ಕಟ್ಟಡ ನಿರ್ಮಾಣ ಅನುಮತಿಗೆ ಸಮಿತಿ: ಪಾಲಿಕೆ ಪರಿಷತ್ ಸಭೆಯಲ್ಲಿ ನಿರ್ಣಯ ಅಂಗೀಕಾರ
ಬೆಳಗಾವಿ: ಕಟ್ಟಡ ನಿರ್ಮಾಣ ಅನುಮತಿ ಮಾರ್ಗಸೂಚಿ ಉಲ್ಲಂಘಿಸಿ ನಿರ್ಮಿಸುತ್ತಿರುವ ಕಟ್ಟಡಗಳಿಗೂ ‘ಪೂರ್ಣಗೊಂಡ ಪ್ರಮಾಣಪತ್ರ’ ನೀಡುತ್ತಿರುವ ವಿಷಯವು, ಇಲ್ಲಿ ಬುಧವಾರ ನಡೆದ ಪಾಲಿಕೆ ಪರಿಷತ್ ಸಭೆಯಲ್ಲಿ ಚರ್ಚೆಗೆ ಗ್ರಾಸವಾಯಿತು.‘ಉಲ್ಲಂಘನೆ ವಿಚಾರ ಗೊತ್ತಿದ್ದರೂ ಸಂಬಂಧಿತ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಸದಸ್ಯರು ಅಧಿಕಾರಿಗಳ ವಿರುದ್ಧ ಹರಿಹಾಯ್ದರು.ಆಡಳಿತ

ಬೆಳಗಾವಿ: ಕಟ್ಟಡ ನಿರ್ಮಾಣ ಅನುಮತಿ ಮಾರ್ಗಸೂಚಿ ಉಲ್ಲಂಘಿಸಿ ನಿರ್ಮಿಸುತ್ತಿರುವ ಕಟ್ಟಡಗಳಿಗೂ ‘ಪೂರ್ಣಗೊಂಡ ಪ್ರಮಾಣಪತ್ರ’ ನೀಡುತ್ತಿರುವ ವಿಷಯವು, ಇಲ್ಲಿ ಬುಧವಾರ ನಡೆದ ಪಾಲಿಕೆ ಪರಿಷತ್ ಸಭೆಯಲ್ಲಿ ಚರ್ಚೆಗೆ ಗ್ರಾಸವಾಯಿತು.‘ಉಲ್ಲಂಘನೆ ವಿಚಾರ ಗೊತ್ತಿದ್ದರೂ ಸಂಬಂಧಿತ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಸದಸ್ಯರು ಅಧಿಕಾರಿಗಳ ವಿರುದ್ಧ ಹರಿಹಾಯ್ದರು.ಆಡಳಿತ ಪಕ್ಷದ ಸದಸ್ಯ ರಾಜಶೇಖರ ಡೋಣಿ, ‘ಪೂರ್ಣಗೊಂಡ ಪ್ರಮಾಣಪತ್ರ ಇರದ ಕಟ್ಟಡಗಳಿಗೆ ಹೆಸ್ಕಾಂ ವಿದ್ಯುತ್ ಸಂಪರ್ಕಗಳನ್ನು ನೀಡುತ್ತಿದೆ. ಅಂಥ ಕಟ್ಟಡಗಳಿಗೆ ಪಿಐಡಿ ಸಹ ನೀಡಲಾಗುತ್ತಿದೆ. ಅನೇಕ ಕಟ್ಟಡಗಳು ನಿರ್ಮಾಣ ಅನುಮತಿ ನಿಯಮ ಉಲ್ಲಂಘಿಸಿವೆ. ಹೆಚ್ಚುವರಿ ಮಹಡಿಗಳನ್ನು ನಿರ್ಮಿಸಿವೆ. ಆದರೂ, ಪಾಲಿಕೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಆಪಾದಿಸಿದರು.