ಹೋರಾಟ ಅಂತ್ಯ: ಹಂಗಾಮು ಇಂದಿನಿಂದ
ಬೆಳಗಾವಿ: ರೈತರ ಬೇಡಿಕೆಗಳಿಗೆ ಸಕ್ಕರೆ ಕಾರ್ಖಾನೆಗಳ ಮಾಲೀಕರು ಸ್ಪಂದಿಸುವುದಾಗಿ ಹೇಳಿದ ಹಿನ್ನೆಲೆಯಲ್ಲಿ, ಗುರುವಾರ ರಾತ್ರಿ ರೈತರು ತಾತ್ಕಾಲಿಕವಾಗಿ ಹೋರಾಟ ಹಿಂಪಡೆದರು. ಇದಕ್ಕೂ ಮುನ್ನ ಜೈಲ್ ಭರೋ ಚಳವಳಿಯ ಭಾಗವಾಗಿ ಜಿಲ್ಲೆಯಾದ್ಯಂತ ದಿನಪೂರ್ತಿ ಪ್ರತಿಭಟನೆ ನಡೆಸಿದರು. ‘ಟನ್ ಕಬ್ಬಿಗೆ ₹3,600 ದರ ನೀಡಲು ಮತ್ತು ಸಕ್ಕರೆ ಸಗಟು ಮಾರಾಟದ ಹೆಚ್ಚುವರಿ ಲಾಭ

ಬೆಳಗಾವಿ: ರೈತರ ಬೇಡಿಕೆಗಳಿಗೆ ಸಕ್ಕರೆ ಕಾರ್ಖಾನೆಗಳ ಮಾಲೀಕರು ಸ್ಪಂದಿಸುವುದಾಗಿ ಹೇಳಿದ ಹಿನ್ನೆಲೆಯಲ್ಲಿ, ಗುರುವಾರ ರಾತ್ರಿ ರೈತರು ತಾತ್ಕಾಲಿಕವಾಗಿ ಹೋರಾಟ ಹಿಂಪಡೆದರು. ಇದಕ್ಕೂ ಮುನ್ನ ಜೈಲ್ ಭರೋ ಚಳವಳಿಯ ಭಾಗವಾಗಿ ಜಿಲ್ಲೆಯಾದ್ಯಂತ ದಿನಪೂರ್ತಿ ಪ್ರತಿಭಟನೆ ನಡೆಸಿದರು. ‘ಟನ್ ಕಬ್ಬಿಗೆ ₹3,600 ದರ ನೀಡಲು ಮತ್ತು ಸಕ್ಕರೆ ಸಗಟು ಮಾರಾಟದ ಹೆಚ್ಚುವರಿ ಲಾಭಾಂಶದಲ್ಲಿ ಶೇ 75ರಷ್ಟು ಪಾಲನ್ನು ರೈತರಿಗೆ ನೀಡಲು ಸಕ್ಕರೆ ಕಾರ್ಖಾನೆಗಳ ಮಾಲೀಕರು ಒಪ್ಪಿದ್ದಾರೆ. ಇದಕ್ಕೆ ಸಮ್ಮತಿಸಿ ರಾಜ್ಯದಾದ್ಯಂತ ಕಬ್ಬು ಬೆಳೆಗಾರರ ಹೋರಾಟವನ್ನು ತಾತ್ಕಾಲಿಕವಾಗಿ ಹಿಂಪಡೆಯುತ್ತೇವೆ’ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಚೂನಪ್ಪ ಪೂಜೇರಿ ಹೇಳಿದರು.ಪೊಲೀಸರ ವಶದಿಂದ ಬಿಡುಗಡೆಯಾದ ಬಳಿಕ ಇಲ್ಲಿನ ವೀರಭದ್ರನಗರದ ದೇವಸ್ಥಾನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸದ್ಯ ಹೋರಾಟ ನಿಲ್ಲಿಸೋಣ. ಕಬ್ಬು ಒಣಗುತ್ತಿದೆ. ಶುಕ್ರವಾರದಿಂದ ಕಾರ್ಖಾನೆಗಳು ಆರಂಭವಾಗಲಿವೆ’ ಎಂದರು.