S.L ಭೈರಪ್ಪ ಅವರ 'ಗೃಹಭಂಗ': ಕಷ್ಟಗಳ ಸಾಗರದಲ್ಲಿ ಈಜಿ ಪ್ಲೇಗ್ಗೆ ಬಲಿಯಾದ ನಂಜಮ್ಮ
ಎಸ್.ಎಲ್. ಭೈರಪ್ಪ ಅವರ 'ಗೃಹಭಂಗ' ಕಾದಂಬರಿಯನ್ನು ಗಿರೀಶ್ ಕಾಸರವಳ್ಳಿ ಅವರು ತಮ್ಮ ನಿರ್ದೇಶನದ ಮೂಲಕ ಧಾರಾವಾಹಿಯಾಗಿ ಕಿರುತೆರೆ ಮೇಲೆ ತಂದಿದ್ದರು. ನಟಿ ಸೌಂದರ್ಯ ಅವರು ಈ ಬಂಡವಾಳ ಹೂಡಿಕೆ ಮಾಡಿದ್ದರು. ಈ ಧಾರಾವಾಹಿಯ ಮುಖ್ಯ ಭೂಮಿಕೆಯಲ್ಲಿ ಮಾಳವಿಕಾ ಅವಿನಾಶ್ ಅವರು 'ನಂಜಮ್ಮ'ನ ಪಾತ್ರದಲ್ಲಿ ನಟಿಸಿದ್ದಾರೆ. ಲೋಹಿತಾಶ್ವ ಅವರು ಕಂಠಿ

ಎಸ್.ಎಲ್. ಭೈರಪ್ಪ ಅವರ 'ಗೃಹಭಂಗ' ಕಾದಂಬರಿಯನ್ನು ಗಿರೀಶ್ ಕಾಸರವಳ್ಳಿ ಅವರು ತಮ್ಮ ನಿರ್ದೇಶನದ ಮೂಲಕ ಧಾರಾವಾಹಿಯಾಗಿ ಕಿರುತೆರೆ ಮೇಲೆ ತಂದಿದ್ದರು. ನಟಿ ಸೌಂದರ್ಯ ಅವರು ಈ ಬಂಡವಾಳ ಹೂಡಿಕೆ ಮಾಡಿದ್ದರು. ಈ ಧಾರಾವಾಹಿಯ ಮುಖ್ಯ ಭೂಮಿಕೆಯಲ್ಲಿ ಮಾಳವಿಕಾ ಅವಿನಾಶ್ ಅವರು 'ನಂಜಮ್ಮ'ನ ಪಾತ್ರದಲ್ಲಿ ನಟಿಸಿದ್ದಾರೆ. ಲೋಹಿತಾಶ್ವ ಅವರು ಕಂಠಿ ಜೋಯಿಸರಾಗಿ, ಲಕ್ಷ್ಮಿ ಚಂದ್ರಶೇಖರ್ ಅವರು ‘ಗಂಗಮ್ಮ ' ಆಗಿ ಕಾಣಿಸಿಕೊಂಡಿದ್ದಾರೆ. ಅಚ್ಯುತ್ ಕುಮಾರ್ ಅವರು ‘ಚೆನ್ನಿಗರಾಯ’ನಾಗಿ, ಉಷಾ ಭಂಡಾರಿ ಅವರು ಪಾತ್ರಕ್ಕೆ ಜೀವ ತುಂಬಿದ್ದಾರೆ. ತಿಪಟೂರಿನ ಶಾನುಭೋಗರ ಮನೆಯ ಎಂದರೆ ಆ ಊರಿನಲ್ಲಿ ಅದರ ಗತ್ತೇ ಬೇರೆ. ಶಾನುಭೋಗರು ನಿಧನರಾಗಿ ಹಲವು ವರ್ಷಗಳಾಗಿತ್ತು. ಅವರ ಪತ್ನಿ ಗಂಗಮ್ಮ ತಮ್ಮ ಮಕ್ಕಳಾದ ಚೆನ್ನಿಗರಾಯ, ಅಪ್ಪಣ್ಣನನ್ನು ಅತೀ ಮುದ್ದಿನಿಂದ ಸಾಕಿರುತ್ತಾಳೆ. ಆದ್ರೆ ಸ್ವಲ್ಪ ಗಯ್ಯಾಳಿ, ಒರಟು ಸ್ವಭಾವ, ತನ್ನ ಸೊಸೆಯಂದಿರ ಹತ್ತಿರ ಮಾತ್ರವಲ್ಲ ಊರಿನ ಹೆಂಗಸರ ಹತ್ತಿರವೂ ಸದಾ ಜಗಳ ಆಡುತ್ತಿರುತ್ತಾಳೆ. ಕೃಷ್ಣ ಆಲನಹಳ್ಳಿ ಅವರ 'ಕಾಡು': ಅಕ್ರಮ ಸಂಬಂಧ ಹರಿಸಿದ ನೆತ್ತರು...