ವಾಚಕರ ವಾಣಿ: ಪ್ರಜಾವಾಣಿ ಓದುಗರ ಈ ದಿನದ ಪತ್ರಗಳು
‘ಗ್ರೇಟರ್ ಕರ್ನಾಟಕ’ ಮರೆತ ‘ಕೈ’ ಸರ್ಕಾರಆಂಧ್ರಪ್ರದೇಶದಲ್ಲಿ ವಿಶಾಖಪಟ್ಟಣ ಎ.ಐ. ನಗರವಾಗಿ ಬೆಳೆಯುತ್ತಿದೆ; ಅಮರಾವತಿಕ್ವಾಂಟಮ್ ನಗರವಾಗಿ ಮುನ್ನಡೆಯುತ್ತಿದೆ. ತಮಿಳುನಾಡಿನಲ್ಲಿ ಚೆನ್ನೈ ಜೊತೆಗೆಕೊಯಮತ್ತೂರು ಹೂಡಿಕೆ ತಾಣವಾಗಿದೆ. ಗುಜರಾತ್ನಲ್ಲಿ ಜಾಮಾನಗರ, ಅಹಮದಾಬಾದ್, ಗಾಂಧಿನಗರ ಉದ್ಯೋಗ ಸೃಷ್ಟಿಸುವ ತಾಣಗಳಾಗಿವೆ. ಮಹಾರಾಷ್ಟ್ರ ಸರ್ಕಾರವು ಮುಂಬೈ, ಪುಣೆ ಜೊತೆಯಲ್ಲಿ
‘ಗ್ರೇಟರ್ ಕರ್ನಾಟಕ’ ಮರೆತ ‘ಕೈ’ ಸರ್ಕಾರಆಂಧ್ರಪ್ರದೇಶದಲ್ಲಿ ವಿಶಾಖಪಟ್ಟಣ ಎ.ಐ. ನಗರವಾಗಿ ಬೆಳೆಯುತ್ತಿದೆ; ಅಮರಾವತಿಕ್ವಾಂಟಮ್ ನಗರವಾಗಿ ಮುನ್ನಡೆಯುತ್ತಿದೆ. ತಮಿಳುನಾಡಿನಲ್ಲಿ ಚೆನ್ನೈ ಜೊತೆಗೆಕೊಯಮತ್ತೂರು ಹೂಡಿಕೆ ತಾಣವಾಗಿದೆ. ಗುಜರಾತ್ನಲ್ಲಿ ಜಾಮಾನಗರ, ಅಹಮದಾಬಾದ್, ಗಾಂಧಿನಗರ ಉದ್ಯೋಗ ಸೃಷ್ಟಿಸುವ ತಾಣಗಳಾಗಿವೆ. ಮಹಾರಾಷ್ಟ್ರ ಸರ್ಕಾರವು ಮುಂಬೈ, ಪುಣೆ ಜೊತೆಯಲ್ಲಿಯೇ ನಾಗಪುರವನ್ನೂ ಮುಂಚೂಣಿ ನಗರವಾಗಿ ಅಭಿವೃದ್ಧಿಪಡಿಸಿದೆ. ಕರ್ನಾಟಕದ್ದು ಇದಕ್ಕೆ ತದ್ವಿರುದ್ಧ ಸ್ಥಿತಿ. ಅಧಿಕಾರಕ್ಕೆ ಬರುವ ಸರ್ಕಾರಗಳಿಗೆ ಬೆಂಗಳೂರಷ್ಟೇ ಕಣ್ಣಿಗೆ ಕಾಣುತ್ತದೆ. ಇದಕ್ಕೆ ಪರ್ಯಾಯವಾಗಿ ಮತ್ತೊಂದು ನಗರ ಬೆಳೆಸುವ ಆಲೋಚನೆಯೇ ಹೊಳೆಯುವುದಿಲ್ಲ. ಬೆಂಗಳೂರಿನ ಮೇಲಿನ ಒತ್ತಡ ಕಡಿಮೆ ಮಾಡಿ ಕರ್ನಾಟಕವನ್ನು ಹೂಡಿಕೆಸ್ನೇಹಿ ತಾಣವಾಗಿ ಅಭಿವೃದ್ಧಿಪಡಿಸಬೇಕಿದೆ. ಮುಖ್ಯಮಂತ್ರಿಯವರು ‘ಗ್ರೇಟರ್ ಬೆಂಗಳೂರು’ ಕಲ್ಪನೆಯಿಂದ ಹೊರಬಂದು, ‘ಗ್ರೇಟರ್ ಕರ್ನಾಟಕ’ದತ್ತ ಗಮನಹರಿಸುವರೆ?-ಸತೀಶ ಉಪ್ಪಾರ, ಅಥಣಿಇಂಗ್ಲಿಷ್ ಬಿಡಿ, ಕನ್ನಡದಲ್ಲಿ ಕೌಶಲ ಉಂಟೆ?ಸರ್ಕಾರಿ ಇಂಗ್ಲಿಷ್ ಮಾಧ್ಯಮ ಶಾಲೆಗಳ ಏಳನೇ ತರಗತಿ ವಿದ್ಯಾರ್ಥಿಗಳಿಗೆ ಇಂಗ್ಲಿಷ್ನಲ್ಲಿ ಸರಳವಾಗಿ ಕಥೆ ಹೇಳಲು, ಓದಿದ ಪಠ್ಯದ ಅರ್ಥ ಗ್ರಹಿಸಲು ಹಾಗೂ ಸ್ವತಂತ್ರವಾಗಿ ವಾಕ್ಯ ರಚಿಸಲು ಸಾಧ್ಯವಾಗುತ್ತಿಲ್ಲ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಯನ ಹೇಳಿದೆ. ಇದು ಅಚ್ಚರಿಪಡುವ ವಿಷಯವೇನಲ್ಲ. ಈಗಿನ ಪದವಿ ಹಂತದ ವಿದ್ಯಾರ್ಥಿಗಳಿಗೇ ಈ ಕೌಶಲವಿಲ್ಲ; ಇನ್ನು ಪ್ರಾಥಮಿಕ ಶಾಲಾ ಮಕ್ಕಳು ಯಾವ ಲೆಕ್ಕ? ಜಿಲ್ಲೆಗೊಂದು, ವಿಷಯಕ್ಕೊಂದು ವಿಶ್ವವಿದ್ಯಾಲಯ, ತಾಲ್ಲೂಕಿಗೆ ಮೂರ್ನಾಲ್ಕು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆರೆದ ಸರ್ಕಾರ ಇವುಗಳಿಗೆ ವಿದ್ಯಾರ್ಥಿಗಳ ಕೊರತೆಯಾಗದಂತೆ ನೋಡಿಕೊಳ್ಳಲು ಕಡ್ಡಾಯ ಶಿಕ್ಷಣದ ನೆಪದಲ್ಲಿಕಲಿಕಾ ಗುಣಮಟ್ಟ ಲೆಕ್ಕಿಸದೆ ಉತ್ತೀರ್ಣಗೊಳಿಸುವ ಅಲಿಖಿತ ನಿಯಮ ಪಾಲಿಸುತ್ತಿದೆ. ಸರ್ಕಾರವು ತಾನೇ ಅನುಮತಿ ನೀಡಿ ನಾಯಿಕೊಡೆಯಂತೆ ಬೆಳೆಸಿದ ಖಾಸಗಿ ಇಂಗ್ಲಿಷ್ ಮಾಧ್ಯಮ ಶಾಲೆಗಳ ಡೊನೇಷನ್ ಹೊರೆಯಿಂದ ಬೇಸತ್ತ ಬಡ–ಮಧ್ಯಮವರ್ಗದ ಪೋಷಕರನ್ನು ಓಲೈಸಲು ತರಾತುರಿಯಲ್ಲಿ ಕನ್ನಡ ಪ್ರಾಥಮಿಕ ಶಾಲೆಗಳಲ್ಲಿ ಇಂಗ್ಲಿಷ್ ಬೋಧನಾ ಮಾಧ್ಯಮ ಅಳವಡಿಸಿದೆ. ಇದೀಗ ಇಂಗ್ಲಿಷ್ ಬೋಧಿಸುವ ಶಿಕ್ಷಕರಿಗೆ ತರಬೇತಿ ನೀಡಲು ಯೋಜನೆ ರೂಪಿಸುತ್ತಿದೆ. ಇದು ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದಂತಾಗಿದೆ. ಪ್ರಾಥಮಿಕ ಹಂತದಿಂದಲೇ ಕನ್ನಡ ಭಾಷೆಯ ಪರಿಣಾಮಕಾರಿ ಕಲಿಕೆಗೆ ಕ್ರಮಕೈಗೊಂಡಾಗಷ್ಟೇ ಮಕ್ಕಳಿಗೆ ಇಂಗ್ಲಿಷ್ ಕಲಿಸುವ ಪ್ರಯತ್ನ ಸಫಲವಾದೀತು.