‘ಅಕ್ರಮವಾಗಿ ನಿರ್ಮಿಸಿರುವ ಮಹಡಿಗಳು ಮತ್ತು ಕಟ್ಟಡ ಅನುಮತಿ ನಿಯಮ ಉಲ್ಲಂಘಿಸಿರುವ ಕುರಿತು ಏಕೆ ವರದಿ ಮಾಡಲಾಗಿಲ್ಲ. ಅಂಥ ಕಟ್ಟಡಗಳನ್ನು ಕೆಡವಲು ಏಕೆ ನೋಟಿಸ್ ನೀಡಿಲ್ಲ’ ಎಂದು ನಾಮನಿರ್ದೇಶಿತ ಸದಸ್ಯ ದಿನೇಶ ನಾಶಿಪುಡಿ ಪ್ರಶ್ನಿಸಿದರು.‘ಅಪೂರ್ಣವಾಗಿದ್ದ ಅನೇಕ ಕಟ್ಟಡಗಳಿಗೆ ಪೂರ್ಣಗೊಂಡ ಪ್ರಮಾಣಪತ್ರಗಳನ್ನು ನೀಡುವುದನ್ನು ನಾನು ನೋಡಿದ್ದೇನೆ. ನಾವು ಅವುಗಳ ಬಗ್ಗೆ ದೂರು ನೀಡಿದರೆ ಅಥವಾ ಮಾಹಿತಿ ಕೇಳಿದರೆ, ಸಂಬಂಧಿತ ಅಧಿಕಾರಿಗಳು ಕಟ್ಟಡ ಮಾಲೀಕರಿಗೆ ಮಾಹಿತಿ ನೀಡಿ ನಮ್ಮನ್ನು ಖಳನಾಯಕರಂತೆ ತೋರಿಸುತ್ತಾರೆ. ಕಟ್ಟಡ ನಿರ್ಮಾಣ ಆರಂಭವಾದ ದಿನಾಂಕ ಮತ್ತು ಪೂರ್ಣಗೊಂಡ ದಿನಾಂಕ ನಾವು ನೋಡಿದಾಗ, ಒಂದೆರಡು ತಿಂಗಳ ವ್ಯತ್ಯಾಸವಿತ್ತು. ಇಷ್ಟು ಕಡಿಮೆ ಅವಧಿಯಲ್ಲಿ ಯಾವುದೇ ಕಟ್ಟಡ ನಿರ್ಮಿಸಲು ಸಾಧ್ಯವಿಲ್ಲ’ ಎಂದರು.ಆಡಳಿತ ಗುಂಪಿನ ಸದಸ್ಯ ಶಂಕರ ಪಾಟೀಲ, ‘ಕಟ್ಟಡ ಅನುಮತಿ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದರೂ ಅಧಿಕಾರಿಗಳು ಪರಿಶೀಲನೆ ಇಲ್ಲದೆ ಕಟ್ಟಡಗಳಿಗೆ ಪೂರ್ಣಗೊಂಡ ಪ್ರಮಾಣಪತ್ರ ನೀಡಿದ್ದಾರೆ. ಅಂಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕಾಗಿದೆ. ಹಾಗಾಗಿ ಉಲ್ಲಂಘನೆಗಳ ಬಗ್ಗೆ ತನಿಖೆ ನಡೆಸಲು ಸಮಿತಿ ರಚಿಸಬೇಕು’ ಎಂದು ಆಗ್ರಹಿಸಿದರು.ಪಟ್ಟಣ ಯೋಜನಾ ಅಧಿಕಾರಿ ವಾಹಿದ್ ಅಖ್ತರ್, ‘ಅನುಮತಿ ಇಲ್ಲದೆ ನಿರ್ಮಿಸಲಾದ ಹೆಚ್ಚುವರಿ ಮಹಡಿಗಳನ್ನು ಕಾನೂನುಬದ್ಧಗೊಳಿಸಲಾಗಿಲ್ಲ’ ಎಂದು ಹೇಳಿದರೇ ಹೊರತು, ‘ನಿಯಮ ಉಲ್ಲಂಘಿಸಿ ಕಟ್ಟಿರುವ ಅಕ್ರಮ ಮಹಡಿಗಳನ್ನು ಕೆಡಹುವ ಅಥವಾ ನೋಟಿಸ್ ನೀಡುವ ಬಗ್ಗೆ ಉತ್ತರ ನೀಡಲಿಲ್ಲ.