ಕರುನಾಡೋತ್ಸವ ಇಂದಿನ ವಿಶೇಷ ಲೇಖನಗಳು: ಗುರುವಾರ, 05 ನವೆಂಬರ್ 2026
ಪ್ರಜಾವಾಣಿ ಬಳಗದ ಡಿಜಿಟಲ್ ವಿಭಾಗವು ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ಈ ಬಾರಿ ನವೆಂಬರ್ ತಿಂಗಳನ್ನು ಕನ್ನಡ, ಕರ್ನಾಟಕದ ವಿಚಾರದಲ್ಲಿನ ಮಹತ್ವದ ಹಾದಿ ದಾಖಲಿಸುವ ಪ್ರಯತ್ನ ಮಾಡುತ್ತಿದೆ. ಇದರ ಭಾಗವಾಗಿಯೇ ವಿವಿಧ ವಿಷಯಗಳ ಮೇಲೆ, ತಜ್ಞರು, ಸಾಧಕರು, ಪ್ರಮುಖರ ಲೇಖನಗಳನ್ನು ಪ್ರಕಟಿಸುತ್ತಿದೆ... ಕರುನಾಡೋತ್ಸವದಲ್ಲಿ ಇಂದಿನ ವಿಶೇಷ ಲೇಖನಗಳ ಪಟ್ಟಿ ಇಲ್ಲಿದೆ. ಸಂಪೂರ್ಣ

ಪ್ರಜಾವಾಣಿ ಬಳಗದ ಡಿಜಿಟಲ್ ವಿಭಾಗವು ಕರ್ನಾಟಕ ರಾಜ್ಯೋತ್ಸವ ಪ್ರಯುಕ್ತ ಈ ಬಾರಿ ನವೆಂಬರ್ ತಿಂಗಳನ್ನು ಕನ್ನಡ, ಕರ್ನಾಟಕದ ವಿಚಾರದಲ್ಲಿನ ಮಹತ್ವದ ಹಾದಿ ದಾಖಲಿಸುವ ಪ್ರಯತ್ನ ಮಾಡುತ್ತಿದೆ. ಇದರ ಭಾಗವಾಗಿಯೇ ವಿವಿಧ ವಿಷಯಗಳ ಮೇಲೆ, ತಜ್ಞರು, ಸಾಧಕರು, ಪ್ರಮುಖರ ಲೇಖನಗಳನ್ನು ಪ್ರಕಟಿಸುತ್ತಿದೆ... ಕರುನಾಡೋತ್ಸವದಲ್ಲಿ ಇಂದಿನ ವಿಶೇಷ ಲೇಖನಗಳ ಪಟ್ಟಿ ಇಲ್ಲಿದೆ. ಸಂಪೂರ್ಣ ಮಾಹಿತಿಗಾಗಿ https://www.prajavani.net/karunadotsava ಭೇಟಿ ಕೊಡಿಏಕತಾನತೆಯಿಂದ ಬಿಡುಗಡೆಯ ಹಂಬಲ... ‘ಅಡುಗೆ ಮನೆ ಹುಡುಗಿ’ವೈದೇಹಿ ಎಂಬ ಕಾವ್ಯನಾಮದಿಂದ ಪ್ರಸಿದ್ಧರಾಗಿರುವ ‘ಜಾನಕಿ ಶ್ರೀನಿವಾಸಮೂರ್ತಿ’ಯವರು ಕನ್ನಡದ ಪ್ರಮುಖ ಲೇಖಕಿಯರಲ್ಲೊಬ್ಬರು. ಉಡುಪಿ ಜಿಲ್ಲೆಯ ಕುಂದಾಪುರದವರಾದ ಇವರು, ಸಣ್ಣಕಥೆ, ಕಾವ್ಯ, ಕಾದಂಬರಿ, ಮಕ್ಕಳ ಸಾಹಿತ್ಯ, ಅನುವಾದ ಸಾಹಿತ್ಯ, ಪ್ರಬಂಧಗಳ ಬರವಣಿಗೆಯಿಂದಲೇ ಪರಿಚಿತರು. ಇವರ ‘ಅಮ್ಮಚ್ಚಿ ಎಂಬ ನೆನಪು’, ‘ಗುಲಾಬಿ ಟಾಕೀಸ್’ ಕಥೆಗಳನ್ನು ಆಧರಿಸಿದ ಸಿನಿಮಾಗಳೂ ತೆರೆಕಂಡಿವೆ.ಏಕತಾನತೆಯಿಂದ ಬಿಡುಗಡೆಯ ಹಂಬಲ... ‘ಅಡುಗೆ ಮನೆ ಹುಡುಗಿ’ಹೋರಾಟದ ಮೂಲಕವೇ ಪ್ರಧಾನಿ ಪಟ್ಟಕ್ಕೇರಿದ ಮಣ್ಣಿನ ಮಗ ಎಚ್.ಡಿ.ದೇವೇಗೌಡಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ತನ್ನದೇ ಆದ ವಿಶಿಷ್ಟ ಛಾಪು ಮೂಡಿಸಿದ ನಾಯಕ ಹರದನಹಳ್ಳಿ ದೊಡ್ಡೇಗೌಡ ದೇವೇಗೌಡರು (ಎಚ್.ಡಿ. ದೇವೇಗೌಡ). ಸಾಮಾನ್ಯ ರೈತ ಕುಟುಂಬದಲ್ಲಿ ಜನಿಸಿ, ಹಳ್ಳಿಯ ಬದುಕಿನ ಕಷ್ಟಗಳನ್ನು ಕಣ್ಣಾರೆ ಕಂಡು, ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಬೆಳೆದು ಬಂದ ಅವರು, ದೇಶದ ಪ್ರಧಾನಿಯಂತಹ ಉನ್ನತ ಹುದ್ದೆ ಅಲಂಕರಿಸಿದ ಅಪರೂಪದ ರಾಜಕಾರಣಿಯಾಗಿದ್ದಾರೆ.ಹೋರಾಟದ ಮೂಲಕವೇ ಪ್ರಧಾನಿ ಪಟ್ಟಕ್ಕೇರಿದ ಮಣ್ಣಿನ ಮಗ ಎಚ್.ಡಿ.ದೇವೇಗೌಡಜಯನಗರ ಗ್ಯಾರೇಜ್ನಲ್ಲಿ ಹುಟ್ಟಿದ ಆಲೋಚನೆ: WildCraft ಬ್ರಾಂಡ್ ಬೆಳೆದಿದ್ದೇ ರೋಚಕಯಾವುದೋ ಒಂದು ಸಮಸ್ಯೆ. ಕೊರತೆಯನ್ನು ನೀಗಿಸಲು ಹುಟ್ಟಿಕೊಳ್ಳುವ ಉಪಾಯಗಳು ಮುಂದೊಂದು ದಿನ ದೊಡ್ಡ ಉದ್ಯಮಕ್ಕೆ ದಾರಿಮಾಡಿಕೊಡುತ್ತವೆ. ಆ ಸಾಲಿನ ಮತ್ತೊಂದು ಸಂಸ್ಥೆ ವೈಲ್ಡ್ ಕ್ರಾಫ್ಟ್. ಬೆಂಗಳೂರಿನ ಜಯನಗರದಲ್ಲಿ ಗ್ಯಾರೇಜ್ನಲ್ಲಿ ಆರಂಭವಾದ ಸಣ್ಣ ಪ್ರಯತ್ನವೊಂದು ಇಂದು ದೇಶದ ಪರಿಚಿತ ಟ್ರಾವೆಲ್ ಮತ್ತು ಔಟ್ಡೋರ್ ಉತ್ಪನ್ನಗಳ ಬ್ರ್ಯಾಂಡ್ಗಳಲ್ಲಿ ಒಂದಾಗಿ ಬೆಳೆದಿದೆ.ಜಯನಗರ ಗ್ಯಾರೇಜ್ನಲ್ಲಿ ಹುಟ್ಟಿದ ಆಲೋಚನೆ: WildCraft ಬ್ರಾಂಡ್ ಬೆಳೆದಿದ್ದೇ ರೋಚಕಬ್ರಿಟನ್ನಲ್ಲಿ ಯಕ್ಷಗಾನದ ಚೆಂಡೆ–ಮದ್ದಳೆ: ಕರಾವಳಿಯ ಗಂಡುಕಲೆಗೆ ಹೊಸ ಮೆರುಗುಕರ್ನಾಟಕದಿಂದ ಸುಮಾರು ಐದು ಸಾವಿರ ಮೈಲು ದೂರದಲ್ಲಿರುವ ಯುನೈಟೆಡ್ ಕಿಂಗ್ಡಮ್ನಲ್ಲಿ ಯಕ್ಷಗಾನವೇನೂ ಅಪರಿಚಿತ ಕಲೆಯಲ್ಲ. ಕಳೆದ ಐದಾರು ದಶಕಗಳಿಂದ ಈ ನೆಲದಲ್ಲಿ ಯಕ್ಷಗಾನದ ಪ್ರದರ್ಶನಗಳು ನಡೆಯುತ್ತಿವೆ. ಇಪ್ಪತ್ತನೇ ಶತಮಾನದಲ್ಲಿ ಶಿವರಾಮ ಕಾರಂತರು ಉಡುಪಿಯ ಕಲಾಕೇಂದ್ರದ ತಂಡವನ್ನು ಕಟ್ಟಿಕೊಂಡು ಯಕ್ಷಗಾನ ಬ್ಯಾಲೆಯನ್ನು ಯುರೋಪ್ ಮತ್ತು ಯುನೈಟೆಡ್ ಕಿಂಗ್ಡಮ್ನಲ್ಲಿ ಪರಿಚಯಿಸಿದ್ದರು. ಬಳಿಕ ಇಡಗುಂಜಿ ಮೇಳದ ಕೆರೆಮನೆ ಶಂಭು ಹೆಗಡೆಯವರೂ ಯಕ್ಷಗಾನದ ವಿಶಿಷ್ಟ ಪರಂಪರೆಯನ್ನು ಜಗತ್ತಿನ ಹಲವು ಭಾಗಗಳಿಗೆ ಕೊಂಡೊಯ್ದು ಇಂಗ್ಲೆಂಡ್ನಲ್ಲಿಯೂ ಪ್ರದರ್ಶನ ನೀಡಿದ್ದರು. ಕಳೆದ ಎರಡು ದಶಕಗಳಲ್ಲಿ ವಿದ್ಯಾ ಕೊಳ್ಯೂರು ಮತ್ತು ಪಟ್ಲ ಸತೀಶ ಶೆಟ್ಟಿ ಅವರ ತಂಡಗಳು ಬ್ರಿಟನ್ಗೆ ಭೇಟಿ ನೀಡಿ ಪ್ರದರ್ಶನಗಳನ್ನು ನೀಡಿವೆ.