆಯು ಜಾಗತಿಕವಾಗಿ ಕೆಲವು ನಿರ್ದಿಷ್ಟ ದೇಶಗಳಲ್ಲಿ ಮಾತ್ರ ಕೇಂದ್ರೀಕೃತವಾಗಿದೆ. ಇದು ಪೂರೈಕೆ ಸರಪಳಿಯನ್ನು ಭೌಗೋಳಿಕ ರಾಜಕೀಯ ಅಡಚಣೆಗಳು, ಬೆಲೆಗಳ ಏರಿಳಿತ ಮತ್ತು ಪೂರೈಕೆ ನಿರ್ಬಂಧಗಳ ಅಪಾಯಕ್ಕೆ ಒಡ್ಡುತ್ತದೆ. ಇದು ಪೂರೈಕೆ ಸರಪಳಿಯ ಸ್ಥಿರತೆ ಹಾಗೂ ಆರ್ಥಿಕ ಭದ್ರತೆಗೆ ತೀವ್ರ ಸವಾಲಾಗಲಿದೆ. ಭವಿಷ್ಯದ ತಂತ್ರಜ್ಞಾನಗಳನ್ನು ನಿರ್ಮಿಸುವ ಸಾಮರ್ಥ್ಯವನ್ನು ಭಾರತ ಹೊಂದಲೇಬೇಕು. ಹಾಗಾಗಿ ಈ ಯೋಜನೆಯನ್ನು ರೂಪಿಸಲಾಗಿದೆ. ಇದರಿಂದ ರಾಷ್ಟ್ರೀಯ ಭದ್ರತೆ, ಆರ್ಥಿಕ ಸಾರ್ವಭೌಮತ್ವ ಮತ್ತು ನಿಗದಿತ ಅವಧಿಯಲ್ಲಿ ಇಂಗಾಲದ ಹೊರಸೂಸುವಿಕೆ ಕುಗ್ಗಿಸುವ ಗುರಿಗಳನ್ನು ಸಾಧಿಸುವಲ್ಲಿ ಇದು ಪ್ರಮುಖ ಪರಿಣಾಮ ಬೀರುತ್ತದೆ ಎಂದು ಹೇಳಿದ್ದಾರೆ.