ಕೊನೆಗೆ, ಇಂಥ ಕಟ್ಟಡಗಳ ಪರಿಶೀಲನೆಗೆ ಸಮಿತಿ ರಚಿಸಲಾಗುವುದು. ನಿಯಮ ಉಲ್ಲಂಘನೆಗಳ ವಿರುದ್ಧ ಕ್ರಮ ಕೈಗೊಳ್ಳದ ಅಧಿಕಾರಿಗಳ ವಿರುದ್ಧವೇ ಸೂಕ್ತ ಕ್ರಮಕ್ಕೆ ಶಿಫಾರಸು ಮಾಡಲಾಗುವುದು ಎಂಬ ನಿರ್ಣಯ ಅಂಗೀಕರಿಸಿದರು.‘ಪಾಲಿಕೆಯಲ್ಲಿ ಅಧಿಕಾರದಲ್ಲಿರುವ ಬಿಜೆಪಿಯವರು, ಕಳೆದ ನಾಲ್ಕು ವರ್ಷಗಳಲ್ಲಿ ನಗರವನ್ನು ಅಭಿವೃದ್ಧಿಪಡಿಸಿಲ್ಲ’ ಎಂದು ವಿರೋಧ ಗುಂಪಿನ ಸದಸ್ಯ ಶಾಹೀದ್ಖಾನ್ ಪಠಾಣ ಹೇಳಿದ್ದಕ್ಕೆ, ಬಿಜೆಪಿ ಸದಸ್ಯರು ತಿರುಗಿಬಿದ್ದರು.‘ಅಭಿವೃದ್ಧಿ ಕೆಲಸ ಮಾಡುವಲ್ಲಿ ನಮ್ಮಷ್ಟೇ ಜವಾಬ್ದಾರಿ ವಿರೋಧ ಗುಂಪಿನ ಸದಸ್ಯರದ್ದೂ ಇದೆ. ನೀವು ಹೀಗೆ ಮಾತನಾಡುವುದು ಸರಿ ಅಲ್ಲ’ ಎಂದು ವಾಗ್ದಾಳಿ ಮಾಡಿದರು.‘1978ರಲ್ಲಿ ಪಾಲಿಕೆಗೆ ಸೇರಿರುವ ಬಸವನ ಕುಡಚಿ ಮತ್ತು ಅಲಾರವಾಡದ ನಿವಾಸಿಗಳಿಗೆ, ಅಗತ್ಯವಿರುವ ಎಲ್ಲ ಆಸ್ತಿ ದಾಖಲೆಗಳನ್ನು ಒದಗಿಸಬೇಕು. ಈ ದಾಖಲೆ ಲಭ್ಯ ಇಲ್ಲದ್ದರಿಂದ ಸ್ಥಳೀಯರಿಗೆ ಬ್ಯಾಂಕ್ ಸಾಲ ಪಡೆಯಲು ಮತ್ತು ಇತರ ಕೆಲಸಕ್ಕೆ ತೊಂದರೆ ಆಗುತ್ತಿದೆ’ ಎಂದು ವಿರೋಧ ಪಕ್ಷದ ಸದಸ್ಯ ಬಸವರಾಜ ಮೋದಗೇಕರ ಆಗ್ರಹಿಸಿದರು. ‘ನಿವಾಸಿಗಳ ಬೇಡಿಕೆ ಈಡೇರಿಸುವ ಕುರಿತು ಪಾಲಿಕೆ ಕಂದಾಯ ಶಾಖೆಗೆ ನಿರ್ದೇಶನ ನೀಡಲಾಗುವುದು’ ಎಂಬ ನಿರ್ಣಯವನ್ನು ಮೇಯರ್ ಅಂಗೀಕರಿಸಿದರು.ಏಜೆಂಟರ ಹಾವಳಿ‘ಪಾಲಿಕೆಗೆ ಸೇರಿದ ಕಚೇರಿಗಳಿಗೆ ಜನರು ನೇರವಾಗಿ ಹೋದರೆ ಯಾವ ಕೆಲಸವೂ ಆಗುತ್ತಿಲ್ಲ. ವಿವಿಧ ಕಾರಣವೊಡ್ಡಿ ಅಲೆದಾಡಿಸಲಾಗುತ್ತಿದೆ. ಅದೇ ಏಜೆಂಟರ ಮೂಲಕ ಹೋದರೆ ಕೆಲವೇ ಸಮಯದಲ್ಲಿ ಕೆಲಸವಾಗುತ್ತಿದೆ. ನಾವು ಜನರ ಸೇವೆ ಮಾಡಲು ಆಯ್ಕೆಯಾಗಿದ್ದೇವೆ. ಇದನ್ನು ಆದ್ಯತೆ ಮೇಲೆ ತಡೆಗಟ್ಟಬೇಕು’ ಎಂದು ವಿರೋಧ ಗುಂಪಿನ ಸದಸ್ಯ ರವಿ ಸಾಳುಂಕೆ ಆಗ್ರಹಿಸಿದರು.