ರಾಜ್ಯಸಭೆ: ಕೇಂದ್ರ ಸಚಿವ ಪುರಿ ಅವಿರೋಧ ಆಯ್ಕೆ
ಭೋಪಾಲ್: ಬಿಜೆಪಿ ಅಭ್ಯರ್ಥಿ ಹಾಗೂ ಕೇಂದ್ರ ಪೆಟ್ರೋಲಿಯಂ ಸಚಿವ ಹರದೀಪ್ಸಿಂಗ್ ಪುರಿ ಅವರು ಮಧ್ಯಪ್ರದೇಶದಿಂದ ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಗುರುವಾರ ಘೋಷಿಸಲಾಯಿತು.ಇಬ್ಬರು ಅಭ್ಯರ್ಥಿಗಳ ನಾಮಪತ್ರಗಳು ತಿರಸ್ಕೃತಗೊಂಡ ಕಾರಣ, ನಾಮಪತ್ರ ಹಿಂಪಡೆಯುವ ಕೊನೆಯ ದಿನದಂದು ಪುರಿ ಅವರೊಬ್ಬರೇ ಕಣದಲ್ಲಿದ್ದರು. ಈ ಕಾರಣಕ್ಕೆ, ಪುರಿ ಅವರು ಅವಿರೋಧವಾಗಿ ಆಯ್ಕ

ಭೋಪಾಲ್: ಬಿಜೆಪಿ ಅಭ್ಯರ್ಥಿ ಹಾಗೂ ಕೇಂದ್ರ ಪೆಟ್ರೋಲಿಯಂ ಸಚಿವ ಹರದೀಪ್ಸಿಂಗ್ ಪುರಿ ಅವರು ಮಧ್ಯಪ್ರದೇಶದಿಂದ ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಗುರುವಾರ ಘೋಷಿಸಲಾಯಿತು.ಇಬ್ಬರು ಅಭ್ಯರ್ಥಿಗಳ ನಾಮಪತ್ರಗಳು ತಿರಸ್ಕೃತಗೊಂಡ ಕಾರಣ, ನಾಮಪತ್ರ ಹಿಂಪಡೆಯುವ ಕೊನೆಯ ದಿನದಂದು ಪುರಿ ಅವರೊಬ್ಬರೇ ಕಣದಲ್ಲಿದ್ದರು. ಈ ಕಾರಣಕ್ಕೆ, ಪುರಿ ಅವರು ಅವಿರೋಧವಾಗಿ ಆಯ್ಕೆಯಾಗಿರುವುದಾಗಿ ಚುನಾವಣಾ ಅಧಿಕಾರಿ ಉಮೇಶ್ ಶರ್ಮಾ ಘೋಷಿಸಿದರು.ಬಿಜೆಪಿಯ ಮಧ್ಯಪ್ರದೇಶ ಘಟಕದ ಅಧ್ಯಕ್ಷ ಹೇಮಂತ ಖಂಡೇಲ್ವಾಲ್ ಅವರು ಪುರಿ ಅವರ ಪರವಾಗಿ ಪ್ರಮಾಣಪತ್ರ ಸ್ವೀಕರಿಸಿದರು. ಕೇಂದ್ರ ಸಚಿವರಾಗಿದ್ದ ಎಲ್.ಮುರುಗನ್ ಅವರ ರಾಜೀನಾಮೆಯಿಂದ ಈ ರಾಜ್ಯಸಭಾ ಸ್ಥಾನ ತೆರವಾಗಿತ್ತು. ಅವರ ಅವಧಿಯು 2030ರ ಏಪ್ರಿಲ್ 2ರ ವರೆಗೆ ಇತ್ತು.ಹರದೀಪ್ಸಿಂಗ್ ಪುರಿ
Read the complete story at Prajavani