ನಾಲ್ಕು ಟಿಎಂಸಿ ಅಡಿ ನೀರಿಗಾಗಿ ಪತ್ರ: ಆಂಧ್ರದ ಮೊರೆಗೆ ಮುಖ್ಯಮಂತ್ರಿಗೆ ಮನವಿ
ಕೊಪ್ಪಳ: ತುಂಗಭದ್ರಾ ಜಲಾಶಯದಲ್ಲಿ ಕ್ರಮೇಣ ನೀರಿನ ಪ್ರಮಾಣ ಒಂದೆಡೆ ಕಡಿಮೆಯಾಗುತ್ತಿದ್ದರೆ, ವರ್ಷದ ಮೊದಲ ಬೆಳೆ ಕೈ ತಪ್ಪುವ ಆತಂಕ ಭತ್ತ ಹಾಗೂ ಇತರೆ ಬೆಳೆಗಾರರಲ್ಲಿ ಶುರುವಾಗಿದೆ.ಆದ್ದರಿಂದ ತುಂಗಭದ್ರಾ ಯೋಜನೆ ಮತ್ತು ವಿಜಯನಗರ ಕಾಲುವೆಗಳ ನೀರಾವರಿ ಸಲಹಾ ಸಮಿತಿ (ಐಸಿಸಿ) ಅಧ್ಯಕ್ಷ ಶಿವರಾಜ ತಂಗಡಗಿ ಆಂಧ್ರಪ್ರದೇಶದ ಮುಖ್ಯಮಂತ್ರಿಗೆ ತಮ್ಮ ಪಾಲಿನ ನೀರನ್ನು ಕರ್ನಾ
ಕೊಪ್ಪಳ: ತುಂಗಭದ್ರಾ ಜಲಾಶಯದಲ್ಲಿ ಕ್ರಮೇಣ ನೀರಿನ ಪ್ರಮಾಣ ಒಂದೆಡೆ ಕಡಿಮೆಯಾಗುತ್ತಿದ್ದರೆ, ವರ್ಷದ ಮೊದಲ ಬೆಳೆ ಕೈ ತಪ್ಪುವ ಆತಂಕ ಭತ್ತ ಹಾಗೂ ಇತರೆ ಬೆಳೆಗಾರರಲ್ಲಿ ಶುರುವಾಗಿದೆ.ಆದ್ದರಿಂದ ತುಂಗಭದ್ರಾ ಯೋಜನೆ ಮತ್ತು ವಿಜಯನಗರ ಕಾಲುವೆಗಳ ನೀರಾವರಿ ಸಲಹಾ ಸಮಿತಿ (ಐಸಿಸಿ) ಅಧ್ಯಕ್ಷ ಶಿವರಾಜ ತಂಗಡಗಿ ಆಂಧ್ರಪ್ರದೇಶದ ಮುಖ್ಯಮಂತ್ರಿಗೆ ತಮ್ಮ ಪಾಲಿನ ನೀರನ್ನು ಕರ್ನಾಟಕಕ್ಕೆ ಬಳಸಿಕೊಳ್ಳಲು ಅನುಮತಿ ನೀಡಬೇಕೆಂದು ಚರ್ಚಿಸುವಂತೆ ರಾಜ್ಯದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರಿಗೆ ಬುಧವಾರ ಕೋರಿದ್ದಾರೆ.ವಿಧಾನ ಪರಿಷತ್ ಸದಸ್ಯ ಬಸನಗೌಡ ಬಾದರ್ಲಿ ಜೊತೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿರುವ ತಂಗಡಗಿ ಆಂಧ್ರಪ್ರದೇಶದ ಪಾಲಿಗೆ ಐದು ಟಿಎಂಸಿ ಅಡಿ ನೀರು ಹಂಚಿಕೆ ಮಾಡಲಾಗಿದ್ದು, ಈ ಪೈಕಿ ಈಗಾಗಲೇ ಒಂದು ಟಿಎಂಸಿ ಅಡಿ ನೀರು ನದಿ ಮೂಲಕ ಹರಿಸಲಾಗಿದೆ. ಉಳಿದ ನೀರು ಬಲದಂಡೆಯ ಮೇಲ್ಮಟ್ಟ ಕಾಲುವೆ ಅಥವಾ ಕೆಳದಂಡೆ ಕಾಲುವೆಗಳಿಗೆ ತಿರುಗಿಸಬಹುದೇ? ಅಥವಾ ಇಲ್ಲವೇ ಎಂಬುದು ಇನ್ನು ಖಚಿತವಾಗಿಲ್ಲ. ಪ್ರಸ್ತುತ 10 ಸಾವಿರ ಕ್ಯುಸೆಕ್ ಪ್ರಮಾಣದಲ್ಲಿ ನೀರು ಹರಿಸಲಾಗುತ್ತಿದ್ದು, ಇದೇ ಪ್ರಮಾಣದ ನೀರಿನ ಹರಿವು ಮುಂದುವರಿಸಿದೆ ಮೇಲ್ಮಟ್ಟಕ್ಕೆ ಸಂಬಂಧಿಸಿದ ಜಲಮಟ್ಟ ನ. 25ರ ಒಳಗೆ ಅಥವಾ ಅದಕ್ಕೂ ಮೊದಲೇ ಕುಸಿಯುವ ಸಾಧ್ಯತೆಯಿದೆ ಎನ್ನುವುದನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ.ಹಂಚಿಕೆಯಾಗಿರುವ ನೀರಿನಲ್ಲಿ ಬಲದಂಡೆ ಮೇಲ್ಮಟ್ಟದ ಕಾಲುವೆಗೆ ಬಳಸಲು ಸಾಧ್ಯವಾಗದಿದ್ದಲ್ಲಿ ಇದೇ ನೀರನ್ನು ಕೆಳಮಟ್ಟದ ಕಾಲುವೆಗೆ ತಿರುಗಿಸುವ ಸಾಧ್ಯತೆಯಿದೆ. ಆದರೆ ಕೆಳಮಟ್ಟದ ಕಾಲುವೆಯಲ್ಲಿ ಈಗಾಗಲೇ 5.916 ಟಿಎಂಸಿ ಅಡಿ ನೀರಿನ ಹಂಚಿಕೆ ಲಭ್ಯವಿದ್ದು ಈ ನೀರನ್ನು ಆಂಧ್ರಪ್ರದೇಶವು ಬೇಸಿಗೆ ಹಂಗಾಮಿನ ಅಂತ್ಯದ ತನಕ ಬಳಸಿಕೊಳ್ಳಲು ಸಾಕಷ್ಟು ನೀರು ಲಭ್ಯವಿದೆ. ಈ ಅಂಶಗಳನ್ನು ಪರಿಗಣಿಸಿ ನದಿ ನೆರವು ಕೋಟಾದಡಿ ಆಂಧ್ರಕ್ಕೆ ಉಳಿಕೆಯಾಗುವ ನಾಲ್ಕು ಟಿಎಂಸಿ ಅಡಿ ನೀರನ್ನು ರಾಜ್ಯದ ವ್ಯಾಪ್ತಿಯಲ್ಲಿ ಮುಂಗಾರು ಹಂಗಾಮಿನಲ್ಲಿ ಬೆಳೆದು ನಿಂತಿರುವ ಬೆಳೆಗಳನ್ನು ಉಳಿಸಿಕೊಳ್ಳಲು ನ. 30ರ ತನಕ ನೀರು ಹರಿಸಬಹುದು. ಈ ಕುರಿತು ಆಂಧ್ರ ಸಿ.ಎಂ. ಜೊತೆ ಚರ್ಚಿಸಬೇಕು, ರೈತರ ಹಿತದೃಷ್ಟಿಯಿಂದ ಉಳಿಕೆಯಾಗುವ ನೀರಿನ ಸದ್ಬಳಕೆಗೆ ಅವಕಾಶ ಕೊಡಬೇಕು ಎಂದು ಮನವಿ ಮಾಡಿದ್ದಾರೆ.ಮುಂಗಾರು ಹಂಗಾಮಿನಲ್ಲಿ ವ್ಯಾಪಕ ಮಳೆ ಕೊರತೆಯಿಂದಾಗಿ ತುಂಗಭದ್ರಾ ಜಲಾಶಯದಲ್ಲಿ ನೀರಿನ ಕೊರತೆಯಿದೆ. ಕ್ರೆಸ್ಟ್ಗೇಟ್ ಅಳವಡಿಕೆ ಕಾರಣಕ್ಕೆ ಕಳೆದ ವರ್ಷ ಎರಡನೇ ಬೆಳೆ ಇರಲಿಲ್ಲ. ಈ ವರ್ಷ ಮೊದಲ ಬೆಳೆ ಫಸಲು ಬರುವ ಹೊತ್ತಿಗೆ ನೀರು ನಿಲುಗಡೆಯಾಗಲಿರುವುದು ಭತ್ತ ಬೆಳೆಗಾರರನ್ನು ಮತ್ತೆ ಸಂಕಷ್ಟಕ್ಕೆ ಸಿಲುಕಿಸಿದೆ. ಜಲಾಶಯದಲ್ಲಿ 38.741 ಟಿಎಂಸಿ ಅಡಿ ನೀರುತುಂಗಭದ್ರಾ ಜಲಾಶಯವು 105.788 ಟಿಎಂಸಿ ಅಡಿ ನೀರು ಸಂಗ್ರಹಣಾ ಸಾಮರ್ಥ್ಯ ಹೊಂದಿದ್ದು, ನ. 4ರ ಬೆಳಿಗ್ಗೆಯ ವರದಿಯ ಪ್ರಕಾರ 38.741 ಟಿಎಂಸಿ ಅಡಿ ನೀರು ಮಾತ್ರ ಸಂಗ್ರಹವಿದೆ. ಅನೇಕ ದಿನಗಳಿಂದ ಒಳಹರಿವು ಸ್ಥಗಿತವಾಗಿದೆ.ಪ್ರಸ್ತುತ ನೀರಿನಲ್ಲಿ ಕರ್ನಾಟಕದ ಪಾಲು 17.522 ಟಿಎಂಸಿ ಅಡಿ ಇದ್ದು, ಇದರಲ್ಲಿ 10.71 ಟಿಎಂಸಿ ಅಡಿ ಕುಡಿಯುವ ನೀರಿಗಾಗಿ ಕಾಯ್ದಿರಿಸಲಾಗಿದೆ. ಆಂಧ್ರಪ್ರದೇಶದ ಕೋಟಾದಡಿ ಒಟ್ಟು 14.004 ಟಿಎಂಸಿ ಅಡಿ ನೀರು ಇದೆ.