ಇರಾನ್ಗೆ ನೆರವು: ದಂಪತಿ ಸೇರಿ ನಾಲ್ವರು ಭಾರತೀಯರ ವಿರುದ್ಧ ಅಮೆರಿಕ ನಿರ್ಬಂಧ
ವಾಷಿಂಗ್ಟನ್: ಇರಾನ್ಗೆ ನೆರವು ನೀಡುತ್ತಿದ್ದವರ ವಿರುದ್ಧ ಅಮೆರಿಕ ಕಠಿಣ ಕ್ರಮ ಕೈಗೊಂಡಿದೆ. ಭಾರತ ಮೂಲದ ಸುನೀಲ್ ಕುಮಾರ್ ಶರ್ಮಾ ಅವರ ಪತ್ನಿ ಜಸ್ಪ್ರೀತ್ ಪ್ರೀತಿ ಶಾಹಿದ್ ಹಾಗೂ ಅವರ ವ್ಯವಹಾರಗಳಿಗೆ ಸಂಬಂಧಿಸಿದ ಇಬ್ಬರು ಭಾರತೀಯರ ವಿರುದ್ಧ ಅಮೆರಿಕದ ಖಜಾನೆ ಇಲಾಖೆ ಬುಧವಾರ ನಿರ್ಬಂಧ ವಿಧಿಸಿದೆ.ಚಂಡೀಗಢದಲ್ಲಿ ನೆಲೆಸಿರುವ ಸುನೀಲ್ ಕುಮಾರ್ ಶರ್ಮಾ ಮತ್ತು ಅವರ ಪತ್ನಿ ಹ

ವಾಷಿಂಗ್ಟನ್: ಇರಾನ್ಗೆ ನೆರವು ನೀಡುತ್ತಿದ್ದವರ ವಿರುದ್ಧ ಅಮೆರಿಕ ಕಠಿಣ ಕ್ರಮ ಕೈಗೊಂಡಿದೆ. ಭಾರತ ಮೂಲದ ಸುನೀಲ್ ಕುಮಾರ್ ಶರ್ಮಾ ಅವರ ಪತ್ನಿ ಜಸ್ಪ್ರೀತ್ ಪ್ರೀತಿ ಶಾಹಿದ್ ಹಾಗೂ ಅವರ ವ್ಯವಹಾರಗಳಿಗೆ ಸಂಬಂಧಿಸಿದ ಇಬ್ಬರು ಭಾರತೀಯರ ವಿರುದ್ಧ ಅಮೆರಿಕದ ಖಜಾನೆ ಇಲಾಖೆ ಬುಧವಾರ ನಿರ್ಬಂಧ ವಿಧಿಸಿದೆ.ಚಂಡೀಗಢದಲ್ಲಿ ನೆಲೆಸಿರುವ ಸುನೀಲ್ ಕುಮಾರ್ ಶರ್ಮಾ ಮತ್ತು ಅವರ ಪತ್ನಿ ಹಲವು ದೇಶಗಳ ಹೆಸರಿನಲ್ಲಿ ಹಡಗುಗಳಿಗೆ ನಕಲಿ ನೋಂದಣಿ ಮತ್ತು ಪ್ರಮಾಣಪತ್ರಗಳನ್ನು ನೀಡುವ ಜಾಲ ನಡೆಸುತ್ತಿದ್ದರು. ಗಯಾನಾ, ಎಸ್ವಾಟಿನಿ ಮತ್ತು ಲಾವೋಸ್ ಸೇರಿದಂತೆ ಹಲವು ದೇಶಗಳ ಪ್ರತಿನಿಧಿಗಳೆಂದು ಸುಳ್ಳು ಹೇಳಿಕೊಂಡು ಈ ವ್ಯವಹಾರ ನಡೆಸುತ್ತಿದ್ದರು ಎಂದು ಅಮೆರಿಕ ಆರೋಪಿಸಿದೆ.ಈ ಜಾಲದ ಮೂಲಕ ಇರಾನ್ ಸೇನೆ ಮತ್ತು ಅದರ ಬೆಂಬಲಿತ ಸಂಘಟನೆಗಳಿಗೆ ಸಂಬಂಧಿಸಿದ ಹಡಗುಗಳಿಗೆ ಅಂತರರಾಷ್ಟ್ರೀಯ ನಿರ್ಬಂಧಗಳಿಂದ ತಪ್ಪಿಸಿಕೊಳ್ಳಲು ನೆರವು ನೀಡುತ್ತಿದ್ದರು ಎಂದು ಅಮೆರಿಕ ಆರೋಪಿಸಿದೆ.