‘ಯು ಆರ್ ಮೈ ಹೀರೋ’ದಲ್ಲಿ ಹೀಗಿದ್ದಾರೆ ಸಂಹಿತಾ ವಿನ್ಯಾಮೂಡುಬಿದಿರೆ: ಫೈಜ್ನಟ್ರಾಜ್ಗೆ 2026ನೇ ಸಾಲಿನ ಮುದ್ದಣಕಾವ್ಯ ಪ್ರಶಸ್ತಿ ಗರಿಅನಂತಮೂರ್ತಿ 'ಸಂಸ್ಕಾರ'ಕ್ಕೆ ತೆರೆರೂಪ: ಈ ಚಿತ್ರಕ್ಕೆ ರಾಷ್ಟ್ರೀಯ ಪ್ರಶಸ್ತಿ ಗರಿ ಕಂಠಿಜೋಯಿಸರ ಮಗಳಾದ ನಂಜಮ್ಮ, ಚೆನ್ನಿಗರಾಯನನ್ನು ಮದುವೆಯಾಗಿ ಗಂಗಮ್ಮನ ಸೊಸೆಯಾಗಿ ಶಾನುಭೋಗರ ಮನೆಗೆ ಕಾಲಿಡುತ್ತಾಳೆ. ತವರಿನಲ್ಲಿ ಯಾವುದೇ ಕಷ್ಟವನ್ನು ನೋಡಿರದ ನಂಜಮ್ಮ, ಗಂಡನ ಮನೆಯಲ್ಲಿ ಸಾಲು ಸಾಲು ಕಷ್ಟಗಳನ್ನು ಎದುರಿಸುತ್ತಾಳೆ. ಸೋಮಾರಿ ಗಂಡ, ಬಜಾರಿ ಅತ್ತೆ, ಜಗಳಗಂಟ ಮೈದುನ. ಈ ಎಲ್ಲಾ ಕಿರುಕುಳದ ನಡುವೆ ನಂಜಮ್ಮ ಮನೆಯ ಜವಾಬ್ದಾರಿಯನ್ನು ಚೆನ್ನಾಗಿ ನಿಭಾಯಿಸುತ್ತಾಳೆ. ಕೆಲವು ಸಮಯದ ನಂತರ ಈಕೆಯ ಮೈದುನ ಅಪ್ಪಣ್ಣನು ಸಾವಿತ್ರಿ ಜೊತೆ ವಿವಾಹ ಆಗುತ್ತಾನೆ. ಚೆನ್ನಿಗ ಸ್ವಲ್ಪ ಪೆದ್ದ, ಅಪ್ಪಣ್ಣ ಜಾಣ. ಆದರೆ ಇಬ್ಬರು ಸಹೋದರುರು ತಮ್ಮ ಹೆಂಡತಿಯರಿಗೆ ಚಿತ್ರ ಹಿಂಸೆ ನೀಡುವುದನ್ನೇ ತಮ್ಮ ಕಾಯಕ ಮಾಡಿಕೊಂಡಿರುತ್ತಾರೆ. ಎಂಥಹ ಸಂದರ್ಭದಲ್ಲೂ ದುಡಿದು ತಿನ್ನುಲು ತಯಾರಿರುವುದಿಲ್ಲ.ಚೆನ್ನಿಗನಿಗೆ ಶ್ಯಾನುಭೋಗಿಕೆಯ ಲೆಕ್ಕ ಬರೆಯಲು ಬಾರದಿದ್ದಾಗ, ಮರ್ಯಾದೆ ಉಳಿಸುವ ಸಲುವಾಗಿ ಸ್ವತಃ ನಂಜಮ್ಮನೇ ಅಕ್ಷರ ಕಲಿತು ಶ್ಯಾನುಭೋಗಿ ಕೆಲಸದ ಜವಾಬ್ದಾರಿಯನ್ನು ಹೊತ್ತು 3 ಮಕ್ಕಳನ್ನು ತನ್ನ ಕೈಲಾದ ಮಟ್ಟಿಗೆ ಸಾಕುತ್ತಾಳೆ ಈಡೇರಿಸುತ್ತಿರುತ್ತಾಳೆ. ಆದರೆ ಲೆಕ್ಕ ಪುಸ್ತಕ ಮುಟ್ಟಿದ್ದು ಚೆನ್ನಿಗನ ಕಣ್ಣಿಗೆ ಬಿದ್ದು ನಂಜಮ್ಮನ ಮೇಲೆ ಹಲ್ಲೆ ಮಾಡುತ್ತಾನೆ. ಅದಾಗಿಯೂ, ಅವಳು ಧೈರ್ಯಗೆಡದೆ ಸಂಸಾರವನ್ನು ಸಾಗಿಸುತ್ತಾಳೆ.