‘ಆದರೆ, ಸಕ್ಕರೆಯ ಕನಿಷ್ಠ ಮಾರಾಟ ದರ (ಎಂಎಸ್ಪಿ) ಮತ್ತು ರಾಜ್ಯ ಸರ್ಕಾರದ ಪ್ರೋತ್ಸಾಹಧನ (ಎಸ್ಎಪಿ) ಪಡೆಯುವವರೆಗೆ ಚಳವಳಿ ಅಂತ್ಯ ಆಗುವುದಿಲ್ಲ’ ಎಂದೂ ಹೇಳಿದರು.‘ಕೇಂದ್ರ ಸರ್ಕಾರವು ಸಕ್ಕರೆಯ ಕನಿಷ್ಠ ಮಾರಾಟ ದರವನ್ನು (ಎಂಎಸ್ಪಿ) ₹31ರಿಂದ ₹60ಕ್ಕೆ ಹೆಚ್ಚಿಸಬೇಕು, ಪೂರ್ಣಪ್ರಮಾಣದ ಎಥೆನಾಲ್ ಖರೀದಿಸಬೇಕು ಮತ್ತು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಚಳಿಗಾಲದ ಅಧಿವೇಶನಕ್ಕೆ ಇಲ್ಲಿಗೆ ಬಂದಾಗ ₹1 ಸಾವಿರ ಪ್ರೋತ್ಸಾಹಧನ ಘೋಷಿಸಲೇಬೇಕು. ಈ ಷರತ್ತುಗಳನ್ನು ಮುಂದಿಟ್ಟಿದ್ದೇವೆ. ನವೆಂಬರ್ 20ರವರೆಗೆ ಅದಕ್ಕೆ ಗಡುವು ನೀಡಿದ್ದೇವೆ’ ಎಂದರು.‘ಕಳೆದ ವರ್ಷ ಗುರ್ಲಾಪುರ ಹೋರಾಟದ ಮೂಲಕ ಟನ್ ಕಬ್ಬಿಗೆ ₹3,350 ದರ ಪಡೆಯಲಾಗಿತ್ತು. ಈ ಬಾರಿ ₹4,500 ಬೇಡಿಕೆಯೊಂದಿಗೆ ಸತತ ಹೋರಾಟ ನಡೆಸಿದ್ದೇವೆ. ಸಚಿವ ಸತೀಶ ಜಾರಕಿಹೊಳಿ ಅವರ ಮಧ್ಯಸ್ಥಿಕೆಯಲ್ಲಿ ಕಾರ್ಖಾನೆ ಮಾಲೀಕರೊಂದಿಗೆ ನಡೆದ ಮಾತುಕತೆ ಸಫಲವಾಗಿದೆ. ₹3,600 ದರ ಬೆಳಗಾವಿ ಜಿಲ್ಲೆಗೆ ಮಾತ್ರ ಸೀಮಿತವಾಗಬಾರದು, ರಾಜ್ಯದೆಲ್ಲೆಡೆ ಕೊಡಬೇಕು’ ಎಂದೂ ಅವರು ಹೇಳಿದರು.ರೈತ ನಾಯಕಿ ಚುಕ್ಕಿ ನಂಜುಂಡಸ್ವಾಮಿ ಮಾತನಾಡಿ, ‘ಇದು ದೇಶದ ರೈತರಿಗೆ ನ್ಯಾಯ ದೊರಕಿಸಿಕೊಡುವ ಹೋರಾಟ. ಕರ್ನಾಟಕದ ರೈತ ಚಳವಳಿಗೆ ಹೊಸ ಚೈತನ್ಯ ನೀಡುವುದರ ಜತೆಗೆ, ಬೇರೆ ಜಿಲ್ಲೆಗಳ ರೈತ ಕಾರ್ಯಕರ್ತರಿಗೂ ಈ ಹೋರಾಟ ಪ್ರೇರಣೆಯಾಗಿದೆ. ಇದು ಮೊದಲ ಹಂತದ ಜಯವಷ್ಟೇ. ಸಕ್ಕರೆ ಲಾಭದ ಹಂಚಿಕೆಯ ಪ್ರಸ್ತಾಪವೂ ಮಹತ್ವದ್ದಾಗಿದೆ. ಅದು ಸಿಗುವವರೆಗೂ ಹೋರಾಟ ಮುಂದುವರಿಸೋಣ’ ಎಂದರು.