ಒಂದು ತಾಸು ತಡನಿಗದಿಯಂತೆ ಬುಧವಾರ ಬೆಳಿಗ್ಗೆ 11.30ಕ್ಕೆ ಪಾಲಿಕೆ ಪರಿಷತ್ ಸಭೆ ಆರಂಭ ಆಗಬೇಕಿತ್ತು. ಆದರೆ, ಮಧ್ಯಾಹ್ನ 12.30ರ ನಂತರ ಆರಂಭವಾಯಿತು. ಅಧಿಕಾರಿಗಳು ನಿಗದಿತ ಸಮಯಕ್ಕೆ ಪರಿಷತ್ ಸಭಾಂಗಣಕ್ಕೆ ಆಗಮಿಸಿ ಕುಳಿತಿದ್ದರು. ಸಭೆ ತಡವಾಗಿದ್ದಕ್ಕೆ ಬೇಸರಗೊಂಡರು.ಬಹಿರಂಗ ಕ್ಷಮೆಗೆ ಆಗ್ರಹ‘ಪಾಲಿಕೆಯಲ್ಲಿ ಕಳೆದ ಬಾರಿ ನಡೆದ ಪರಿಷತ್ ಸಭೆ ವೇಳೆ, ಸದಸ್ಯರ ವಿರುದ್ಧವೇ ಕೆಲವು ಅಧಿಕಾರಿಗಳು ಘೋಷಣೆ ಕೂಗಿದ್ದು ಸರಿಯಲ್ಲ. ಜನರಿಗೆ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಪ್ರಶ್ನಿಸಿದರೆ, ಕೆಲವು ಅಧಿಕಾರಿಗಳು ದರ್ಪದಿಂದ ವರ್ತಿಸುತ್ತಿದ್ದಾರೆ. ಅವರ ವಿರುದ್ಧ ಕ್ರಮವಾಗಬೇಕು’ ಎಂದು ಆಡಳಿತ ಗುಂಪಿನ ಸದಸ್ಯರು ಆಗ್ರಹಿಸಿದರು.ಉಪ ಆಯುಕ್ತ(ಆಡಳಿತ) ಹುದ್ದೆಗೆ ಉದಯಕುಮಾರ ತಳವಾರ ನೇಮಕಾತಿ ಬಗ್ಗೆಯೂ ಪ್ರಶ್ನಿಸಿದರು.ಆಗ ಶಾಸಕ ಆಸಿಫ್ ಸೇಠ್, ‘ಯಾವುದೇ ಅಧಿಕಾರಿ ಬಗ್ಗೆ ವೈಯಕ್ತಿಕ ಟೀಕೆ ಬೇಡ. ಪಕ್ಷಾತೀತವಾಗಿ ಎಲ್ಲ ಚುನಾಯಿತ ಪ್ರತಿನಿಧಿಗಳು ಮತ್ತು ಅಧಿಕಾರಿಗಳು ಸೇರಿಕೊಂಡು ನಗರದ ಅಭಿವೃದ್ಧಿಗೆ ಕೆಲಸ ಮಾಡೋಣ’ ಎಂದರು.ಆದರೂ, ಪಟ್ಟು ಸಡಲಿಸದ ಸದಸ್ಯರು, ‘ನಮ್ಮ ವಿರುದ್ಧ ಘೋಷಣೆ ಕೂಗಿದವರ ವಿರುದ್ಧ ಕ್ರಮ ಆಗಬೇಕು. ಬಹಿರಂಗವಾಗಿ ಕ್ಷಮೆಯಾಚಿಸಬೇಕು’ ಎಂದು ಒತ್ತಾಯಿಸಿದರು.261105-21-1463655672