ಲಾಸ್ ಏಂಜಲೀಸ್ ಮೇಯರ್ ಚುನಾವಣೆಯಲ್ಲಿ ನಿತ್ಯಾ ಗೆಲುವು: ಕೇರಳಂನಲ್ಲಿ ಸಂಭ್ರಮ
ತಿರುವನಂತಪುರ: ಡೆಮಾಕ್ರಟಿಕ್ ಪಕ್ಷದ ನಿತ್ಯಾ ರಾಮನ್ ಅವರು ಲಾಸ್ ಏಂಜಲೀಸ್ ಮೇಯರ್ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದು, ಕೇರಳಂನಲ್ಲಿ ಸಂಭ್ರಮ ಮನೆ ಮಾಡಿದೆ.ತಿರುವನಂತಪುರದಲ್ಲಿ ಜನಿಸಿದ ನಿತ್ಯಾ ರಾಮನ್, ಬಾಲ್ಯದ ಬಹುಭಾಗವನ್ನು ಇಲ್ಲಿಯೇ ಕಳೆದರು. ಅವರು ಕುಟುಂಬದೊಂದಿಗೆ ಅಮೆರಿಕಕ್ಕೆ ಸ್ಥಳಾಂತರಗೊಳ್ಳುವಾಗ ಅವರಿಗೆ ಆರು ವರ್ಷ. ಈಗಲೂ ರಾಮನ್ ಕೇರಳದೊಂದಿಗಿನ ನಂಟನ್ನು ಉ
ತಿರುವನಂತಪುರ: ಡೆಮಾಕ್ರಟಿಕ್ ಪಕ್ಷದ ನಿತ್ಯಾ ರಾಮನ್ ಅವರು ಲಾಸ್ ಏಂಜಲೀಸ್ ಮೇಯರ್ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದು, ಕೇರಳಂನಲ್ಲಿ ಸಂಭ್ರಮ ಮನೆ ಮಾಡಿದೆ.ತಿರುವನಂತಪುರದಲ್ಲಿ ಜನಿಸಿದ ನಿತ್ಯಾ ರಾಮನ್, ಬಾಲ್ಯದ ಬಹುಭಾಗವನ್ನು ಇಲ್ಲಿಯೇ ಕಳೆದರು. ಅವರು ಕುಟುಂಬದೊಂದಿಗೆ ಅಮೆರಿಕಕ್ಕೆ ಸ್ಥಳಾಂತರಗೊಳ್ಳುವಾಗ ಅವರಿಗೆ ಆರು ವರ್ಷ. ಈಗಲೂ ರಾಮನ್ ಕೇರಳದೊಂದಿಗಿನ ನಂಟನ್ನು ಉಳಿಸಿಕೊಂಡಿದ್ದಾರೆ. ಸುಮಾರು ಐದು ವರ್ಷಗಳ ಹಿಂದೆ ಕುಟುಂಬದೊಂದಿಗೆ ತಿರುವನಂತಪುರಕ್ಕೆ ಭೇಟಿ ನೀಡಿದ್ದರು.ಅಮೆರಿಕ ಮಧ್ಯಂತರ ಚುನಾವಣೆ: ಡೊನಾಲ್ಡ್ ಟ್ರಂಪ್ ಸೋಲಿಗೆ ಪ್ರಮುಖ ಕಾರಣಗಳುರಾಮನ್ ಅವರ ತಂದೆ ಆರ್. ವೆಂಕಟರಾಮನ್ ಅವರು ತಿರುವನಂತಪುರದವರು. ಅವರು ರಾಜ್ಯ ಸರ್ಕಾರಿ ಸ್ವಾಮ್ಯದ ಉದ್ಯಮವಾದ ಕೆಲ್ಟ್ರಾನ್ನಲ್ಲಿ ಕೆಲಸ ಮಾಡುತ್ತಿದ್ದರು. ಬ್ಯಾಂಕ್ನಲ್ಲಿ ಉದ್ಯೋಗಿಯಾಗಿದ್ದ ಅವರ ತಾಯಿ ಸುಧಾ ಅವರು ತ್ರಿಶೂಶ್ನವರು.ಉನ್ನತ ಶಿಕ್ಷಣಕ್ಕಾಗಿ ವೆಂಕಟರಾಮನ್ ಅವರು ಅಮೆರಿಕಕ್ಕೆ ತೆರಳಿದ್ದರು. ಬಳಿಕ 1980ರ ದಶಕದ ಮಧ್ಯಭಾಗದಲ್ಲಿ ಕುಟುಂಬವೂ ಅಲ್ಲಿಗೆ ಸ್ಥಳಾಂತರಗೊಂಡಿತು. ಕೇರಳಕ್ಕೆ ಬಂದಾಗೆಲ್ಲಾ ರಾಮನ್ ಅವರು ತಿರುವನಂತಪುರದಲ್ಲಿರುವ ತಮ್ಮ ತಂದೆಯ ಸಹೋದರಿ ವನಜಾ ಅವರ ಮನೆಯಲ್ಲಿ ಉಳಿದುಕೊಳ್ಳುತ್ತಿದ್ದರು. ಇವರಿಬ್ಬರ ನಡುವೆ ಈಗಲೂ ಸಂಪರ್ಕವಿದೆ.ಇರಾನ್ಗೆ ನೆರವು: ದಂಪತಿ ಸೇರಿ ನಾಲ್ವರು ಭಾರತೀಯರ ವಿರುದ್ಧ ಅಮೆರಿಕ ನಿರ್ಬಂಧ2022ರಲ್ಲಿ ಅವರ ತಾತ ರಾಮ ಅಯ್ಯರ್ ನಿಧನರಾದಾಗ, ನಿತ್ಯಾ ಅವರು ಸಾಮಾಜಿಕ ಮಾಧ್ಯಮದಲ್ಲಿ ಭಾವನಾತ್ಮಕ ಪೋಸ್ಟ್ ಹಂಚಿಕೊಂಡಿದ್ದರು. ಕೋವಿಡ್ ಸಾಂಕ್ರಾಮಿಕದ ಕಾರಣದಿಂದಾಗಿ ನನ್ನ ತಂದೆಗೆ ಎರಡು ವರ್ಷಗಳು ಅವರ ತಂದೆಯನ್ನು ಭೇಟಿಯಾಗಲು ಸಾಧ್ಯವಾಗಿರಲಿಲ್ಲ. ಅಂತಿಮ ವಿಧಿವಿಧಾನಗಳನ್ನು ಕುಟುಂಬದ ಸದಸ್ಯರು ಆನ್ಲೈನ್ ಮೂಲಕ ವೀಕ್ಷಿಸಬೇಕಾಯಿತು ಎಂದು ಹೇಳಿದ್ದರು.ಅಮೆರಿಕದ ಸೆನೆಟ್ ಪ್ರವೇಶಿಸಿದ ಮೊದಲ ಮುಸ್ಲಿಂ ಸಂಸದ ಅಬ್ದುಲ್ ಅಲ್ ಸಯೀದ್