ಬ್ರಿಟನ್ನಲ್ಲಿ ಯಕ್ಷಗಾನದ ಚೆಂಡೆ–ಮದ್ದಳೆ: ಕರಾವಳಿಯ ಗಂಡುಕಲೆಗೆ ಹೊಸ ಮೆರುಗುಕರುನಾಡೋತ್ಸವ: ನ್ಯಾಯಾಂಗದಲ್ಲೂ ಕನ್ನಡ ಮೆರೆಸುವ ವಕೀಲ ಮನೋಹರ ವಿಶ್ವಕರ್ಮಕೆಲವರ ಪಾಲಿಗೆ ಕನ್ನಡವೆನ್ನುವುದು ಕೇವಲ ಭಾಷೆ, ಪ್ರದೇಶ ಮತ್ತು ಸಂಸ್ಕೃತಿ ಮಾತ್ರ ಆಗಿರದೆ ಅದು ಜೀವನದ ಉಸಿರೂ ಆಗಿರುತ್ತದೆ. ಇಂತಹವರ ಸಾಲಿಗೆ ರಾಯಚೂರು ಜಿಲ್ಲೆಯ ಮಾನ್ವಿ ಪಟ್ಣಣದ ವಕೀಲ ಮನೋಹರ ವಿಶ್ವಕರ್ಮ ಸೇರುತ್ತಾರೆ. ಅವರು ಮಾನ್ವಿ ಜೆಎಂಎಫ್ಸಿ ನ್ಯಾಯಾಲಯದಲ್ಲಿ ತಮ್ಮ ದೈನಂದಿನ ವೃತ್ತಿ ಬದುಕಿನ ಪ್ರತಿಯೊಂದು ಸಂದರ್ಭದಲ್ಲಿ ಕನ್ನಡತನವನ್ನು ಮೆರೆಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.ಕರುನಾಡೋತ್ಸವ: ನ್ಯಾಯಾಂಗದಲ್ಲೂ ಕನ್ನಡ ಮೆರೆಸುವ ವಕೀಲ ಮನೋಹರ ವಿಶ್ವಕರ್ಮವಿದೇಶದಲ್ಲಿ ಕನ್ನಡದ ಅಕ್ಷರಲೋಕ: ಸಾಗರದಾಚೆ ಕನ್ನಡಿಗರ ಬೆಸೆಯುವ 'ಗಲ್ಫ್ ಇಶಾರ'ಪತ್ರಿಕೋದ್ಯಮದ ಇತಿಹಾಸದಲ್ಲಿ ಕೆಲವು ಪತ್ರಿಕೆಗಳು ತಮ್ಮ ಪ್ರಕಟಣೆಯ ವ್ಯಾಪ್ತಿಯನ್ನು ಮೀರಿ ಒಂದು ಭಾಷೆಯ, ಸಮುದಾಯದ ಮತ್ತು ಸಂಸ್ಕೃತಿಯ ನಿಜ ಪ್ರತಿನಿಧಿಯಾಗಿ ಗುರುತಿಸಿಕೊಳ್ಳುತ್ತವೆ. ಓದುಗರ ಬದುಕಿನೊಂದಿಗೆ ಬೆರೆಯುತ್ತಾ, ಅವರ ಭಾವನೆಗಳಿಗೆ ಅಕ್ಷರ ರೂಪ ನೀಡುತ್ತಾ, ಕಾಲದ ಬದಲಾವಣೆಗಳ ನಡುವೆಯೂ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳುತ್ತವೆ. ಗಲ್ಫ್ ರಾಷ್ಟ್ರಗಳಲ್ಲಿ ನೆಲೆಸಿರುವ ಕನ್ನಡಿಗರ ಪಾಲಿಗೆ ಅಂತಹ ಆತ್ಮೀಯ ಸಂಬಂಧ ಬೆಳೆಸಿಕೊಂಡಿರುವ ಮಾಸಪತ್ರಿಕೆ 'ಗಲ್ಫ್ ಇಶಾರ'.