ಹೀಗೊಂದು ದಿನ ಸಣ್ಣ ವಿಷಯಕ್ಕೆ ಗಲಾಟೆ ಆಗಿ ಅಪ್ಪಣ್ಣ, ಪತ್ನಿ ಸಾತುಗೆ ಮನಸೋಇಚ್ಛೆ ಹೊಡೆಯುತ್ತಾನೆ. ಇದಕ್ಕೆ ಕೋಪಗೊಂಡ ಸಾವಿತ್ರಿ ಮಗುವನ್ನು ಕರೆದುಕೊಂಡು ತವರು ಮನೆ ಸೇರುತ್ತಾಳೆ. ಕೆಲವು ದಿನಗಳ ಬಳಿಕ ಎರಡನೇ ಮದುವೆಯಾಗಿ ಉತ್ತಮ ಜೀವನ ರೂಪಿಸಿಕೊಳ್ಳುತ್ತಾಳೆ. ಕೆಲವು ವರ್ಷಗಳ ಬಳಿಕ ಅಪ್ಪಣ್ಣ ಕೂಡ ಒಳ್ಳೆಯವನಾಗಿ ಬದಲಾಗುತ್ತಾನೆ. ಆದರೆ ಸಾವಿತ್ರಿ ಅವನ ಜೊತೆ ಬರುವುದಿಲ್ಲ.ಕೆಲವು ದಿನಗಳ ನಂತರ ಆ ಊರಿಗೆ ಬರಗಾಲ ಆವರಿಸುತ್ತದೆ. ಅದೇ ವೇಳೆ ಆಸ್ತಿನೆಲ್ಲಾ ಕಳೆದುಕೊಂಡು ನಂಜಮ್ಮನ ಕುಟುಂಬ ಬೀದಿಗೆ ಬಂದಿರುತ್ತದೆ. ಆದರೂ ಗಂಗಮ್ಮ ಮಾತ್ರ ತನ್ನ ಕಟುಕ ಬುದ್ಧಿ ಬಿಟ್ಟಿರಲಿಲ್ಲ. ಅದರ ಬೆನ್ನಲೇ ಆ ಊರಿಗೆ ಪ್ಲೇಗ್ ಕೂಡ ಹರಡಿರುತ್ತದೆ. ಮಂಗಳೂರಿನಲ್ಲಿ ರಾಜ್ಯೋತ್ಸವ: ಮೊಳಗಿದ ಕನ್ನಡ ಕಹಳೆ...ಆ ಬಡತನದಲ್ಲೂ ಮಕ್ಕಳ ಹೊಟ್ಟೆ ತುಂಬಿಸಲು ನಂಜಮ್ಮ ಹೋರಾಡುತ್ತಲೇ ಇರುತ್ತಾಳೆ. ಊರಿನ ಅನೇಕರಿಗೆ ಹರಡಿದ್ದ ಈ ಸಾಂಕ್ರಮಿಕ ರೋಗ ಕೊನೆಗೂ ನಂಜಮ್ಮ ಹಾಗೂ, ಅವಳ ಎರಡು ಮಕ್ಕಳಿಗೂ ಹರಡುತ್ತದೆ. ತಮ್ಮ ಮಕ್ಕಳನ್ನು ಉಳಿಸಲು ಸಾಧ್ಯವಾದಷ್ಟು ಹೋರಾಡುತ್ತಾಳೆ. ಪ್ಲೇಗ್ ರೋಗದಿಂದ ನಂಜಮ್ಮ ಹಾಗೂ ಅವಳ ಎರಡು ಮಕ್ಕಳು ಕೂಡ ಸಾಯುತ್ತಾರೆ. ಕೊನೆಯ ಮಗ ವಿಶ್ವ ಸೋದರ ಮಾವನ ಕಡೆ ಹೋಗುತ್ತಾನೆ. ಆದರೆ ಅಲ್ಲಿ ಅವನ ಅತ್ತೆ ಕಮಲಿ ಕಿರುಕುಳಕ್ಕೆ ಹೆದರಿ ಮಾದೇವ ಸ್ವಾಮಿ ಜೊತೆ ಹೆಜ್ಜೆ ಹಾಕುತ್ತಾನೆ. ಅಲ್ಲಿಗೆ ಧಾರಾವಾಹಿ ಮುಗಿಯುತ್ತದೆ. ಈ ಧಾರಾವಾಹಿಯಲ್ಲಿ ಹೆಣ್ಣಿನ ದೃಢ ನಿರ್ಧಾರ, ಬದುಕಿನ ಕಟು ವಾಸ್ತವವನ್ನು ಕಣ್ಣಿಗೆ ಕಟ್ಟಿದಂತೆ ಇದೆ. ಎಂಥಹ ಪರಿಸ್ಥಿತಿ ಬಂದರೂ ಮಹಿಳೆಯೊಬ್ಬಳ ದಿಟ್ಟ ಹೋರಾಟವನ್ನು ಈ ಕಥೆಯಲ್ಲಿ ಕಾಣಬಹುದು.