‘ಮೂಕುತಿ ಅಮ್ಮನ್ 2’ ಬಿಡುಗಡೆಗೂ ಮುನ್ನ ಕಾಳಿಕಾಂಬಾಳ್ ದೇಗುಲಕ್ಕೆ ನಯನತಾರಾ ಭೇಟಿ
ಲೇಡಿ ಸೂಪರ್ಸ್ಟಾರ್ ನಯನತಾರಾ ಅಭಿನಯದ ಬಹುನಿರೀಕ್ಷಿತ ‘ಮೂಕುತಿ ಅಮ್ಮನ್ 2’ ಸಿನಿಮಾ ಬಿಡುಗಡೆಗೆ ಸಜ್ಜಾಗಿದ್ದು, ಟ್ರೇಲರ್ ನೋಡಿದ ಅಭಿಮಾನಿಗಳಲ್ಲಿ ಚಿತ್ರದ ಮೇಲಿನ ನಿರೀಕ್ಷೆ ದುಪ್ಪಟ್ಟಾಗಿದೆ. ಸುಂದರ್ ಸಿ. ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರದಲ್ಲಿ ನಯನತಾರಾ ಅವರು ದೇವಿಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಸಿನಿಮಾ ಬಿಡುಗಡೆಗೆ ದಿನಗಣನೆ ಆರಂಭವಾಗಿರುವ ಬೆನ್ನ

ಲೇಡಿ ಸೂಪರ್ಸ್ಟಾರ್ ನಯನತಾರಾ ಅಭಿನಯದ ಬಹುನಿರೀಕ್ಷಿತ ‘ಮೂಕುತಿ ಅಮ್ಮನ್ 2’ ಸಿನಿಮಾ ಬಿಡುಗಡೆಗೆ ಸಜ್ಜಾಗಿದ್ದು, ಟ್ರೇಲರ್ ನೋಡಿದ ಅಭಿಮಾನಿಗಳಲ್ಲಿ ಚಿತ್ರದ ಮೇಲಿನ ನಿರೀಕ್ಷೆ ದುಪ್ಪಟ್ಟಾಗಿದೆ. ಸುಂದರ್ ಸಿ. ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರದಲ್ಲಿ ನಯನತಾರಾ ಅವರು ದೇವಿಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಸಿನಿಮಾ ಬಿಡುಗಡೆಗೆ ದಿನಗಣನೆ ಆರಂಭವಾಗಿರುವ ಬೆನ್ನಲ್ಲೇ ನಟಿ ನಯನತಾರಾ ಅವರು ಚೆನ್ನೈನ ತಂಬು ಚೆಟ್ಟಿ ಬೀದಿಯಲ್ಲಿರುವ ಅರುಳ್ಮಿಗು ಕಾಳಿಕಾಂಬಾಳ್ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.ಮೂಕುತಿ ಅಮ್ಮನ್ 2: 60 ಅಡಿ ನಯನತಾರಾ ಕಟೌಟ್ ನಿಲ್ಲಿಸಿದ ಅಭಿಮಾನಿಗಳು‘ಮೂಕುತಿ ಅಮ್ಮನ್ 2’: ದ್ವಿಪಾತ್ರದಲ್ಲಿ ನಟಿ ನಯನತಾರಾ; ಖಳನಾಯಕನಾದ ದುನಿಯಾ ವಿಜಯ್ನಯನತಾರಾ ಕೆಂಪು ಮತ್ತು ಕಿತ್ತಳೆ ಬಣ್ಣದ ಅಂಚುಳ್ಳ ನೀಲಿ ಸೀರೆಯಲ್ಲಿ, ಸಾಂಪ್ರದಾಯಿಕ ಮೂಗುತಿ, ಜುಮುಕಿ ಹಾಗೂ ಮಲ್ಲಿಗೆ ಹೂ ಮುಡಿದು ಆಗಮಿಸಿದ್ದ ನಟಿಯನ್ನು ನೋಡಲು ದೇವಾಲಯದ ಆವರಣದಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳು ಜಮಾಯಿಸಿದ್ದರು.ಪೂಜೆಯ ಬಳಿಕ ದೇವಾಲಯಕ್ಕೆ ಆಗಮಿಸಿದ್ದ ಮಹಿಳೆಯರಿಗೆ ಸೀರೆ, ಹೂವು, ಬಾಳೆಹಣ್ಣನ್ನು ವಿತರಿಸಿದ ನಟಿ, ನಂತರ ನಡೆದ ಅನ್ನದಾನ ಸೇವೆಯಲ್ಲಿ ಭಾಗಿಯಾಗಿ ಭಕ್ತರಿಗೆ ಊಟ ಬಡಿಸಿದರು. ‘ಮೂಕುತಿ ಅಮ್ಮನ್ 2’ ಸಿನಿಮಾವು ನವೆಂಬರ್ 6ರಂದು ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ.ನಯನತಾರಾNayanthara ✨️ #QueenNayanthara #LadySuperstar #Nayanthara #MookuthiAmnan2 pic.twitter.com/rrZu3W726l— Nayan wings (@Nayan_Universal) November 4, 2026 ಮೂಕುತಿ ಅಮ್ಮನ್ 2 ಕಥೆ ಏನು?ಇದು ತನ್ನ ಮಗನನ್ನು ಶತ್ರುಗಳಿಂದ ರಕ್ಷಿಸಲು ಪ್ರಾಣತ್ಯಾಗ ಮಾಡುವ ಒಬ್ಬ ರಾಣಿಯ ಕಥೆಯಿಂದ ಕೂಡಿದೆ. ಆ ಮಗನನ್ನು ಹಾಗೂ ಮುಗ್ಧ ಜನರನ್ನು ರಕ್ಷಿಸಲು ಮೂಕುತಿ ಅಮ್ಮನ್ ದುಷ್ಟ ಶಕ್ತಿಗಳ ವಿರುದ್ಧ ಹೇಗೆ ಹೋರಾಡುತ್ತಾಳೆ ಎಂಬುದೇ ಈ ಚಿತ್ರದ ಪ್ರಮುಖ ಕಥಾಹಂದರ. ವಿಶೇಷ ಎಂದರೆ ಚಿತ್ರದಲ್ಲಿ ನಟ ದುನಿಯಾ ವಿಜಯ್ ಅವರು ಖಳನಾಯಕನ ಪಾತ್ರದಲ್ಲಿ ನಟಿಸಿದ್ದಾರೆ. ಇವರೊಂದಿಗೆ ಊರ್ವಶಿ, ನಟಿ ರೆಜಿನಾ ಕಸ್ಸಂದ್ರ, ಯೋಗಿ ಬಾಬು, ಅಭಿನಯ ಹಾಗೂ ಶ್ರುತಿ ಎಸ್. ಸೇರಿದಂತೆ ಹಲವು ತಾರೆಯರು ನಟಿಸಿದ್ದಾರೆ