ನಟಿ ಕೃತಿ ಸನೋನ್ ವ್ಯಕ್ತಿತ್ವದ ಹಕ್ಕುಗಳಿಗೆ ದೆಹಲಿ ಹೈಕೋರ್ಟ್ ರಕ್ಷಣೆ
ನವದೆಹಲಿ: ನಟಿ ಕೃತಿ ಸನೋನ್ ಅವರ ವ್ಯಕ್ತಿತ್ವದ ಹಕ್ಕುಗಳಿಗೆ ಧಕ್ಕೆ ಉಂಟುಮಾಡುವ ರೀತಿಯಲ್ಲಿ ಕೃತಕ ಬುದ್ಧಿಮತ್ತೆ (ಎಐ) ಮೂಲಕ ಸೃಷ್ಟಿಸಿದ ವಿಷಯಗಳನ್ನು ಆನ್ಲೈನ್ನಲ್ಲಿ ಪ್ರಕಟಿಸುವುದಕ್ಕೆ ದೆಹಲಿ ಹೈಕೋರ್ಟ್ ನಿರ್ಬಂಧ ವಿಧಿಸಿದೆ. ವ್ಯಕ್ತಿತ್ವದ ಹಕ್ಕು ರಕ್ಷಣೆ ಕೋರಿ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ ಸಲ್ಮಾನ್ ಖಾನ್ಅವರ ಮಾರ್ಫ್ ಮಾಡಿದ ಹಾಗೂ ಲೈಂಗಿಕವಾಗಿ ಪ್ರಚೋದನಕಾ

ನವದೆಹಲಿ: ನಟಿ ಕೃತಿ ಸನೋನ್ ಅವರ ವ್ಯಕ್ತಿತ್ವದ ಹಕ್ಕುಗಳಿಗೆ ಧಕ್ಕೆ ಉಂಟುಮಾಡುವ ರೀತಿಯಲ್ಲಿ ಕೃತಕ ಬುದ್ಧಿಮತ್ತೆ (ಎಐ) ಮೂಲಕ ಸೃಷ್ಟಿಸಿದ ವಿಷಯಗಳನ್ನು ಆನ್ಲೈನ್ನಲ್ಲಿ ಪ್ರಕಟಿಸುವುದಕ್ಕೆ ದೆಹಲಿ ಹೈಕೋರ್ಟ್ ನಿರ್ಬಂಧ ವಿಧಿಸಿದೆ. ವ್ಯಕ್ತಿತ್ವದ ಹಕ್ಕು ರಕ್ಷಣೆ ಕೋರಿ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ ಸಲ್ಮಾನ್ ಖಾನ್ಅವರ ಮಾರ್ಫ್ ಮಾಡಿದ ಹಾಗೂ ಲೈಂಗಿಕವಾಗಿ ಪ್ರಚೋದನಕಾರಿ ಚಿತ್ರಗಳು, ವಿಡಿಯೊಗಳು ಮತ್ತು ಆಡಿಯೊಗಳನ್ನು ಪ್ರಕಟಿಸುವುದು ಹಾಗೂ ಚಾಟ್ಬಾಟ್ಗಳು ಅಥವಾ ಧ್ವನಿ ಮಾದರಿಗಳ ಮೂಲಕ ಅವರಂತೆ ನಟಿಸುವುದನ್ನೂ ನಿರ್ಬಂಧಿಸಿದೆ.ಹಕ್ಕು ಉಲ್ಲಂಘಿಸುವ ವಿಷಯಗಳನ್ನು ಆನ್ಲೈನ್ ವೇದಿಕೆಗಳಿಂದ ತೆಗೆದುಹಾಕುವಂತೆ ಸೂಚಿಸಿದ ನ್ಯಾಯಮೂರ್ತಿ ಪುರುಷೈಂದ್ರ ಕುಮಾರ್ ಕೌರವ್, ಸಂಬಂಧಪಟ್ಟ ವಿಷಯಗಳು ಅರ್ಜಿದಾರರ ವ್ಯಕ್ತಿತ್ವದ ವಾಣಿಜ್ಯ ಮೌಲ್ಯವನ್ನು ದುರುಪಯೋಗಪಡಿಸಿಕೊಳ್ಳುವುದಷ್ಟೇ ಅಲ್ಲದೆ, ಅವರ ಘನತೆಗೂ ಧಕ್ಕೆ ಉಂಟುಮಾಡಿವೆ ಎಂದು ಹೇಳಿದರು.ಸನೋನ್ ಅವರ ವ್ಯಕ್ತಿತ್ವದ ಗುಣಲಕ್ಷಣಗಳನ್ನು ಬಳಸಿಕೊಂಡು ಸರಕುಗಳನ್ನು ಮಾರಾಟ ಮಾಡುತ್ತಿದ್ದ ಆನ್ಲೈನ್ ಮಾರಾಟಗಾರರಿಗೂ ನ್ಯಾಯಾಲಯ ನಿರ್ಬಂಧ ವಿಧಿಸಿದೆ. ಆ ಮಾರಾಟಗಾರರ ಕೆಲವು ಉತ್ಪನ್ನಗಳಲ್ಲಿ ನಟಿಯ ವೈಯಕ್ತಿಕ ಬದುಕಿನ ಚಿತ್ರಗಳನ್ನು ಬಳಸಲಾಗಿದೆ ಎಂದು ಹೇಳಲಾಗಿತ್ತು.ಕೆಲವು ಅಪರಿಚಿತ ವ್ಯಕ್ತಿಗಳು ತಮ್ಮ ಪ್ರಚಾರ ಮತ್ತು ಖಾಸಗಿತನದ ಹಕ್ಕುಗಳನ್ನು ಉಲ್ಲಂಘಿಸುತ್ತಿದ್ದಾರೆ. ಇದರಿಂದ ನಷ್ಟ ಉಂಟಾಗುವ ಸಾಧ್ಯತೆಯಿದೆ ಎಂದು ಆರೋಪಿಸಿ ಸನೋನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೌರವ್ ಅವರು ಅಕ್ಟೋಬರ್ 29ರಂದು ಮಧ್ಯಂತರ ಆದೇಶ ಹೊರಡಿಸಿದ್ದರು.ನಟಿಯ ಹೆಸರು, ಚಿತ್ರ, ರೂಪ ಮತ್ತು ಧ್ವನಿಯನ್ನು ಬಳಸಿಕೊಂಡು ಅವರ ಕಾರ್ಯಕ್ರಮಗಳಿಗಾಗಿ ‘ಬುಕಿಂಗ್’ ನೀಡುವುದು, ಸರಕುಗಳ ಮಾರಾಟ, ಎಐ ಚಾಟ್ಬಾಟ್ಗಳು ಮತ್ತು ಕೃತಕ ಧ್ವನಿ ಮಾದರಿಗಳ ಸೃಷ್ಟಿ, ಸೂಚನೆ ಆಧರಿತ ಚಿತ್ರಗಳ ರಚನೆ ಹಾಗೂ ಅಶ್ಲೀಲ ಡೀಪ್ಫೇಕ್ಗಳ ತಯಾರಿಕೆ ಸೇರಿದಂತೆ ಹಲವು ರೀತಿಯಲ್ಲಿ ದುರುಪಯೋಗ ಮಾಡಲಾಗುತ್ತಿದೆ ಎಂದು ಅವರ ಪರ ವಕೀಲರು ವಾದಿಸಿದ್ದರು.ವ್ಯಕ್ತಿತ್ವದ ಹಕ್ಕು ರಕ್ಷಣೆ ಕೋರಿ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ ಐಶ್ವರ್ಯಾ ರೈಯೂಟ್ಯೂಬ್, ಫೇಸ್ಬುಕ್, ಎಕ್ಸ್ ಮತ್ತು ಪಿಂಟರೆಸ್ಟ್ನ ಕೆಲವು ಖಾತೆಗಳಲ್ಲಿ ಅವರ ಎಐ ಮೂಲಕ ಸೃಷ್ಟಿಸಿದ ಹಾಗೂ ಮಾರ್ಫ್ ಮಾಡಿದ ಚಿತ್ರಗಳನ್ನು ಪ್ರಸಾರ ಮಾಡಲಾಗುತ್ತಿದೆ ಎಂದೂ ನ್ಯಾಯಾಲಯಕ್ಕೆ ತಿಳಿಸಲಾಗಿತ್ತು.ನಟಿ ಐಶ್ವರ್ಯಾ ರೈ ಬಚ್ಚನ್, ಅಭಿಷೇಕ್ ಬಚ್ಚನ್, ಸಲ್ಮಾನ್ ಖಾನ್ ಮತ್ತು ಕಂಗನಾ ರಣಾವತ್, ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ ಶ್ರೀ ಶ್ರೀ ರವಿಶಂಕರ್, ಪತ್ರಕರ್ತ ಸುಧೀರ್ ಚೌಧರಿ, ಪಾಡ್ಕಾಸ್ಟರ್ ರಾಜ್ ಶಮಾನಿ, ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಹಾಗೂ ಕ್ರಿಕೆಟಿಗ ಅಭಿಷೇಕ್ ಶರ್ಮಾ ಸೇರಿದಂತೆ ಹಲವು ಗಣ್ಯರು ಈ ಹಿಂದೆ ತಮ್ಮ ವ್ಯಕ್ತಿತ್ವ ಮತ್ತು ಪ್ರಚಾರ ಹಕ್ಕುಗಳ ರಕ್ಷಣೆ ಕೋರಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.ಅವರಿಗೂ ಹೈಕೋರ್ಟ್ ಮಧ್ಯಂತರ ಪರಿಹಾರ ನೀಡಿತ್ತು.ಕರುನಾಡ ಕುತೂಹಲ | ಕವಿರಾಜಮಾರ್ಗ: ಕನ್ನಡದ ಮೊದಲ ಲಭ್ಯ ಸಾಹಿತ್ಯ ಕೃತಿ