ಶರ್ಮಾ ಮತ್ತು ಅವರ ಪತ್ನಿ ಹಲವು ವೆಬ್ಸೈಟ್ಗಳನ್ನು ಸೃಷ್ಟಿಸಿ, ವಿವಿಧ ದೇಶಗಳ ಪರವಾಗಿ ಹಡಗು ನೋಂದಣಿ, ನಾವಿಕರಿಗೆ ತರಬೇತಿ, ಪ್ರಮಾಣಪತ್ರ ವಿತರಣೆ ಹಾಗೂ ಹಡಗುಗಳ ವರ್ಗೀಕರಣದ ಸೇವೆಗಳನ್ನು ನೀಡುತ್ತಿರುವುದಾಗಿ ಹೇಳಿಕೊಂಡಿದ್ದರು. ಆದರೆ, ಈ ಸೇವೆಗಳ ಹೆಸರಿನಲ್ಲಿ ನಕಲಿ ಹಡಗು ನೋಂದಣಿ ಮಾಡಲಾಗುತ್ತಿತ್ತು ಎಂದು ಅಮೆರಿಕದ ಖಜಾನೆ ಇಲಾಖೆ ಹೇಳಿದೆ.ಈ ಜಾಲಕ್ಕೆ ಸಂಬಂಧಿಸಿದ ಭಾರತ ಮೂಲದ ಹಲವು ಕಂಪನಿಗಳನ್ನೂ ಅಮೆರಿಕ ನಿರ್ಬಂಧಗಳ ಪಟ್ಟಿಗೆ ಸೇರಿಸಿದೆ. ಈ ಕಂಪನಿಗಳನ್ನು ಬಳಸಿಕೊಂಡು ಹಡಗುಗಳ ನಕಲಿ ನೋಂದಣಿ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.ಟರ್ಕಿ ಕಂಪನಿಗೂ ಅಮೆರಿಕ ನಿರ್ಬಂಧಇದೇ ವೇಳೆ ಇರಾನ್ಗೆ ನೆರವು ನೀಡಿದ ಆರೋಪದ ಮೇಲೆ ಟರ್ಕಿ ಮೂಲದ ಫುಗೊ ಗ್ರೌಂಡ್ ಸರ್ವಿಸಸ್ ಇಂಕ್ (Fugo Ground Services Inc) ಎಂಬ ಕಂಪನಿಯ ಮೇಲೂ ಅಮೆರಿಕ ನಿರ್ಬಂಧ ವಿಧಿಸಿದೆ.ಈ ಕಂಪನಿಯು ಅಮೆರಿಕದ ನಿರ್ಬಂಧಕ್ಕೆ ಒಳಗಾಗಿರುವ ಇರಾನ್ನ ಹಲವು ವಿಮಾನಯಾನ ಸಂಸ್ಥೆಗಳಿಗೆ ವಿಮಾನ ನಿಲ್ದಾಣಗಳ ಸೇವೆಗಳನ್ನು ಒದಗಿಸುತ್ತಿತ್ತು ಎಂದು ಅಮೆರಿಕ ತಿಳಿಸಿದೆ. ಇರಾನ್ ಏರ್ ಟೂರ್, ಸಹಾ ಏರ್ಲೈನ್ಸ್, ತಬಾನ್ ಏರ್ಲೈನ್ಸ್ ಮತ್ತು ಅಟಾ ಏರ್ಲೈನ್ಸ್ ಕಂಪನಿಗಳಿಗೆ ಈ ಸಂಸ್ಥೆಯು ನೆರವು ನೀಡಿತ್ತು ಎಂಬುದು ಆರೋಪ.ಇರಾನ್ಗೆ ನೆರವು ನೀಡುವವರಿಗೂ ಎಚ್ಚರಿಕೆಇರಾನ್ ಸರ್ಕಾರಕ್ಕೆ ಯಾವುದೇ ರೀತಿಯಲ್ಲಿ ನೆರವು ನೀಡುವವರ ವಿರುದ್ಧ ಕ್ರಮ ಮುಂದುವರಿಸುವುದಾಗಿ ಅಮೆರಿಕ ಎಚ್ಚರಿಸಿದೆ.ಅಮೆರಿಕದ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಈ ಕುರಿತು ಮಾತನಾಡಿ, ‘ನೀವು ಎಲ್ಲಿದ್ದೀರಿ ಎಂಬುದು ನಮಗೆ ಗೊತ್ತಿದೆ. ಭೂಮಿ, ಸಮುದ್ರ ಅಥವಾ ವಾಯುಮಾರ್ಗದ ಮೂಲಕ ಇರಾನ್ ಆಡಳಿತಕ್ಕೆ ನೆರವು ನೀಡುವವರ ವಿರುದ್ಧ ನಿರ್ಬಂಧ ವಿಧಿಸುತ್ತೇವೆ’ ಎಂದು ಹೇಳಿದ್ದಾರೆ.