ಕ್ವಿಂಟಲ್ ಈರುಳ್ಳಿಗೆ ₹ 6,200
ಹೂವಿನಹಡಗಲಿ (ವಿಜಯನಗರ ಜಿಲ್ಲೆ): ತಾಲ್ಲೂಕಿನ ಉತ್ತಂಗಿ ಗ್ರಾಮದ ರೈತರು ಬೆಂಗಳೂರಿನ ಯಶವಂತಪುರ ಮಾರುಕಟ್ಟೆಗೆ ಸಾಗಿಸಿದ್ದ ‘ಎ’ ಗ್ರೇಡ್ ಈರುಳ್ಳಿ ಕ್ವಿಂಟಲ್ಗೆ ₹ 6,200 ರಂತೆ ಮಾರಾಟವಾಗಿದ್ದು, ಗರಿಷ್ಠ ದರ ಸಿಕ್ಕಿದೆ.ಅಕ್ಟೋಬರ್ ತಿಂಗಳಲ್ಲಿ ಈ ಭಾಗದ ಈರುಳ್ಳಿ ಕ್ವಿಂಟಲ್ಗೆ ₹5,800 ಗರಿಷ್ಠ ಬೆಲೆಗೆ ಮಾರಾಟವಾಗಿತ್ತು. ನವೆಂಬರ್ ಮೊದಲ ವಾರದಲ್ಲಿ ಉತ್ತಮ ದರ್ಜೆಯ ಈರುಳ

ಹೂವಿನಹಡಗಲಿ (ವಿಜಯನಗರ ಜಿಲ್ಲೆ): ತಾಲ್ಲೂಕಿನ ಉತ್ತಂಗಿ ಗ್ರಾಮದ ರೈತರು ಬೆಂಗಳೂರಿನ ಯಶವಂತಪುರ ಮಾರುಕಟ್ಟೆಗೆ ಸಾಗಿಸಿದ್ದ ‘ಎ’ ಗ್ರೇಡ್ ಈರುಳ್ಳಿ ಕ್ವಿಂಟಲ್ಗೆ ₹ 6,200 ರಂತೆ ಮಾರಾಟವಾಗಿದ್ದು, ಗರಿಷ್ಠ ದರ ಸಿಕ್ಕಿದೆ.ಅಕ್ಟೋಬರ್ ತಿಂಗಳಲ್ಲಿ ಈ ಭಾಗದ ಈರುಳ್ಳಿ ಕ್ವಿಂಟಲ್ಗೆ ₹5,800 ಗರಿಷ್ಠ ಬೆಲೆಗೆ ಮಾರಾಟವಾಗಿತ್ತು. ನವೆಂಬರ್ ಮೊದಲ ವಾರದಲ್ಲಿ ಉತ್ತಮ ದರ್ಜೆಯ ಈರುಳ್ಳಿ ಪ್ರತಿ ಕ್ವಿಂಟಲ್ಗೆ ₹6 ಸಾವಿರ ಗಡಿ ದಾಟಿದೆ. ತಾಲ್ಲೂಕಿನಲ್ಲಿ ಮಳೆ ಕೊರತೆಯಿಂದ ಮುಖ್ಯ ಬೆಳೆಯಾಗಿದ್ದ ಮೆಕ್ಕೆಜೋಳ ಈ ಬಾರಿ ರೈತರ ಕೈ ಹಿಡಿಯಲಿಲ್ಲ. ಅಲ್ಪಸ್ವಲ್ಪ ಮಳೆಗೆ ಬೆಳೆದ ಮೆಕ್ಕೆಜೋಳ ಇಳುವರಿ ಗಣನೀಯವಾಗಿ ಕುಸಿದಿದ್ದು, ರೈತರಿಗೆ ನಷ್ಟವಾಗಿದೆ. ಆದರೆ, ಈರುಳ್ಳಿಗೆ ಉತ್ತಮ ಬೆಲೆ ಸಿಕ್ಕಿದ್ದರಿಂದ ಈರುಳ್ಳಿ ಬೆಳೆಗಾರರು ಈ ವರ್ಷ ಬರಗಾಲದಲ್ಲೂ ಉತ್ತಮ ಆದಾಯ ಪಡೆದಿದ್ದಾರೆ.‘ಮೂರು ಎಕರೆಯಲ್ಲಿ ಈರುಳ್ಳಿ ನಾಟಿ ಮಾಡಿದ್ದೆವು. ‘ಎ’ ಗ್ರೇಡ್ ಈರುಳ್ಳಿಗೆ ₹6,200, ‘ಬಿ’ ಗ್ರೇಡ್ಗೆ ₹ 5,500, ಮೂರನೇ ದರ್ಜೆಯ ಈರುಳ್ಳಿಗೆ ₹4,800 ಧಾರಣೆ ಸಿಕ್ಕಿದೆ. ಮೂರು ಎಕರೆಯಲ್ಲಿ ಬೆಳೆದ ಈರುಳ್ಳಿಯಿಂದ ₹13.50 ಲಕ್ಷ ಆದಾಯ ಸಿಕ್ಕಿದೆ’ ಎಂದು ಬೇವೂರು ರೈತ ಪ್ರಶಾಂತ ತಿಳಿಸಿದರು.‘ಅತಿವೃಷ್ಟಿ, ಕೊಳೆರೋಗ ಕಾರಣ ಮೂರು–ನಾಲ್ಕು ವರ್ಷಗಳಿಂದ ಈರುಳ್ಳಿ ಬೆಳೆಗಾರರು ನಷ್ಟ ಅನುಭವಿಸಿದ್ದರು. ಈ ವರ್ಷ ಅವರ ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ’ ಎಂದು ರಾಜ್ಯ ಈರುಳ್ಳಿ ಬೆಳೆಗಾರರ ಸಂಘದ ಅಧ್ಯಕ್ಷ ಎನ್.ಎಂ. ಸಿದ್ದೇಶ ತಿಳಿಸಿದರು.