ಅಮೀನಗಡದಲ್ಲಿ ಕುಡಿಯುವ ನೀರಿನ ಸಮಸ್ಯೆ: ಗ್ರಾಮಸ್ಥರ ಆಕ್ರೋಶ
ಕವಿತಾಳ: ಸಮೀಪದ ಅಮೀನಗಡ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದ್ದು ನೀರಿಗಾಗಿ ಗ್ರಾಮಸ್ಥರು ಪರದಾಡುವಂತಾಗಿದೆ. ಕೆಲಸಗಳನ್ನು ಬಿಟ್ಟು ದಿನಪೂರ್ತಿ ನಲ್ಲಿ ಹತ್ತಿರ ಕುಳಿತುಕೊಳ್ಳುವಂತಾಗಿದೆ.ಮಳೆ ಕೊರತೆಯಿಂದ ಗ್ರಾಮಕ್ಕೆ ನೀರು ಪೂರೈಸುವ ನಾಲ್ಕು ಕೊಳವೆಬಾವಿಗಳಲ್ಲಿ ಅಂತರ್ಜಲ ಕುಸಿದಿದೆ ಮತ್ತು ಇರಕಲ್ ಕೆರೆ ನೀರು ಸಮರ್ಪಕವಾಗಿ ಪೂರೈಕೆಯಾಗದ ಕಾರಣ ಬಳಕೆಗೆ,

ಕವಿತಾಳ: ಸಮೀಪದ ಅಮೀನಗಡ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದ್ದು ನೀರಿಗಾಗಿ ಗ್ರಾಮಸ್ಥರು ಪರದಾಡುವಂತಾಗಿದೆ. ಕೆಲಸಗಳನ್ನು ಬಿಟ್ಟು ದಿನಪೂರ್ತಿ ನಲ್ಲಿ ಹತ್ತಿರ ಕುಳಿತುಕೊಳ್ಳುವಂತಾಗಿದೆ.ಮಳೆ ಕೊರತೆಯಿಂದ ಗ್ರಾಮಕ್ಕೆ ನೀರು ಪೂರೈಸುವ ನಾಲ್ಕು ಕೊಳವೆಬಾವಿಗಳಲ್ಲಿ ಅಂತರ್ಜಲ ಕುಸಿದಿದೆ ಮತ್ತು ಇರಕಲ್ ಕೆರೆ ನೀರು ಸಮರ್ಪಕವಾಗಿ ಪೂರೈಕೆಯಾಗದ ಕಾರಣ ಬಳಕೆಗೆ, ಜನ ಜಾನುವಾರುಗಳಿಗೆ ಕುಡಿಯುವ ನೀರಿಗೆ ಸಮಸ್ಯೆ ಉಂಟಾಗಿದೆ.‘ಅಲ್ಲಲ್ಲಿ ಪೈಪ್ಗಳು ಒಡೆದು ಅದರಲ್ಲಿ ಗಲೀಜು ಸಂಗ್ರಹವಾಗಿದೆ. ಅದನ್ನು ದುರಸ್ತಿ ಮಾಡಿಸುವಂತೆ ಮನವಿ ಮಾಡಿದ್ದರೂ ಗ್ರಾಮ ಪಂಚಾಯಿತಿ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ’ ಎಂದು ಬಸವರಾಜ, ನೀಲಕಂಠ, ಶಿವಪ್ಪ ಮೇಟಿ, ಸದಾಶಿವಪ್ಪ ಮತ್ತು ಹನುಮಂತಪ್ಪ ಆರೋಪಿಸಿದರು.‘ಮನೆ ಬಳಕೆಗೆ ಮತ್ತು ಜನ ಜಾನುವಾರುಗಳಿಗೆ ಕುಡಿಯಲು ನೀರಿಲ್ಲದೆ ಪರದಾಡುವಂತಾಗಿದೆ. ನಲ್ಲಿಯಲ್ಲಿ ಸಣ್ಣದಾಗಿ ನೀರು ಬರುತ್ತಿದ್ದು ಕಾಯ್ದು ಕುಳಿತುಕೊಳ್ಳಬೇಕಾಗಿದೆ. ರಸ್ತೆ ಬದಿ ಇರುವ ಗುಮ್ಮಿಗೆ ಹೋಗಿ ತಳ್ಳು ಬಂಡಿಯಲ್ಲಿ ತರುವಂತಾಗಿದೆ. ಈ ಬಗ್ಗೆ ಅಧಿಕಾರಿಗಳು ಗಮನಹರಿಸಬೇಕು’ ಎಂದು ಅನಸೂಯ, ಪಾರ್ವತಮ್ಮ, ಅಮರಮ್ಮ, ಲಕ್ಷ್ಮಿದೇವಿ, ಕಾವೇರಿ, ಶಾಂತಮ್ಮ, ಬಸಮ್ಮ, ಹುಲಿಗೆಮ್ಮ, ರತ್ನಮ್ಮ, ಅಮೃತಮ್ಮ ಅಸಮಾಧಾನ ವ್ಯಕ್ತಪಡಿಸಿದರು.‘ಇರಕಲ್ ಕೆರೆಯಿಂದ ನೇರವಾಗಿ ನೀರು ಪೂರೈಕೆಗೆ ಪೈಪ್ ಲೈನ್ ಅಳವಡಿಸಬೇಕು ತುರ್ತಾಗಿ ಟ್ಯಾಂಕರ್ ಮೂಲಕ ನೀರು ಪೂರೈಕೆಗೆ ಕ್ರಮ ವಹಿಸಬೇಕು’ ಎಂದು ಶಿವನಗೌಡ ದಳಪತಿ, ಹುಚ್ಚರಡ್ಡಿ ಹರ್ವಾಪುರ ಆಗ್ರಹಿಸಿದರು. ಕೃಷ್ಣ ಅಮೀನಗಡ ಗ್ರಾಮ ಪಂಚಾಯಿತಿ ಪಿಡಿಒಇರಕಲ್ ಕೆರೆಯಿಂದ ನೀರು ಪೂರೈಸುವ ಕುರಿತು ಶಾಸಕರಿಗೆ ಮಾಹಿತಿ ನೀಡಲಾಗಿದೆ. ನಲ್ಲಿಗಳಿಗೆ ಮೋಟರ್ ಅಳವಡಿಸದಿದ್ದರೆ ನೀರಿನ ಸಮಸ್ಯೆ ಕಡಿಮೆಯಾಗುತ್ತದೆ261105-32-1629619875