ಚೂನಪ್ಪ ಪೂಜೇರಿ ಅಧ್ಯಕ್ಷ ರಾಜ್ಯ ರೈತ ಸಂಘಇದು ತಾತ್ಕಾಲಿಕ ಅಂತ್ಯ. ರೈತರಲ್ಲಿ ಗೊಂದಲ ಬೇಡ. ಕಾರ್ಖಾನೆಗಳು ಆರಂಭವಾಗಲು ಸಹಕರಿಸಿ. ಎಂಎಸ್ಪಿ ಮತ್ತು ಎಸ್ಎಪಿಗಾಗಿ ಹೋರಾಟ ಮುಂದುವರಿಯುತ್ತದೆ ಏನಿದು ಲಾಭಾಂಶ ಹಂಚಿಕೆ ಸೂತ್ರ? ಬೆಳಗಾವಿ ಜಿಲ್ಲಾಡಳಿತ ಇದೇ ಮೊದಲ ಬಾರಿಗೆ ‘ಲಾಭಾಂಶ ಹಂಚಿಕೆ’ ಸೂತ್ರದಡಿ ರೈತರ ಬೇಡಿಕೆ ಈಡೇರಿಸಲು ಮುಂದಾಗಿದೆ. ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರಕ್ಕೆ ಬಂದ ರೈತರು ಹಾಗೂ ಕಾರ್ಖಾನೆಗಳ ಮಾಲೀಕರು ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಒಪ್ಪಂದದ ಪ್ರಕಾರ ಮೊದಲ ಕಂತಿನಲ್ಲಿ ಪ್ರತಿ ಟನ್ಗೆ ₹3500 ಪಾವತಿಸಲಾಗುತ್ತದೆ. ಹಂಗಾಮು ಮುಕ್ತಾಯಗೊಂಡ ಬಳಿಕ ಎರಡನೇ ಕಂತಿನಲ್ಲಿ ₹100 ಹೆಚ್ಚುವರಿಯಾಗಿ ನೀಡಲಾಗುತ್ತದೆ. ಅಲ್ಲದೆ ಹೊಸ ಹಂಗಾಮು ಆರಂಭವಾಗುವ ಮೊದಲು ಪ್ರತಿ ಕೆ.ಜಿ ಸಕ್ಕರೆಯ ಸರಾಸರಿ ಮಾರುಕಟ್ಟೆ ದರ ₹45 ಮೀರಿದರೆ ಅದರ ಆಧಾರದ ಮೇಲೆ ಅಂತಿಮ ಕಂತಿನ ಹಣ ಪಾವತಿಸಲಾಗುತ್ತದೆ. ಸಕ್ಕರೆಯ ಸರಾಸರಿ ದರ ₹48 ಇದ್ದರೆ ಪ್ರತಿ ಟನ್ ಕಬ್ಬಿಗೆ ₹3650 ₹49 ಇದ್ದರೆ ₹3750 ₹50 ದರವಿದ್ದರೆ ₹3850 ಹಾಗೂ ₹55 ದರವಿದ್ದರೆ ₹4350 ದರ ನಿಗದಿಪಡಿಸುವ ಲೆಕ್ಕಾಚಾರವನ್ನು ಒಪ್ಪಂದದಲ್ಲಿ ನಮೂದಿಸಲಾಗಿದೆ. ಮುಂಚೆಯೇ ಪಾವತಿಸಿದ ₹3600 ಕಡಿತಗೊಳಿಸಿ ಉಳಿದ ಹೆಚ್ಚುವರಿ ಮೊತ್ತದಲ್ಲಿ ರೈತರಿಗೆ ಶೇ 75ರಷ್ಟು ಹಾಗೂ ಸಕ್ಕರೆ ಕಾರ್ಖಾನೆಗಳಿಗೆ ಶೇ 25ರಷ್ಟು ಹಂಚಿಕೆಯಾಗಲಿದೆ.