ಈ ದೀಪಾವಳಿಗೆ ಹಾರುವ ಆಕಾಶ ಬುಟ್ಟಿಗಳನ್ನು ಮನೆಯಲ್ಲಿಯೇ ಸುಲಭವಾಗಿ ತಯಾರಿಸಿ
ದೀಪಾವಳಿಗೆ ಕೆಲವೇ ದಿನಗಳು ಬಾಕಿ ಉಳಿದಿವೆ. ದೀಪಾವಳಿಯ ಸಂದರ್ಭದಲ್ಲಿ ಪಟಾಕಿ, ದೀಪಗಳಂತೆಯೇ ಆಕಾಶ ಬುಟ್ಟಿಗಳೂ ಪ್ರಾಮುಖ್ಯತೆ ಪಡೆದುಕೊಂಡಿವೆ. ಸಂಜೆ ಆಗುತ್ತಿದ್ದಂತೆ ದೀಪಗಳ ಜತೆಗೆ ಆಕಾಶದ ಕಡೆಗೆ ಆಕಾಶ ಬುಟ್ಟಿಗಳನ್ನು ಹಾರಿಸಲಾಗುತ್ತದೆ. ಇವುಗಳನ್ನು ಹಾರುವ ದೀಪ ಎನ್ನಬಹುದು. ದೀಪಾವಳಿ ಸ್ವಾದ: 10 ಬಗೆಯ ವಿಶೇಷ ಹೋಳಿಗೆ ಮಾಡುವ ವಿಧಾನ ಇಲ್ಲಿದೆ ನೋಡಿ...ಆಕಾಶ ಬು

ದೀಪಾವಳಿಗೆ ಕೆಲವೇ ದಿನಗಳು ಬಾಕಿ ಉಳಿದಿವೆ. ದೀಪಾವಳಿಯ ಸಂದರ್ಭದಲ್ಲಿ ಪಟಾಕಿ, ದೀಪಗಳಂತೆಯೇ ಆಕಾಶ ಬುಟ್ಟಿಗಳೂ ಪ್ರಾಮುಖ್ಯತೆ ಪಡೆದುಕೊಂಡಿವೆ. ಸಂಜೆ ಆಗುತ್ತಿದ್ದಂತೆ ದೀಪಗಳ ಜತೆಗೆ ಆಕಾಶದ ಕಡೆಗೆ ಆಕಾಶ ಬುಟ್ಟಿಗಳನ್ನು ಹಾರಿಸಲಾಗುತ್ತದೆ. ಇವುಗಳನ್ನು ಹಾರುವ ದೀಪ ಎನ್ನಬಹುದು. ದೀಪಾವಳಿ ಸ್ವಾದ: 10 ಬಗೆಯ ವಿಶೇಷ ಹೋಳಿಗೆ ಮಾಡುವ ವಿಧಾನ ಇಲ್ಲಿದೆ ನೋಡಿ...ಆಕಾಶ ಬುಟ್ಟಿ ವಿಶೇಷತೆ ಎಂದರೆ, ಕೆಳಗೆ ಉರಿಯುವ ದೀಪದಿಂದ ಹೊರ ಬರುವ ಹೊಗೆ ಬಲೂನ್ ಆಕಾರದೊಳಗೆ ಸಂಗ್ರಹಗೊಳ್ಳುತ್ತದೆ. ನಂತರ ಆಕಾಶ ಬುಟ್ಟಿಯು ಸುಮಾರು ಕಿ.ಮೀಗಳ ದೂರದವರೆಗೆ ಹಾರುತ್ತಲೇ ಸಂಚರಿಸುತ್ತವೆ. ಮನೆಯಲ್ಲಿಯೇ ಸುಲಭವಾಗಿ ಆಕಾಶ ಬುಟ್ಟಿಯನ್ನು ತಯಾರಿಸುವ ಸುಲಭ ವಿಧಾನ ಇಲ್ಲಿದೆ.ಅಗತ್ಯ ಸಾಮಗ್ರಿಗಳುದೀಪಾವಳಿ ಹಬ್ಬಕ್ಕೆ 340 ಹೆಚ್ಚುವರಿ ಬಸ್ಗಳ ವ್ಯವಸ್ಥೆ ಬಣ್ಣದ ಗಾಳಿಪಟದ ಕಾಗದ, ಟಿಶ್ಯೂ ಪೇಪರ್ (4 ರಿಂದ 6 ಶೀಟ್)ತೆಳುವಾದ ಬಿದಿರಿನ ಪಟ್ಟಿ ಅಥವಾ ಹಗುರವಾದ ಅಲ್ಯೂಮಿನಿಯಂ ತಂತಿಮೇಣ, ಹತ್ತಿಯ ಬಟ್ಟೆಯ ತುಂಡುಕತ್ತರಿ, ಅಂಟು, ಮತ್ತು ಸೆಲ್ಲೋ ಟೇಪ್ಮೊದಲಿಗೆ ವಿವಿಧ ಬಣ್ಣಗಳ ಗಾಳಿಪಟದ ಕಾಗದ ತೆಗೆದುಕೊಂಡು, ಅವುಗಳ ಅಂಚುಗಳನ್ನು ಅಂಟಿನ ಸಹಾಯದಿಂದ ಒಂದಕ್ಕೊಂದು ಜೋಡಿಸಿ ಸಿಲಿಂಡರ್ ಆಕಾರವನ್ನು ಮಾಡಿಕೊಳ್ಳಿ. ಬಳಿಕ ವೃತ್ತಾಕಾರವಾಗಿ ಕತ್ತರಿಸಿದ ಕಾಗದದ ತುಂಡಿನಿಂದ ಸಿಲಿಂಡರ್ನ ಒಂದು ಭಾಗವನ್ನು ಗಾಳಿ ಹೊರ ಹೋಗದಂತೆ ಗಮ್ ಸಹಾಯದಿಂದ ಅಂಟಿಸಿ.ಸಾಂದರ್ಭಿಕ ಚಿತ್ರನಂತರ ಬಿದಿರಿನ ತೆಳುವಾದ ಸೀಳು ಅಥವಾ ಅಲ್ಯೂಮಿನಿಯಂ ತಂತಿ ತೆಗೆದುಕೊಂಡು ಸಿಲಿಂಡರ್ ಗಾತ್ರಕ್ಕೆ ಅನುಗುಣವಾಗಿ ವೃತ್ತಾಕಾರದ ರಿಂಗ್ ತಯಾರಿಸಿಕೊಳ್ಳಿ. ಆ ವೃತ್ತಕ್ಕೆ ‘+’ ಆಕಾರದಲ್ಲಿ ಎರಡು ತಂತಿ ಕೂಡಿಸಿ. ಬಳಿಕ ಆ ವೃತ್ತಾಕಾರದ ರಿಂಗ್ ಅನ್ನು ಸಿಲಿಂಡರ್ನ ತೆರೆದ ಕೆಳಭಾಗಕ್ಕೆ ಇಟ್ಟು, ಕಾಗದವನ್ನು ಒಳಗಡೆ ಮಡಚಿ ಗಮ್ ಅಥವಾ ಟೇಪ್ನಿಂದ ಗಟ್ಟಿಯಾಗಿ ಅಂಟಿಸಿ.ಸಾಂದರ್ಭಿಕ ಚಿತ್ರಸಣ್ಣ ಹತ್ತಿ ಬಟ್ಟೆಯ ತುಂಡನ್ನು ತೆಗೆದುಕೊಂಡು ಅದನ್ನು ಕರಗಿದ ಮೇಣದಲ್ಲಿ ಅಥವಾ ಅಡುಗೆ ಎಣ್ಣೆಯಲ್ಲಿ ಚೆನ್ನಾಗಿ ಅದ್ದಿ ಒಣಗಿಸಿ. ಬಳಿಕ ‘+’ ಆಕಾರದ ಜಾಗಕ್ಕೆ ಅಂಟಿಸಿದರೆ, ಆಕಾಶ ಬುಟ್ಟಿ ಸಿದ್ಧವಾಗುತ್ತದೆ. ಸಾಂದರ್ಭಿಕ ಚಿತ್ರಹಾರಿಸುವ ಮೊದಲು ತೆಂಗಿನ ಚಿಪ್ಪೆಯ ಹೊಗೆಯನ್ನು ತುಂಬಿ ಸಿಲಿಂಡರ್ನೊಳಗೆ ತುಂಬಿಸಿದ ನಂತರ '+' ಆಕಾರದ ತಂತಿಯ ಮೇಲೆ ಇಟ್ಟಿರುವ ಹತ್ತಿ ಬಟ್ಟೆಗೆ ಬೆಂಕಿ ಹಚ್ಚಿ. ಆಗ ಹೊಗೆಯಿಂದ ತುಂಬಿದ ಬುಟ್ಟಿ ಮೇಲಿರುತ್ತದೆ. ಕೆಲವೊಮ್ಮೆ ಗಾಳಿಗೆ ಹೊಯ್ದಾಡಿ ಆಕಾಶ ಬುಟ್ಟಿ ಬೆಂಕಿಗೆ ಆಹುತಿಯಾಗುವುದುಂಟು. ಆಕಾಶ ಬುಟ್ಟಿಗಳನ್ನು ತೆರೆದ ಮೈದಾನದಲ್ಲಿ ಹಾರಿಸುವುದು ಉತ್ತಮ.