ವಿದೇಶದಲ್ಲಿ ಕನ್ನಡದ ಅಕ್ಷರಲೋಕ: ಸಾಗರದಾಚೆ ಕನ್ನಡಿಗರ ಬೆಸೆಯುವ 'ಗಲ್ಫ್ ಇಶಾರ'ಕರ್ನಾಟಕ–ಮಹಾರಾಷ್ಟ್ರ ಗಡಿ ವಿವಾದ: ದಾಖಲೆಗಳ ಸಂಗ್ರಹದಲ್ಲಿ ತೊಡಗಿದ ತೋಟಿಗೇರಬೆಳಗಾವಿ: ಕರ್ನಾಟಕ–ಮಹಾರಾಷ್ಟ್ರ ಗಡಿ ವಿವಾದ 2004ರಲ್ಲಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ. ‘ಗಡಿಯಲ್ಲಿ ಕರ್ನಾಟಕ ವ್ಯಾಪ್ತಿಯಲ್ಲಿರುವ ಹಲವು ಗ್ರಾಮ–ಪಟ್ಟಣಗಳು ಈ ಹಿಂದೆ ತನ್ನ ರಾಜ್ಯದಲ್ಲಿ ಇದ್ದವು. ಅವುಗಳನ್ನು ಬಿಟ್ಟುಕೊಡಬೇಕು’ ಎಂಬುದು ಮಹಾರಾಷ್ಟ್ರ ಸರ್ಕಾರದ ವಾದ. ಆದರೆ, ‘ಮಹಾರಾಷ್ಟ್ರ ಸರ್ಕಾರ ಮಂಡಿಸುತ್ತಿರುವ ವಾದ ಸುಳ್ಳು’ ಎಂದು ಕರ್ನಾಟಕ ಸರ್ಕಾರದ ಪ್ರತ್ಯುತ್ತರ. ಇದಕ್ಕೆ ಪೂರಕವಾಗಿ ಸಾಕ್ಷ್ಯ ಸಂಗ್ರಹಿಸುವ ಕೆಲಸದಲ್ಲಿ ಸರ್ಕಾರದ ಹಂತದಲ್ಲೂ ಇದೆ.ಕರ್ನಾಟಕ–ಮಹಾರಾಷ್ಟ್ರ ಗಡಿ ವಿವಾದ: ದಾಖಲೆಗಳ ಸಂಗ್ರಹದಲ್ಲಿ ತೊಡಗಿದ ತೋಟಿಗೇರಆನ್ಲೈನ್ ಖರೀದಿ: ಎಷ್ಟು ಸರಾಗವೋ ಅಷ್ಟೇ ಅಪಾಯಕಾರಿಗ್ರಾಹಕರು ಆನ್ಲೈನ್ ಶಾಪಿಂಗ್ ಅಥವಾ ಇ-ಕಾಮರ್ಸ್ ಮೂಲಕ ತಮ್ಮ ಬದುಕಿನ ಸುಂದರ ಕ್ಷಣಗಳನ್ನು ಅನುಭವಿಸುತ್ತಿದ್ದಾರೆ. ಖರೀದಿ ವಿಷಯದಲ್ಲಿ ಒಂದು ದಶಕದ ಹಿಂದೆ ಇದ್ದ ಅನೇಕ ಸಮಸ್ಯೆಗಳಿಂದ ಮುಕ್ತರಾಗಿ ಮನೆಯಲ್ಲಿ ಅಥವಾ ಪ್ರಯಾಣಿಸುತ್ತಲೇ ತಮ್ಮ ಎಲ್ಲ ಅಗತ್ಯ ವಸ್ತುಗಳನ್ನು ಖರೀದಿಸುವ ಅದೃಷ್ಟ ಅವರದಾಗಿದೆ. ಅಂಗಡಿಗೆ ಹೋಗುವುದು, ಚೌಕಾಶಿ ಮಾಡುವುದು, ತಮಗೆ ಬೇಕಾದ ವಸ್ತು ಇಲ್ಲವೆಂದು ನಿರಾಶೆ ಪಡುವ ಯಾವುದೇ ಸಮಸ್ಯೆ ಈಗ ಗ್ರಾಹಕರ ತಲೆ ತಿನ್ನುತ್ತಿಲ್ಲ. ಅಷ್ಟೇಕೆ ಜೇಬಿನಲ್ಲಿ ಹಣ ಇರಬೇಕಾಗಿಯೂ ಇಲ್ಲ. ಮನೋವೈಜ್ಞಾನಿಕ ದೃಷ್ಟಿಯಿಂದ ಹೇಳುವುದಾದರೆ ಕ್ರೆಡಿಟ್ ಕಾರ್ಡ್ ಸ್ಟೇಟ್ಮೆಂಟ್ ಬರುವ ವರೆಗೂ ಹಣ ಕೊಡುತ್ತಿದ್ದೇನೆ ಎಂಬ ನೋವು ಸಹ ಅನುಭವಿಸಬೇಕಿಲ್ಲ. ಬ್ಯಾಂಕ್ ಖಾತೆಯಲ್ಲಿ ಹಣ ಮತ್ತು ಮೊಬೈಲ್ ಒಂದಿದ್ದರೆ ಸಾಕು ಎಲ್ಲವೂ ಅವರು ಕುಳಿತ ಸ್ಥಳದಿಂದಲೇ ನಡೆಯುತ್ತದೆ. ಈ ಕಾರಣದಿಂದಲೇ ಆನ್ಲೈನ್ ಶಾಪಿಂಗ್ ಅತಿ ವೇಗವಾಗಿ ಜನಪ್ರಿಯವಾಗಿದೆ.