-ದೇವರಾಜ ದೊಡ್ಡಗೌಡ್ರ, ನಾಗವಂದಬಿಜೆಪಿ ಸಭೆ: ಆಯೋಗದ ಘನತೆಗೆ ಮಸಿಬಿಜೆಪಿಯಿಂದ ಕೇಂದ್ರ ಚುನಾವಣಾ ಆಯೋಗದ ‘ಎಸ್ಐಆರ್’ ನಿರ್ಧಾರಗಳ ಪರವಾಗಿ ದೇಶದಾದ್ಯಂತ ಸಭೆ, ಪತ್ರಿಕಾಗೋಷ್ಠಿ, ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಹೈದರಾಬಾದ್ನಲ್ಲಿ ನಡೆದ ಸಭೆಯಲ್ಲಿ ಕೇಂದ್ರ ಗೃಹ ಸಚಿವರು, ಎಸ್ಐಆರ್ ಮೂಲಕ ಮೂರು ಕೋಟಿ ಅಕ್ರಮ ವಲಸಿಗರನ್ನು ಪತ್ತೆಹಚ್ಚಲಾಗಿದೆ ಎಂದಿದ್ದಾರೆ. ಆದರೆ, ಆಯೋಗವು ಅಕ್ರಮ ವಲಸಿಗರ ಬಗ್ಗೆ ತನ್ನಲ್ಲಿ ಮಾಹಿತಿ ಇಲ್ಲ; ಆರು ರಾಜ್ಯಗಳು ಈ ಬಗ್ಗೆ ವರದಿ ಮಾಡಿದ್ದು 1,600 ಶಂಕಿತ ವಲಸಿಗರು ಪತ್ತೆಯಾಗಿದ್ದಾರೆ ಎಂದಿದೆ. ಗೃಹ ಸಚಿವರು ಹಾಗೂ ಆಯೋಗದ ಹೇಳಿಕೆ ವಿರೋಧಾಭಾಸದಿಂದ ಕೂಡಿದೆ. ತನ್ನ ನಡೆ ಸಮರ್ಥಿಸಿಕೊಳ್ಳಲು ಆಯೋಗವು ಶಕ್ತವಾಗಿದೆ. ಆದರೂ,ಬಿಜೆಪಿಯು ಆಯೋಗದ ಪರವಾಗಿ ಸಭೆ ನಡೆಸುತ್ತಿರುವುದು ಅದರ ಘನತೆ ಮತ್ತು ವಿಶ್ವಾಸಾರ್ಹತೆಗೆ ಧಕ್ಕೆ ತರಲಿದೆ.-ಟಿ. ಜಯರಾಂ, ಕೋಲಾರ ಅಂತರಂಗದ ಭಾವ ತಣಿಸುವ ಕೃಷ್ಣವರ್ಣ‘ಕಪ್ಪು ಕಪ್ಪೆಂದೇಕೆ ಹೀಗಳೆಯುವಿರಿ’ ಲೇಖನ (ಲೇ: ಬಿ.ವಿ. ಶ್ರೀನಾಥ್, ನ. 3) ಅರ್ಥಪೂರ್ಣವಾಗಿದೆ. ನಾನು ಕೆಲವು ವರ್ಷಗಳ ಹಿಂದೆ ಧಾರಾವಾಹಿಯೊಂದರಲ್ಲಿ ಅನಂತನಾಗ್ ಅವರ ಮಗನ ಪಾತ್ರದಲ್ಲಿ ಅಭಿನಯಿಸಿದ್ದೆ. ಅವರ ಜೊತೆಗೆ ರಾಜಕೀಯ, ಧಾರ್ಮಿಕ, ರಂಗಭೂಮಿ ಕುರಿತು ಒಂದಷ್ಟು ಚರ್ಚಿಸುತ್ತಿದ್ದೆ. ಆಗೊಮ್ಮೆ ಅವರಿಗೆ ‘ನಿಮ್ಮ ಹಾಗೂ ಲಕ್ಷ್ಮಿಯವರ ಜೋಡಿ ಎಲ್ಲರಿಗೂ ಪ್ರಿಯವಾದುದು’ ಎಂದೆ. ಆಗ ಅವರು ನಕ್ಕು, ನನಗೆ ಯಾವ ನಟಿ ಇಷ್ಟವೆಂದು ಗೊತ್ತೆ? ಎಂದರು. ಕುತೂಹಲದಿಂದ ಯಾರು ಸರ್ ಎಂದೆ? ಅವರು ಥಟ್ಟನೆ ‘ಪದ್ಮಪ್ರಿಯಾ; ಆಕೆ ಕೃಷ್ಣವರ್ಣೆ, ಬಿಳಿಬಣ್ಣದ ಆಕರ್ಷಣೆಗೆ ಮಿತಿಯಿದೆ. ಕಪ್ಪು ನಮ್ಮ ಅಂತರಂಗದ ಅನೇಕ ಭಾವನೆಗಳನ್ನು ತಣಿಸುವ ಬಣ್ಣ. ಅದು ಕಲ್ಪನೆಗೆ ನಿಲುಕದಷ್ಟು ವಿಶಾಲ’ ಎಂದರು.-ಆರ್. ವೆಂಕಟರಾಜು, ಬೆಂಗಳೂರು