ಆನ್ಲೈನ್ ಖರೀದಿ: ಎಷ್ಟು ಸರಾಗವೋ ಅಷ್ಟೇ ಅಪಾಯಕಾರಿಕನ್ನಡಕ್ಕೆ ಮೊದಲ ಸ್ಥಾನ; ಏಕೀಕೃತ ಕರ್ನಾಟಕಕ್ಕೆ ಸಾಂಸ್ಕೃತಿಕ ಹೊಣೆ!: ಕುವೆಂಪುಕನ್ನಡದ ಬಗ್ಗೆ ಅಪಾರ ಅಭಿಮಾನವಿದ್ದರೆ ಮಾತ್ರ ಸಾಲದು; ಆ ಅಭಿಮಾನವು ಸಂಕುಚಿತ ಭಾಷಾಭಿಮಾನವಾಗಿ ಉಳಿಯದೆ, ವಿಶ್ವಮಾನವ ಪ್ರಜ್ಞೆಗೆ ದಾರಿ ಮಾಡಿಕೊಡಬೇಕು. ಕನ್ನಡಿಗನ ಆತ್ಮಗೌರವವು ಇತರ ಭಾಷೆಗಳನ್ನು ತಿರಸ್ಕರಿಸುವುದರಲ್ಲಿ ಅಲ್ಲ; ತನ್ನ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಶಕ್ತಿಯನ್ನು ಅರಿತುಕೊಂಡು, ಜಗತ್ತಿನೊಂದಿಗೆ ಸಮಾನವಾಗಿ ಸಂವಾದಿಸುವುದರಲ್ಲಿದೆ. ಕುವೆಂಪು ಅವರ ಚಿಂತನೆಯಲ್ಲಿದ್ದ ಈ ವಿಶಾಲ ದೃಷ್ಟಿಕೋನವನ್ನು ಗಮನದಲ್ಲಿಟ್ಟುಕೊಂಡು, 1957ರ ಧಾರವಾಡ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೀಯ ಭಾಷಣವನ್ನು ಅವಲೋಕಿಸುವುದು ಹೆಚ್ಚು ಸೂಕ್ತವೆನಿಸುತ್ತದೆ.ಕನ್ನಡಕ್ಕೆ ಮೊದಲ ಸ್ಥಾನ; ಏಕೀಕೃತ ಕರ್ನಾಟಕಕ್ಕೆ ಸಾಂಸ್ಕೃತಿಕ ಹೊಣೆ!: ಕುವೆಂಪುಶಿಡ್ಲಘಟ್ಟ: ಐದು ದಶಕಕ್ಕೂ ಹಿಂದಿನ ಕನ್ನಡಾಭಿಮಾನದ ಸವಿನೆನಪುಶಿಡ್ಲಘಟ್ಟ: ಕರ್ನಾಟಕ ರಾಜ್ಯೋತ್ಸವ ಸಂಭ್ರಮದ ಹೊತ್ತಿನಲ್ಲಿ ಐದು ದಶಕಕ್ಕೂ ಹಿಂದಿನ ಕಪ್ಪುಬಿಳುಪಿನ ಛಾಯಾಚಿತ್ರವೊಂದು ಅಂದಿನ ಕನ್ನಡಾಭಿಮಾನ, ಸಾಂಸ್ಕೃತಿಕ ಚಟುವಟಿಕೆ ಹಾಗೂ ಸ್ನೇಹದ ಸವಿನೆನಪುಗಳನ್ನು ಮತ್ತೆ ಜೀವಂತಗೊಳಿಸಿದೆ.ಶಿಡ್ಲಘಟ್ಟ: ಐದು ದಶಕಕ್ಕೂ ಹಿಂದಿನ ಕನ್ನಡಾಭಿಮಾನದ ಸವಿನೆನಪುಪದಕಟ್ಟು ಭಾಗ– 5: ತಂತ್ರಜ್ಞಾನ ಯುಗದಲ್ಲಿ ಪರ್ಯಾಯ ಪದಗಳ ಸವಾಲುಹೊಸ ತಂತ್ರಜ್ಞಾನ ಬಂದಾಗಲೆಲ್ಲ ಅದಕ್ಕೆ ತಕ್ಕಂತೆ ಭಾಷೆಯನ್ನು ದುಡಿಸಿಕೊಳ್ಳುವುದು ಎಷ್ಟು ಅನಿವಾರ್ಯವೋ ಕನ್ನಡದ ಶಬ್ದಕೋಶವನ್ನು ಶ್ರೀಮಂತಗೊಳಿಸುತ್ತ ಬರುವುದೂ ಅಷ್ಟೇ ಅಗತ್ಯ. ಕನ್ನಡದ ಹಿರಿಯರು ಈ ಕೆಲಸವನ್ನು ಆಯಾ ಕಾಲಕ್ಕೆ ಮಾಡುತ್ತ ಭಾಷೆಯನ್ನು ಜೀವಂತವಾಗಿಡಲು ಗರಿಷ್ಠ ಪ್ರಯತ್ನವನ್ನು ಮಾಡಿದ್ದಾರೆ. ಭಾಷಾ ಅಕಾಡೆಮಿಗಳು, ಸರಕಾರದ ಇಲಾಖೆಗಳು, ವಿಶ್ವವಿದ್ಯಾಲಯದಂಥ ಸಾಂಸ್ಥಿಕ ವ್ಯವಸ್ಥೆಯ ಮಟ್ಟದಲ್ಲಿ ಇಂಥ ಕೆಲಸಗಳು ಆಗಬೇಬೇಕಾದುದು ಅಗತ್ಯ. ಆದರೆ ಬಹುತೇಕ ಸಂದರ್ಭದಲ್ಲಿ ಇದು ವ್ಯಕ್ತಿಗತ ನೆಲೆಯಲ್ಲಿ ಆದದ್ದೇ ಹೆಚ್ಚು. ಈ ನಿಟ್ಟಿನಲ್ಲಿ ಸುದ್ದಿಮನೆಗಳ ಕೊಡುಗೆಯೂ ಗಮನಾರ್ಹವಾದುದು. ದೈನಂದಿನ ಸುದ್ದಿ ಬರವಣಿಗೆಯ ಹಂತದಲ್ಲಿ ಹಲವು ಪತ್ರಿಕೆಗಳು ಹೊಸ ಹೊಸ ಪದಗಳನ್ನು ಪರಿಚಯಿಸುತ್ತ, ಅವನ್ನು ಜನಮಾನಸದಲ್ಲಿ ಚಾಲ್ತಿಗೆ ತಂದದ್ದು ಸುಳ್ಳಲ್ಲ.ಪದಕಟ್ಟು ಭಾಗ– 5: ತಂತ್ರಜ್ಞಾನ ಯುಗದಲ್ಲಿ ಪರ್ಯಾಯ ಪದಗಳ ಸವಾಲುಕರುನಾಡೋತ್ಸವ: ಸಹ್ಯಾದ್ರಿ ಕಣಿವೆ ಅರ್ಥೈಸಿಕೊಳ್ಳಲು ನಾವು ಸೋಲುತ್ತಿರುವುದೆಲ್ಲಿ?ವಿಶಿಷ್ಟ ಜೀವವೈವಿಧ್ಯತೆ ಮತ್ತು ಮನುಷ್ಯನ ನಿರಂತರ ಚಟುವಟಿಕೆಗಳಿರುವ ಏಕೈಕ ಭೂಸದೃಶ್ಯವೆಂದರೆ ಅದು ಕರ್ನಾಟಕದ ಸಹ್ಯಾದ್ರಿ ಕಣಿವೆ. ಇತ್ತೀಚಿನ ಸಂಶೋಧನೆಯೊಂದು ಸರಿಸುಮಾರು 30 ಕೋಟಿ ಜನರು ಸಹ್ಯಾದ್ರಿಯ ಮೇಲೆ, ನೀರು ಇನ್ನಿತರ ಸಂಪನ್ಮೂಲಗಳಿಗಾಗಿ ಅವಲಂಬಿತರಾಗಿದ್ದಾರೆಂದು ಹೇಳುತ್ತದೆ.ಕರುನಾಡೋತ್ಸವ: ಸಹ್ಯಾದ್ರಿ ಕಣಿವೆ ಅರ್ಥೈಸಿಕೊಳ್ಳಲು ನಾವು ಸೋಲುತ್ತಿರುವುದೆಲ್ಲಿ?ಕರುನಾಡೋತ್ಸವ: ವಿಶಿಷ್ಟ ಭಾಷೆ ತುಳುವಿನ ಅಭಿವೃದ್ಧಿಗಾಗಿ ಜನ್ಮ ತಾಳಿದ ಅಕಾಡೆಮಿಕರ್ನಾಟಕದಲ್ಲಿ ಕನ್ನಡ ಪ್ರಧಾನ ಭಾಷೆಯಾದರೂ ಈ ರಾಜ್ಯವು ಹಲವು ಭಾಷೆಯ ನೆಲೆವೀಡು. ಹಲವು ಭಾಷೆಗಳನ್ನು ಆಡುವವರಿದ್ದರೂ ಎಲ್ಲರೂ ಕನ್ನಡಿಗರೇ ಆಗಿದ್ದಾರೆ. ಆದರೂ ಆಯಾ ಭಾಷೆಯ ಸಂಸ್ಕೃತಿ, ಆಹಾರ, ಆಚಾರ, ವಿಚಾರಗಳು ಬೇರೆಯಾಗಿವೆ. ಈ ರೀತಿ ವೈಶಿಷ್ಟ್ಯವನ್ನು ಹೊಂದಿರುವ ಪ್ರಮುಖ ಭಾಷೆ ತುಳು. ಕರುನಾಡೋತ್ಸವ: ವಿಶಿಷ್ಟ ಭಾಷೆ ತುಳುವಿನ ಅಭಿವೃದ್ಧಿಗಾಗಿ ಜನ್ಮ ತಾಳಿದ ಅಕಾಡೆಮಿಕರುನಾಡೋತ್ಸವ: ಕರಾವಳಿ ಅಡುಗೆಮನೆಗಳ ಕಥೆ ಹೇಳುವ ಪುರಾತನ ಇಡ್ಲಿ ಪಾತ್ರೆಗಳುಬಿಸಿಬಿಸಿಯಾದ ಇಡ್ಲಿಗಳನ್ನು ತಟ್ಟೆಯಲ್ಲಿ ಇಟ್ಟು, ಹಸಿರು ಮತ್ತು ಕೆಂಪು ಚಟ್ನಿ, ಬಿಸಿಬಿಸಿ ಸಾಂಬಾರ್ ಜೊತೆ ನೋಡಿದರೆ ಯಾರಿಗಾದರೂ ಬಾಯಲ್ಲಿ ನೀರೂರುತ್ತದೆ. ಈ ಅದ್ಭುತ ಆಹಾರವನ್ನು ಕಂಡುಹಿಡಿದ ಪ್ರತಿಭಾವಂತರ ಬಗ್ಗೆ ಸಂಸದ ಶಶಿ ತರೂರ್ ಒಮ್ಮೆ ಆಶ್ಚರ್ಯ ವ್ಯಕ್ತಪಡಿಸಿದ್ದರು.ಕರುನಾಡೋತ್ಸವ: ಕರಾವಳಿ ಅಡುಗೆಮನೆಗಳ ಕಥೆ ಹೇಳುವ ಪುರಾತನ ಇಡ್ಲಿ ಪಾತ್ರೆಗಳುಅಂಬರೀಶ್, ಶಂಕರ್ ನಾಗ್ ವಿಚಾರವಾಗಿ ಸರ್ಕಾರಕ್ಕೆ ಎರಡು ಬೇಡಿಕೆ ಇಡಲಿದೆ ‘ಪೀಸ್ ಆಟೊ’ಕರ್ನಾಟಕ ರಾಜ್ಯೋತ್ಸವ ಹಾಗೂ ಚಾಲಕರ ದಿನಾಚರಣೆಗೆ ಬೆಂಗಳೂರಿನ ಬಿಟಿಎಂ ಲೇಔಟ್ನಲ್ಲಿರುವ ರಾಜೀವ್ ಗಾಂಧಿ ಒಳಾಂಗಣ ಕ್ರೀಡಾಂಗಣ ಮತ್ತು ಆಟದ ಮೈದಾನದಲ್ಲಿ ಕಾರ್ಯಕ್ರಮ ವೇದಿಕೆ ಸಿದ್ಧವಾಗುತ್ತಿದೆ.ಅಂಬರೀಶ್, ಶಂಕರ್ ನಾಗ್ ವಿಚಾರವಾಗಿ ಸರ್ಕಾರಕ್ಕೆ ಎರಡು ಬೇಡಿಕೆ ಇಡಲಿದೆ ‘ಪೀಸ್ ಆಟೊ’ಪ್ರಜಾವಾಣಿ ಕರುನಾಡೋತ್ಸವ| ಲಕ್ಷ್ಮೀಶ ಕವಿಯ 'ದೇವನೂರು'ಭಾರತೀಯ ಸಂಸ್ಕೃತಿಯ ಬಹುಮುಖ ಪರಂಪರೆಯನ್ನು ಅರ್ಥಮಾಡಿಕೊಳ್ಳುವ ಸಂದರ್ಭದಲ್ಲಿ ರಾಮಾಯಣ ಮತ್ತು ಮಹಾಭಾರತ ಮಹಾಕಾವ್ಯಗಳಿಗೆ ಅತ್ಯಂತ ಮಹತ್ವದ ಸ್ಥಾನವಿದೆ. ಭಾರತದ ಮೌಖಿಕ ಮತ್ತು ಗ್ರಾಂಥಿಕ ಪರಂಪರೆಯ ಜೀವಂತ ಅಭಿವ್ಯಕ್ತಿಗಳಾಗಿ ಈ ಎರಡೂ ಮಹಾಕಾವ್ಯಗಳು ಶತಮಾನಗಳಿಂದಲೂ ಭಾರತೀಯ ಮನಸುಗಳನ್ನು ರೂಪಿಸುತ್ತಾ, ತಿದ್ದಿ ತೀಡುತ್ತಾ ಸಾಮಾಜಿಕ, ಸಾಂಸ್ಕ್ರತಿಕ, ನೈತಿಕ, ತಾತ್ವಿಕ ಚಿಂತನೆಗಳಿಗೆ ಒಳಪಡಿಸುತ್ತಾ ಬಂದಿವೆ. ಈ ಮಹಾಕಾವ್ಯಗಳು ಕೇವಲ ಪುರಾತನ ಕಥನಗಳಲ್ಲ, ಭಾರತೀಯ ಸಮಾಜದ ಮೌಲ್ಯಪ್ರಜ್ಞೆ, ಜೀವಾನುನಭವ, ಸಂಘರ್ಷ-ಸಾಮರಸ್ಯದ ಆಶೋತ್ತರಗಳನ್ನು ತನ್ನೊಡಲಲ್ಲಿ ತುಂಬಿಕೊಂಡಿರುವ ಸಾಂಸ್ಕೃತಿಕ ಚೇತನಗಳೇ ಆಗಿವೆ.ಪ್ರಜಾವಾಣಿ ಕರುನಾಡೋತ್ಸವ| ಲಕ್ಷ್ಮೀಶ ಕವಿಯ 'ದೇವನೂರು'ಸಂದರ್ಶನ | ಜನಕನ್ನಡಂ ಗೆಲ್ಗೆ: ಬರಗೂರು ರಾಮಚಂದ್ರಪ್ಪ ಆಶಯಬಂಡಾಯ ಸಾಹಿತ್ಯದ ಮುಂಚೂಣಿಯ ಲೇಖಕ ಬರಗೂರು ರಾಮಚಂದ್ರಪ್ಪ ಅವರು ಕವಿತೆ, ಕತೆ, ಕಾದಂಬರಿಗಳಂತಹ ಸೃಜನಶೀಲ ಬರವಣಿಗೆ ಜೊತೆಗೆ ವಿಚಾರ ಮತ್ತು ವಿಮರ್ಶೆಗೆ ಹೆಸರಾದವರು. ಸಾಹಿತ್ಯದಷ್ಟೇ ಸಿನಿಮಾ ಮಾಧ್ಯಮವನ್ನು ಗಾಢವಾಗಿ ಪ್ರೀತಿಸುವ ಇವರು, ಹಲವಾರು ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಕನ್ನಡ ಪರ ಧ್ವನಿ ಎತ್ತುವುದರಲ್ಲೂ ಸದಾ ಮುಂದು. ಕನ್ನಡ ಸಾಹಿತ್ಯ ಅಕಾಡೆಮಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಹಲವು ರಚನಾತ್ಮಕ ಕೆಲಸಗಳ ಮೂಲಕ ಗಮನ ಸೆಳೆದವರು. ಅವರೊಂದಿಗಿನ ಸಂದರ್ಶನದ ಸಂಕ್ಷಿಪ್ತ ರೂಪವಿದು. ಸಂದರ್ಶನ | ಜನಕನ್ನಡಂ ಗೆಲ್ಗೆ: ಬರಗೂರು ರಾಮಚಂದ್ರಪ್ಪ ಆಶಯಸಂದರ್ಶನ | ಕೇಂದ್ರೀಕರಣ ಪ್ರವೃತ್ತಿಯ ವಿರುದ್ಧ ಹೋರಾಟ ಅಗತ್ಯ: ಕೆ.ವಿ. ನಾರಾಯಣ‘ಎಲ್ಲವನ್ನೂ ಕೇಂದ್ರೀಕರಣ ಮಾಡುವ ಪ್ರವೃತ್ತಿ ರಾಜಕೀಯವಾಗಿ ನಡೆಯುತ್ತಿರುವುದರಿಂದ ಭಾಷೆ ಹೇರಿಕೆ ಅದರ ಭಾಗವಾಗಿದೆ. ಕೇಂದ್ರೀಕರಣ ಪ್ರವೃತ್ತಿಯ ವಿರುದ್ಧದ ಹೋರಾಟ ಅಗತ್ಯ’ ಎಂದು ಭಾಷಾ ತಜ್ಞ ಕೆ.ವಿ. ನಾರಾಯಣ ಅಭಿಪ್ರಾಯ ಪಟ್ಟಿದ್ದಾರೆ. ತಮ್ಮ ‘ನುಡಿಗಳ ಅಳಿವು’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದ ಹೊತ್ತಿನೊಳಗೆ ‘ಪ್ರಜಾವಾಣಿ’ ಜತೆ ಮಾತನಾಡಿದ್ದು ಇಲ್ಲಿದೆ.ಸಂದರ್ಶನ | ಕೇಂದ್ರೀಕರಣ ಪ್ರವೃತ್ತಿಯ ವಿರುದ್ಧ ಹೋರಾಟ ಅಗತ್ಯ: ಕೆ.ವಿ. ನಾರಾಯಣಕರುನಾಡೋತ್ಸವ | ಇಹದ ಪರಿಮಳದ ಹಾದಿ: ಎಂ.ಎಸ್. ಆಶಾದೇವಿ ಲೇಖನಕನ್ನಡ ಸಂಸ್ಕೃತಿ ಎನ್ನುವುದರ ಬಗ್ಗೆ ಕನ್ನಡದಲ್ಲಿ ಬೌದ್ಧಿಕ ವಲಯದ ನಿರೂಪಣೆಯೊಂದಿದೆ. ಜನಸಂಸ್ಕೃತಿಯ ನಿರೂಪಣೆಯೂ ಒಂದಿದೆ. ಈ ಎರಡೂ ಪರಸ್ಪರ ವಿರುದ್ದ ಅಥವಾ ಸಮಾನಾಂತರ ಎಂದೇನೂ ನಾವು ತಿಳಿಯಬೇಕಿಲ್ಲ. ಕೆಲವು ಶಿಷ್ಟ ನಿರೂಪಣೆಗಳು ಕನ್ನಡ ಸಂಸ್ಕೃತಿಯನ್ನು ಏಕಾಕಾರದಲ್ಲಿ ಗ್ರಹಿಸುವ ಪ್ರಯತ್ನ ಮಾಡಿವೆ ಎನ್ನುವುದು ನಿಜ. ಆದರೆ ಮಹತ್ವದ ಎಲ್ಲ ನಿರೂಪಣೆಗಳೂ ಕನ್ನಡವನ್ನು ಅದರ ಬಹುತ್ವದ ನೆಲೆಗಳಲ್ಲಿಯೇ ಕಟ್ಟಿಕೊಟ್ಟಿವೆ.ಕರುನಾಡೋತ್ಸವ | ಇಹದ ಪರಿಮಳದ ಹಾದಿ: ಎಂ.ಎಸ್. ಆಶಾದೇವಿ ಲೇಖನ